ಅನುಬಂಧ: 01ರ ಲೆಕ್ಕ ಪರಿಶೋಧನೆಗಳಿಂದ ರಾಜ್ಯದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಅನುಭವಿಸುವತ್ತಿರುವ ಸಮಸ್ಯೆಗಳು:-

0
103

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 01 ವರ್ಷದಲ್ಲಿ ಸರಾಸರಿ 04 ಲೆಕ್ಕ ಪರಿಶೋಧನೆಗಳನ್ನು ಅನುಬಂದ: 01ರಲ್ಲಿ ಇರುವಂತೆ ಕೈಗೊಳ್ಳಲಾಗುತ್ತಿದೆ ಹಾಗೂ ಉಲ್ಲೇಖ ಪತ್ರದಂತೆ ಮಾನ್ಯ ಗೌರವಾನ್ವಿತ ಇಲಾಖೆಯ ಸಚಿವರು,ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ಕಟ್ಟುನಿಟ್ಟಾಗಿ ನಡೆಸುವಂತೆ ತಿಳಿಸಿರುತ್ತಾರೆ, ಈ ಸಂಧರ್ಭದಲ್ಲಿ ವಿವಿಧ ಆಡಿಟ್ ಗಳಿಂದಾಗಿ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ

■ಗ್ರಾಮ ಪಂಚಾಯಿತಿಯಲ್ಲಿ ಸರಾಸರಿ ಇಬ್ಬರು ಸರ್ಕಾರಿ ನೌಕರರು ಪ್ರಸ್ತುತ ಕೆಲಸ ಮಾಡುತ್ತಿದ್ದು, ಮನರೇಗಾ ಅನುದಾನ, ಹಾಗೂ 15ನೇ ಹಣಕಾಸು ಅನುದಾನಗಳು, ಸೇರಿ ಸರಾಸರಿ 02 ಕೊಟಿಗಿಂತ ಹೆಚ್ಚಿನ ಅನದಾನ ನಿರ್ವಹಿಸಲಾಗುತ್ತಿದೆ, ಇದರಿಂದಾಗಿ ಈ ಎರಡು ಯೋಜನೆಗಳ ಹಣ ಸ್ವೀಕೃತಿ ಮತ್ತು ವೆಚ್ಛದ ದಾಖಲೆಗಳನ್ನು ಹೊಂದಿಸುವುದೇ ಕಷ್ಟವಾಗಿದೆ.
■ಅನುಬಂಧ 01ರಲ್ಲಿನ ಪ್ರತಿ ಅಡಿಟ್ ವರದಿಗಳು ಭಿನ್ನ-ಭಿನ್ನ ಅಭಿಪ್ರಾಯಗಳಿಂದ ಕೂಡಿದ್ದು, ಇವುಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದು ಪಿಡಿಒ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿರುವವರ ಸಂಖ್ಯೆ ದಿನೆ-ದಿನೆ ರಾಜ್ಯದಲ್ಲಿ ಹೆಚ್ಚುತ್ತಿದೆ.
■ಪ್ರತಿ ಅಡಿಟ್ ಮುಕ್ತಾಯವಾದ ಮೇಲೆ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಅನುಪಾಲನ ವರದಿಗಳನ್ನು ತಯಾರಿಸಿ ವಿವಿಧ ಸಮಿತಿಗಳಿಗೆ ಪಿಡಿಒ ಅವರು ವರದಿ ನೀಡಬೇಕಿದೆ, ಇದರಿಂದ ಪ್ರತಿ ನಿತ್ಯ ಸಾರ್ವಜನಿಕರ ಕೆಲಸ ಜೊತೆಗೆ ಇವುಗಳನ್ನು ನಿಭಾಯಿಸುವುದು ತೀರಾ-ತೀರಾ ಕಷ್ಟದ ಕೆಲಸವಾಗಿದೆ.
ಪ್ರತಿ ಅಡಿಟ್ ವರದಿಗಳು ಭಿನ್ನ-ಭಿನ್ನ ಅಭಿಪ್ರಾಯಗಳಿಂದ ಕೂಡಿದ್ದು, ಇವುಗಳಲ್ಲಿ ಲೋಪ ಇರುವ ಅಡಿಟ್ ವರದಿಗಳನ್ನು ಮಾತ್ರ ಆಧಾರಿಸಿ ಪಿಡಿಒ ಅವರ ಮೇಲೆ ಲೋಕಾಯುಕ್ತ ಪ್ರಕರಣಗಳನ್ನು ದಾಖಲಿಸಲಗಿದೆ, ಹಾಗೂ ಇದುವರೆಗೂ 12042 ಕ್ಕೂ ಹೆಚ್ಚು ಪ್ರಕರಣಗಳು ದಾಖಲಿಸಲಾಗಿದೆ, ಇದರೊಂದಿಗೆ ಪ್ರತಿ ವರ್ಷ ಹೊಸದಾಗಿ ನೀಡುವ ಅಡಿಟ್ ವರದಿಗಳನ್ನು ಪಡೆದು ಹೊಸ- ಹೊಸ ಪ್ರಕರಣಗಳನ್ನು ಲೋಕಾಯುಕ್ತದಲ್ಲಿ ದಾಖಲಿಸುತ್ತಿದ್ದಾರೆ, ಇದರಿಂದ ಪಿಡಿಒ ಅವರು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವುದು ದುಸ್ಥರವಾಗಿದೆ.
■ಯಾವುದೇ ಅಡಿಟ್ ಪ್ರಕ್ರಿಯೆ ಮುಕ್ತಾಯವಾದ ನಂತರ, ವರದಿಯಲ್ಲಿ ನೀಡಿರುವ ಲೋಪ ದೋಷಗಳ ಕುರಿತು ಸೂಕ್ತ ಅನುಪಾಲನ ವರದಿ ನೀಡಲು, ವಿವಿಧ ಸಮಿತಿಗಳಿದ್ದರೂ ಇವುಗಳು ಸರಿಯಾಗಿ ಕಾರ್ಯಾನಿರ್ವಹಿಸದೆ ಇರುವ ಕಾರಣ, ಪಿಡಿಒ ಅವರ ಮೇಲೆ ಅಡಿಟ್ ವರದಿ ಆಧಾರಿಸಿ ರಾಜ್ಯದ ಕೆಲ ಸಂಘ-ಸಂಘಟನೆಗಳು, ಅಡಿಟ್ ವರದಿಗಳಿಂದ ಪಿಡಿಒ ಅವರ ಮೇಲೆ ಹಣ ದುರಪಯೋಗವಾಗಿದೆ ಎಂದು ಬಿಂಬಿಸಿ ಪತ್ರಿಕೆ ಹೇಳಿಕೆ ನೀಡುವುದು, ದೂರು ನೀಡುವುದು, ಪ್ರತಿಭಟನೆ ಮಾಡುವ ಮೂಲಕ, ಮಾನಸಿಕವಾಗಿ ಕುಗ್ಗಿಸುವ ಕೆಲಸ ವ್ಯವಸ್ಥಿತವಾಗಿ ನೆಡಸಿದ್ದು, ಇದರಿಂದ ಪಿಡಿಒ ಅವರನ್ನು ವೈಯಕ್ತಿಕವಾಗಿ ತೇಜೊವಧೆ ಮಾಡಲಾಗುತ್ತಿದೆ, ಇದರಿಂದ ರಾಜ್ಯದ ಪಿಡಿಒ ಅವರ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.

