ಬಾಲ್ಯ ವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ; ಶಿರಸ್ತೆದಾರ್ ಶಿವಕುಮಾರ್,

0
352

ಸಂಡೂರು:ಡಿ:15:-ತಾಲೂಕಿನ ತಹಶೀಲ್ದಾರರ ಕಾರ್ಯಾಲಯದಲ್ಲಿ ಶಿರಸ್ಥೇದಾರ್ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಬಾಲ್ಯವಿವಾಹಗಳನ್ನು ತಡೆಯುವ ತಾಲ್ಲೂಕು ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ ನಡೆಸಲಾಯಿತು ಸಭೆಯಲ್ಲಿ ಶಿಶುಅಭಿವೃದ್ದಿ ಯೋಜನಾಧಿಕಾರಿಗಳಾದ ಎಳೆನಾಗಪ್ಪ ರವರು ಮಾತನಾಡಿ 2022-23 ನೇ ಸಾಲಿನಲ್ಲಿ ಸಂಡೂರು ತಾಲೂಕಿನಲ್ಲಿ 23 ಬಾಲ್ಯ ವಿವಾಹಗಳನ್ನು ತಡೆದು ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಪ್ರತೀ ತಿಂಗಳಿಗೊಮ್ಮೆ ಆ ಮಕ್ಕಳ ಮನೆ ಬೇಟಿ ಮಾಡಿ ಅನುಪಾಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು,

ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಸಿ ತಿಪ್ಪೇಶಪ್ಪ ರವರು ಮಾತನಾಡಿ ಸರ್ಕಾರದ ಆದೇಶದಂತೆ ಪ್ರತಿ 3 ತಿಂಗಳಿಗೊಮ್ಮೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿ ಸಭೆ ನಡೆಸಬೇಕೆಂದು ಆದೇಶ ಇದ್ದರೂ ಸಭೆಗಳು ಆಗುತ್ತಿಲ್ಲ ತಾಲೂಕು ಪಂಚಾಯಿತಿ ಅಧಿಕಾರಿಗಳು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ಮಾಡಲು ಆದೇಶ ಹೊರಡಿಸಬೇಕು, ಬಾಲ್ಯವಿವಾಹದಿಂದ ರಕ್ಷಿಸಲ್ಪಟ್ಟ ಯುವತಿಯರಿಗೆ ರೀಡ್ಸ್ ಸಂಸ್ಥೆಯಿಂದ ಕೌಶಲ್ಯತರಬೇತಿ ನೀಡಲಾಗುವುದೆಂದು ತಿಳಿಸಿದರು,

ಶಿರಸ್ಥೇದಾರ್ ಶಿವಕುಮಾರ್ ರವರು ಮಾತನಾಡಿ ಸಾಮೂಹಿಕ ವಿವಾಹ ಆಯೋಜಕರಿಗೆ, ಕಲ್ಯಾಣ ಮಂಟಪ ಮುಖ್ಯಸ್ಥರಿಗೆ, ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ, ದೇವಸ್ಥಾನದ ಪೂಜಾರಿ, ಮಸೀದಿ ಮೌಲ್ವಿಗಳಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ತರಬೇತಿ ನೀಡಲಾಗಿದೆ, ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಾಲ್ಯವಿವಾಹ ತಡೆಯುವಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ, ಎಲ್ಲರ ಸಹಕಾರದಿಂದ ಬಾಲ್ಯ ವಿವಾಹಗಳನ್ನು ತಡೆದು ಆರೋಗ್ಯವಂತ ಸಮಾಜ ರೂಪಿಸೋಣ ಎಂದು ಕರೆ ನೀಡಿದರು,

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ವೆಂಕಟೇಶ್ ನಾಯ್ಕ ರವರು ಮಾತನಾಡಿ ಹಾಸ್ಟೆಲ್ ನಲ್ಲಿ ಮಕ್ಕಳಿಗೆ ಮಕ್ಕಳ ಸಹಾಯವಾಣಿ ಕುರಿತು ಜಾಗೃತಿ ಮೂಡಿಸಲು ತಿಳಿಸಿದರು,

ಈ ಸಭೆಯಲ್ಲಿ ರೀಡ್ಸ್ ಸಂಸ್ಥೆ ತಾಲ್ಲೂಕು ಸಂಯೋಜಕರಾದ ಕೆ. ಎಂ.ತಿಪ್ಪೇಸ್ವಾಮಿ, ಯಲ್ಲಮ್ಮ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಚಂದ್ರಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮೆಲ್ವಿಚಾರಕರಾದ ಸುಧಾ ಬಸವಂತ್, ಎ.ಪಿ ಕುಂಬಾರ್, ಲಿಂಗರಾಜು, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಶರಣಬಸಪ್ಪ, ತಾಲೂಕು ಪಂಚಾಯತಿ ಕಾರ್ಯಾಲಯದ ಅಧಿಕಾರಿಗಳಾದ ರೋಷನ್ ಜಮೀರ್, ಪುರಸಭೆ ಅಧಿಕಾರಿಗಳಾದ ಭಾಸ್ಕರ್, ಉಪ ನೊಂದಣಾಧಿಕಾರಿಗಳ ಕಛೇರಿಯ ಗಾಧಿಲಿಂಗಪ್ಪ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here