ನೆಗ್ಗಿಲು ಮುಳ್ಳಿನ ಮಹತ್ವ,

0
546

ನೆಗ್ಗಿಲು ಮುಳ್ಳು , ನೆರಿಗಿಲು ಮುಳ್ಳು ,ನೆಗ್ಗಿನ ಮುಳ್ಳು ಎಂದು ಕರೆಯಲ್ಪಡುವ ಸುಂದರವಾದ ಹಳದಿ ಬಣ್ಣದ ಹೂವುಗಳನ್ನು ಹೊಂದಿ ನೆಲದ ಮೇಲೆ ಹರಡಿರುವ ಈ ಮುಳ್ಳಿನ ಬಳ್ಳಿಯಲ್ಲಿ ಕಡಲೆ ಗಿಡದ ಎಲೆಗಳನ್ನು ಹೋಲುವ ಎಲೆಗಳು ಇರುತ್ತವೆ.
ಸಂಸ್ಕೃತ ಭಾಷೆಯಲ್ಲಿ> ಗೋಕ್ಷುರ , ತ್ರಿಕಂಟಕ.
ಹಿಂದಿ ಭಾಷೆಯಲ್ಲಿ> ಗೋಖರು.
ಹಿಂದೆ ಸೈಕಲ್ ( ಬೈಸಿಕಲ್) ಗಳ ಮೇಲೆ ಹೋಗುವಾಗ ಈ ನೆಗ್ಗಿಲ ಮುಳ್ಳಿನ ಬಳ್ಳಿ ಮೇಲೆ ಹೋದರೆ ಪಂಕ್ಚರ್ ಗ್ಯಾರಂಟಿ. ಅದಕ್ಕಾಗಿ ಆಂಗ್ಲ ಭಾಷೆಯಲ್ಲಿ ಈ ಬಳ್ಳಿಗೆ
Puncture vine ಎಂದು ಕರೆದಿದ್ದಾರೆ.

ಇದರಲ್ಲಿ ಸಣ್ಣ ನೆಗ್ಗಿಲು ,ಆನೆ ನೆಗ್ಗಿಲು ಎಂಬ ಎರಡು ಪ್ರಭೇದಗಳಿವೆ. ಆನೆ ನೆಗ್ಗಿಲು ಸಿಗುವುದು ಅಪರೂಪ.
ಈ ಸಣ್ಣ ನೆಗ್ಗಿಲು ಬಳ್ಳಿಯ ಎಲೆಗಳು ತಿನ್ನಲು ರುಚಿ ಯಾಗಿದ್ದು ಪಲ್ಯ ಮಾಡಿ ತಿನ್ನಬಹುದು. ಚಿಕಿತ್ಸೆಗಳಲ್ಲಿ
ಇಡೀ ಬಳ್ಳಿಯನ್ನು ಉಪಯೋಗಿಸುತ್ತಾರೆ.

ನೆಗ್ಗಿಲು ಮುಳ್ಳಿನ ಪ್ರಯೋಜನಗಳು:-

◆ಕಿಡ್ನಿ ಸ್ಟೋನ್ ಕರಗಿಸಲು ನೆಗ್ಗಿಲು ಮುಳ್ಳಿನ 05 ಗ್ರಾಂ
ಚೂರ್ಣವನ್ನು ಒಂದು ಚಮಚ ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಬೇಕು.
◆ಉರಿ ಮೂತ್ರ ನಿವಾರಿಸಲು ಇಡೀ ಬಳ್ಳಿಯನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ ಕಲ್ಲು ಸಕ್ಕರೆ ಅಥವಾ ಜೇನು ಬೆರೆಸಿ 20 ರಿಂದ 30 ಎಂ ಎಲ್ ನಷ್ಟು
ದಿನಕ್ಕೆ ಮೂರು ಬಾರಿ ಸೇವಿಸಬೇಕು.
◆ಮೈ ಕೈ ನೋವು ಹಾಗೂ ವಾತ ಸಂಧಿ ನೋವಿಗೆ ಒಣಗಿದ ಇಡೀ ಬಳ್ಳಿಯನ್ನು ಸಮಭಾಗ ಒಣ ಶುಂಠಿ ಸೇರಿಸಿ ಚೂರ್ಣವನ್ನು ತಯಾರಿಸಿ ಕಾಢೆ ( ಕಷಾಯ)
ತಯಾರಿಸಿ ರಾತ್ರಿ ಮಲಗುವಾಗ ಕುಡಿಯಬಹುದು.
◆ಪುರುಷತ್ವ ವೃದ್ಧಿಗೆ ನೆಗ್ಗಿಲು ಮುಳ್ಳು ಹಾಗೂ ಶತಾವರಿ ಬೇರು ತಲಾ ಹತ್ತು ಗ್ರಾಂ ಚೂರ್ಣವನ್ನು ಒಂದು ಗ್ಲಾಸ್ ಹಾಲಿನಲ್ಲಿ ಕುದಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.
◆ಚರ್ಮ ರೋಗಕ್ಕೆ ಹಸಿ ಬಳ್ಳಿಯನ್ನು ಅರೆದು ಲೇಪಿಸ ಬಹುದು.
◆ಇದರ ಹೂವುಗಳನ್ನು ಅರೆದು ಮಜ್ಜಿಗೆಯಲ್ಲಿ ಬೆರೆಸಿ ಅತಿಸಾರದಲ್ಲಿ ಬಳಸಬಹುದಾಗಿದೆ.

ಇದಲ್ಲದೇ ಇನ್ನೂ ಅನೇಕ ಕಾಯಿಲೆಗಳಲ್ಲಿ ಮನೆ ಮದ್ದಾಗಿ ಬಳಕೆಯಲ್ಲಿರುವ ನೆಗ್ಗಿಲು ಮುಳ್ಳಿನ ಬಳ್ಳಿಗಳನ್ನು ಶೇಖರಿಸಿ ಒಣಗಿಸಿ ಇಟ್ಟುಕೊಂಡು ಬೇಕಾದಾಗ ಬಳಸಬಹುದು.

ಸಂಗ್ರಹ ಮಾಹಿತಿ ಲೇಖನ.
S.H.Nadaf

LEAVE A REPLY

Please enter your comment!
Please enter your name here