ಆಗಸ್ಟ್​ನಿಂದ ಬದಲಾವಣೆ​ಯಾಗಲಿರುವ ಐಸಿಐಸಿಐ ಬ್ಯಾಂಕ್ ಎಟಿಎಂ ನಗದು ವಿಥ್​ಡ್ರಾ ಮತ್ತು ಚೆಕ್​ಬುಕ್​ ಶುಲ್ಕಗಳು

0
145

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಂತರ ಇದೀಗ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್​ನಿಂದ ಮುಂದಿನ ತಿಂಗಳಿನಿಂದ ಎಟಿಎಂ, ಚೆಕ್ ಪುಸ್ತಕಗಳು ಮತ್ತು ಇತರ ಹಣಕಾಸು ವಹಿವಾಟುಗಳಿಂದ ಮೊದಲುಗೊಂಡು ಹಣವನ್ನು ಹಿಂಪಡೆಯುವ ಶುಲ್ಕದ ತನಕ ಪರಿಷ್ಕರಿಸಲು ಸಿದ್ಧತೆ ಆಗಿದೆ. ವೇತನ ಖಾತೆಗಳನ್ನೂ ಒಳಗೊಂಡಂತೆ ದೇಶೀಯ ಉಳಿತಾಯ ಖಾತೆದಾರರಿಗೆ ಈ ಪರಿಷ್ಕೃತ ಶುಲ್ಕಗಳು ಅನ್ವಯ ಆಗುತ್ತವೆ.

ಎಟಿಎಂ ನಗದು ವ್ಯವಹಾರ:
ಐಸಿಐಸಿಐ ಬ್ಯಾಂಕ್ ಗ್ರಾಹಕರು 6 ಮೆಟ್ರೋ ನಗರಗಳಲ್ಲಿ (ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್) ಮೊದಲ 3 ವಹಿವಾಟುಗಳನ್ನು (ಹಣಕಾಸು ಮತ್ತು ಹಣಕಾಸೇತರ) ಒಂದು ತಿಂಗಳಲ್ಲಿ ಪಡೆಯಲಿದ್ದಾರೆ ಎಂದು ಬ್ಯಾಂಕ್​ನ ವೆಬ್‌ಸೈಟ್ ತಿಳಿಸಿದೆ. ಇತರ ಎಲ್ಲ ಸ್ಥಳಗಳಲ್ಲಿ ಮೊದಲ ಐದು ವ್ಯವಹಾರಗಳು ಉಚಿತವಾಗಿರುತ್ತದೆ. ಅದರ ನಂತರ ಬ್ಯಾಂಕ್ ಪ್ರತಿ ಹಣಕಾಸು ವಹಿವಾಟಿಗೆ ರೂ. 20 ಮತ್ತು ಹಣಕಾಸುೇತರ ವಹಿವಾಟಿಗೆ ರೂ. 8.50 ವಿಧಿಸುತ್ತದೆ. ಈ ಶುಲ್ಕಗಳು ಸಿಲ್ವರ್, ಗೋಲ್ಡ್, ಮ್ಯಾಗ್ನಮ್, ಟೈಟಾನಿಯಂ ಮತ್ತು ವೆಲ್ತ್ ಕಾರ್ಡುದಾರರಿಗೆ ಅನ್ವಯವಾಗುತ್ತವೆ.

ಹೋಮ್​ ಬ್ರ್ಯಾಂಚ್​ನಲ್ಲಿ ನಗದು ವಹಿವಾಟು:
ಐಸಿಐಸಿಐ ಬ್ಯಾಂಕ್ ಒಟ್ಟಾರೆಯಾಗಿ ಒಂದು ತಿಂಗಳಿಗೆ 4 ಉಚಿತ ವಹಿವಾಟು ನಡೆಸಲು ಅವಕಾಶ ನೀಡುತ್ತದೆ. ಬ್ಯಾಂಕ್​ ವೆಬ್​ಸೈಟ್​ನಲ್ಲಿನ ಮಾಹಿತಿಯಂತೆ, ಆ ಮಿತಿಯ ನಂತರದಲ್ಲಿ ಪ್ರತಿ ವಹಿವಾಟಿಗೆ ರೂ. 150 ಶುಲ್ಕ ತಗುಲುತ್ತದೆ.

