ಅಂಜಲಿ ಅಂಬಿಗೆರ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

0
14

ಸಂಡೂರು:ಮೇ:21: ರಾಜ್ಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮಹಿಳೆಯರಿಗೆ ಅಭದ್ರತೆ ಹೆಚ್ಚಾಗುತ್ತಿದೆ, ಯುವತಿಯರ ಸರಣಿ ಕೊಲೆಯಾಗುತ್ತಿದ್ದು ತಕ್ಷಣ ಇಂತಹ ಘಟನೆಯಲ್ಲಿ ಅಂಜಲಿಯನ್ನು ಕೊಂದ ವ್ಯಕ್ತಿಗೆ ತಕ್ಷಣ ಗಲ್ಲು ಶಿಕ್ಷೆಯಾಗಬೇಕು ಎಂದು ಗಂಗಾಮತಸ್ಥರ ಸಂಘದ ಅಧ್ಯಕ್ಷ ರಾಘವೇಂದ್ರ. ಅರ್. ಒತ್ತಾಯಿಸಿದರು.
ಅವರು ತಾಲೂಕು ಗಂಗಾಮತಸ್ಥರ ಸಂಘದ ವತಿಯಿಂದ ವಿವಿಧ ಸಂಘಟನೆಗಳ ಮುಖಂಡರು ಸೇರಿ ಅಂಜಲಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅನಿಲ ಕುಮಾರ್ ಅನುಪಸ್ಥಿತಿಯಲ್ಲಿ ಕಛೇರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ವಿದ್ಯಾರ್ಥಿನಿ ನೇಹ ಹಿರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ಭಗ್ನ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ ಯುವತಿಯನ್ನು ಚಾಕುವಿನಿಂದ ಇರಿದು ಹುಬ್ಬಳ್ಳಿ ನಗರವನ್ನೇ ಬೆಚ್ಚಿಬೀಳಿಸಿದೆ.