-:ಕೈಗೊಳ್ಳಬಹುದಾದ ಪರಿಹಾರ ಕ್ರಮಗಳು:-

◆ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಎಲ್ಲಾ ಮಾದರಿಯಾ ಅಡಿಟ್‍ಗಳನ್ನು ಒಗ್ಗೂಡಿಸಿ, ವರ್ಷಕ್ಕೆ ಒಂದೇ ಅಡಿಟ್ ಮಾಡಬೇಕು ಇದಕ್ಕಾಗಿ ಪ್ರತ್ಯಕ ನಿಯಮಗಳನ್ನು ರೂಪಿಸಬೇಕು, ಹಾಗೂ ಏಕಿಕೃತ ಅಡಿಟ್ ವ್ಯವಸ್ಥೆ ಜಾರಿಯಾಗಬೇಕು.
◆ಅಡಿಟ್ ವರದಿ ಆಧಾರಿಸಿ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡುವ ಕ್ರಮವನ್ನು ಈ ಕೂಡಲೇ ರದ್ದುಗೊಳಿಸಬೇಕು.
◆ಪ್ರತಿ ವರ್ಷ ಅಡಿಟ್ ಕೈಗೊಳ್ಳುವಾಗ ಪ್ರತ್ಯೆಕ ಅಡಿಟ್ ಮಾಹೆಯನ್ನು ಘೋಷಿಸಬೇಕು, ಅದೇ ಮಾಹೆಯಲ್ಲಿ ಅಡಿಟ್ ಕಾರ್ಯ ಮಾಡಬೇಕು.
◆ವಿಶೇಷ ಅಡಿಟ್, ಜಮಾಬಂಧಿ, ಆಂತರಿಕ ಲೆಕ್ಕ ಪರಿಶೋಧನೆ ಸೇರಿದಂತೆ ಎಲ್ಲಾ ಅಡಿಟ್ ಮಾದರಿಗಳನ್ನು ಜರೂರಾಗಿ ರದ್ದುಗೊಳಿಸಬೇಕು.
◆ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ವೆಚ್ಛಗಳ ಮೇಲೆ ನಿರ್ಣಯ ಕೈಗೊಳ್ಳುವುದರಿಂದ, ಹಾಗೂ ಅಧ್ಯಕ್ಷರು ಮತ್ತು ಪಿಡಿಒ ಅವರು ಜಂಟಿ ಸಹಿ ಮೂಲಕ ಗ್ರಾಮ ಪಂಚಾಯಿತಿ ಹಣ ಬಟವಾಡೆ ಮಾಡುವುದರಿಂದ, ಅಡಿಟ್ ವರದಿಯಲ್ಲಿ ಗ್ರಾಮ ಪಂಚಾಯಿತಿ ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಹೆಸರನ್ನು ದಾಖಲಿಸಬೇಕು.

ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಶಿಲಿಸಿ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಅಡಿಟ್ ವ್ಯವಸ್ಥೆಯನ್ನು ಉತ್ತಮವಾಗಿ ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡಬೇಕೆಂದು “ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ (ಬಿ-ಗ್ರೇಡ್)ಹುದ್ದೆ ಉನ್ನತ್ತಿಕರಣ ಸಂಘ (ರಿ)ಬೆಂಗಳೂರು”ವತಿಯಿಂದ ಗೌರವ ಪೂರ್ವಕವಾಗಿ ಮಾನ್ಯರಲ್ಲಿ ಕೋರಿಕೊಂಡಿದ್ದಾರೆ

LEAVE A REPLY

Please enter your comment!
Please enter your name here