ಹೋಮ್​ ಬ್ರ್ಯಾಂಚ್​ನಲ್ಲಿ ನಗದು ವಹಿವಾಟು ಮಿತಿ:
ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಹೋಮ್ ಬ್ರ್ಯಾಂಚ್ ನಗದು ಮಿತಿ 1 ಲಕ್ಷ ರೂಪಾಯಿ ಪ್ರತಿ ಖಾತೆಗೆ ಉಚಿತ ಇರುತ್ತದೆ. 1 ಲಕ್ಷಕ್ಕಿಂತ ಹೆಚ್ಚು ಮೊತ್ತಕ್ಕೆ ಪ್ರತಿ 1,000 ರೂಪಾಯಿಗೆ ರೂ. 5, ಕನಿಷ್ಠ 150ಕ್ಕೆ ಒಳಪಟ್ಟಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.

ಹೋಮ್ ಬ್ರ್ಯಾಂಚ್ ಹೊರಗಿನ ನಗದು ವಹಿವಾಟು:
ದಿನಕ್ಕೆ ರೂ. 25,000 ತನಕದ ನಗದು ವಹಿವಾಟಿಗೆ ಯಾವುದೇ ಶುಲ್ಕವಿಲ್ಲ. ರೂ. 25,000 ಮೇಲ್ಪಟ್ಟಲ್ಲಿ ಪ್ರತಿ 1,000 ರೂಪಾಯಿಗೆ ರೂ. 5, ಕನಿಷ್ಠ 150ಕ್ಕೆ ಒಳಪಟ್ಟಿರುತ್ತದೆ.

ಥರ್ಡ್ ಪಾರ್ಟಿ ನಗದು ವ್ಯವಹಾರ:
ಥರ್ಡ್ ಪಾರ್ಟಿಯ ವಹಿವಾಟುಗಳಿಗೆ ದಿನಕ್ಕೆ ರೂ. 25,000 ಎಂದು ಮಿತಿಯನ್ನು ನಿಗದಿಪಡಿಸಲಾಗಿದೆ. ಪ್ರತಿ 25,000 ಮಿತಿಯವರೆಗೆ ವಹಿವಾಟಿಗೆ ತಲಾ ರೂ. 150 ಆಗುತ್ತದೆ. 25,000 ರೂಪಾಯಿ ಮಿತಿಗಿಂತ ಹೆಚ್ಚಿನ ನಗದು ವಹಿವಾಟುಗಳನ್ನು ಅನುಮತಿಸುವುದಿಲ್ಲ.

ಚೆಕ್ ಪುಸ್ತಕಗಳು:
ಒಂದು ವರ್ಷದಲ್ಲಿ ಪಾವತಿಸಬೇಕಾದ 25 ಚೆಕ್ ಲೀವ್ಸ್​ಗಳಿಗೆ ಶುಲ್ಕಗಳು ಇಲ್ಲ. ಉಚಿತ ಮಿತಿಗಿಂತ ಹೆಚ್ಚಾಗಿ, 10 ಲೀವ್ಸ್​ಗಳ ಪ್ರತಿ ಹೆಚ್ಚುವರಿ ಚೆಕ್ ಪುಸ್ತಕಕ್ಕೆ ಬ್ಯಾಂಕ್ ರೂ. 20 ಶುಲ್ಕ ವಿಧಿಸುತ್ತದೆ.

ಐಸಿಐಸಿಐ ಬ್ಯಾಂಕ್ ರೆಗ್ಯುಲರ್ ಪ್ಲಸ್ ಸ್ಯಾಲರಿ ಅಕೌಂಟ್:
ಒಂದು ತಿಂಗಳಲ್ಲಿ ಮೊದಲ 4 ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ; ಅದರ ನಂತರ ಪ್ರತಿ ಸಾವಿರ ರೂಪಾಯಿಗೆ ರೂ. 5 ಅಥವಾ ಅದರ ಒಂದು ಭಾಗ, ಅದೇ ತಿಂಗಳಲ್ಲಿ ಕನಿಷ್ಠ 150 ರೂ. ಆಗುತ್ತದೆ.

LEAVE A REPLY

Please enter your comment!
Please enter your name here