ಅಂಗನವಾಡಿ ಕಾರ್ಯಕರ್ತೆಯರ 5ನೇ ಹಂತದ ತರಬೇತಿ ಕಾರ್ಯಾಗಾರ

0
351

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಬಳ್ಳಾರಿ, ಹಾಗೂ ಕಲಿಕೆ ಟಾಟಾ ಟ್ರಸ್ಟ್, ಬೆಂಗಳೂರು, ಇವರ ಸಹಯೋಗದ “ಶಾಲಾ ಪೂರ್ವ ಶಿಕ್ಷಣ ಬಲವರ್ಧನ ಕಾರ್ಯಕ್ರಮದಡಿ” ಬಳ್ಳಾರಿ ಜಿಲ್ಲೆಯ ಸಂಡೂರು ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಮೇಟ್ರಿಕಿ ಎ ವಲಯದ ಅಂಗನವಾಡಿ ಕಾರ್ಯಕರ್ತೆಯರ ಐದನೇ ಹಂತದ ತರಬೇತಿ ಕಾರ್ಯಗಾರವನ್ನು ಯು.ರಾಜಪುರ 2ನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಯಿತು.

ಸದರಿ ಕಾರ್ಯಗಾರಕ್ಕೆ ಮೇಲ್ವಿಚಾರಕರಾಗಿ ಮತ್ತು ತರಬೇತಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಲಾ ಪೂರ್ವ ಶಿಕ್ಷಣ ಬಲವರ್ಧನ ಕಾರ್ಯಕ್ರಮದ ಕಲಿಕೆ ಟಾಟಾ ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕರಾದ ಜಗನ್ನಾಥ್ ಮಾತನಾಡುತ್ತಾ ಕಾರ್ಯಕ್ರಮದಲ್ಲಿ ವಿವಿಧ ಹಂತದ ತರಬೇತಿ ವಿಷಯಗಳ ಕುರಿತಂತೆ ಮತ್ತು ಕಾರ್ಯಕ್ರಮದ ಪ್ರಸ್ತುತ ಬೆಳವಣಿಗೆ ತಿಳಿಸಿ ತರಬೇತಿಯ ವಿಷಯಗಳು ಪ್ರತಿನಿತ್ಯದ ಅಂಗನವಾಡಿ ಮಕ್ಕಳಿಗೆ ಸರ್ವತೋಮುಖ ಬೆಳವಣಿಗೆ ಅಗತ್ಯವಾದ ಅಂಶಗಳನ್ನು ಒಳಗೊಂಡಿದೆ.

ವಲಯದ ತರಬೇತುದಾರರಾದ ಶ್ರೀಮತಿ ಗಿರಿಜಮ್ಮ ಮಾತನಾಡುತ್ತಾ ವಲಯದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಾ ಪೋಷಕರಿಗೆ ಕೇಂದ್ರದಲ್ಲಿ ಆಯೋಜಿಸುತ್ತಿರುವ ಚಟುವಟಿಕೆಗಳ ಕುರಿತಂತೆ ಸಮುದಾಯ ಚಿತ್ತ ಅಂಗನವಾಡಿ ಅತ್ತ ಸಭೆಗಳ ಮೂಲಕ ವಿವರಿಸಲಾಗಿದೆ ಪ್ರತಿ ಕೇಂದ್ರದ ಮಕ್ಕಳ ಪೋಷಕರ ವಾಟ್ಸಪ್ ಗ್ರೂಪ್ ರಚನೆ ಮಾಡಿ ಪ್ರತಿದಿನ ಅಂಗನವಾಡಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ ಸದರಿ ವಿಷಯಕ್ಕೆ ಪೋಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಸದರಿ ತರಬೇತಿಯಲ್ಲಿ ಸಹ ತರಬೇತರಾಗಿ ಭಾಗವಹಿಸಿದ ಶ್ರೀಮತಿ ಚೇತನ್ ಗೌಡ್ರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳಲ್ಲಿ ಕಾರ್ಯಕ್ರಮದ ಬೆಳವಣಿಗೆ ಕುರಿತಂತೆ ಆರಂಭಿಕ ಸಾಕ್ಷರತೆ ಭಾಗವಾಗಿ ಮಾದರಿ ಓದುವುದು ಮತ್ತು ಬರೆಯುವುದು ಹಾಗೂ ಬೌದ್ಧಿಕ ಚಟುವಟಿಕೆ ಮತ್ತು ಆಟಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಶ್ರೀಮತಿ ಸರಿತಾ ಎಂ ಅವರು ತರಬೇತಿಯರನ್ನು ಸ್ವಾಗತಿಸಿದರು ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಯು ನಿರೂಪಿಸಿದರು ತರಬೇತಿಗೆ ಶ್ರೀಮತಿ ನೇತ್ರಾ ವಂದಿಸಿದರು. ಉಬ್ಬಳಗಂಡಿಯ ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಿ, ಪದ್ಮಾವತಿ,ಪಾರ್ವತಿ,
ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here