ಮುರಾರಿ ಶ್ರೀರಾಮುಲು’ ಪಾರ್ಕ್, ಅವ್ಯವಸ್ಥೆ.! ಕಣ್ಮುಚ್ಚಿ ಕುಳಿತ ನಗರಸಭೆ.

0
34

ಹೊಸಪೇಟೆ: ನಗರದ ಹೃದಯ ಭಾಗದಲ್ಲಿ ಹಸಿರಿನಿಂದ ಕಂಗೊಳಿಸುತ್ತಾ. ಚಿನ್ನರಿಗೆ ವೃದ್ಧರಿಗೆ ಯುವಕರಿಗೆ ವಾಯು ವಿಹಾರಕ್ಕೆ ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕಸದ ನಿರ್ವಹಣೆ ಅವ್ಯವಸ್ಥೆ.ಕಾವಲುಗಾರರ ಕೊರತೆ ಕೆಲಸ ನಿರ್ವಹಿಸುವಲ್ಲಿ ನಿರ್ಲಕ್ಷ ಮೇಲ್ವಿಚಾರಣೆ ನಿರ್ವಹಣೆ ಇಲ್ಲದೆ ದುಸ್ಥಿತಿಗೆ ತಲುಪಿದೆ.

ಬಿ.ಎಂ.ಎಂ. ಫ್ಯಾಕ್ಟರಿ ಕೃಪೆಯಿಂದ ಬಹು ವೆಚ್ಚದಲ್ಲಿ ಮಕ್ಕಳು ದೈಹಿಕ ಕಸರತ್ತು ಮಾಡಲು ಆಟ ಆಡಲು ಪರಿಕರಗಳನ್ನು ಉದ್ಯಾನವನದಲ್ಲಿ ನಿರ್ಮಾಣ ಮಾಡಲಾಗಿತ್ತು. ಆಟವಾಡುವ ಪರಿಕರಗಳು ಮುರಿದು ಹೋಗಿವೆ.ಅಪಾಯದ ಮುನ್ಸೂಚನೆ ನೀಡಿದರು ನೋಡಿಯು ನೋಡದಂತೆ ಕಣ್ಮುಚ್ಚಿ ಕುಳಿತ ನಗರಸಭೆ. ಸುತ್ತಮುತ್ತಲಿನಿಂದ ಆಟವಾಡಲು ಒಂಟಿಯಾಗಿ ಬರುತ್ತಾರೆ.ಮಕ್ಕಳು ಹಾಗೂ ಪಾಲಕರ ಜೊತೆಯಲ್ಲಿ ಆಟವಾಡುವಾಗ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳ ರಕ್ಷಣೆಗಾಗಿ ಎಚ್ಚೆತ್ತು ಕೂಡಲೇ ಆಟದ ಸಾಮಾನುಗಳನ್ನು ದುರಸ್ತಿ ಮಾಡಿ.ಮುಂದಾಗುವ ಅನಾಹುತಗಳನ್ನು ನಗರಸಭೆ ಇಲಾಖೆ ತಡೆಯಬೇಕೆಂದು. ಸಾರ್ವಜನಿಕರಿಂದ ಅಹವಾಲು.

LEAVE A REPLY

Please enter your comment!
Please enter your name here