ಹೊಸ ದರೋಜಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ. ಗೊಂದಲದಲ್ಲಿ ಮುಗಿದ ಕಾರ್ಯಕ್ರಮ.

0
190

ಸಂಡೂರು.14 ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ 1:30 ಸುಮಾರಿಗೆ ಡಿಎಂಎಫ್ ಅನುದಾನದಲ್ಲಿ ಹೊಲಿಗೆ ಯಂತ್ರಗಳನ್ನು ಮಹಿಳೆಯರಿಗೆ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿಗದಿತ ಸಮಯಕ್ಕೆ ಆಗಮಿಸಿದ ಶಾಸಕ ಈ. ತುಕಾರಾಂ ಮಾತನಾಡಿ, 22 ಕೋಟಿ ವೆಚ್ಚದಲ್ಲಿ ಈ ಭಾಗದ ಹಳ್ಳಿಗೆ ಕುಡಿಯುವ ನೀರಿನ ಯೋಜನೆ ಸಿದ್ಧವಾಗಿದೆ ಹಳೆದರೋಜಿ ಮತ್ತು ಹೊಸದರೋಜಿ ಏಳುಬೆಂಚಿ ಸೇರಿದಂತೆ 3 ಗ್ರಾಮಗಳನ್ನು ಪ್ರವಾಸೋದ್ಯಮ ವ್ಯಾಪ್ತಿಗೆ ಒಳಪಡಿಸಲು ಮೂರು ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ಸಿದ್ಧವಾಗಿದೆ ಎಂದರು.

2009ರಲ್ಲಿ ಪ್ರವಾಹದಿಂದ ದರೋಜಿ ಕೆರೆ ತಡೆಗೋಡೆ ಒಡೆದು ಹೋಗಿದ್ದಾಗ ನಾಲ್ಕುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು 1975 ನಿರ್ಮಾಣವಾದ ದರೋಜಿ ಕೆರೆ ರಾಜ್ಯದಲ್ಲಿ ಎರಡನೇ ಅತಿದೊಡ್ಡ ಕೆರೆಯಾಗಿದೆ ಎಂದು ತಿಳಿಸಿದರು. ಗ್ರಾಮದಲ್ಲಿ ನೂತನವಾದ 10 ಬೆಡ್ ಗಳ ಸರ್ಕಾರಿ ಆಸ್ಪತ್ರೆ ಮಂಜೂರಾಗಿದೆ ಶೀಘ್ರವೇ ಆರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಸಭೆಯ ಮಧ್ಯದಲ್ಲಿ ಆಗಮಿಸಿದ ಸಂಸದ ದೇವೇಂದ್ರಪ್ಪ ಅವರನ್ನು ಶಾಸಕರು ಭಾಷಣದ ನಡುವೆ ಸ್ವಾಗತಿಸಿ ಶುಭಕೋರಿದರು. ಮುಂದುವರೆದು ಮಾತನಾಡುತ್ತ ಸರ್ಕಾರದ ಯೋಜನೆಗಳನ್ನು ಜನರಿಗೆ ನೀಡುವಲ್ಲಿ ನಾವು ಸೇವಕರಂತೆ ಕೆಲಸ ಮಾಡುವುದು ನಮ್ಮ ಕರ್ತವ್ಯ ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವೆ ಎಂದರು.

ಸಂಸದ ದೇವೇಂದ್ರಪ್ಪ ಮಾತು ಆರಂಭಿಸಿ ಕೆಲಸಗಳನ್ನು ಮಾಡುವಲ್ಲಿ ಮತ್ತು ಮಾತನಾಡುವಲ್ಲಿ ತುಕರಾಮ್ ಅವರು ನಾಯಕ ಪಂಗಡಕ್ಕೆ ಸೇರಿದ್ದರು ಕೂಡ ಬ್ರಾಹ್ಮಣನಂತೆ ಎಂದು ಅವರ ಗುಣಗಾನ ಮಾಡುವುದರ ಜೊತೆಗೆ ವ್ಯಂಗ್ಯವಾಗಿ ನುಡಿದರು. ನಿಮಗೆ ಸ್ವತಂತ್ರ ಬಂದು 70 ವರ್ಷಗಳಾಗಿದೆ ಈಗ ಇಲ್ಲಿ ಸುತ್ತಮುತ್ತ ಜಿಂದಾಲ್ ಸೇರಿದಂತೆ ಅನೇಕ ದೊಡ್ಡ ದೊಡ್ಡ ಕಂಪನಿಗಳಿವೆ ಈಗ ನೀವು 80 ಹೊಲಿಗೆ ಯಂತ್ರಗಳನ್ನು ಪಡೆಯಲು ಬಂದಿದ್ದೀರಿ ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದು ತಿಳಿಸಿದರು.

