“ವಿಶೇಷ ಶಿಬಿರದ ಸಮಾರಂಭದಲ್ಲಿ ದೀಪೋತ್ಸವ “

0
58

ಕೊಟ್ಟೂರು: ಪಟ್ಟಣದ ಗಂಗೋತ್ರಿ ಬಿ.ಎಸ್.ಡಬ್ಲ್ಯೂ ಪದವಿ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ಸಂಗಮೇಶ್ವರ ಗ್ರಾಮದಲ್ಲಿ ದಿನಾಂಕ 8.2.2024 ಸಂಜೆ 7.30 ಕ್ಕೆ ನಡೆಯಿತು.

ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಡಾ. ಕುಮಾರ್ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿಗಳು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಮಹತ್ವ, ಇದರಿಂದ ಗ್ರಾಮಗಳ ಉದ್ದಾರ ಹಾಗೂ ಶಿಬಿರಾರ್ಥಿಗಳು ಹೀಗೆ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು, ಜೀವದ ಬೆಲೆ ಬಗ್ಗೆ ಒಂದು ಉದಾಹರಣೆ ನೀಡುವುದರ ಮೂಲಕ ತಮ್ಮ ಸಮಾರೋಪ ನುಡಿಗಳನ್ನು ಆಡಿದರು.

ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರಾಜಪ್ಪ ಎಚ್. ಸಂಯುಕ್ತ ಪದವಿಪೂರ್ವ ಕಾಲೇಜ್ ರಾಣೆಬೆನ್ನೂರು ಇವರು ಮಾತನಾಡಿ ವಿದ್ಯಾರ್ಥಿಗಳು ಭತ್ತ ಬೆಳೆಯುವ ಗದ್ದೆಗಳಾಗಬೇಕು ಹೊರೆತು ಭತ್ತ ಹಾಕುವ ಚೀಲವಾಗಬಾರದು, ಪ್ರತಿ ದಿನ 6 ತಾಸು ಓದಿದ್ದೆ ಆದರೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು,ಇಲ್ಲವಾದರೆ ಮುಂದೆ 12 ತಾಸು ದುಡಿಯಬೇಕಾಗುತ್ತದೆ , ಪುಸ್ತಕವನ್ನು ಕದ್ದು ಓದಬೇಕು, ನಮ್ಮ ಮನೆಗಳನ್ನ ಗ್ರಂಥಾಲಯಗಳನ್ನಾಗಿ ಮಾಡಿಕೊಳ್ಳಬೇಕು ಎಂದರು.

ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಟ್ರಿಕಿ ಬಸವರಾಜ ವಹಿಸಿದ್ದರು,
ಕಾರ್ಯಕ್ರಮ ಕುರಿತು ಶ್ರೀಮತಿ ನಿರ್ಮಲಾ ಶಿವನಗುತ್ತಿ ಪ್ರಾಂಶುಪಾಲರು, ಭಾಗೀರಥಿ ಪದವಿ ಪೂರ್ವ ಕಾಲೇಜು, ಶ್ರೀ ಗುರುಬಸವರಾಜ ಎ.ಎಂ.ಎಂ. ಪ್ರಾಂಶುಪಾಲರು ಗಂಗೋತ್ರಿ ಬಿ.ಎಸ್.ಡಬ್ಲ್ಯೂ ಪದವಿ ಮಹಾವಿದ್ಯಾಲಯ, ಮರುಳಪ್ಪ ಕೆ . ಉಪನ್ಯಾಸಕರು ಮಾತನಾಡಿದರು,
ಶ್ರೀ ಶಶಿಕಿರಣ ಕೆ.ಸಂಯೋಜಕರು ಶಿಬಿರದ ವರದಿಯನ್ನು  ಮಂಡಿಸಿದರು, ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಸಿ ಬಿ. ರಜತ್, ನಿರ್ದೇಶಕರಾದ ವೀಣಾ ಬಸವರಾಜ, ರಚನಾ ರಜತ್ ಊರಿನ ಮುಖಂಡರಾದ ಶ್ರೀ ಶಿವಪ್ಪ, ಬಿ ರಾಮನಗೌಡ, ಬಣಕಾರ ಸಿದ್ದಪ್ಪ ಇತರರು ಉಪಸ್ಥಿತಿದ್ದರು

ವಿಶೇಷ ಆಹ್ವಾನಿತರಿಗೆ ಶ್ರೀ ಕೊಟ್ರೇಶ ಪಿ .ಕೆ. ಎಂ  ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಶಿಬಿರಾರ್ಥಿಗಳು ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here