ಕೂಡ್ಲಿಗಿ ಗಡಿಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷ ಸಾರ್ವಜನಿಕರಲ್ಲಿ ಆತಂಕ.

0
142

ಕೂಡ್ಲಿಗಿ ಗಡಿಗ್ರಾಮಗಳ ಹತ್ತಿರವಿರುವ ಉಪ್ಪಾಹಳ್ಳ ಪರಿಸರದಲ್ಲಿ ಶುಕ್ರವಾರ ಮತ್ತು ಶನಿವಾರ ಚಿರತೆಯೊಂದು ಕಾಣಿಸಿಕೊಂಡಿದ್ದು, ಹಳ್ಳದ ಪಾತ್ರದಲ್ಲಿರುವ ಹಳ್ಳಿಗಳಾದ ಟಿ.ಕಲ್ಲಹಳ್ಳಿ, ಕೆಂಚಮಲ್ಲನಹಳ್ಳಿ, ಗೊಲ್ಲರಹಟ್ಟಿ, ಮಾಲೂರು, ಆಲೂರು, ಪಿಚ್ಚಾರಹಟ್ಟಿ ಸಾರ್ವಜನಿಕರಲ್ಲಿ ಕಳೆದ ಎರಡು ದಿನಗಳಿಂದ ಆತಂಕಕ್ಕೆ ಕಾರಣವಾಗಿದೆ.

ಟಿ.ಕಲ್ಲಹಳ್ಳಿ ಗ್ರಾಮದ ಕೆ.ಟಿ.ರಾಜಪ್ಪ ಎಂಬ ರೈತ ಶುಕ್ರವಾರ ಜಮೀನಿಗೆ ಹೋದಾಗ ಚಿರತೆಯನ್ನು ನೋಡಿದ್ದಾನೆ. ಅಲ್ಲದೆ, ಆ ಚಿರತೆ ಸಮೀಪದ ಹಳ್ಳಕ್ಕೆ ಪರಾರಿಯಾಗಿದೆ. ಈ ಸುದ್ದಿಯನ್ನು ಗ್ರಾಮದ ಜನರಿಗೂ ಮತ್ತು ಅರಣ್ಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾನೆ. ಗ್ರಾಮಸ್ಥರು ಸೇರಿ ಹುಡುಕಾಟ ನಡೆಸಿದರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಮತ್ತೆ ಸಂಜೆ ಸಮೀಪದ ಗೊಲ್ಲರಹಟ್ಟಿ ಬಳಿ ನಾಯಿಯನ್ನು ಹೊತ್ತೊಯ್ದು ತಿಂದು ಹಾಕಿದೆ. ಶನಿವಾರ ಬೆಳಿಗ್ಗೆ ಕುರಿಗಾಯಿಗಳು ಕುರಿಮೇಕೆಗಳನ್ನು ಮೇಯಿಸಲು ಹೋದಾಗ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಕೂಡಲೆ ಕುರಿಗಾಯಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ ನಂತರ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದು ಕಳೆದ ಎರಡು ದಿನಗಳಿಂದ ಚಿರತೆಯ ಚಲನವಲನದ ಬಗ್ಗೆ ತಿಳಿಯಲು ಗುಡೇಕೋಟೆ ವಲಯದ ಉಪ ಅರಣ್ಯಾಧಿಕರಿಗಳಾದ ಹೊನ್ನೂರುಸ್ವಾಮಿ, ಪ್ರಶಾಂತಯಾದವ್ ನೇತೃತ್ವದ ತಂಡ ಬೀಡುಬಿಟ್ಟಿದ್ದಾರೆ.

ಬೋನ್ ಆಳವಡಿಕೆಗೆ ನಿರ್ಧಾರ:
ಚಿರತೆಯು ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಮತ್ತು ಅದರ ಗುರುತು ಪತ್ತೆಯಾಗಿದೆ ಹಾಗೂ ನಾಯಿ ಮೃತ ಕಳೆಬರಹ ದೊರಕಿದೆ. ಉಪ್ಪಾಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ಮುಳ್ಳಿನ ಬಳ್ಳಾರಿಜಾಲಿ ಬೆಳೆದಿದ್ದು, ಚಿರತೆ ಸೆರೆಗಾಗಿ ಬೋನ್ ಅಳವಡಿಸಲು ಅರಣ್ಯಾಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಅರಣ್ಯಇಲಾಖೆ ನಾಗರಾಜ್ ಸೇರಿದಂತೆ 15ಕ್ಕೂ ಹೆಚ್ಚು ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಸುತ್ತಲ್ಲಿನ ನಾಲ್ಕೈದು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅಲ್ಲದೆ ಪಿಚ್ಚಾರಹಟ್ಟಿ ಸಮೀಪದ ಗೊಲ್ಲರಹಟ್ಟಿ ಬಳಿ ನಾಯಿಯನ್ನು ಕೊಂದು ತಿಂದಿರುವ ಕಳೆಬರಹ ಪತ್ತೆಯಾಗಿ. ಸ್ಥಳದಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಚಿರತೆ ಸೆರೆಗಾಗಿ ಬೋನ್ ಅಳವಡಿಸಲು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಲಾಗಿದೆ.
-ಎ.ರೇಣುಕಮ್ಮ, ಪ್ರಭಾರಿ ವಲಯ ಅರಣ್ಯಧಿಕಾರಿ,

ವರದಿ:- ಇಬ್ರಾಹಿಂ ಖಲೀಲ್

LEAVE A REPLY

Please enter your comment!
Please enter your name here