ಹೆಚ್.ಐ.ವಿ/ ಏಡ್ಸ್ ಅರಿವಿನ ಮೂಲಕ ನಿಯಂತ್ರಣ ಸಾಧ್ಯ; ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
96

ಸಂಡೂರು: ಡಿ: 18: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ 18 ನೇ ವಾರ್ಡಿನಲ್ಲಿ ಆಸ್ಪೈರ್ ಸಂಸ್ಥೆಯ ಸಹಯೋಗದಲ್ಲಿ “ಹೆಚ್.ಯ.ವಿ/ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ” ನಡೆಯಿತು, ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಏಡ್ಸ್ ಗೆ ಸೂಕ್ತ ಚಿಕಿತ್ಸೆ ಇರದಿದ್ದರೂ ಅರಿವಿನಿಂದ ಹೊಸ ರೋಗಿಗಳ ಸಂಖ್ಯೆಯನ್ನು ಶೂನ್ಯ ಮಾಡ ಬಹುದು, ಸಮುದಾಯದಲ್ಲಿ ಏಡ್ಸ್ ಕುರಿತು ಜಾಗೃತಿ ಮಟ್ಟವನ್ನು ಹೆಚ್ಚು ಮಾಡಬೇಕಿದೆ,ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಎಚ್ಚರಿಕೆಯಿಂದ ಇರದ್ದಿದ್ದರೆ ಯಾರಿಗಾದರೂ ಹೆಚ್.ಐ.ವಿ ಬರಬಹುದು, ಹೆಚ್.ಐ.ವಿ ಯು ಸೋಂಕಿತ ವ್ಯಕ್ತಿಯಿಂದ ನಡೆಸುವ ಅಸುರಕ್ಷಿತ ಲೈಂಗಿಕತೆಯಿಂದ ಹರಡುತ್ತದೆ, ಮತ್ತು ಸೋಂಕಿತ ವ್ಯಕ್ತಿಯ ರಕ್ತವನ್ನು ಪರೀಕ್ಷಿಸಿಸದೇ ಪಡೆಯುವುದರಿಂದ, ಸಂಸ್ಕರಿಸದ ಸೂಜಿ,ಸಿರಂಜು,ಬ್ಲೇಡು ಇತರೆ ಹರಿತವಾದ ವಸ್ತುಗಳನ್ನು ಬಳಸುವುದರಿಂದ ಹಾಗೂ ಸೋಂಕಿತ ಗರ್ಭಿಣಿಯಿಂದ ಹುಟ್ಟುವ ಮಗುವಿಗೆ ಬರುತ್ತದೆ, ಯುವಕರು ಮದುವೆಗೆ ಮುಂಚೆ ಲೈಂಗಿಕತೆಯಲ್ಲಿ ತೊಡಗಬಾರದು, ಮತ್ತು ಸೋಂಕಿತರ ಜೊತೆಗೆ ವಾಸ ಮಾಡುವುದರಿಂದಾಗಲಿ, ಕೆಲಸ ಮಾಡುವುದರಿಂದಾಗಲಿ,ಊಟ ಬಟ್ಟೆ ಹಂಚಿಕೊಳ್ಳುವುದರಿಂದಾಗಲಿ, ಸೊಳ್ಳೆ, ಕೀಟ ಕಚ್ಚುವುದರಿಂದಾಗಲಿ, ಒಂದೇ ಸ್ನಾನದ ಮನೆ, ಅಡುಗೆ ಮನೆ ಬಳಸುವುದರಿಂದ ಹೆಚ್.ಐ.ವಿ/ಏಡ್ಸ್ ಬರುವುದಿಲ್ಲ,ಹಾಗೆ ಸುರಕ್ಷಿತ ಲೈಂಗಿಕತೆಗೆ ಹೆಚ್ಚಿನ ಮಹತ್ವ ನೀಡಬೇಕು,ಬಹು ಸಂಗಾತಿಗಳೊಂದಿಗೆ ಲೈಂಗಿಕ ಕ್ರಿಯೆ ಇದ್ದರೆ ಅಪಾಯ ತಪ್ಪಿದ್ದಲ್ಲ, ಪುರಷರ ಮತ್ತು ಮಹಿಳೆಯರು ಕಾಂಡೋಮ್‌ಗಳ ಬಗ್ಗೆ ಅರಿವು ಪಡೆಯಬೇಕು, ಆದರ್ಶ ಜೀವನ ನಮ್ಮದಾಗಿದ್ದಾಗ ಏಡ್ಸ್ ‌ನ ಭಯವೇಕೆ, ನಮ್ಮಲ್ಲಿ ಐ.ಸಿ.ಟಿ.ಸಿ ಕೇಂದ್ರ ಇದೆ ರಕ್ತ ಪರೀಕ್ಷೆ ನಿರಂತರ ಮಾಡಲಾಗುತ್ತದೆ, ಸೋಂಕಿತರಿಗೆ ಎ.ಆರ್.ಟಿ ಚಿಕಿತ್ಸೆ ನೀಡಲಾಗುತ್ತದೆ, ಆಪ್ತ ಸಮಾಲೋಚನೆಯೊಂದಿಗೆ ಏಡ್ಸ್ ಹರಡದಂತೆ ಜಾಗೃತಿ ವಹಿಸಲಾಗುವುದು, ಹಾಗೆ ಹೆಚ್.ಐ.ವಿ ಪಾಸಿಟಿವ್ ರೋಗಿಗಳಲ್ಲಿ ಕಳಂಕ ,ತಾರತಮ್ಯ ಮಾಡಬಾರದು, ಅವರಿಗೂ ಬದುಕುವ ಹಕ್ಕಿದೆ,ಅವರದೂ ಜೀವನ ಇದೆ ಎಂದು ತಿಳಿಸಿದರು,

