ಬಾಲ್ಯ ವಿವಾಹ ಪಿಡುಗನ್ನು ಹೊಡಿದೋಡಿಸಲು ಸರ್ವರೂ ಕೈಜೋಡಿಸಬೇಕು: ಗ್ರಾಪಂ ಅಧ್ಯಕ್ಷ ಎಮ್ಮೆ ಗಂಗಣ್ಣ

0
416

ಸಂಡೂರು: ಫೆ: 13: ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯತ್ ರೂಪಿಸೋಣ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಮ್ಮೆ ಗಂಗಣ್ಣ, ಅವರು ತಿಳಿಸಿದರು
ತಾಲೂಕಿನ ಹೊಸದರೋಜಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಲಾದ ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆ ಮತ್ತು ಶಿಕ್ಷೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಬಾಲ್ಯ ವಿವಾಹ ಎಂಬ ಪಿಡುಗನ್ನು ಹೊಡಿದೋಡಿಸಲು ಸರ್ವರೂ ಕೈಜೋಡಿಸಬೇಕು, ಹೆಣ್ಣುಮಕ್ಕಳ ಸುತಕ್ಷತೆ ಕಾಪಾಡಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಶಿಶು ಮರಣ ತಾಯಿ ಮರಣ ತಡೆಯಲು ಉತ್ತಮ ಮಾರ್ಗವೆಂದರೆ ಹೆಣ್ಣಿಗೆ ಸೂಕ್ತ ವಯಸ್ಸಿನಲ್ಲಿ ಮದುವೆ ಮಾಡಬೇಕು, ಬೆಳೆಯುವ ಮಗುವಿಗೆ ಮದುವೆ ಮಾಡಿದರೆ ಅಪಾಯ ಕಟ್ಟಿಟ್ಟಿದ್ದು, ಕಾಯಿದೆ ಕಾನೂನಿನ ಅರಿವು ಮುಖ್ಯ, ಅರಿವು ಮೂಡಿಸಿದಲ್ಲಿ ಜನ ಜಾಗೃತರಾಗುವರು ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಚೇತನಗೌಡ ಅಪೌಷ್ಟಿಕತೆ, ರಕ್ತಹೀನತೆ ಬಗ್ಗೆ ಮತ್ತು ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಮಾನಸಿಕ ಆರೋಗ್ಯ ಹಾಗೂ ಸ್ನೇಹ ಕ್ಲಿನಿಕ್ ಬಗ್ಗೆ ಅರಿವು ಮೂಡಿಸಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಾಯಣ್ಣ, ಎರ್ರಿಸ್ವಾಮಿ, ಕಾರ್ಯದರ್ಶಿ ಕಲ್ಲಪ್ಪ,ರಘುನಾಥ್, ಅಂಗನವಾಡಿ ಕಾರ್ಯಕರ್ತೆಯರಾದ ಶೈಲಜ,ರೇಣುಕಾ, ಅನಸೂಯಾ, ಕಲಾವತಿ, ಮಂಗಳಗೌರಿ, ಕೃಷ್ಣವೇಣಿ,ರೇಷ್ಮಾ, ರೀಡ್ಸ್ ಸಂಸ್ಥೆಯ ಯಲ್ಲಮ್ಮ, ದೀಪಿಕಾ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here