ಮಳೆಹಾನಿ, ಮನೆಗಳು ಬಿದ್ದ ಸಂತ್ರಸ್ಥರಿಗೆ ಕಿಟ್ ವಿತರಣೆ!

0
141

ಹಾಯ್ ಸಂಡೂರ್, ನ್ಯೂಸ್
ಕೊಟ್ಟೂರು.ಜುಲೈ.20: ಕಳೆದ ಒಂದು ವಾರದಿಂದ ಕೊಟ್ಟೂರು ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೆಲವೊಂದು ಮನೆಗಳು ಭಾಗಶ: ಬಿದ್ದಿರುತ್ತವೆ.ಆದರೆ ಇದುವರೆಗೂ ಯಾವುದೇ ಜೀವಹಾನಿ, ಪ್ರಾಣಹಾನಿಯಾದ ಬಗ್ಗೆ ವರದಿಯಾಗಿರುವುದಿಲ್ಲ.

ಮನೆಹಾನಿಯಾಗಿರುವ ಗ್ರಾಮಗಳಿಗೆ ದಿನಾಂಕ: 20.07.2021 ರಂದು ಕಂದಾಯ ನಿರೀಕ್ಷಕರು ಕೊಟ್ಟೂರು ಮತ್ತು ಕೋಗಳಿ ಹಾಗೂ ಸಂಬಂಧಿಸಿದ ಗ್ರಾಮಗಳ ಗ್ರಾಮ ಲೆಕ್ಕಿಗರೊಂದಿಗೆ ತಹಶೀಲ್ದಾರ್ ಅನಿಲ್ ಕುಮಾರ್ ಜಿ ಇವರು ಭೇಟಿ ನೀಡಿದರು.

ಕೋಗಳಿ ಹೋಬಳಿಯ ಹೊನ್ನಿಹಳ್ಳಿ, ಕೊಟ್ಟೂರು ಹೋಬಳಿಯ ಚಿರಿಬಿ, ಸುಟ್ಟಕೋಡಿಹಳ್ಳಿ, ಕಾಳಾಪುರ, ತೂಲಹಳ್ಳಿ ಮತ್ತು ಹನುಮನಹಳ್ಳಿ ಗ್ರಾಮಗಳಿಗೆ ಭೇಟಿನೀಡಿ ಭಾಗಶ: ಮನೆಗಳು ಬಿದ್ದಿರುವ ಸಂತ್ರಸ್ಥರಿಗೆ ಸಾಂತ್ವನದ ಮಾತುಗಳನ್ನು ಹೇಳಿ, ನಿಯಮಾನುಸಾರ ಸರ್ಕಾರದಿಂದ ಬರುವ ಪರಿಹಾರ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ತಿಳಿಸುತ್ತಾ, ಪ್ರಕೃತಿ ವಿಕೋಪದ ಕಿಟ್ ಗಳನ್ನು ಸಂತ್ರಸ್ಥರಿಗೆ ವಿತರಿಸಿದರು.

ಮಳೆಹಾನಿಯಿಂದ ಮನೆ/ಬೆಳೆ ಹಾನಿಯ ಬಗ್ಗೆ ಕೂಡಲೇ ಪಟ್ಟಿಯನ್ನು ಸಲ್ಲಿಸಲು ಸೂಚಿಸುತ್ತಾ, ಗ್ರಾಮ ಲೆಕ್ಕಿಗರಿಗೆ ತಮ್ಮ ತಮ್ಮ ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ವಾಸವಾಗಿದ್ದು, ಕ್ಷಣ ಕ್ಷಣದ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.

ವರದಿ :ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here