ಅಪ್ಪೇನಹಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಬೇಜವಾಬ್ದಾರಿತನ ಕ್ರಮಕೈಗೊಳ್ಳಲು ಒತ್ತಾಯಿಸಿ ಸದಸ್ಯರಿಂದ ಪ್ರತಿಭಟನೆ

0
264

ವರದಿ: ಇಬ್ರಾಹಿಂ ಖಲೀಲ್ .ಟಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೆಕೋಟೆ ಹೋಬಳಿಯ ಅಪ್ಪೇನಹಳ್ಳಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ದಯಾನಂದ್ ವಾಗ್ಮೋರೆ ಸರಿಯಾದ ರೀತಿಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಕೆಲಸ ನಿರ್ವಹಿಸಲು ಬೇಕಾಬಿಟ್ಟಿಯಾಗಿ ವಾರದಲ್ಲಿ ಎರಡು ದಿನ ಪಂಚಾಯತಿಯಲ್ಲಿ ಬಂದು ಸೇವೆ ಮಾಡುತ್ತಿದ್ದು ಇದನ್ನು ಕೇಳಿದರೆ ತಮಗೇನು ಗೊತ್ತಿಲ್ಲ ತಮಗೆ ಯಾರು ಸಂಬಂಧವಿಲ್ಲವೆಂಬಂತೆ ಯಲ್ಲಿ ಸುಮ್ಮನೆ ತಮ್ಮ ಪಾಡಿಗೆ ತಾನಿದ್ದು ಹಾಜರಿ ಪುಸ್ತಕದಲ್ಲಿ ರಜ ಮಾಡಿದ ದಿನಗಳು ಸಹ ಸಹಿ ಮಾಡುವುದು ಈತನ ಕೆಲಸ ಅಪ್ಪನಲ್ಲಿ ಪಂಚಾಯತಿಯಲ್ಲಿ ಈಗ ಹಾಲಿ ಕೆಲಸಮಾಡುವ ಸಿಬ್ಬಂದಿ ಇಬ್ಬರಿಗೂ ಆದರೆ ಪಂಚಾಯತಿಯಲ್ಲಿ ಬೇರೆ ಯಾವ ಸಿಬ್ಬಂದಿಯು ಇಲ್ಲದಿರುವುದು ದುರಾದೃಷ್ಟ ಕೋವಿಡ್ 19ರ ಸಂದರ್ಭದಲ್ಲಿ ಅಧಿಕಾರಿಗಳು ಹಗಲಿರುಳು ಕೆಲಸ ಮಾಡುತ್ತಿದ್ದರು ಇಲ್ಲಿ ಇರುವಂತ ಅಧಿಕಾರಿಗಳೇ ದಿಕ್ಕಿಲ್ಲದೆ ಕೇಳುವವರೇ ಇಲ್ಲದಂತಾಗಿದೆ ಇಂಥ ಪರಿಸ್ಥಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಹಿಂದೆ ಸಮಸ್ಯೆಗಳ ಬಗ್ಗೆ ದೂರು ನೀಡಿದರೂ ಇದುವರೆಗೆ ಯಾವುದೇ ಸ್ಪಂದನೆ ಇಲ್ಲ ಎಂಬುದು ಅಪ್ಪೇನಹಳ್ಳಿ ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳ ದೂರು ಇದರ ಮಧ್ಯ ನಮ್ಮ ಗಮನಕ್ಕೆ ಪಂಚಾಯತಿಯ ಸಮಸ್ಯೆ ಕುರಿತು ದೂರು ಬಂದ ನಂತರ ನಾವು ಈಗಾಗಲೇ ವರದಿಯನ್ನು ಮೇಲಧಿಕಾರಿಗಳಿಗೆ ಕಳಿಸಿದ್ದೇವೆ ಎಂಬುದು ಸಂಬಂಧಪಟ್ಟ ಅಧಿಕಾರಿಗಳ ಅಭಿಪ್ರಾಯ ಇಂತಹ ಸಂದರ್ಭದಲ್ಲಿ ಕುರುಬ ಮಹಾಮಾರಿಯನ್ನು ತಡೆಗಟ್ಟಲು ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಅಂಗನವಾಡಿ ಕಾರ್ಯಕರ್ತರು ಶಿಕ್ಷಕರು ಅನೇಕ ಸ್ವಯಂಸೇವಕರು ಹಗಲಿರುಳು ಕೆಲಸ ಮಾಡುತ್ತಿದ್ದರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಾರದಿರುವುದು ದುರಂತದ ವಿಷಯ ಇಂಥ ಪರಿಸ್ಥಿತಿಯಲ್ಲಿ ಪಂಚಾಯತಿ ಅಭಿವೃದ್ಧಿಗೋಸ್ಕರ ಜನರ ಹಿತಕ್ಕಾಗಿ ಆರೋಗ್ಯರಕ್ಷಣೆಗಾಗಿ ಉತ್ತಮ ಅಧಿಕಾರಿಗಳನ್ನು ಮತ್ತು ಉಳಿದ ಸಿಬ್ಬಂದಿಗಳನ್ನು ನೇಮಕ ಮಾಡಿ ಸಾರ್ವಜನಿಕರ ಕಾಪಾಡಬೇಕೆಂದು ಅಪ್ಪೇನಹಳ್ಳಿ ಗ್ರಾಮಪಂಚಾಯತಿಯ ಸರ್ವಸದಸ್ಯರು ಹೋರಾಟದ ಮೂಲಕ ಮೇಲಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ

