ಯಕೃತ್ತಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಗಮನವಿರಲಿ; ಡಾ. ಗೋಪಾಲ್ ರಾವ್,

0
220

ಸಂಡೂರು:29:- ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ “ವಿಶ್ವ ಹೆಪಟೈಟಿಸ್ ದಿನಾಚರಣೆ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಅವರು ಹೆಪಟೈಟಿಸ್ ಕಾಯಿಲೆಗಳ ಕುರಿತು ಮಾತನಾಡುತ್ತಾ ಯಕೃತ್ತಿನ ಆರೋಗ್ಯಕ್ಕೆ ಶುದ್ಧವಾದ ಕುಡಿಯುವ ನೀರು, ಸರಳವಾದ ಆಹಾರ ಸೇವನೆ ಮುಖ್ಯ,ಹಸಿವೆ ಇಲ್ಲದಿರುವುದು,ಹೊಟ್ಟೆಯ ಬಲಭಾಗ ನೋವು,ಸುಸ್ತು,ಆಯಾಸ,ವಾಕರಿಕೆ,ವಾಂತಿ ಇವು ಲಕ್ಷಣಗಳಾಗಿದ್ದು, ಹೆಪಟೈಟಿಸ್ ಎ,ಬಿ.ಸಿ,ಡಿ ಮತ್ತು ಇ ಐದು ವೈರಸ್ ಗಳು ಕಾಯಿಲೆಯನ್ನು ತರುತ್ತವೆ, ಆರೋಗ್ಯವನ್ನು ಹಾಳು ಮಾಡುತ್ತವೆ, ಒಬ್ಬರಿಗೊಬ್ಬರು ರೋಗ ಹರಡದಿರಲು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು, ಸಂಸ್ಕರಿಸದ ಸೂಜಿ,ಸಿರಂಜು ಬಳಸುವುದರಿಂದ, ಸೋಂಕು ಹೊಂದಿದವರಿಂದ ರಕ್ತ ಪಡೆಯುವುದರಿಂದ ಕಾಯಿಲೆ ಹರಡುತ್ತದೆ, ಹೆಪಟೈಟಿಸ್ ಬಿ ಲಸಿಕೆ ಲಭ್ಯವಿದ್ದು ಮಕ್ಕಳಿಗೆ ಲಸಿಕೆ ಕೊಡಿಸಬೇಕು, ಅಪಾಯದ ಅಂಚಿನಲ್ಲಿರುವರು ಲಸಿಕೆ ಹಾಕಿಸಿಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸ ಬೇಕು ಎಂದು ತಿಳಿಸಿದರು,

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ 2008 ರಿಂದ ಆಚರಣೆಯಲ್ಲಿರುವ ವಿಶ್ವ ಹೆಪಟೈಟಿಸ್ ದಿನಾಚರಣೆ, ಹೆಪಟೈಟಿಸ್ ವೈರಸ್ ಕಂಡುಹಿಡಿದ ನೊಬೆಲ್ ಪ್ರಶಸ್ತಿ ಪುರಸ್ಕೃತ ಡಾ.ಬರೂಚ್ ಬ್ಲಂಬರ್ಗ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತಿದೆ, “ಒಂದು ಜೀವನ, ಒಂದು ಯಕೃತ್ತ್” ಎಂಬ ಘೋಷ ವಾಕ್ಯದಡಿ ಸಾರ್ವಜನಿಕರಿಗೆ ಯಕೃತ್ತಿನ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ಸೊಪ್ಪು,ಕಾಳು,ತರಕಾರಿ ಯುಕ್ತ ಉತ್ತಮ ಆಹಾರ,ಶುದ್ಧ ನೀರು ನಮ್ಮನ್ನು ರಕ್ಷಿಸಲಿವೆ, ಅದರಂತೆ ನಡೆಯೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಸ್ತ್ರೀರೋಗ ತಜ್ಞೆ
ಡಾ.ರಜಿಯಾ ಬೇಗಂ, ಡಾ,ಅನುಷಾ, ಅಧಿಕ್ಷಕ ಹರ್ಷ, ಮಂಜುನಾಥ್,ಲಕ್ಷ್ಮಿ, ರೂಪಾ,ಗೀತಾ,ಇಮ್ರಾನ್,ಸಂಗೀತಾ,ಬಾಸ್ಕರ್,ಮಾರೇಶ,ಶಿವಕುಮಾರ್, ರತ್ನಮ್ಮ, ಮಾಬುಸಾಬು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here