ಅಪೌಷ್ಟಿಕ ಮಕ್ಕಳನ್ನು ಸಹಜ ಸ್ಥಿತಿಗೆ ತರುವ ಗುರಿ ನಮ್ಮದು; ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ್

0
510

ಸಂಡೂರು: ಮೇ:16: ಎಲ್ಲಾ ಅಪೌಷ್ಟಿಕ ಮಕ್ಕಳು ಸಹಜ ಸ್ಥಿತಿಗೆ ತರುವ ಗುರಿ ಹೊಂದಿದ್ದೇವೆ; ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ್, ತಿಳಿಸಿದರು
ಪಟ್ಟಣದ ಪರಿಶಿಷ್ಟ ವರ್ಗದ ಕಲ್ಯಾಣ ಕಛೇರಿ ಆವರಣದಲ್ಲಿ ಆಯೋಜಿಸಲಾದ “ಬಾಲ ಚೈತನ್ಯ ಶಿಬಿರ” ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಜಿಲ್ಲಾ ನಿರೂಪಣಾಧಿಕಾರಿ ರಾಮಕೃಷ್ಣ ನಾಯಕ್ ಅವರು ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮದಲ್ಲಿರುವ ಅಪೌಷ್ಟಿಕ ಮಕ್ಕಳನ್ನು ಮತ್ತು ಅವರ ತಾಯಂದಿರು ಅಥವಾ ಪೋಷಕರನ್ನು ಕರೆತರಲಾಗಿದ್ದು ಒಟ್ಟು 79 ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗಿದೆ, ಈ ಎಲ್ಲಾ ಮಕ್ಕಳಲ್ಲಿ ಯಾವ ಆರೋಗ್ಯದ ಸಮಸ್ಯೆ ಇದೆ ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಕೊಡಿಸುವುದರ ಜೊತೆಗೆ ಹದಿನಾಲ್ಕು ದಿನವೂ ಮಕ್ಕಳಿಗೆ ಐದು ಬಾರಿ ಪೌಷ್ಟಿಕಾಹಾರ ಕೊಡುವುದರ ಜೊತೆಗೆ ಮಕ್ಕಳ ತಾಯಿಂದಿರಿಗೆ ಪೌಷ್ಟಿಕಾಹಾರ ತಯಾರಿಸುವ ವಿಧಾನವನ್ನು ಕಲಿಸಿಕೊಡುವುದರೊಂದಿ ಶಿಬಿರ ಯಶಸ್ವಿಗೊಳಿಸಿ ಅಪೌಷ್ಟಿಕ ಮಕ್ಕಳನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಳೆನಾಗಪ್ಪ ಮಾತನಾಡಿ ಹದಿನಾಲ್ಕು ದಿನಗಳು ಕೇಂದ್ರದಲ್ಲಿ ಹಬ್ಬದ ವಾತವರಣ ಸೃಷ್ಟಿಸಿ ಹಲವಾರು ಚಟುವಟಿಕೆಗಳನ್ನು ಆಯೋಜಿಸಿ ಮನೆಯ ವಾತಾವರಣಕ್ಕೂ ಮೀರಿದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಎಲ್ಲಾ ಮಕ್ಕಳ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಿ ಮಕ್ಕಳ ಆರೈಕೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಭರತ್ ಕುಮಾರ್ ಮಾತನಾಡಿ ಮಕ್ಕಳ ಆರೋಗ್ಯ ಸುಧಾರಣೆಗೆ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಮಕ್ಕಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಲಸಿಕಾಕರಣ ವ್ಯವಸ್ಥೆ ಮಾಡಲಾಗುವುದು, ಮಕ್ಕಳ ತಜ್ಞರು ಹಾಜರಿರುವರು ಹಾಗು ಆರೋಗ್ಯ ಶಿಕ್ಷಣಾಧಿಕಾರಿಗಳಿಂದ ಇಲಾಖೆಯ ಸೇವೆಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿದರು, ಶಿಬಿರದಲ್ಲಿ ಪೌಷ್ಟಿಕ ಆಹಾರದ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು,

ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಡಾ.ರಮ್ಯಾ, ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ರವಿಕುಮಾರ್, ಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಯೋಜನಾಧಿಕಾರಿ ಶ್ರೀಮತಿ ಉಷಾ, ತಾಲೂಕಿನ ಮೇಲ್ವಿಚಾರಕಿಯರಾದ ಮಲ್ಲಮ್ಮ ಭಜಂತ್ರಿ,ಶರಣಬಸವೇಶ್ವರಿ,ಲಕ್ಷ್ಮಿ ಕಂಕಣವಾಡಿ,ಲಕ್ಷ್ಮಿ ಪರಸಣ್ಣನವರ್,ಗೀತಾ ಅರ್ಕಚಾರಿ,ಎ.ಪಿ ಕುಂಬಾರ್,ಶಾರದ ಶಿಂದೆ,ಚೇತನ ಗೌಡ್ರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಆರ್. ಕೆ.ಎಸ್.ಕೆ ಜಿಲ್ಲಾ ಕೋಅರ್ಡಿನೇಟರ್ ಮನೋಹರ್,ಬಿ.ಪಿ.ಎಮ್ ವಿನೋದ್,ಆರೋಗ್ಯ ನಿರೀಕ್ಷಣಾಧಿಕಾರಿ ಬಂಡೆಗೌಡ, ವಿಜಯಲಕ್ಷ್ಮಿ, ಶುಶ್ರೂಷಕಿ ನಾಗಮ್ಮ, ಪಾರ್ಮಸಿ ಅಧಿಕಾರಿ ದೀಪಾ, ಅಂಗನವಾಡಿ ಕಾರ್ಯಕರ್ತೆಯರಾದ ಪ್ರೇಮಾ,ಯಶೋಧ,ಸಾವಿತ್ರಿ, ಶಶಿಕಲಾ, ಅನಸೂಯ, ಟಿ.ಕವಿತಾ,ವೆಂಕಟಲಕ್ಷ್ಮಿ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here