ಅಪ್ಪೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಏನೇ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಅದನ್ನು ಹೊರತುಪಡಿಸಿ ಏಕಾಏಕಿಯಾಗಿ ಕಚೇರಿ ಬಂದು ಮಾಡುವುದು ಕಾನೂನಿನಲ್ಲಿ ಅವಕಾಶವಿಲ್ಲ ಈಗ ಕೋವಿಡ್-19 ರ..ಸಮಯ ಪಂಚಾಯತಿಯ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ವರದಿ ನೀಡಿದ್ದೇವೆ ಅಧಿಕಾರಿಗಳ ಆದೇಶಕ್ಕೆ ಕಾಯುತ್ತಿದ್ದು ಪಂಚಾಯತಿಯಲ್ಲಿ ಏನೇ ಸಮಸ್ಯೆ ಇದ್ದರೂ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.. ಜಿಎಂ ಬಸಣ್ಣ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತಿ ಕೂಡ್ಲಿಗಿ

ನಮ್ಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಪಂಚಾಯತಿ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ ವಾರದಲ್ಲಿ ಎರಡು ಬಾರಿ ಪಂಚಾಯ್ತಿಗೆ ಬರುತ್ತಿದ್ದರು ಏನೇ ಕೇಳಿದರು ಉಡಾಫೆ ಉತ್ತರಗಳನ್ನು ನೀಡುತ್ತಾ ಪಂಚಾಯತಿಯಲ್ಲಿ ವಿಆರ್ಎಸ್ ಇದುವರೆಗೂ ಮಾಡೆ ಇಲ್ಲ ಕಂಪ್ಯೂಟರ್ ಆಪರೇಟರ್ ಅಭಿವೃದ್ಧಿ ಅಧಿಕಾರಿಗಳು ಏಕಕಾಲದಲ್ಲಿ ರಜೆ ಆಕುತ್ತಿದ್ದು ಘಚಿ ಕಚೇರಿ ಬಾಗಿಲು ತೆಗೆಯಲು ಬೇರೆ ಸಿಬ್ಬಂದಿಗಳು ಇಲ್ಲ ಈಗಾಗಲೇ ಮೇಲಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ಜರುಗಿಸುತ್ತಿಲ್ಲ ಕೋವಿಡ್ 19 ರ ಸಂದರ್ಭದಲ್ಲಿ ಪಂಚಾಯತಿಯಲ್ಲಿ ಅಧಿಕಾರಿಗಳು ಇಲ್ಲದಿದ್ದರೆ ಜನರ ಸಮಸ್ಯೆಗೆ ಹಾಗೂ ಮೂಲಭೂತ ಸಮಸ್ಯೆಗಳನ್ನು ಹೇಗೆ ಬಗೆಹರಿಸಲು ಸಾಧ್ಯ. ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ವರ್ಗಾಯಿಸಬೇಕು ಕಾಲಿ ಇರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಸುಮಲತಾ ಹುಲಿ ರಾಜ ಅಧ್ಯಕ್ಷರು ಅಪ್ಪೇನಹಳ್ಳಿ ಗ್ರಾಮ ಪಂಚಾಯತಿ

LEAVE A REPLY

Please enter your comment!
Please enter your name here