ಪರೀಕ್ಷಾ ಭಯ ನಿವಾರಣೆಗಾಗಿ “ಪ್ರೇರಣ” ಕಾರ್ಯಕ್ರಮ

0
69

ಸಂಡೂರು:ಜ:23:-ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಬಳ್ಳಾರಿ ಇವರ ಸಂಯುಕ್ತ ಆಶ್ರಯದಲ್ಲಿ ಪರೀಕ್ಷಾ ಭಯ ನಿವಾರಣೆಗಾಗಿ ಪರೀಕ್ಷೆಯೊಂದು ಹಬ್ಬ ಸಂಭ್ರಮಿಸಿ ಎಂಬ ಪ್ರೇರಣ ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢಶಾಲೆ ವಡ್ಡು ಗ್ರಾಮದಲ್ಲಿ ಸುತ್ತಮುತ್ತಲಿನ ಸರ್ಕಾರಿ ಶಾಲೆಯ ಎಸ್ ಎಸ್ ಎಲ್ ಸಿ ಓದುತ್ತಿರುವ ಸುಮಾರು 400 ಕ್ಕಿಂತ ಹೆಚ್ಚು ಮಕ್ಕಳಿಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಪ್ರೇರಣ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಡೂರು ತಾಲೂಕ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಯುತ ಷಡಕ್ಷರಯ್ಯ ಕೆಎಎಸ್ ಇವರಿಂದ ಪರೀಕ್ಷೆಯ ಭಯ ಹೋಗಲಾಡಿಸಲು ಪರೀಕ್ಷಾ ಸಿದ್ಧತೆ ಓದುವ ವಿಧಾನ ಮತ್ತು ನಮ್ಮ ಗುರಿಯಿಡೆಗೆ ನಮ್ಮ ದೃಷ್ಟಿ ಯಾವ ರೀತಿಯಾಗಿರಬೇಕೆಂಬುದರ ಬಗ್ಗೆ ಹಲವು ನಿದರ್ಶನಗಳನ್ನು ಹೇಳಿ ಮಕ್ಕಳಿಗೆ ಹುರಿದುಂಬಿಸಿದರು

ಇದಕ್ಕೂ ಮೊದಲು ಮಾತನಾಡಿದ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶರಣಬಸಪ್ಪ ಕೆ ಮತ್ತು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಧರ್ಮೂರ್ತಿ ಹಾಗೂ ಶಿಕ್ಷಣ ಸಂಯೋಜಕರಾದ ಬಸವರಾಜ್ ಸಿ ಇವರು ಮಕ್ಕಳಿಗೆ ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಹೇಗೆ ಆಚರಿಸಬಹುದು ಅದಕ್ಕೆ ಪೂರ್ವಸಿದ್ಧತೆಯಾಗಿ ಏನೆಲ್ಲ ಮಾಡಿಕೊಳ್ಳಬೇಕೆಂಬುದನ್ನು ಸವಿವರವಾಗಿ ಅನೇಕ ನಿದರ್ಶನಗಳನ್ನು ನೀಡುತ್ತಾ ತಿಳಿಸಿಕೊಟ್ಟರು.

ಸಂಡೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೈಲೇಶ್ ಬೇವೂರ್ ರವರು ವಿದ್ಯಾರ್ಥಿಗಳು ಪರೀಕ್ಷೆಯನ್ನು ಉತ್ತಮವಾಗಿ ಬರೆಯಬೇಕು ಎಂದು ತಿಳಿಸುತ್ತಾ, ಇತಿಹಾಸದ ವ್ಯಕ್ತಿಗಳನ್ನು ಪರಿಚಯಿಸುತ್ತ ನೆಪೋಲಿಯನ್ ಬೋನಾಪಾರ್ಟೆ ಹೇಳಿದ ಹಾಗೆ “ಅಸಾಧ್ಯ ಎನ್ನುವ ಪದ ನನ್ನ ಶಬ್ದಕೋಶದಲ್ಲಿಯೇ ಇಲ್ಲ” ಎನ್ನುವಂತೆ ಎಲ್ಲವನ್ನು ಸಾಧಿಸುವ ಶಕ್ತಿ ನಿಮ್ಮಲ್ಲಿದೆ ಎಂದು ತಿಳಿಸಿಸಿದರು. ಹೀಗೆ ಅನೇಕ ವಿಚಾರಗಳನ್ನು ತಿಳಿಸುತ್ತಾ ಮಕ್ಕಳಲ್ಲಿ ಸ್ಪೂರ್ತಿಯನ್ನು ಹೆಚ್ಚಿಸಿ ನೀವುಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದರ ಮೂಲಕ ನಮ್ಮ ತಾಲೂಕಿನ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ವಡ್ಡು ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೆ ಜೆ ದೊಡ್ಡಸ್ವಾಮಿ ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಗಂಗಾಬಾಯಿ ಪಾಟೇಲ್, ಹೊಸದರೋಜಿ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಉಲ್ಲೇಶಿ ಹಾಗೂ ಬಿ ಆರ್ ಪಿ ಗಳಾದ ಕಾರ್ತಿಕೇಶ್, ಎನ್, ಶ್ರೀ ಮಂಜುನಾಥ ಹಾದಿಮನೆ, ಸಿಆರ್ಪಿ ಜಗದೀಶ್, ಹಾಗೂ ಎಲ್ಲಾ ಶಾಲೆಯ ಮುಖ್ಯ ಗುರುಗಳು ಮತ್ತು ಶಿಕ್ಷಕ ವೃಂದದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here