ಹುಬ್ಬಳ್ಳಿ ನಗರದ ವಿರಾಪುರ ಓಣಿ ಅಂಜಲಿ ಅಂಬಿಗೇರ ಕೇವಲ 21 ವರ್ಷದ ಯುವತಿ ಹತ್ಯೆಯಾಗಿದ್ದು ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿಗೆ ಏನೂ ಹರಿಯದ ಮುಗ್ದ ಬಾಲಕಿಗೆ ಈ ರೀತಿಯಾಗಿ ಹತ್ಯೆ ಮಾಡಿದ್ದು ಖಂಡನೀಯ ಸರ್ಕಾರ ಇಂದು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಇಂತಹ ಘಟನೆಗಳು ಮರುಕಳಿಸಲು ಸಾಧ್ಯವಾಗಿದೆ, ನೇಹ ಹತ್ಯೆ ಗೈದ ವ್ಯಕ್ತಿಗೆ ತಕ್ಷಣ ಶಿಕ್ಷೆಯಾಗಿದ್ದರೆ ಮತ್ತೋಂದು ಘಟನೆ ನಡೆಯುತ್ತಿಲ್ಲ, ಅದರೆ ರಕ್ಷಣೆ ಸಿಗುತ್ತದೆ ಎನ್ನುವ ಸೊಕ್ಕಿನಿಂದ ಇಂತಹ ಘಟನೆಗಳನ್ನು ಮಾಡುತ್ತಿದ್ದು ಅಮಾನವೀಯವಾಗಿ ಅಂಜಲಿಯ ಹತ್ಯೆಯಾಗಿದೆ ತಕ್ಷಣ ಕುಟುಂಬಕ್ಕೆ ರಕ್ಷಣೆ ನೀಡಬೇಕು, ಅಲ್ಲದೆ ಕುಟುಂಬ ನಿರ್ವಹಣೆಗೆ ಸ್ವಂತ ಅಂಜಲಿ ಕೆಲಸ ಮಾಡಿ ಸಾಕುತ್ತಿದ್ದಳು, ಅದರೆ ಇಂದು ಕುಟುಂಬ ಬೀದಿಗೆ ಬೀಳುವುದರ ಜೊತೆಗೆ ಉಳಿದ ಸಹೋದರಿಯರು ಭಯದಲ್ಲಿ ದಿಕ್ಕು ಕಾಣದಾಗಿದ್ದಾರೆ, ಅದ್ದರಿಂದ ತಕ್ಷಣ ಸರ್ಕಾರ ಅ ಕುಟುಂಬದ ರಕ್ಷಣೆಯ ಜೊತೆಗೆ ಪರಿಹಾರವನ್ನು ನೀಡುವ ಮೂಲಕ ಅವರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಮಾತನಾಡಿ ಸರ್ಕಾರ ತಕ್ಷಣ ಇಂತಹ ಘಟನೆಗಳಿಗೆ ಸೂಕ್ತ ಕ್ರಮವಹಿಸುವ ಮೂಲಕ ಅಮಾಯಕರನ್ನು ರಕ್ಷಿಸಬೇಕು ಇಲ್ಲವಾದಲ್ಲಿ ಇಂತಹ ಘಟನೆಗಳು ಮರುಕಳಿಸುವ ಮೂಲಕ ಇಡೀ ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡುತ್ತವೆ, ಬಡ ಕುಟುಂಬದ ಮಹಿಳೆಯರು ಬದುಕುವುದು ದುಸ್ತರವಾಗುತ್ತದೆ, ಒಂದು ಕಡೆ ಕಾರ್ಪೂರೇಟರ್ ಮಗಳು, ಮತ್ತೊಂದು ಕಡೆ ಬಡ ಕುಟುಂಬದ ಬಾಲಕಿ ಇಡೀ ಕುಟುಂಬ ನಿರ್ವಹಣೆ ಮಾಡುವವಳು, ಅದರೆ ಅವರ ಕುಟುಂಬದ ಸ್ಥಿತಿ ದಯಾನೀಯವಾಗಿದ್ದು ತಕ್ಷಣ ಸರ್ಕಾರ ಸ್ಪಂದಿಸುವ ಮೂಲಕ ಸೂಕ್ತ ಪರಿಹಾರ ನೀಡಿ ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅರ್. ರಾಘವೇಂದ್ರ ಅಧ್ಯಕ್ಷರು, ಕರವೇ ರಾಜು ಪಾಳೇಗಾರ್, ಗಣಿಕಾರ್ಮಿಕ ಸಂಘದ ಆನಂದ್,ಬಿ. ಸಂತೋಷ್ ಕುಮಾರ, ಬಿ.ನರಸಿಂಹರಾಜ್ ಡಿ.ಮಲ್ಲಾಪುರ, ಶಿವಕುಮಾರ್.ಎ, ಬಿ.ಬಸವರಾಜ,ಕಾರ್ಮಿಕ ಸಂಘದ ಅಧ್ಯಕ್ಷ ಆನಂದ್, ಬಿ.ಪಂಪಾಪತಿ, ಬಿ. ಬಸವರಾಜ ಬನ್ನಿಹಟ್ಟಿ, ಬಿ.ಬಾಲಕುಮಾರ ಜಾಲ್ ಜೈಸಿಂಗ್‍ಪುರ, ರಾಮಕೃಷ್ಣ ಹೆಗಡೆ, ಜಿ.ನಾಗರತ್ನಮ್ಮ ಅಂಗನವಾಡಿ ಕಾರ್ಯಕರ್ತೇಯರ ಸಂಘದ ಅಧ್ಯಕ್ಷೆ, ಬಿ.ಎಂ. ಉಜ್ಜಿನಯ್ಯ, ಬಿ.ಶಿವಪ್ಪ, ಪಾಪಯ್ಯ ಇತರ ಹಲವಾರು ಗಣ್ಯರು ಸಂಘಟನೆಗಳ ಅಧ್ಯಕ್ಷರುಗಳು ಮನವಿ ಪತ್ರ ಸಲ್ಲಿಸಿದರು.

LEAVE A REPLY

Please enter your comment!
Please enter your name here