ಉತ್ತಮ ಆರೋಗ್ಯಕ್ಕೆ ಈ ಕ್ಷಣದಿಂದಲೇ ತಂಬಾಕು ಸೇವನೆ ತ್ಯಜಿಸಿ ಬಿಡಿ : ಡಾ. ಗೋಪಾಲ್ ರಾವ್

0
621

ಸಂಡೂರು :ಮೇ:31: ಈ ಕ್ಷಣದಿಂದಲೇ ತಂಬಾಕು ಸೇವನೆ ತ್ಯಜಿಸಿ ಬಿಡಿ: ಡಾ.ಗೋಪಾಲ್ ರಾವ್,ಹೇಳಿದರು
ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಆಯೋಜಿಸಲಾದ “ವಿಶ್ವ ತಂಬಾಕು ರಹಿತ ದಿನ 2022” ರ ಆಚರಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಗತ್ತಿನಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸಿ ಪ್ರತಿ ವರ್ಷಕ್ಕೆ 8 ಮಿಲಿಯನ್‌ ಜನರು ಮರಣ ಹೊಂದುತ್ತಿದ್ದಾರೆ, ಇಷ್ಟು ಮರಣದ ಪ್ರಮಾಣವಿದ್ದರೂ ಜನರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿರುವುದು ವಿಷಾದದ ಸಂಗತಿಯಾಗಿದೆ, ತಂಬಾಕಿನಲ್ಲಿ 4000 ಕ್ಕೂ ಹೆಚ್ಚು ರಾಸಾಯನಿಕ ವಸ್ತುಗಳು ಇದ್ದು, ಇದರಲ್ಲಿ 200 ಕ್ಕೂ ಕ್ಯಾನ್ಸರ್ ಕಾರಕ ರಾಸಾಯನಿಕ ವಸ್ತುಗಳು ಇವೆ, ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವವರನ್ನು ನೋಡಿ ಯುವ ಜನತೆ ಎಚ್ಚತ್ತುಕೊಳ್ಳಬೇಕಿದೆ,ತಂಬಾಕು ಸೇವನೆಯಿಂದ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು,ಯಕೃತ್ತಿನ ಕಾಯಿಲೆಗಳು, ಕ್ಷಯರೋಗ, ಇತರೆ ಹಲವಾರು ಕಾಯಿಲೆಗಳಿಗೆ ತಂಬಾಕಿನಲ್ಲಿವ ರಾಸಾಯನಿಕಗಳು ಪೂರಕವಾಗಿದೆ, ತಂಬಾಕಿನಲ್ಲಿರುವ ನಿಕೋಟಿನ್ ನಿಂದ ಒಮ್ಮೆ ಸೇವಿಸಿದ ನಂತರ ಮತ್ತೆ ಮತ್ತೆ ಸೇವಿಸುವಂತೆ ಪ್ರಚೋದಿಸುತ್ತದೆ ಇದರಿಂದ ನಿರಂತರ ಸೇವನೆ ಮಾಡ ಬೇಕು ಎಂಬ ಹವ್ಯಾಸಕ್ಕೆ ಬಿದ್ದು ಕೊನೆಗೆ ಕ್ಯಾನ್ಸರ್ ಗೆ ಬಲಿಯಾಗುವರು, ತಂಬಾಕು ಸೇವನೆಯಲ್ಲಿ ಮಹಿಳೆಯರ ಪಾಲು ಇದೆ, ತಂಬಾಕು ಸೇವನೆ ಮಾಡಿರುವ ಗರ್ಭಿಣಿ ಮಹಿಳೆಯರು ಸಹ ಕಂಡು ಬರುವರು, ಯುವಕರು ಸಿಗರೇಟ್ ಸೇದುವುದನ್ನು ಅನುಕರಣೆ ಮಾಡುವುದು ದೊಡ್ಡ ದುರಂತವಾಗಿದೆ, ಗುಟುಕಾ,ಬೀಡಿ,ಮಾಣಿಕ್ ಚಂದ್, ನಶ್ಯಾ ಯಾವುದೇ ಆಗಿರಲಿ ಅದು ತಂಬಾಕು ಆಗಿರುತ್ತದೆ, ಈ ಕ್ಷಣ ದಿಂದಲೇ ತಂಬಾಕು ಉತ್ಪನ್ನಗಳನ್ನು ಸೇವನೆಯನ್ನು ತ್ಯಜಿಸುವುದು ಎಲ್ಲಾ ರೀತಿಯ ಒಳ್ಳೆಯದು, ಜನರು “ಉತ್ತಮ ಜೀವನವನ್ನು ಆಯ್ಕೆ ಮಾಡಿಕೊಳ್ಳ ಬೇಕು, ತಂಬಾಕನಲ್ಲ” ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, 35 ವರ್ಷಗಳಿಂದ ತಂಬಾಕು ರಹಿತ ದಿನ ವನ್ನು ಅಚರಿಸಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯ ಮಾಡುತ್ತಾ ಬರಲಾಗಿದೆ, ಕೋಟ್ಪಾ 2003 ರ ಕಾಯ್ದೆಯ ಅನುಷ್ಠಾನದ ಬಗ್ಗೆಯೂ ಜಾಗೃತಿ ಮೂಡಿಸುವ ಕಾರ್ಯವೂ ನಡೆದಿದೆ, ತಂಬಾಕು ನಮ್ಮ ಪರಿಸರಕ್ಕೆ ಮಾರಕವಾಗಿರುವ ಕಾರಣಕ್ಕೆ ಕೇವಲ ಮೇ 31 ರಂದು ಮಾತ್ರ ತಂಬಾಕು ರಹಿತ ದಿನ ಆಚರಣೆ ಮಾಡಿದರೆ ಸಾಲದು ಇದು ಪ್ರತಿ ದಿನವೂ ತಂಬಾಕು ರಹಿತ ದಿನವಾಗ ಬೇಕು, ತಂಬಾಕು ನಿಯಂತ್ರಣ ಜಾಗೃತಿ ಕಾರ್ಯ ಚಟುವಟಿಕೆಗಳ ಕಾರ್ಯದಲ್ಲಿ ಸಂಘ ಸಂಸ್ಥೆಗಳು ಕೈಜೋಡಿಸ ಬೇಕಿದೆ, ಹಾಗೆ ಸಮುದಾಯವೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು,

