ಹಚ್ಚೊಳ್ಳಿಯಲ್ಲಿ ಪ್ರವಾಹ ಸನ್ನದ್ಧತೆ ಕುರಿತು ಅಣುಕು ಪ್ರದರ್ಶನ ತರಬೇತಿ

0
63

ಬಳ್ಳಾರಿ,ನ.13 : ರಾಷ್ಟ್ರೀಯ ವಿಪತ್ತು ನಿಗ್ರಹ ಪಡೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ( ಕಂದಾಯ ಇಲಾಖೆ) ಸಹಯೋಗದಲ್ಲಿ ಪೊಲೀಸ್ ಇಲಾಖೆ, ಅಗ್ನಶಾಮಕದಳದ ಇಲಾಖೆ, ಗೃಹ ರಕ್ಷಕ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ಪ್ರವಾಹ ಸನ್ನದ್ಧತೆಯ ಕುರಿತು ಅಣುಕು ಪ್ರದರ್ಶನ ತರಬೇತಿ ಕಾರ್ಯಕ್ರಮ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸ್ವಯಂಸೇವಕರು, ಯುವಕರು,ಯುವಮೀನುಗಾರರು, ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರವಾಹ ಸನ್ನದ್ಧತೆ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ತರಬೇತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಎನ್.ಡಿ.ಆರ್.ಎಫ್ 10ನೇ ಬಟಾಲಿಯನ್ ಪಡೆಯ 23 ಸದಸ್ಯರು, ಎನ್.ಡಿ.ಆರ್.ಎಫ್ ಇನ್ಸ್‌ಪೆಕ್ಟರ್ ಭೂಪೆಂದ್ರ ಕುಮಾರ, ಸಿರಗುಪ್ಪ ತಹಸೀಲ್ದಾರ್ ಮಂಜುನಾಥ ಸ್ವಾಮಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಪರಮೇಶ ಮತ್ತು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ
ಬಸವರಾಜ್ ,ಗ್ರಾಮ ಪಂಚಾಯಿತಿ ಅಭಿವೃದ್ದಿ ಆಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.
ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ವಿವಿಧ ಸುರಕ್ಷಿತ ಸಾಮಾಗ್ರಿಗಳನ್ನು ತಯಾರಿಸಿಕೊಂಡು ಹೇಗೆ ಬಳಸಬಹುದು ಎಂಬುದನ್ನು ತರಬೇತಿ ಸಂದರ್ಭದಲ್ಲಿ ಹೇಳಿಕೊಡಲಾಯಿತು.

LEAVE A REPLY

Please enter your comment!
Please enter your name here