ಚಲಿಸುವ ವಿಶ್ವ ವಿದ್ಯಾನಿಲಯವೇ ತರಳು ಬಾಳು ಹುಣ್ಣಿಮೆ

0
462

ಕೊಟ್ಟೂರು ತರಳು ಬಾಳು ಹುಣ್ಣಿಮೆ ಕಾರ್ಯಕ್ರಮ ಕೊಟ್ಟೂರಿನ ಉಜ್ಜಿನಿ ರಸ್ತೆಯ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ 105 ಎಕರೆಯ ವಿಸ್ತಾರದಲ್ಲಿ ಭಕ್ತರಿಗೆ ಎಲ್ಲ ಸೌಕರ್ಯಗಳೊಂದಿಗೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ ಎಂದು ಹೇಳಿದರು

ಸ್ವಾಗತ ಸಮಿತಿಯ ಅಧ್ಯಕ್ಷ ಡಾಕ್ಟರ್ ಬಿ ಸಿ ಮುಗಪ್ಪ ಡಿಸೆಂಬರ್ 28ರಿಂದ ಜನವರಿ 5ನೇ ತಾರೀಖಿನವರೆಗೂ ನಡೆಯುವ ತರಳುಬಾಳು ಕಾರ್ಯಕ್ರಮದ ಒಂಬತ್ತು ದಿನಗಳ ನಡೆಯುವ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಸಮೂವು ಆಗಮಿಸುತ್ತಿದ್ದು.

ಸರ್ವ ಜನಾಂಗದ ಸುಂದರದ ಚಲಿಸುವ ವಿಶ್ವವಿದ್ಯಾನಿಲಯವೇ ತರಳು ಬಾಳು ಹುಣ್ಣಿಮೆ ಪ್ರತಿಯೊಬ್ಬರೂ ತಪ್ಪದೇ ನೋಡಬೇಕಾದ ಕಾರ್ಯಕ್ರಮ ದಲ್ಲಿ ಜಾತಿ ಭೇದವಿಲ್ಲದೆ ಕ್ರೈಸ್ತ ಮುಸ್ಲಿಂ ಹಿಂದೂ ಜೈನ ಜನಾಂಗದ ಪೂಜ್ಯ ಮುಖಂಡರುಗಳು ಭಾಗವಹಿಸಲಿದ್ದಾರೆ.ಎಂದು ಹೇಳಿದರು.

ಎಲ್ಲಾ ಜನಾಂಗದ ಧರ್ಮಗಳ ಧಾರ್ಮಿಕ ಭಾವನೆ ಕಾರ್ಯಕ್ರಮವೇ ತರಳುಬಾಳು ಹುಣ್ಣಿಮೆ 9 ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಬಳ್ಳಾರಿ ವಿಜಯನಗರ ಜಿಲ್ಲೆಯ ತಾಲೂಕಿನ ಭಕ್ತರಿಂದ ಒಂದು ಕೋಟಿ ರೂಪಾಯಿ ದೇಣಿಗೆ ಸಂಗ್ರಹ ವಾಗಿದ್ದು .

ಈ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು. ಕೃಷಿ ತಜ್ಞರು. ಸಂಸ್ಕೃತಿಕ ವಿಭಾಗದ ಗಣ್ಯರು. ಸಾಹಿತಿಗಳು. ಜನಪದ ಸಾಹಿತಿಗಳು. ಎಲ್ಲಾ ಜನಾಂಗದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಡಾಕ್ಟರ್ ಬಿ ಸಿ ಮುಗಪ್ಪ. ಉಪಾಧ್ಯಕ್ಷ ಬೋರ್ ವೆಲ್ ಮಂಜಣ್ಣ. ಕಾರ್ಯದರ್ಶಿ ತಿಮ್ಲಾಪುರದ ಕೊಟ್ರೇಶ್. ಸವಾಜಿ ರಾಜೇಂದ್ರ ಪ್ರಸಾದ್. ಈಶ್ವರಪ್ಪ. ಬೋಜರಾಜ್. ಕೆ ಎನ್ ಕೊಟ್ರೇಶ್. ರಾಘವೇಂದ್ರ. ನಾಗರಕಟ್ಟಿ ಮಾರುತಿ. ತೂಲಹಳ್ಳಿ ಮಂಜುನಾಥ ಗೌಡ್ರು. ಹನುಮನಹಳ್ಳಿ ಭರ್ಮಗೌಡ್ರು. ಇನ್ನು ಪ್ರಮುಖ ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here