ನೋ-ಸ್ಕಾಲ್ ಪೆಲ್ ವ್ಯಾಸೆಕ್ಟಮಿ ಪಾಕ್ಷಿಕಕ್ಕೆ ಚಾಲನೆ,

0
577

ಸಂಡೂರು:ನ:21:-ತಾಲೂಕಿನ ತಾಳೂರು ಗ್ರಾಮದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಇದೇ ನವಂಬರ್ 21 ರಿಂದ ಡಿಸೆಂಬರ್ 4 ರ ವರೆಗೆ ಆಚರಿಸಲಾಗುವ ನೋ-ಸ್ಕಾಲ್ ಪೆಲ್ ವ್ಯಾಸೆಕ್ಟೆಮಿ ಪಾಕ್ಷಿಕ (ಎನ್.ಎಸ್.ವಿ) ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು,

ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ವಿಧಾನವು ಅತ್ಯಂತ ಸರಳ ಮತ್ತು ಸುಲಭವಿದೆ, ಯಾವುದೇ ಗಾಯವಿಲ್ಲ, ಹೊಲಿಗೆ ಇಲ್ಲ, ಕೇವಲ ಹತ್ತು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ, ತಕ್ಷಣ ಮನೆಗೆ ಹೋಗ ಬಹುದು, ಶಸ್ತ್ರಚಿಕಿತ್ಸೆಯಿಂದ ಪುರುತ್ವಕ್ಕೆ ಯಾವುದೇ ದಕ್ಕೆ ಇರುವುದಿಲ್ಲ, ಶಸ್ತ್ರಚಿಕಿತ್ಸೆ ನಂತರ ಸಾದಾರಣವಾಗಿ ಎಲ್ಲ ಕೆಲಸಗಳನ್ನು ಮಾಡಬಹುದು, ಲೈಂಗಿಕ ಸಂಪರ್ಕ ಮಾಡುವಾಗ ಮೂರು ತಿಂಗಳು ಕಡ್ಡಾಯವಾಗಿ ನಿರೋಧ್ (ಕಾಂಡೋಮ್) ಬಳಸಬೇಕು, ವಿರ್ಯಾಣುಗಳು ವೀರ್ಯ ಕೋಶದಲ್ಲಿ ಉಳಿದಿರಬಹುದು ಅದಕ್ಕಾಗಿ ಕಾಂಡೋಮ್ ಬಳಸಬೇಕು, ಕಾಂಡೋಮ್ ಉಚಿತವಾಗಿ ದೊರೆಯಲಿವೆ, ಹಾಗೂ ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಕೊಂಡವರಿಗೆ ರೂ. 1,100 ಗಳನ್ನು ಪ್ರೋತ್ಸಾಹ ಧನವಾಗಿ ಸರ್ಕಾರ ನೀಡಲಿದೆ ಎಂದು ತಿಳಿಸಿದರು,

ಈ ಹದಿನೈದು ದಿನಗಳು ಜಾಗೃತಿಯನ್ನು ಮೂಡಿಸಿ ಫಲಾನುಭವಿಗಳನ್ನು ಪತ್ತೆ ಹಚ್ಚಿ ಎನ್.ಎಸ್.ವಿ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಿ, ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು, ಮಹಿಳೆಯರ ಶಸ್ತ್ರಚಿಕಿತ್ಸೆಗಿಂತ ಸರಳ ಇರುವ ಈ ವಿಧಾನವನ್ನು ಪತಿ ಅಳವಡಿಸಿಕೊಂಡಲ್ಲಿ ಮಹಿಳೆಯರ ಹೆಚ್ಚುಶ್ರಮ ಕೊಡುವುದನ್ನು ತಪ್ಪಿಸ ಬಹುದು, ಅಲ್ಲದೇ ಪತ್ನಿಗೆ ಬೊಜ್ಜು, ಪದೇ ಪದೇ ಹೆರಿಗೆ ತೊಂದರೆಗಳು ಇದ್ದಲ್ಲಿ ಪತಿಯೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕುಟುಂಬ ನಿಯಂತ್ರಣ ಮಾಡ ಬಹುದು, ಕುಟುಂಬ ನಿಯಂತ್ರಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ, ಮುಂದಿನ ದಿನಗಳಲ್ಲಿ, 140 ಕೋಟಿ ಜನಸಂಖ್ಯೆ ಹೊಂದಿ ಎರಡನೇ ಸ್ಥಾನದಲ್ಲಿರುವ ನಾವು ಮೊದಲ ಸ್ಥಾನಕ್ಕೆ ಏರಲಿದ್ದೇವೆ, ಜನ ಸಂಖ್ಯೆ ನಿಯಂತ್ರಣದಿಂದ ದೇಶದ ಅಭಿವೃದ್ಧಿ ಎಂಬುದನ್ನು ಅರಿಯೋಣ, ಈ ವರ್ಷದ ಘೋಷವಾಖ್ಯದಂತೆ “ಪುರುಷರು ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳುವ ಮೂಲಕ, ಸಹಭಾಗಿತ್ವವನ್ನು ವ್ಯಕ್ತ ಪಡಿಸುತ್ತಾ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ” ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ತಾಳೂರು ಪಂಚಾಯತಿ ಸದಸ್ಯರಾದ ಹೆಚ್.ಕನಕಪ್ಪ, ರುದ್ರಪ್ಪ, ಮುಖಂಡರಾದ ಅಳ್ಳದಪ್ಪ ನಾಡಿಗರು, ಸುರೇಶ್, ಬಿ.ನಾಗಪ್ಪ, ಮೂಕಣ್ಣ,ಕರಿಯಪ್ಪ,ವೀರೇಶಪ್ಪ,ಸಿದ್ದಪ್ಪ,ಕೋರಿ ಬಸವರಾಜ, ಮಲ್ಲಯ್ಯ ಅಕ್ಕಸಾಲಿ, ಬಸಯ್ಯ ಸ್ವಾಮಿ, ಕುಮಾರ ಸ್ವಾಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಹೆಚ್.ಬಸವರಾಜ, ಇತರರು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here