ಪದವಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಗೂ ಬಸ್ ಸೌಲಭ್ಯ ಕಲ್ಪಿಸಿ:ತಹಶೀಲ್ದಾರ್ ಹೆಚ್.ಜೆ.ರಶ್ಮಿ ಅವರಿಗೆ ಎಬಿವಿಪಿ ಮನವಿ

0
83

ಹಾಯ್ ಸಂಡೂರ್, ನ್ಯೂಸ್
ಸಂಡೂರು, ಜು.21: ಪದವಿ ಪರೀಕ್ಷೆಗಳು ವಿದ್ಯಾರ್ಥಿ ಜೀವನದಲ್ಲಿ ಬಹು ಮುಖ್ಯ ಹಂತವಾಗಿದೆ, ಅದರೆ ಈಗ ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಲು ಸಿದ್ದತೆ ನಡೆಸಿದ್ದು ಅವರಿಗೆ ಬೇಕಾದ ವಸತಿ, ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಬಳ್ಳಾರಿ ಜಿಲ್ಲಾ ಎ.ಬಿ.ವಿ.ಪಿ ಸಂಚಾಲಕ ಪವನ್ ಕುಮಾರ್ ಒತ್ತಾಯಿಸಿದರು.

ಅವರು ಇಂದು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಾಲೂಕು (ಎ.ಬಿ.ವಿ.ಪಿ)ಅಖಿಲಭಾರತ ವಿದ್ಯಾರ್ಥಿ ಪರಿಷತ್ತು ವತಿಯಿಂದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮುಂಬರುವ ಪರೀಕ್ಷೆಗೆ ಬೇಕಾದ ಹಾಸ್ಟಲ್ ವ್ಯವಸ್ಥೆ, ಸಾರಿಗೆ ಮಾಡುವ ಮೂಲಕ ಅವರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು,

ಪದವಿ ಪರೀಕ್ಷೆಗಳು ಕರೋನಾ ಸಂದರ್ಭದಲ್ಲಿ ಅವಶ್ಯಕವಿರಲಿಲ್ಲ ಅದರೆ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮಾಡಿದ್ದು ಅವರ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಲು ಈ ವ್ಯವಸ್ಥೆ ಮಾಡಿದ್ದಾರೆ, ಅದರೆ ಅದಕ್ಕೆ ಬೇಕಾದ ಸೂಕ್ತ ಸೌಲಭ್ಯಗಳಿಲ್ಲದೆ ಗ್ರಾಮೀಣ ವಿದ್ಯಾರ್ಥಿಗಳು ಬಹಳಷ್ಟು ಕಷ್ಟಕ್ಕೆ ಸಿಲುಕಿದ್ದಾರೆ, ಅದ್ದರಿಂದ ತಕ್ಷಣ ಅವರಿಗೆ ವಸತಿ ವ್ಯವಸ್ಥೆ( ಹಾಸ್ಟಲ್ ) ಅನುಕೂಲ ಮಾಡಬೇಕು, ಇನ್ನೂ ಪ್ರಯಾಣಿಸಲು ಬಸ್ ವ್ಯವಸ್ಥೆಯನ್ನು ಮಾಡಿದರೆ ಪರೀಕ್ಷೆ ಬರೆಯಲು ಅನುಕೂಲವಾಗುತ್ತದೆ,

ಅದ್ದರಿಂದ ಕಡ್ಡಾಯವಾಗಿ ಈ ವ್ಯವಸ್ಥೆಯ ನಂತರವೇ ಪರೀಕ್ಷೆ ನಡೆಸಬೇಕು ಎಂದು ತಹಶೀಲ್ದಾರ್ ಮೂಲಕ ಒತ್ತಾಯಿಸುತ್ತೇವೆ ಎಂದು ತಹಶೀಲ್ದಾರ್ ಹೆಚ್.ಜೆ. ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾ ಪ್ರಮುಖ ಲಕ್ಷ್ಮೀನಾರಾಯಣ, ಕಾರ್ಯಕರ್ತರಾದ ಮಾರುತಿ, ರಘೂ, ಮಣಿಕಂಠ, ಇತರರು ಉಪಸ್ಥಿತರಿದ್ದು ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here