ಕೊಪ್ಪಳ: ಸಿ.ಸಿ ರಸ್ತೆಯನ್ನು ಹಾಳು ಮಾಡಿ,ರಸ್ತೆಯನ್ನು ಬಂದು ಮಾಡಿ, ಮೆರೆಯುತ್ತಿರುವ ಭೂಪ, ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು.

0
21

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಲ್ಲನಗೌಡ ತಂದೆ ಮಲ್ಕಾಜಪ್ಪ ಹೊಸಮನಿ ಎಂಬ ವ್ಯಕ್ತಿಯು ಗ್ರಾಮದ ಎರಡು ಮತ್ತು ನಾಲ್ಕನೇ ವಾರ್ಡಿಗೆ ಸಂಪರ್ಕ ಬೆಳೆಸುವ ಮುಖ್ಯ ರಸ್ತೆಯನ್ನು (ಹನ್ನೆರೆಡು ಲಕ್ಷ ರೂಪಾಯಿ ಬೆಲೆ ಬಾಳುವ ಸಿ.ಸಿ.ರಸ್ತೆಯನ್ನು) ಹಾಳು ಮಾಡಿ, ಕಳೆದ ಒಂದು ವರ್ಷಗಳ ಹಿಂದೆಯೇ ರಸ್ತೆಯ ಮದ್ಯಲ್ಲಿ ಕಲ್ಲು ಬಂಡೆಗಳನ್ನು ನೆಟ್ಟು, ಸಾರ್ವಜನಿಕರಿಗೆ ಓಡಾಡಲು ಆಗದಂತೆ ರಸ್ತೆಯನ್ನು ಬಂದ್ ಮಾಡಿ, ಗೂಂಡಾವರ್ತನೆ ಮೆರೆಯುತ್ತಿದ್ದಾನೆ.

ಇದಕ್ಕೆ ಸಂಬಂಧಪಟ್ಟಂತೆ ಕಳೆದ ಒಂದು ವರ್ಷದಿಂದಲೂ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯವರಿಗೆ ಸಾರ್ವಜನಿಕರು ದೂರು ಸಲ್ಲಿಸುತ್ತಾ ಬಂದಿರುತ್ತಾರೆ.

ಹೀಗಿದ್ದರೂ ಕೊಪ್ಪಳ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಕಾರಟಗಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿದ್ಧಾಪುರ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸದರಿ ದುಶ್ ಕೃತ್ಯ ಎಸಗಿದ ವ್ಯಕ್ತಿಯು ಕೆಲ ಪುಡಾರಿ ರಾಜಕಾರಣಿಗಳ ರೆಕ್ಮೆಂಡ್ ಮಾಡಿಸಿದ್ದಕ್ಕಾಗಿ ಸದರಿ ಪ್ರಕರಣವನ್ನು ಬಹಳ ಹಗುರವಾಗಿ ಪರಿಗಣಿಸಿ, ನಿರ್ಲಕ್ಷ್ಯ ವಹಿಸುತ್ತಿರುವುದಲ್ಲದೇ, ಅವನ ವಿರುದ್ಧ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಹಾಗೂ ರಸ್ತೆ ಬಂದು ಮಾಡಿರುವುದನ್ನು ತೆರವುಗೊಳಿಸದೇ ಗ್ರಾಮ‌ ಪಂಚಾಯತಿ, ತಾಲೂಕ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಏನೂ ಗೊತ್ತಿಲ್ಲಾ ಎಂಬಂತೆ ಕಣ್ಣುಮುಚ್ಚಿ ಸುಮ್ಮನೇ ಕುಳಿತಿದ್ದಾರೆ.

ಇದರಿಂದಾಗಿ ಸಾರ್ವಜನಿಕರಿಗೆ ಬಹಳ ಹಿಂಸೆ ಹಾಗೂ ತೊಂದರೆ ಆಗುತ್ತಿದೆ. ಅಲ್ಲದೇ ಸದರಿ ರಸ್ತೆಯ ಮಧ್ಯದಲ್ಲಿ ಕಲ್ಲು ಬಂಡೆಗಳನ್ನು ನೆಟ್ಟು ಒಂದು ವರ್ಷ ಗತಿಸಿದ್ದರಿಂದ ಬಂಡೆಗಳೆಲ್ಲವೂ ಬಿರುಕು ಬಿಟ್ಟು ಬೀಳುವ ಹಂತದಲ್ಲಿವೆ. ಹೀಗಾಗಿ ಯಾವ ಸಂದರ್ಭದಲ್ಲಾದರೂ ಈ ಬಂಡೆಗಳು ಸಾರ್ವಜನಿಕರು, ವಿಕಲಚೇತನರು ಹಾಗೂ ವಯೋವೃದ್ಧರ ಮೇಲೆ ಅಥವಾ ಶಾಲಾ ಮಕ್ಕಳ ಮೇಲೆ ಬೀಳುವ ಸಂಭವ ಇದೆ. ಕಾರಣ ಯಾವುದೇ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಲಕ್ಷಣಗಳಿರುವುದರಿಂದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕೂಡಲೇ ಎಚ್ಚರಗೊಂಡು
ಸಾರ್ವಜನಿಕ ಆಸ್ತಿಯನ್ನು (12ಲಕ್ಷ ರೂಪಾಯಿ ಬೆಲೆ ಬಾಳುವ ಸಿ.ಸಿ ರಸ್ತೆಯನ್ನು) ಹಾಳು ಮಾಡಿದ್ದಕ್ಕೆ ಹಾಗೂ ಕಳೆದ ಒಂದು ವರ್ಷದಿಂದ ಸದರಿ ಸಾರ್ವಜನಿಕ ರಸ್ತೆಯನ್ನು ಬಂದು ಮಾಡಿ, ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕೆ ಹಾಗೂ ಸಾರ್ವಜನಿಕರ ಮೇಲೆ ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡಿದ್ದಕ್ಕಾಗಿ ಪೊಲೀಸರ ಮುಖಾಂತರ ಮೊಕ್ಕದ್ಧಮೆ ದಾಖಲಿಸಿ, ರಸ್ತೆ ಬಂದು ಮಾಡಿರುವುದನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟು, ನ್ಯಾಯವನ್ನು ಎತ್ತಿ ಹಿಡಿಯಬೇಕು, ಇಲ್ಲವಾದಲ್ಲಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಸಿದ್ದಾಪುರ ಗ್ರಾಮದ ನೊಂದ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here