ದೇವದಾಸಿ ಮಹಿಳೆಯರಿಗೆ ಸೌಲಭ್ಯ ಕೊಡಿ ಮುಖ್ಯವಾಹಿನಿಗೆ ತನ್ನಿ- ಎ.ಸ್ವಾಮಿ

0
31

ಸಂಡೂರು : ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರ ಗಣತಿಗಾಗಿ ಮತ್ತು ಇತರೆ ಹಕ್ಕೊತ್ತಾಯಗಳ ಮನವಿ ಮಾಡುತ್ತೇವೆ ಎಂದು ಮುಖಂಡ ಎ.ಸ್ವಾಮಿ ತಿಳಿಸಿದರು.

ಅವರು ಇಂದು ಪಟ್ಟಣದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿನ ಸಾಮಾಜಿಕ ದೌರ್ಜನ್ಯಕ್ಕೆ ತುತ್ತಾದ ಒಂದು ಲಕ್ಷಕ್ಕೂ ಅಧಿಕ ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರುಗಳಾದ ನಾವುಗಳು, ಸ್ವಾತಂತ್ರ್ಯ ಬಂದು 76 ವರ್ಷಗಳನ್ನು ನಮ್ಮ ದೇಶ ಪೂರೈಸುತ್ತಿದ್ದರೂ, ದಲಿತರ ಅಭಿವೃದ್ಧಿ ಹೆಸರೇಳಿ ಲಕ್ಷ ಲಕ್ಷ ಕೋಟಿ ರೂಗಳನ್ನು ಸರಕಾರಗಳು ವ್ಯಯಿಸಿದ್ಸರು ನಮ್ಮಗಳ ಮೇಲಿನ ದೌರ್ಜನ್ಯ ಹಾಗೂ ಅಪಮಾನದ ನೋವಿನ ಬದುಕು ಕೊನೆಗಾಣದಿರುವುದು ವಿಷಾದನೀಯವಾಗಿದೆ.