ನಂತರ ಶಾಲೆಯ ಶಿಕ್ಷಕಿ ಪಾರ್ವತಿ ಮಾತನಾಡಿ ಜನನಾಂಗ ಮಾರ್ಗಗಳ ನೈರ್ಮಲ್ಯ ಮತ್ತು ವೈಯಕ್ತಿಕ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು, ನಂತರ ಭಾಗವಹಿದ ಎಲ್ಲರಿಗೂ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಕ್ಕೆ ಆಸ್ಪೈರ್ ಸಂಸ್ಥೆಯ ಮ್ಯಾಜಿಕ್ ಬಸ್ ವತಿಯಿಂದ ಉಡುಗೊರೆಗಳನ್ನು ನೀಡಿದರು,

ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ ಸದಸ್ಯೆ ರಾಧಾ,ಸರಸ್ವತಮ್ಮ ಸಮಾಲೋಚಕ ಪ್ರಶಾಂತ್ ಕುಮಾರ್,ಆರೋಗ್ಯ ಸುರಕ್ಷಾಧಿಕಾರಿ ಭಾಗ್ಯಲಕ್ಷ್ಮಿ ಜೆ.ಎಸ್.ಡಬ್ಲ್ಯೂ ಫೌಂಡೇಶನ್ ‌ನ ಆಸ್ಪೈರ್ ಸಂಸ್ಥೆಯ ಶಿಕ್ಷಕ ಸಿಬ್ಬಂದಿ ಮಲ್ಲೇಶಪ್ಪ,ಸುರೇಶ್, ಶರೀಪ್ ಸಾಬ್,ಲೀಲಾವತಿ,ಪೂಜಾರಿ ಲಕ್ಷ್ಮಿ, ಮಹಿಳೆಯರಾದ ಸಂದ್ಯಾರಾಣಿ,ಲಕ್ಷ್ಮಿದೇವಿ, ಸಂಜಮ್ಮ,ರಾಮಾಂಜಿನಮ್ಮ,ಹನುಮಕ್ಕ,ಸುಂಕಮ್ಮ,ರಾಮಾಂಜಿನಮ್ಮ,ನಾಗಮ್ಮ,ಚಿತ್ರಕಲೆ ಬಿಡಿಸಿದ ವಿದ್ಯಾರ್ಥಿಗಳಾದ ಚಂದ್ರಕಲಾ, ಉಷಾ,ಕವಿತಾ,ನಿಖಿಲ್,ದರ್ಶನ್ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು

LEAVE A REPLY

Please enter your comment!
Please enter your name here