ಈ ಕಾರ್ಯಕ್ರಮದಲ್ಲಿ “ತಂಬಾಕು ಮುಕ್ತ ಜಗತ್ತು” ರೂಪಿಸುವಂತೆ ಎಲ್ಲರೂ ಪ್ರತಿಜ್ಞೆಯನ್ನು ಕೈಗೊಂಡರು, ಪ್ರತಿಜ್ಞೆಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಬೋಧಿಸಿದರು, ಹಾಗೇ ಉತ್ಪನ್ನಗಳನ್ನ ಸೇವನೆಯ ದುಷ್ಪರಿಣಾಮಗಳ ಕುರಿತು ಕರಪತ್ರಗಳನ್ನು ಹಂಚಲಾಯಿತು,

ಈ ಸಂದರ್ಭದಲ್ಲಿ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಪೊಲೀಸ್ ಅಧಿಕಾರಿ ಸೈಯದ್ ಅಹಮ್ಮದ್, ಮಂಜುನಾಥ್, ಹರ್ಷ,ಶಕೀಲ್ ಅಹಮದ್, ವೆಂಕಟೇಶ್, ಲಕ್ಷ್ಮಿ, ಗೀತಾ, ಶಶಿಧರ್, ಪ್ರಶಾಂತ್, ಯಂಕಪ್ಪ, ಮಾರೇಶ, ರೋಜಾ,ನವೀನ್, ಚೈತ್ರ, ತಿಪ್ಪೇಸ್ವಾಮಿ, ಇಮ್ರಾನ್, ರತ್ನಮ್ಮ,ಸುನೀಲ್, ರಾಮುಲು, ಶ್ರೀನಿವಾಸ, ಮಾಬುಸಾಬ್, ಮಂಜುನಾಥ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here