ತಾಲೂಕ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ.

0
362

ಕೊಟ್ಟೂರು:ಸೆ:೧೫:- ಪಟ್ಟಣದ ಸಿ. ಪಿ.ಇಡಿ ಕಾಲೇಜ್ ಮೈದಾನದಲ್ಲಿ ಸೆಪ್ಟೆಂಬರ್ 15 ರಂದು ಗುರುವಾರ ವಿಜಯನಗರ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕೂಡ್ಲಿಗಿ/ ಕೊಟ್ಟೂರು ಇವರ ಸಂಯುಕ್ತಶ್ರಯದಲ್ಲಿ 22 23ನೇ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಈ ದಸರಾ ಕ್ರೀಡಾಕೂಟಕ್ಕೆ ಖೋ ಖೋ
ಆಟ ಆಡಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಈ ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ಎಲ್ಲಾ ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದಾರೆ

ಪುರುಷರು ವಿಭಾಗದಲ್ಲಿ ಖೋ ಖೋ ಪಂದ್ಯದಲ್ಲಿ 7 ತಂಡಗಳು, ಕಬ್ಬಡ್ಡಿ ಪಂದ್ಯದಲ್ಲಿ 14 ತಂಡಗಳು, ವಾಲಿಬಾಲ್ ಪಂದ್ಯದಲ್ಲಿ 12 ತಂಡಗಳು ,ಬಾಲ್ ಬ್ಯಾಡ್ಮಿಂಟನ್ 10 ತಂಡಗಳು ,ಥ್ರೋ ಬಾಲ್ ಪಂದ್ಯದಲ್ಲಿ 3 ತಂಡಗಳು ಭಾಗವಹಿಸಿದ್ದಾರೆ.
ಮಹಿಳಾ ವಿಭಾಗದಲ್ಲಿ ಖೋ ಖೋ ಪಂದ್ಯದಲ್ಲಿ ಮೂರು ತಂಡಗಳು ವಾಲಿಬಾಲ್ ತ್ರೋಬಾಲ್ ಬಾಲ್ ಬ್ಯಾಡ್ಮಿಂಟನ್ ಪಂದ್ಯದ ಪಂದ್ಯಗಳಲ್ಲಿ 2 ತಂಡಗಳು ಭಾಗವಹಿಸಿದ್ದಾರೆ ಅಥ್ಲೆಟಿಕ್ಸ್ 100 ಮೀಟರ್ 200 ಮೀಟರ್ 300 ಮೀಟರ್ ಓಟದ ಸ್ಪರ್ಧೆ ನಡೆಯಲಿದೆ.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಎಂ.ಶಶಿಧರ್, ವಿ ಮಂಜುನಾಥ್ ,ಇಷಾಕ್ ಬಾಗಳಿ ,ದೈಹಿಕ ಶಿಕ್ಷಕರಾದ ಬಿ. ಪಿ .ಮಂಜುನಾಥ್ ಹಾಗೂ ಪಾರ್ವತಮ್ಮ ಶಿಕ್ಷಕಿ ಮತ್ತು ವಿದ್ಯಾರ್ಥಿಗಳು ಕ್ರೀಡಾ ಅಭಿಮಾನಿಗಳು ಇತರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here