ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಡೂರು ಶಾಸಕ ತುಕಾರಾಮ್ ಅವರಿಂದ ಖಡಕ್ ಸೂಚನೆ.

0
227

ಸಂಡೂರು: ಮಿತಿಮೀರುತ್ತಿರುವ ಕರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೂ ನೋಡಲ್ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸುವಂತೆ ಶಾಸಕ ಈ ತುಕಾರಾಂ ತಿಳಿಸಿದರು.ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೈಗಾರಿಕಾ ಪ್ರದೇಶವಾಗಿರುವ ತೋರಣಗಲ್ಲುನ ಕೆಲ ಹಳ್ಳಿಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಪ್ರಥಮ ಸಂಪರ್ಕಕ್ಕೆ ಬಂದವರನ್ನು ಹೊರಗಡೆ ತಿರುಗಾಡಲು ಬಿಡದಂತೆ ಬಿಗಿ ಕ್ರಮಕೈಗೊಳ್ಳುವಂತೆ ತಿಳಿಸಿದರು.

ಜೊತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಆಕ್ಸಿಜನ್ ಬೆಡ್ ಗಳಲ್ಲಿ ತಾಲೂಕಿನವರಿಗೆ ಕೆಲವುಗಳನ್ನು ಕಾಯ್ದಿರಿಸುವಂತೆ ತಿಳಿಸಿದರು.
ಗ್ರಾಮಗಳಲ್ಲಿ ಸ್ವಚ್ಛತೆ ಫಾಗಿಂಗ್ ಸ್ಯಾನಿಟೈಸರ್ ಮಾಡಬೇಕು ಮುಂದಿನ ಎರಡು ತಿಂಗಳುಗಳ ನಂತರ ಹೆಚ್ಛಾಗಬಹುದಾದ ಸೋಂಕಿತರ ಸಂಖ್ಯೆಗೆ ಅಗತ್ಯವಾಗಿ ಬೇಕಾದ ಔಷಧ ಮುಂತಾದ ಪರಿಕರಗಳ ಅಂದಾಜು ಮಾಹಿತಿಯನ್ನು ನೀಡಿದರೆ ಅವುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ಸಭೆಯಲ್ಲಿ ಡಾ.ನವೀನ್ ಹಾಗೂ ಡಾ.ರಾಮ ಶೆಟ್ಟಿ ಮಾತನಾಡಿ ತಾಲೂಕಿನಲ್ಲಿ 1458 ಸಕ್ರಿಯ ಪ್ರಕರಣಗಳಿವೆ ಇದರಲ್ಲಿ 939 ಹೋಂ ಐಸೋಲೇಶನ್ನಲ್ಲಿದ್ದಾರೆ 114 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ ತಾಲೂಕಿನಲ್ಲಿ ಆಮ್ಲಜನಕ, ಕೋವಾಕ್ಸಿನ್, ಕೋವಿಸಿಲ್ಡ್ ಲಸಿಕೆ, ರೆಮಿಡಿಸಿವಿರ್ ಕೊರತೆಯಿಲ್ಲ ಎಂದು ಮಾಹಿತಿ ನೀಡಿದರು.

ಸಿಪಿಐ ಉಮೇಶ್ ಮಾತನಾಡಿ, ಕೋವಿಡ್ ನಿಯಮ ಉಲ್ಲಂಘನೆಗೆ ಒಟ್ಟು 1400 ಪ್ರಕರಣ ದಾಖಲಾಗಿವೆ ಇವುಗಳ ಅಂತರ ಕಾಪಾಡಿಕೊಳ್ಳಬೇಕು ರೂ. 45 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

ತಸಿಲ್ದಾರ್ ಹೆಚ್.ಜೆ.ರಶ್ಮಿ, ತಾಲೂಕು ಪಂಚಾಯಿತಿಯ ಇ ಒ ಪರ್ಣಿಕಾ ,ಡಿವೈಎಸ್ಪಿ ಹರೀಶ್ ,ಪುರಸಭೆ ಅಧ್ಯಕ್ಸ್ಕೆ ಅನಿತಾ ವಸಂತ್ ಕುಮಾರ್, ಉಪಾಧ್ಯಕ್ಷ ವೀರೇಶ್ ಸಂಡೂರು ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ , ಕುರೇಕುಪ್ಪ ಪುರಸಭೆ ಮುಖ್ಯಾಧಿಕಾರಿ ರೆಹಮಾನ್, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here