ಈಗಲು ನಮಗೊಂದು ಗೌರವದ, ಸ್ವಾವಲಂಬಿ ಬದುಕಿಗಾಗಿ ನಾವು ಹಂಬಲಿಸುತ್ತಿದ್ದೇವೆ. ದೌರ್ಜನ್ಯದ ದೇವದಾಸಿ ಪದ್ದತಿಯನ್ನು ಆಮೂಲಾಗ್ರವಾಗಿ ಕೊನೆಗೊಳಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಈಗಲೂ, ತಾಯಂದಿರ ಅನಾರೋಗ್ಯದ ಅಕಾಲಿಕ ಸಾವುಗಳಿಂದ ಅನಾಥರಾಗುತ್ತಿದ್ದೆವೆ. ಬುದ್ದಿ ಬಲಿತ ಮಕ್ಕಳು ಪ್ರತಿ ದಿನ ಪ್ರತಿ ಕ್ಷಣ ಸಮಾಜದ ನಿಂದನೆಗಳಿಂದ ಅಪಮಾನಿತರಾಗುತ್ತಿದ್ದೇವೆ ಅಪಮಾನಿತರಾಗುತ್ತಿದ್ದೇವೆ. ತಾಯಂದಿರ ಅಸಮರ್ಪಕ ಗಣತಿಯಿಂದ ಪುನರ್ವಸತಿಯ ಅಲ್ಪವಾದ ಸೌಲಭ್ಯಗಳಿಂದಲು ವಂಚಿತರಾಗಿದ್ದೇವೆ. ಇದರಿಂದಾಗಿ ಶಿಕ್ಷಣ ಮತ್ತಿತರೆ ನೆರವು ದೊರೆಯದಾಗಿದೆ. ಇತರಹದ ಕುಟುಂಬಗಳ ವಿದ್ಯಾವಂತ ಮಕ್ಕಳು ಉದ್ಯೋಗವಿಲ್ಲದೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಯುವತಿಯರು ಮತ್ತು ಗಂಡ ಬಿಟ್ಟ ಯುವ ಮಹಿಳೆಯರು ಪುನಃ ದೌರ್ಜನ್ಯದ ದೇವದಾಸಿ ಪದ್ಧತಿಗೆ ಬಲವಂತವಾಗಿ ತಳ್ಳಲ್ಪಡುತ್ತಿದ್ದಾರೆ.
ಜನ್ಮದಾತ ಕಣ್ಣೆದುರಿಗಿದ್ದರು ಆತನನ್ನು ತಂದೆಯೆಂದು ಕರೆಯುವಂತಿಲ್ಲ. ಆತನಿಗೆ ನಮ್ಮಗಳ ಕುರಿತ ಯಾವುದೇ ಹೊಣೆಗಾರಿಕೆಯಿಲ್ಲ. ದೌರ್ಜನ್ಯದ ದೇವದಾಸಿ ಪದ್ಧತಿಯನ್ನು ತಡೆಯಲು ಇಂತಹ ಫಲಾನುಭವಿಗಳನ್ನು ಶಿಕ್ಷಿಸದೆ, ಅದಾಗಲೆ ಇರುವ ಫಲಾನುಭವಿಗಳಿಗೆ ಹೊಣೆಗಾರಿಕೆ ನಿಗದಿಸಿ ಅದನ್ನು ಸಮರ್ಪಕವಾಗಿ ಜಾರಿಗೊಳಿಸುವ ಕಾನೂನು ಮತ್ತು ಇಲಾಖೆಯನ್ನು ಗುರುತಿಸಿ ಜಾರಿಗೊಳಿಸಲಿಲ್ಲ. ಕಡು ಬಡತನದಿಂದ ಬಳಲುವ ತಾಯಿಗಿಲ್ಲದ ಆಸ್ತಿ, ಭೂಮಿ ನಮಗೆಲ್ಲಿಯದು. ಆಧುನಿಕ ತಂತ್ರಜ್ಞಾನವು ಕೂಲಿ ಅವಕಾಶಗಳನ್ನು ಕುಂಠಿತಗೊಳಿಸಿದೆ. ಉದ್ಯೋಗ ಖಾತ್ರಿ ಯೋಜನೆಯು ಭ್ರಷ್ಟಾಚಾರ ಮತ್ತಿತರೆ ಕಾರಣದಿಂದ ವರ್ಷದಲ್ಲಿ 15-20 ದಿನಗಳು ದೊರೆಯುತ್ತಿಲ್ಲ. ನಮ್ಮಲ್ಲಿ ಹಲವರು ಸ್ವಯಂ ಉದ್ಯೋಗಿಗಳಾಗಲು ಮತ್ತು ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವರಾದರೂ ಭೂಮಿ ಮತ್ತು ಬಂಡವಾಳಗಳಿಲ್ಲ.
ಹೀಗಾಗಿ ನಾವುಗಳು ಕಡುಬಡತನ, ಅಪೌಷ್ಠಿಕತೆ ಎದುರಿಸುತ್ತಿದ್ದೇವೆ.

ಈ ದುಸ್ಥಿತಿಯೇ ನಮ್ಮನ್ನು ಪರಾವಲಂಬಿಗಳನ್ನಾಗಿಸಿ ಸಾಮಾಜಿಕ ದೌರ್ಜನ್ಯಕ್ಕೆ ತಳ್ಳಿದೆ. ಆದ್ದರಿಂದ ರಾಜ್ಯ ಸರಕಾರ ಈ ಸಾಮಾಜಿಕ ದೌರ್ಜನ್ಯದಿಂದ ಹೊರಬಂದು ಗೌರವದ ಬದುಕಿನ ಕಡೆ ಸಾಗುವಂತಾಗಲು ನಮ್ಮ ಎಲ್ಲ ಕುಟುಂಬಗಳ ಗಣತಿಗೆ ಕ್ರಮವಹಿಸಿ ಅಗತ್ಯ ಪುನರ್ವಸತಿಗೆ ಕ್ರಮವಹಿಸಲು ಹಕ್ಕೊತ್ತಾಯಗಳನ್ನು ಪರಿಗಣಿಸಲು ಮನವಿ ಮಾಡುವೆವು ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ, ಆನಂದ, ಮರಿಯಮ್ಮ, ತಿಮ್ಮಪ್ಪ, ಹೆಚ್ ಹುಲುಗಪ್ಪ, ಎ ಸ್ವಾಮಿ, ಹೆಚ್ ದುರ್ಗಮ್ಮ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here