ಬಿಎಸ್ಸಿಯಲ್ಲಿ ಅಫ್ಸಾನಾ 6ನೇ ರ್ಯಾಂಕ್ ಪಡೆದ ಸರ್ಕಾರಿ ಪದವಿ ಕಾಲೇಜ್ ವಿದ್ಯಾರ್ಥಿನಿ

0
48

ಸಂಡೂರು: ಫೆ: 9 : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಅಡಿಯಲ್ಲಿ ಬರುವ ಸಂಡೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 22-23ನೇ ಸಾಲಿನಲ್ಲಿ ಬಿ.ಎಸ್ಸಿ ವಿಭಾಗದ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿನ ಬಿಸ್ಸಿ ವಿಭಾಗದ ವಿದ್ಯಾರ್ಥಿನಿ ಅಫ್ಸಾನಾ 6ನೇ ರ್ಯಾಂಕ್ ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ವಿದ್ಯಾರ್ಥಿಯ ಈ ಸಾಧನೆಯೂ ಇನ್ನು ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮತ್ತು ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತಿದ್ದು ಶಾಲೆಯ ಅಡಳಿತಮಂಡಳಿ ಮತ್ತು ಎಲ್ಲಾ ಸಿ.ಡಿ.ಸಿ. ಸದಸ್ಯರು ಹಾಗೂ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸುವ ಮೂಲಕ ವಿದ್ಯಾರ್ಥಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಲಾಗುವುದು ಎಂದು ಪ್ರಾಂಶುಪಾಲರಾದ ಹೆಚ್.ಬಸವರಾಜ ತಿಳಿಸಿದರು.

LEAVE A REPLY

Please enter your comment!
Please enter your name here