“ಬ್ರಿಟೀಷರಿಂದ ಬಿಡುಗಡೆಗೊಂಡ 75ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಯಶಸ್ವಿ.”

0
119

ಹಾಯ್ ಸಂಡೂರ್, ನ್ಯೂಸ್
ಸಂಡೂರು:ಆಗಸ್ಟ್:15: ತೋರಣಗಲ್ಲು ಗ್ರಾಮದಲ್ಲಿ 15.08.2021 ರಂದು ದಲಿತ ಪ್ರದೇಶದ ಒಂದನೇ ವಾರ್ಡ, ಬನ್ನಿ ಮಹಾಂಕಾಳಿ ಆವರಣದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಕಾರ್ಯಕ್ರಮ ಮೂಲಕ ಯಶಸ್ವಿಯಾಗಿ ಮಾಡಲಾಯಿತು.
ಈ ಧ್ವಜಾರೋಹಣವನ್ನು ತೋರಣಗಲ್ಲು ಗ್ರಾಮ ಪಂಚಾಯತಿ ನೂತನ ಸದ್ಯಸರಾದ ಹನುಮಂತರವರು ನೇರವೇರಿಸಿದರು.

ಸಂಡೂರು ತಾಲ್ಲೂಕು DYFI ಸಹಕಾರ್ಯದರ್ಶಿಯಾದ ಸೈಯದ್ ಷರೀಫ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿನೆ ಮಾಡಿ ಮಾತನಾಡುತ್ತ..
ಇಂದು ನಮ್ಮ ಭಾರತ ದೇಶದ ಎಲ್ಲೇಡೆ ಆಗಷ್ಟ್ 15 ಪ್ರಯುಕ್ತ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೇ ಕೇವಲ ಆಚರಣೆಗೆ ಸೀಮಿತವಾಗದೆ ವಿದ್ಯಾರ್ಥಿಗಳ ಮತ್ತು ಯುವಜನರ ಹಾಗೂ ಜನಸಾಮಾನ್ಯರ ಅಭಿವೃದ್ಧಿಗಳಲ್ಲಿ ಸ್ವಾತಂತ್ರ್ಯ ಕಾಣಬೇಕು. ನಮಗೇ ಕೇವಲ ಬ್ರಿಟಿಷ್‌ರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ವಿನಃ ಸಂಪೂರ್ಣ ಸ್ವಾತಂತ್ರ್ಯವಲ್ಲ ಅದ್ದರಿಂದ ತಾವೇಲ್ಲರೂ ಸಹಾ ಅಸಮಾನತೆ, ಜಾತಿ ತಾರತಮ್ಯ ,ಯುವಜನತೆಯನ್ನು ದಿಕ್ಕು ತಪ್ಪಿಸುವ ನಮ್ಮಲ್ಲಿ‌ ಒಳ‌ ಜಗಳ ಸಲ್ಲಾಪಗಳನ್ಮು ತೊಲಗಿಸಿ ಭಗತ್ ಸಿಂಗ್ ,ಸುಖದೇವ್,ರಾಜಗುರು ಮಾಡಿದಂತಹ ತ್ಯಾಗ ಬಲಿದಾನಗಳಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶವಾಗಿ ದೇಶದ ಮತ್ತು ದಲಿತರ ಬದಲಾವಣೆಗೆ ಪಣತೋಡಬೇಕು‌ 2ನೇ ಸ್ವಾತಂತ್ರ್ಯಕ್ಕಾಗಿ ಮುಂದಾಗಬೇಕು‌ ಎಂದರು

DYFI ನ ಗ್ರಾಮ ಘಟಕದ ಉಪಾಧ್ಯಕ್ಷರು ಪಾಲ್ ಪಕ್ಕೀರ ಇವರು ಮಾತನಾಡಿ ಇವತ್ತಿನ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಬಹಳಷ್ಟು ಜನ ಸಾಮಾನ್ಯರಿಗೆ ಗೊತ್ತಿಲ್ಲದೇ ಅವರ ಬದುಕು ಇತರೇ ಕಾರ್ಯ ಕೆಲಸದಲ್ಲಿದ್ದು ತಮ್ಮ ಕುಟುಂಬಕ್ಕಾಗಿ ಮಾತ್ರ ಸಿಮಿತವಾಗಿದ್ದು ದೇಶದ ವಿಚಾರವನ್ನು ಮರೆಯುತ್ತಿದ್ದಾರೆ. ನಮ್ಮ ನಾಡಿನ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ನಡೆಯುವುದರ ವಿರುದ್ಧ ನಾವೆಲ್ಲರೂ ಒಂದಾಗಬೇಕು ನಮಗೆ ಯಾವುದೇ ಜಾತಿ,ಧರ್ಮ, ಭಾಷೆ ಭೇದವಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ರವರು ಸಮಾನತೆಗಾಗಿ ಹೋರಾಡಿ ಸಂವಿಧಾನವನ್ನು ರಚನೆ ಮಾಡಿದ್ದು ಒಂದು ಸಂದರ್ಭದಲ್ಲಿ ಇಂಗ್ಲೆಂಡ್ ಗೆ ಶಿಕ್ಷಣಕ್ಕಾಗಿ ಹಂದಿ ಸಾಗಿಸುವ ಹಡಗಿನಲ್ಲಿ ‌ಹೋಗಿ ಅಧ್ಯಯನ ನೆಡೆಸಿದ್ದು ಇತಿಹಾಸವಾಗಿದೆ.ಯಾರಿಗೆ ಕಷ್ಡವಿಲ್ಲ ಹೇಳಿ ಇಂತಹ ಪರಿಸ್ಥಿತಿ ಮದ್ಯ ಕೂಡ ಸಮಾನವಾದ ಶಿಕ್ಷಣ,ಉದ್ಯೋಗ ಪಡೆಯುವುದರ ಜೋತೆ ಅವ್ಯವಸ್ಥೆಯ ದುಷ್ಪಚಟಗಳಿಗೆ ಬಲಿಯಾಗದೆ ಯುವಜನತೆ ಅನ್ಯಾಯ,ಜಾತಿಯ ಚೌಕಟ್ಟಿನಲ್ಲಿ ಅಸ್ಪೃಶ್ಯತೆವಾಗಿ ಕೆಲಸ ಮಾಡಿಸುವ ಇಲಾಖೆಯಗಳ ವಿರುದ್ಧ ಮತ್ತು ದಲಿತರ ಶೋಷಣೆ ವಿರುದ್ದ ಹೋರಡಬೇಕು ಬಡಜನರ ಸ್ವಾತಂತ್ರ್ಯಕ್ಕಾಗಿ ಕಾರ್ಯಕ್ರಮ ಗಳನ್ನು ರೂಪಿಸುವುದು ಅನಿವಾರ್ಯ ಎಂದರು.

