ಜಗತ್ತಿನಲ್ಲಿ ಮಕ್ಕಳನ್ನು ದುಡಿಯುವ ಕಾರ್ಯಕ್ಕೆ ಹಚ್ಚಬಾರದು:ನ್ಯಾ.ದೇವಾರೆಡ್ಡಿ

0
6

ಸಂಡೂರು: ವಿಶ್ವದಾದ್ಯಂತ 1919ರಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸುತ್ತಿರುವಂತಹ ಅಂಶವನ್ನು ಮನಗಂಡಂತಹ ಬುದ್ದಿ ಜೀವಿಗಳು 2002ರಿಂದ ಜೂನ್ 12 ನ್ನು ಬಾಲಕಾರ್ಮಿಕ ನಿರ್ಮೂಲನೆ ದಿನವನ್ನಾಗಿ ಆಚರಿಸುವಂತಹ ಕಾರ್ಯವನ್ನು ಪ್ರಾರಂಭಿಸಿ ಜಗತ್ತಿನಲ್ಲಿ ಮಕ್ಕಳನ್ನು ದುಡಿಯುವ ಕಾರ್ಯಕ್ಕೆ ಹಚ್ಚಬಾರದು ಎನ್ನುವ ನೀತಿ ಪ್ರತಿಯೊಬ್ಬರೂ ತಿಳಿಯಬೇಕು ಎಂದು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ದೇವಾರೆಡ್ಡಿ ತಿಳಿಸಿದರು.

ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲೆ ಎಪಿಎಂಸಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಪುರಸಭೆ, ತಾಲೂಕು ಕಛೇರಿ ಹಾಗೂ ವಿವಿಧ ಇಲಾಖೆಯ ಸಹಯೋಗದಲ್ಲಿ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಬಹಳಷ್ಟು ಕೈಗಾರಿಕೆಗಳಲ್ಲಿ, ಹೋಟಲ್ ಉದ್ಯಮದಲ್ಲಿ, ಅಂಗಡಿಗಳಲ್ಲಿ, ಕೃಷಿಯಲ್ಲಿ, ಗಾರೆ ಕೆಲಸಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಬಳಸುತ್ತಿದ್ದಾರೆ, 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಹಚ್ಚುವ ಮೂಲಕ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸುವುದು, ಕಲಿಕೆಯಿಂದ ಹೊರಗಿಡುವಂತಹ ಕಾರ್ಯ, ಅವರನ್ನು ದೈಹಿಕವಾಗಿ ಶೋಷಿಸುವಂತಹ ಕ್ರಿಯೆಯೇ ಬಾಲಕಾರ್ಮಿಕ ಪದ್ದತಿಯಾಗಿದ್ದು ಅದನ್ನು ಪ್ರತಿಯೊಬ್ಬರೂ ಸಹ ತಡೆಯಬೇಕು, ಅದಕ್ಕೆ ಸೂಕ್ತ ಕಾನೂನು ಸಹ ಇದ್ದು ಅದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್. ಅಕ್ಕಿಯವರು ಮಾತನಾಡಿ ಇಂದು ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆಗೆ ಕಾನೂನನ್ನು ಜಾರಿಗೆ ತಂದಿದೆ, ಅಲ್ಲದೆ ಅವರಿಗೆ ತಕ್ಷಣದ ಪೋನ್ ಸಂಖ್ಯೆಯನ್ನು ಸಹ ನೀಡಿದೆ, ಸೂಕ್ತ ಶಿಕ್ಷೆಯನ್ನು ಸಹ ನೀಡಲಾಗುತ್ತಿದೆ, ಅದ್ದರಿಂದ ಪಾಲಕರು, ಗುತ್ತಿಗೆದಾರರು, ಉದ್ಯಮಿಗಳು ಯಾವುದೇ ಕಾರಣಕ್ಕೂ ಮಕ್ಕಳನ್ನು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡರೆ ಅದು ಅಪರಾದವಾಗುತ್ತದೆ, ಅವರ ರಕ್ಷಣೆಗಾಗಿ ಸರ್ಕಾರ ಪ್ರತಿಯೊಂದು ಮಗುವೂ ಸಹ ಶಿಕ್ಷಣ ಪಡೆಯಬೇಕೆಂದು ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಇದರ ಅಡಿಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡುತ್ತಿದೆ, ಮಗು ಜನಿಸಿದ ದಿನದಿಂದಲೇ ಸರ್ಕಾರ ಅದರ ರಕ್ಷಣೆಗೆ ಒಂದಲ್ಲ ಒಂದು ಯೋಜನೆ ರೂಪಿಸಿದ ಅದ್ದರಿಂದ ಪಾಲಕರಾದವರು ತಮಗೆ ಏನೇ ಕಷ್ಟವಾದರೂ ಸಹ ಮಕ್ಕಳನ್ನು ಕೆಲಸಕ್ಕೆ ಹಚ್ಚದೆ ಶಾಲೆಗೆ ಕಳುಹಿಸಿದಾಗ ಅ ಮಗು ಶಿಕ್ಷಣ ಪಡೆದು ಉತ್ತಮ ಪ್ರಜೆಯಾಗುತ್ತಾನೆ, ಬಾಲಕಾರ್ಮಿಕನಾಗುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಅರ್. ವೀರೇಶಪ್ಪ ವಕೀಲರು ಬಾಲಕಾರ್ಮಿಕರ ಕುರಿತು ವಿಶೇಷ ಉಪನ್ಯಾಸವನ್ನು ನೀಡುವ ಮೂಲಕ ಕಾರ್ಮಿಕರಿಗೆ ಅದರಲ್ಲೂ ಬಾಲ ಕಾರ್ಮಿಕರನ್ನು ಬಳಕೆ ಮಾಡುವವರಿಗೆ ಮತ್ತು ಅ ಕೆಲಸಕ್ಕೆ ಹಚ್ಚಲು ಪ್ರೇರೆಪಿಸಿದ ತಂದೆ ತಾಯಿಗಳಿಗೆ, ಪಾಲಕರಿಗೆ ಕಾನೂನಿನ ಅಡಿಯಲ್ಲಿರುವ ವಿವಿಧ ಕಾನೂನುಗಳ ಶಿಕ್ಷೆಗಳ ಬಗ್ಗೆ , ದಂಡದ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಅರಳಿ ಮಲ್ಲಪ್ಪ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಷಡಾಕ್ಷರಯ್ಯ, ತಹಶೀಲ್ದಾರ್ ಅನಿಲ್ ಕುಮಾರ್, ಸಹಾಕ ಸರ್ಕಾರಿ ಅಭಿಯೋಜಕರಾದ ಹೊಸವಡ್ರ ಅಣ್ಣೇಶ್, ಕಾರ್ಮಿಕ ನಿರೀಕ್ಷಕ ಮಂಜುನಾಥ, ಉಪಾಧ್ಯಕ್ಷ ಕೆ.ಅರ್.ದಾದಾಪೀರ್, ಹೆಚ್. ಕುಮಾರಸ್ವಾಮಿ, ಮಂಜುನಾಥಗೌಡ, ಬಿ.ಎಸ್. ಮಂಜುನಾಥ ಪ್ರಾರ್ಥಿದಿಸಿದರು, ಡಿ.ನಾಗರಾಜ ನಿರೂಪಿಸಿದರು, ಅಂಜಿನಪ್ಪ ಸ್ವಾಗತಿಸಿದರು, ರಾಜಶೇಖರ್ ವಂದಿಸಿದರು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ವೃಂದದವರು, ವಿವಿಧ ಇಲಾಖೆಯ ಅಧಿಕಾರಿಗಳಾದ ಕೆ.ಜಯಣ್ಣ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here