ಗ್ರಾಮದ ಸ್ವಚ್ಚತೆಗೆ ಗಮನ ಕೊಡಿ; ಡಾ.ಕುಶಾಲ್ ರಾಜ್,

0
570

ಸಂಡೂರು:ಆಗಸ್ಟ್:29:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಬಳ್ಳಾರಿ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಂಡೂರು, ಮತ್ತು ಜಿಲ್ಲಾ ಪಂಚಾಯತ್, ಜಲಜೀವನ್ ಮಿಷನ್, ಬಳ್ಳಾರಿ ಇವರ ಸಹಯೋಗದಲ್ಲಿ ಗೊಲ್ಲಲಿಂಗಮ್ಮನಹಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಹೊಸೂರು ಗ್ರಾಮದಲ್ಲಿ ವಾಂತಿ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಕುಶಾಲ್ ರಾಜ್ ಚಿಕ್ಕದಾದ ಗ್ರಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ, ಗ್ರಾಮದ ರಸ್ತೆಯಲ್ಲಿ ದನ-ಕುರಿಗಳ ಮಲ, ಮಕ್ಕಳ ಮಲ ಎಲ್ಲಂದರಲ್ಲಿ ನೀರು, ಸೊಳ್ಳೆಗಳು ಇರುವುದನ್ನು ನೋಡಿ ಬೇಸರವಾಗುತ್ತಿದೆ, ಇಂತಹದರಲ್ಲಿ ಒಂದೇ ಮನೆಯಲ್ಲಿ ಐದು ಜನರಿಗೆ ವಾಂತಿ ಭೇದಿ ಪ್ರಕರಣಗಳು ಕಂಡು ಬಂದಿದ್ದು, ನಾಲ್ಕು ಜನರು ಸಂಡೂರು ಆಸ್ಪತ್ರೆಯ ಚಿಕಿತ್ಸೆ ಪಡೆದಿದ್ದು ಗುಣಮುಖರಾಗಿದ್ದಾರೆ ಒಬ್ಬರು ಮಾತ್ರ ಒ.ಪಿ.ಡಿ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ, ನಿಮ್ಮ ಮನೆಗಳ ಸ್ವಚ್ಚತೆಗೆ ಹೆಚ್ಚು ಗಮನ ಕೊಡಿ, ಆಂಬ್ಯುಲೆನ್ಸ್ ಸೇವೆ ಇರುತ್ತದೆ, ಭಯ ಬೀಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು,

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಈಶ್ವರ್ ದಾಸಪ್ಪನವರ್ ಮಾತನಾಡಿ ಮನೆಯ ಒಳಗೆ ಸ್ವಚ್ಚತೆ ಕಾಪಾಡಿ ಕೊಳ್ಳಿ, ಕಾಯಿಸಿ ಅರಿಸಿದ ನೀರು ಕುಡಿಯಿರಿ, ಬಿಸಿಬಿಸಿ ಆಹಾರ ಸೇವಿಸಿ, ಓ.ಆರ್.ಎಸ್ ದ್ರಾವಣ ಸೇವಿಸಿ, ಕೈಗಳನ್ನು ಸ್ವಚ್ಚವಾಗಿ ತೊಳೆಯಿರಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಗೊಲ್ಲಲಿಂಗಮ್ಮನಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಿಮ್ಮಕ್ಕ ಕುಮಾರಸ್ವಾಮಿ, ಗ್ರಾಮದ ಸದಸ್ಯರಾದ ಪಾರ್ವತಮ್ಮ ಕುಮಾರಸ್ವಾಮಿ,ಮಾಜಿ ಸದಸ್ಯ ಗಂಗಾಧರ, ತಾಲೂಕು ಆರೋಗ್ಯಾಧಿಕಾರಿ ಡಾ. ಕುಶಾಲ್ ರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಎರ್ರಿಸ್ವಾಮಿ, ಶಿವರಂಜನಿ, ಓಬಳೇಶಪ್ಪ, ಶಾಲೆಯ ಮುಖ್ಯ ಗುರುಗಳಾದ ಸಂತೋಷ್,ಜಿಲ್ಲಾ ಪಂಚಾಯತ್ ಐ. ಎಸ್.ಆರ್. ಎ ಸಿಬ್ಬಂದಿಗಳಾದ ಕೊಟ್ರೇಶ್ ಎದುರುಮನೆ ಎಚ್ ಮಂಜುಳಾ, ಆಶಾ ಕಾರ್ಯಕರ್ತೆ ಲಕ್ಷ್ಮಿ, ಸುಮಂಗಳ,ಬಿಲ್ ಕಲೆಕ್ಟರ್ ಶ್ರೀನಿವಾಸ್ ಹಾಜರಿದ್ದರು

LEAVE A REPLY

Please enter your comment!
Please enter your name here