ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕನ್ನು ಸಮತೋಲನವಾಗಿ ನೋಡಿಕೊಳ್ಳಬೇಕು- ಅಮರೇಶ್ ಜಿ ಕೆ

0
22

ಕೊಟ್ಟೂರು 01.04.2024 :- ತಾಲೂಕ ಕಛೇರಿಯಲ್ಲಿ ಶಿರಸ್ತೇದಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಲೀಲಾ ಎಸ್ ಇವರು ವಯೋನಿವೃತ್ತಿ ಹೊಂದಿದ ಕಾರಣ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಬೀಳ್ಕೊಡಲಾಯಿತು.

ಈ ಸಮಯದಲ್ಲಿ ಮಾತನಾಡಿದ ತಹಶೀಲ್ದಾರರಾದ ಅಮರೇಶ್ ಜಿ ಕೆ ಇವರು ಪ್ರತಿಯೊಬ್ಬರ ಬದುಕು ಒಂದೊಂದು ತೆರನಾಗಿರುತ್ತದೆ. ವೃತ್ತಿಗೆ ಸೇರಿದ ನಂತರ ನಿವೃತ್ತಿ ಇದ್ದೇ ಇರುತ್ತದೆ. ಆದರೆ ನಿವೃತ್ತಿ ಹೊಂದುವಾಗ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎನ್ನುವ ಸಂತೃಪ್ತಿ ನೌಕರರದಾಗಬೇಕು. ಪ್ರತಿಯೊಬ್ಬರು ವೃತ್ತಿ ಬದುಕು ಮತ್ತು ವಯಕ್ತಿಕ ಬದುಕಿನಲ್ಲಿ ಸಮತೋಲನವನ್ನು ಕಾಯ್ದುಕೊಂಡು ಹೋಗಬೇಕು. ಎರಡಲ್ಲಿ ಯಾವುದಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ನಿವೃತ್ತಿ ಜೀವನ ಸುಖಮಯವಾಗಲಿ, ಆ ದೇವರು ಆರೋಗ್ಯವನ್ನು ಕರುಣಿಸಲಿ. ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು.

ಈ ಸಮಯದಲ್ಲಿ ಶಿರಸ್ತೇದಾರರಾದ ಅನ್ನದಾನೇಶ ಬಿ ಪತ್ತಾರ, ರೇಖಾ ಎಸ್; ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ, ಡಿ ಶಿವಕುಮಾರ; ಗ್ರಾಮ ಆಡಳಿತ ಅಧಿಕಾರಿಗಳು, ಕಛೇರಿಯ ಸಿಬ್ಬಂದಿ, ಗ್ರಾಮ ಸಹಾಯಕರು ಹಾಜರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here