ಪ್ರಧಾನಮಂತ್ರಿ ಮೋದಿ ಅವರ ಸಾಧನೆಗಳನ್ನು ತಿಳಿಸಲು ಪರದಾಡಿದರು. ರೈತರಿಗೆ 2000 ರೂಪಾಯಿ ಅಕೌಂಟ್ಗೆ ಹಾಕಿದ್ದಾರೆ ಎಂದಾಗ ಸಭಿಕರೊಬ್ಬರು 1 ಡಬ್ಬೆ ಅಡುಗೆ ಎಣ್ಣೆ ಕೂಡ ಬರುವುದಿಲ್ಲ ಎಂದು ಪ್ರಶ್ನೆ ಹಾಕಿದರು.ನಂತರ ಸಂಸದರು ಕಾರ್ಯಕ್ರಮದ ಉದ್ದೇಶವನ್ನು ಮರೆತುಬಿಟ್ಟು ರಾಜಕೀಯ ಭಾಷಣಕ್ಕೆ ಮುಂದಾಗಿ ನೀವು ರೊಟ್ಟಿನ ಒಂದೇಕಡೆ ಸುಡುವುದರ ಬರಲ್ಲ ಅದಲು ಬದಲು ಮಾಡಿ ಎನ್ನುವ ಮೂಲಕ ಶಾಸಕ ತುಕರಾಮ್ ಅವರಿಗೆ ಮುಂದಿನ ಚುನಾವಣೆಯಲ್ಲಿ ಸೋಲಿಸಿ ಎಂಬ ಅರ್ಥದಲ್ಲಿ ಮಾತನಾಡಿದರು ಇದನ್ನು ಸಹಿಸದ ಕಾಂಗ್ರೆಸ್ಸಿನ ಬೆಂಬಲಿಗರು ಇದು ಚುನಾವಣಾ ಭಾಷಣವಲ್ಲ ಎಂದು ವಿರೋಧಿಸಿ ಭಾಷಣಕ್ಕೆ ಅಡ್ಡಿ ಪಡಿಸಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕಾರ್ಯಕರ್ತರು ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೆದು 15 ನಿಮಿಷಗಳ ಕಾಲ ಸಭೆ ಗೊಂದಲದ ಗೂಡಾಗಿತ್ತು. ಪೊಲೀಸರು ಅಧಿಕಾರಿಗಳು ಸಭೆಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಮತ್ತೊಮ್ಮೆ ಮೈಕ್ ತೆಗೆದುಕೊಂಡ ಶಾಸಕ ತುಕರಾಂ ಎರಡು ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಂದಾದರು. ಬಿಜೆಪಿಯ ಕಾರ್ಯಕರ್ತನೊಬ್ಬ ನೀವು ರಾಜಕೀಯ ಮಾಡುತ್ತಿರಿ ಎಂದಾಗ ಕೆಂಡಾಮಂಡಲರಾದರು ಶಾಸಕರು ನಾನು ರಾಜಕೀಯ ಮಾಡುತ್ತಿಲ್ಲ ನೀವು ಮಾಡುತ್ತಿದ್ದೀರಿ ನನ್ನ 15 ವರ್ಷಗಳ ರಾಜಕೀಯ ಜೀವನದಲ್ಲಿ ಕೆಟ್ಟ ರಾಜಕೀಯ ಮಾಡಿದ್ದು ದಾಖಲೆ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು. ನೀವೇನೆ ರೊಟ್ಟಿ ತಿರುವಿ ಹಾಕಿದರೂ ಕೂಡ ಮುಂದಿನ ಚುನಾವಣೆಯಲ್ಲಿ ನಾನೇ ಗೆಲ್ಲುವುದು ಎಂದು ಘಂಟಾಘೋಷವಾಗಿ ಹೇಳಿದರು.

ಸಂತೋಷ್ ಲಾಡ್ ಅಭಿಮಾನಿಗಳಲ್ಲಿ ಕೆಲವರು ಬೇರೆಯಾಗಿ ಬಿಜೆಪಿ ಪಕ್ಷ ಸೇರಿದ್ದಾರೆ,ಮುಂದಿನ ದಿನಗಳಲ್ಲಿ ಸಂಸದ ದೇವೇಂದ್ರಪ್ಪನವರು ಕೂಡ ಕಾಂಗ್ರೆಸ್ ಸೇರಬಹುದು ಎಂದರು. ಬೇಸತ್ತ ಫಲಾನುಭವಿ ಮಹಿಳೆಯರು ಸಭೆಯಿಂದ ನಿರ್ಗಮಿಸಲು ಮುಂದಾದಾಗ ಹೊಲಿಗೆ ಯಂತ್ರಗಳನ್ನು ವಿತರಿಸಿ ಕಾರ್ಯಕ್ರಮವನ್ನು ತರಾತುರಿಯಲ್ಲಿ ಮುಗಿಸಲಾಯಿತು.
ಕಾರ್ಯಕ್ರಮದಲ್ಲಿ ಗಲಾಟೆ ಮಾಡಲು ಬಂದಂತಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ನೆರೆದಿದ್ದ ಮಹಿಳೆಯರಿಂದ ಮೂದಲಿಕೆಗೆ ಒಳಗಾದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಜಿಲ್ಲಾ ಪಂಚಾಯತಿ ಸದಸ್ಯರು ಸೇರಿದಂತೆ ಅಧಿಕಾರಿಗಳ ತಂಡ ಭಾಗವಹಿಸಿತ್ತು.

LEAVE A REPLY

Please enter your comment!
Please enter your name here