ಬಂಡ್ರಿ ಕೆಪಿಎಸ್ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ

0
377

ಹಾಯ್ ಸಂಡೂರ್, ನ್ಯೂಸ್
ಸಂಡೂರು:ಆಗಸ್ಟ್:15: ಸಂಡೂರು ತಾಲೂಕಿನ ಚೋರನೂರು ಹೋಬಳಿಯ ಬಂಡ್ರಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಪ್ರಾಂಶುಪಾಲರಾದ ಶ್ರೀ ಕೃಷ್ಣನಾಯ್ಕ್ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.

ಈ ಸಮಾರಂಭದಲ್ಲಿ ಶಿಕ್ಷಣ ಪ್ರೇಮಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ. ನಾಗರಾಜ್ ಮಾತನಾಡುತ್ತ..
ಇಂದು ನಮ್ಮ ಭಾರತ ದೇಶದ ಎಲ್ಲೇಡೆ ಆಗಷ್ಟ್ 15ರ ದಿನದ ಪ್ರಯುಕ್ತ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೇ ಕೇವಲ ಆಚರಣೆಗೆ ಸೀಮಿತವಾಗದೆ ವಿದ್ಯಾರ್ಥಿಗಳ ಮತ್ತು ಯುವಜನರ ಹಾಗೂ ಜನಸಾಮಾನ್ಯರ ಅಭಿವೃದ್ಧಿಗಳಲ್ಲಿ ಸ್ವಾತಂತ್ರ್ಯಕಾಣಬೇಕು. ನಮಗೇ ಕೇವಲ ಬ್ರಿಟಿಷ್‌ರಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ವಿನಃ ಸಂಪೂರ್ಣ ಸ್ವಾತಂತ್ರ್ಯವಲ್ಲ ಅದ್ದರಿಂದ ತಾವೇಲ್ಲರೂ ಸಹ ಅಸಮಾನತೆ, ಜಾತಿ ತಾರತಮ್ಯ ,ಯುವಜನತೆಯನ್ನು ದಿಕ್ಕು ತಪ್ಪಿಸುವ ನಮ್ಮಲ್ಲಿ‌ ಒಳ‌ ಜಗಳ ಸಲ್ಲಾಪಗಳನ್ಮು ತೊಲಗಿಸಿ ಭಗತ್ ಸಿಂಗ್ , ಸುಖದೇವ್,ರಾಜಗುರು ಮಾಡಿದಂತಹ ತ್ಯಾಗ ಬಲಿದಾನಗಳಲ್ಲಿ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಆದರ್ಶವಾಗಿ ದೇಶದ ಮತ್ತು ದಲಿತರ ಬದಲಾವಣೆಗೆ ಪಣತೋಡಬೇಕು‌ 2ನೇ ಸ್ವಾತಂತ್ರ್ಯಕ್ಕಾಗಿ ಮುಂದಾಗಬೇಕು‌ ಎಂದರು

ಸರಳ ಸಮಾರಂಭದಲ್ಲಿ 2020-21 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಕಾತ್ರಿಕಿ ನಂದಿನಿ ಗೆ ಅಯೋಜಕರಿಂದ ಬಹುಮಾನವನ್ನು ವಿತರಿಸಲಾಯಿತು

ಶ್ರೀಯುತ ಕ್ರಿಷ್ಣಾನಾಯ್ಕ,ಮಹಾಂತೇಶ್, ಮಾರುತಿ,ಯಶವಂತ್, ಶ್ರೀಮತಿ ಶಶಿರೇಖಾ , ಶ್ರೀಯುತ ಬಸವರಾಜ್ ಕಂಕ್ರಿ ,ಎ ತಿಪ್ಪೇಸ್ವಾಮಿ, ಅಣ್ಣಪ್ಪ ನಾಯ್ಕ್ ರಾಮಪ್ಪ ಕೆ, ಪುರುಷೋತ್ತಮ, ಸುಭಾನ್, ಶ್ರೀಮತಿ ಸಾವಿತ್ರಮ್ಮ, ಶ್ರೀಮತಿ ಕೌಶಲ್ಯ,ಕೆಪಿಎಸ್ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಎಂ.ಡಿ.ನಾಗೇಶ್, ವಿಠ್ಠಲ್, ಎಸ್ಡಿಎಂಸಿ ಅಧ್ಯಕ್ಷರಾದ ಹೆಚ್ ದುರುಗೇಶ್, ಬಸವರಾಜ್, ಪದಾಧಿಕಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷ ಹಾಗೂ ಸದಸ್ಯರಾದ ಬಿ.ಕರಿಲಿಂಗಪ್ಪ,ಜಯಲಕ್ಷ್ಮಿ, ಮಂಜುಳಾ ಮತ್ತು ಸ್ಥಳೀಯರಾದ ಕೆ.ದುರುಗೇಶ್,ಹೆಚ್. ಮೈಲೇಶ್,ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here