ರಾಜ್ಯವ್ಯಾಪಿ ಪ್ರತಿಭಟನಾ ಅಂಗವಾಗಿ ಕಟ್ಟಡ ಕಾರ್ಮಿಕರ ಪ್ರತಿಭಟನೆ.

0
112

ವರದಿ:-ಮಹೇಶ್

ಹಾಯ್ ಸಂಡೂರ್, ನ್ಯೂಸ್. ಜುಲೈ.12. ಇಂದು ಬಳ್ಳಾರಿಯ ಡಿಸಿ ಕಛೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನಾ ದಿನದ ಅಂಗವಾಗಿ ಪ್ರತಿಭಟನೆ ನಡೆಸಲಾಯಿತು.

ಕಟ್ಟಡ ಕಾರ್ಮಿಕರಿಗೆ ಗೃಹ ನಿರ್ಮಾಣಕ್ಕೆ
5 ಲಕ್ಷ ರೂ ಸಹಾಯಧನ ನೀಡಿ.

ಕಟ್ಟದ ಕಾರ್ಮಿಕರಿಗೆ
ಅಡುಗೆ ಅನಿಲ ನೀಡುವ ಕಾರ್ಯಕ್ರಮ ಈಗಲಾದರೂ ಜಾರಿ ಮಾಡಿ.

ಹೆರಿಗೆ ಸಹಾಯ ಧನವನ್ನು ಪುರುಷ ಫಲಾನುಭವಿಗಳ ಪತ್ನಿಯರಿಗೂ ವಿಸ್ತರಿಸಿ.

10,000 ರೂ ಲಾಕ್ಡೌನ್ ಫರಿಹಾರ ಘೋಷಿಸಿ.

ವೈದ್ಯಕೀಯ ಪರಿಹಾರವನ್ನು ಶೇ.100 ರಷ್ಟು ಪಾವತಿಮಾಡಿ.

ಸರ್ಕಾರ ಘೋಷಿಸಿರುವ 3 ಸಾವಿರ ಕೋವಿಡ್ ಫರಿಹಾರ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ನೀಡಿ.

ಗುಣಮಟ್ಟದ ರೇಷನ್ ಕಿಟ್ಟನ್ನು ಎಲ್ಲಾ ಕಟ್ಟಡ ಕಾರ್ಮಿಕರಿಗೆ ಸಮರ್ಪಕವಾಗಿ ವಿತರಿಸಿ.

ಎಂಬ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು.

ಈ ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಎ.ದೇವದಾಸ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು, ಅಜ್ಜಿ ಶ್ರೀನಿವಾಸ್, ಶ್ರೀಮತಿ ಅರುಣ, ನೀಲಪ್ಪ, ವಿಜಯಕುಮಾರ್, ಅಂಜೀನಿ, ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here