ಮುತ್ತೈದೆಯರಿಗೆ ಉಡಿ ತುಂಬಿ ಮನಮೆಚ್ಚಿದ ಮಗನಾದ ಕೆ. ಎಸ್. ದಿವಾಕರ್.

0
164

ಸಂಡೂರು:ಆಗಸ್ಟ್:07: ಶ್ರಾವಣದಲ್ಲಿ ವರಮಹಾಲಕ್ಷ್ಮಿ ಪೂಜೆ ಮಾಡಿ ಮುತ್ತದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮಾಡಬೇಕು ಎಂದು ಸಂಕಲ್ಪ ಮಾಡಿದ್ದರಿಂದ ಇಂದು 1,200ಕ್ಕೂ ಹೆಚ್ಚು ಮಹಿಳೆಯರಿಗೆ ತಾಸ್ರೋಕ್ತವಾಗಿ ತುಂಬುವ ಕಾರ್ಯಕ್ರಮ ಹಮ್ಮಿಕೊಂಡಿರುವೆ ಎಂದು ರಾಜ್ಯ ಬಿಜೆಪಿ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್‌.ದಿವಾಕರ್ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ವರಮಹಾಲಕ್ಷ್ಮಿ ಪೂಜೆ ದಂಪತಿ ಸಮತರಾಗಿ ಹಮ್ಮಿಕೊಂಡಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಹಿರಿಯ ಮುಖಂಡರಾದ ಕಾರ್ತಿಕೇಯ ಘೋರ್ಪಡೆ ಅವರ ಸೂಚನೆ ಮೇರೆಗೆ ಡಿ.ಮಂಜುನಾಥರಿಗೆ ಪಕ್ಷ ಟಿಕೆಟ್ ನೀಡಿತ್ತು. ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಮಾಡುತ್ತಿರುವೆ. ಪಕ್ಷ ನನ್ನನ್ನು ಗುರುತಿಸಿ ಟಿಕೆಟ್ ನೀಡಿದಲ್ಲಿ ಚುನಾವಣೆಯಲ್ಲಿ ಸರ್ಧಿಸುವೆ, ಟಿಕೆಟ್
ನೀಡದಿದ್ದರೂ ಪಕ್ಷ ಸೇವೆ ಮುಂದುವರಿಸಿಕೊಂಡು ಹೋಗುವೇ ಎಂದು ಹೇಳಿದರು.

ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಮುಂದೆ:-
ಪಟ್ಟಣದ ಪ್ರಭುದೇವರ ಸಂಸ್ಥಾನ ವಿರಕ್ತ ಮಾತನಾಡಿ.. ಜನಸೇವೆ ಮಾಡಲು ಮಠದ ಪ್ರಭುಸ್ವಾಮಿಗಳು ಮಾತನಾಡಿ, ಸಚಿವ ಬಿ.ಶ್ರೀರಾಮುಲು ಅವರು – ಬಳ್ಳಾರಿಯಲ್ಲಿ ವರಮಹಾಲಕ್ಷ್ಮಿ ಪೂಜೆ ಆರಂಭಿಸುವ ಮೂಲಕ ದೇಶದ ಗಮನ ಸೆಳೆದರು. ಇದೀಗ ಕೆ.ಎಸ್‌ .ದಿವಾಕರ್’ ಮಹಿಳೆಯರಿಗೆ ಉಡಿ ತುಂಬುವ ಮೂಲಕ ಸೌಭಾಗ್ಯ, ಸಂಪತ್ತು ಸಿಗಲಿ ಎಂದು ಆಶಿಸುತ್ತಾರೆ. ನವೆಂಬರ್ ತಿಂಗಳಲ್ಲಿ ಸರ್ವ ಧರ್ಮ ಸಾಮೂಹಿಕ ಮದುವೆ ಮಾಡುವ ಕಾರ್ಯಕ್ರಮ ಹಮ್ಮಿಮೊಂಡಿದ್ದು, ಮತ್ತೊಂದು ದಾಖಲೆ ಮಾಡುತ್ತಿದ್ದಾರೆ ಎಂದರು.

ಯಶವಂತನಗರದ ಸಿದ್ದರಾಮೇಶ್ವರ ಮಠದ ಗಂಗಾಧರ ಮಹಾಸ್ವಾಮಿಗಳು ಮಾತನಾಡಿ.
ಜನಸೇವೆ ಮಾಡಲು ದೈವಿಶಕ್ತಿ ಬರಲಿ, ಸಾಮಾಜಿಕ, ಧಾರ್ಮಿಕ, ರಾಜಕೀಯ ಕಾರ್ಯ
ಸುಗಮವಾಗಲಿ ಎಂದು ವರಮಹಾಲಕ್ಷ್ಮಿ ಪೂಜೆ ಮತ್ತು ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಗದಗದಲ್ಲಿ 45 ಸಾವಿರ ಜೋಡಿ ಸಾಮೂಹಿಕ ಮದುವೆ ಮಾಡಿದ್ದು ದಿವಾಕರ್ ಅವರಿಗೆ ಪ್ರೇರಣೆಯಾಗಿದ್ದಾರೆ. ಹಲವು ತಿಂಗಳುಗಳ ಮೊದಲೇ ಪ್ರಚಾರ ಮಾಡುತ್ತಾ ಅಗತ್ಯವಿರುವವರಿಗೆ ಮಾಡುತ್ತಿದ್ದಾರೆ ಎಂದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್‌.ಕುಮಾರ ಸ್ವಾಮಿ, ಸದಸ್ಯರಾದ ಅಬ್ದುಲ್ ಮುನಾಫ್, ಕೆ. ಹರೀಶ, ಮುಖಂಡರಾದ ಬಾಳಕಾಯಿ ಮಂಜುನಾಥ್,ಟೈಲರ್ ಅಂಬರೀಶ್, ಕೆ. ಎಸ್. ಕುಮಾರಸ್ವಾಮಿ, ಧರ್ಮನಾಯ್ಕ್, ಕೆ. ಆರ್, ಕುಮಾರಸ್ವಾಮಿ, ಕೊಂಚಿಗೇರಿ ನಾಗರಾಜ, ಬಸವರಾಜ, ಬಪ್ಪಕಾನ್ ಆನಂದಪ್ಪ, ಓಂಕಾರಪ್ಪ ಮುಖಂಡರು, ಇತರರು ಇದ್ದರು.

ಆದ್ದೂರಿ ಮೆರವಣಿಗೆ:-
ಇದಕ್ಕೂ ಮುನ್ನ ಪಟ್ಟಣದ ಹುಲಿಗೆಮ್ಮ ದೇವಸ್ಥಾನದಿಂದ ಮರಗಾಲು ಕುಣಿತ, ಡ್ರಮ್ ಸೆಟ್, ಗೊಂಬೆ ಕುಣಿತ, ಕೇರಳದ ಚಂಡಿವಾಧ್ಯ, ಕಂಚಿಮೇಳ, ಕೋಲಾಟ,ಡೊಳ್ಳು ಕುಣಿತ, ವೀರಗಾಸೆ, ಸೇರಿದಂತೆ ಹಲವು ಕಲಾ ತಂಡಗಳು ಸ್ವಾಮಿಜಿಗಳನ್ನು ಬೆಳ್ಳಿಯ ರಥದಲ್ಲಿ ಮೆರವಣಿಗೆ ಮೂಲಕ ವೀರಶೈವ ಕಲ್ಯಾಣ ಮಂಟಪಕ್ಕೆ ಕರೆದ್ಯೋಯಲಾಯಿತು.

LEAVE A REPLY

Please enter your comment!
Please enter your name here