DHS ನ ಎ.ಸ್ವಾಮಿ ಇವರು ಮಾತನಾಡಿ ಚಿಕ್ಕ ಮಕ್ಕಳಿಂದ ವಿದ್ಯಾರ್ಥಿ,ಯುವಜನರು ಕೇವಲ ತಾಂತ್ರಿಕವಾಗಿ ಮೊಬೈಲ್‌ ಬಳಕೆನಲ್ಲಿದ್ದರೆ ಉಪಯೋಗಿಸುವುದು ತಪ್ಪಲ್ಲ ಅನಾವಶ್ಯಕವಾಗಿ ತೋಡಗಿ ಈ ಸಮಾಜದ,ಆರ್ಥಿಕವಾಗಿ ಜವಾಬ್ದಾರಿಗಳನ್ನು ಮರೆಮಾಚಿದ್ದಾರೆ ಅವಶ್ಯಕತೆಗಾಗಿ ಬಳಕೆಯಾಗಲಿ ಈ ಗಣಿನಾಡಿನ ಬಗ್ಗೆ ಆಲೋಚನೆ ಮಾಡಿ.ಈ ಕೋರನಾ ನೆಪದಲ್ಲಿ ನಮ್ಮನ್ನು ನೂಕಿಸಿ ಆಳುವಂತ ವರ್ಗಗಳು ಡಾ.ಬಿ.ಆರ್,ಅಂಬೇಡ್ಕರ್ ಕಾನೂನುಗಳನ್ನು ಮತ್ತು ಜನರ ಹಕ್ಕಗಳ ಸಂವಿಧಾನವನ್ನು ತಿದ್ದುಪಡಿ ಮಾಡಿ ಶ್ರಿಮಂತರ ಪರವಾಗಿ ಮಾಡುವ ಹುನ್ನಾರ ನಮ್ಮ ದೇಶದಲ್ಲಿ ನಡೆಯುತ್ತದೆ ಹಾಗೂ ಗುಡಿ, ಚರ್ಚ್, ಮಸಿದಿ ಮಠಗಳ ಅಭಿವೃದ್ಧಿ ಬದಲಾಗಿ ಆರ್ಥಿಕವಾಗಿ ಬಳಲುತ್ತಿರುವ ಬಡಜನರ ,ದಲಿತರ, ಜನ ಸಾಮಾನ್ಯರ ಕೈ ಗೆಟುಕುವ ಕಾನೂನುಗಳು ,ಮೂಲಭೂತ ಹಕ್ಕಗಳಗಾಗಿ ಅಭಿವೃದ್ಧಿಯ ಕೆಲಸಗಳು ಆಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು…

ಈ ಸಂಧರ್ಭದಲ್ಲಿ ಈ ಕಾರ್ಯಕ್ರಮವನ್ನು ಹೆಚ್.ಸ್ವಾಮಿ DYFI ತಾಲ್ಲೂಕು ಕಾರ್ಯದರ್ಶಿ ನಿರ್ವಹಿಸಿದರು.
DYFI ತೋರಣಗಲ್ಲು ಗ್ರಾಮ ಘಟಕದ ಕಾರ್ಯದರ್ಶಿ ಹುಲೇಪ್ಪ, ಅಧ್ಯಕ್ಷರು ಶಿವರೆಡ್ಡಿ, ಉಪಾಧ್ಯಕ್ಷರುಗಳಾದ ಗಣೇಶ,ಸಂತೋಷ ಸಿಹಿ ಹಂಚಿದರು. ದಲಿತ ಮುಖಂಡರುಗಳಾದ ಹನುಮಂತಪ್ಪ, ದುರ್ಗಪ್ರಸಾದ್, ಹುಲುಗಪ್ಪ, ನಾಗಭೂಷಣ,
ಕಾರ್ಯಕ್ರಮದಲ್ಲಿ DT ರಮೇಶ, ವಿರೇಶ್, ಭಾಷ, ಚಿರಂಜಿವಿ, ಬಸವ, ಅಮರ್, ಅಂಜಿನಿ, ಯಶವಂತ, ಅಂಬರೀಶ್ ಮತ್ತು ಚಿಕ್ಕಮಕ್ಕಳು, ವಿಧ್ಯಾರ್ಥಿಗಳು ಇತರರು ಭಾಗವಹಿಸಿದ್ದರು….

LEAVE A REPLY

Please enter your comment!
Please enter your name here