ಆಕಸ್ಮಿಕ ಬೆಂಕಿ ಲಕ್ಷ್ಮೀಪುರ ಗ್ರಾಮದ ರೈತನ ಮೆಕ್ಕೆಜೋಳದ ತೆನೆ ರಾಶಿ ಭಸ್ಮ ಲಕ್ಷಾಂತರ ರೂಪಾಯಿ ನಷ್ಟ

0
25

ಸಂಡೂರು ತಾಲೂಕಿನ ಲಕ್ಷ್ಮೀಪುರ ಗ್ರಾಮದ ರೈತ ಎಂ. ಈರಣ್ಣ ಅವರು 18 ಹುಲಿಕುಂಟೆ ಸ.ವೆ.ನಂ. 141/1, ಎಕರೆ 6.51 ಎಕರೆ ಜಮೀನಿನ ಮೆಕ್ಕೆ ಜೋಳದ ತೆನೆ ರಾಶಿ ರಾತ್ರಿ 6 ರಿಂದ 8 ಗಂಟೆ ಸಮಯದಲ್ಲಿ ಆಕಸ್ಮಿಕ ಬೆಂಕಿ ತಗಲಿ ಅಪಾರ ನಷ್ಟ ಉಂಟಾಗಿದ್ದು.

ಅಂದಾಜು ರೈತರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ 150 ಕ್ವಿಂಟಾಲ್ ಅಂದಾಜು 3 ಲಕ್ಷಕ್ಕಿಂತಲೂ ಹೆಚ್ಚು ಹಣ ನಷ್ಟವಾಗಿದೆ, ಅಲ್ಲದೆ ಇದರ ಉತ್ಪಾದನೆಗೆ ಕನಿಷ್ಠ 1.5 ಲಕ್ಷ ಖರ್ಚಾಗಿದ್ದು, ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದ್ದು ರೈತ ಕಂಗಾಲಾಗಿದ್ದಾನೆ.

ಸುತ್ತಲಿನ ಜಮೀನಿನ ರೈತರು ತಕ್ಷಣ ಬೆಂಕಿಯ ಕೆನ್ನಾಲಿಗೆಯನ್ನು ಕಂಡು ಫೈರ್, ಪೋಲಿಸ್, ಕೃಷಿ ಅಧಿಕಾರಿಗಳಿಗೆ ಪೋನ್ ಮಾಡಿದ್ದಾರೆ ಪರಿಣಾಮ ಪೈರ್ ಅಧಿಕಾರಿಗಳು ರಾತ್ರಿ ಅಗಮಿಸಿ ಬೆಂಕಿಯ ವಿಸ್ತರಣೆಯಾಗದಂತೆ ಕ್ರಮವಹಿಸಿದ್ದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೀರಾವರಿ ಜಮೀನಾಗಿದ್ದು ರೈತ ಕಷ್ಟಪಟ್ಟು ವರ್ಷಪೂರ್ತಿ ಬೆಳೆದ ಬೆಳೆ ನಷ್ಟವಾಗಿದ್ದು ದಿಕ್ಕು ತೋಚದಂತಾಗಿದ್ದಾರೆ, ಅದ್ದರಿಂದ ಕೃಷಿ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ರೈತನ ಸಹಾಯಕ್ಕೆ ಬರಬೇಕು, ಅಲ್ಲದೆ ಅವಘಡಕ್ಕೆ ಕಾರಣ ಪತ್ತೆ ಹಚ್ಚಬೇಕೆಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here