ಬರೆದಂತೆ ಬದುಕಿದ ಬಂಡಾಯ ಸಾಹಿತಿ ಪ್ರೊ. ಚಂಪಾ.

0
127

ದಾವಣಗೆರೆ ಜ.12: ನೇರ ನುಡಿಯ ಬಂಡಾಯ ಸಾಹಿತಿ, ತಾವು ಬರೆದಂತೆ ಬದುಕಿ ತೋರಿಸಿದ ವ್ಯಕ್ತಿತ್ವ ಚಂದ್ರಶೇಖರ್ ಪಾಟೀಲ್ ರವರದು ಎಂದು ಜಾನಪದ ವಿದ್ವಾಂಸರು, ಶಿಕ್ಷಣ ತಜ್ಞರು ಆದ ಡಾ. ಎಂ.ಜಿ ಈಶ್ವರಪ್ಪ ಹೇಳಿದರು,
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲ್ಲೂಕು ಕಸಾಪ ಸಂಯುಕ್ತಾಶ್ರಯದಲ್ಲಿ ನಿಧನರಾದ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್‍ರವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕನ್ನಡ ನಾಡು ನುಡಿಗೆ ಧಕ್ಕೆ ಬಂದಾಗಲೆಲ್ಲಾ ಬೀದಿಗಿಳಿದು ಹೋರಾಟ ಮಾಡಬಲ್ಲ ಮತ್ತು ಕನ್ನಡದ ನೆಲ-ಜಲ ಸಂರಕ್ಷಣೆಯ ಸಲುವಾಗಿ ಜೈಲಿಗೂ ಹೋಗಿ ಬಂದ ಹೋರಾಟಗಾರ ಚಂಪಾ, ತಮ್ಮ ಮೊನಚಾದ ಬರವಣಿಗೆಯ ಮೂಲಕ ಸಮಾಜದಲ್ಲಿರುವಂತಹ ಮೌಢ್ಯತೆಯನ್ನು ನೇರವಾಗಿ ವಿರೋಧಿಸುವ ಎದೆಗಾರಿಕೆ ಇದ್ದದ್ದು ಇವರಿಗೆ. ವ್ಯವಸ್ಥೆಯೊಡನೆ ಎಂದೂ ಒಪ್ಪಂದ ಮಾಡಿಕೊಳ್ಳದಿರುವ ಅಪರೂಪದ ವ್ಯಕ್ತಿತ್ವ ಅವರದು. ದಾವಣಗೆರೆ ಮತ್ತು ಹರಿಹರಕ್ಕೆ ನಿಕಟ ಸಂಪರ್ಕ ಹೊಂದಿದ್ದರು. ನೇರ ನುಡಿಯ ಬಂಡಾಯ ಸಾಹಿತಿ ತಾವು ಬರೆದಂತೆ ಬದುಕಿ ತೋರಿಸಿದ ವ್ಯಕ್ತಿತ್ವ ಇವರದು. ಅವರ ವಿಡಂಬನಾತ್ಮಕ ಬರವಣಿಗೆಯಲ್ಲಿ ಹಾಸ್ಯವು ಇರುತ್ತಿತ್ತು ಎಂದು ನುಡಿನಮನ ಸಲ್ಲಿಸಿದರು.

ಸಮಾಜದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಆಚರಿಸುತ್ತಿದ್ದ ಮೌಢ್ಯತೆಗಳನ್ನು ವಿರೋಧಿಸುತ್ತಿದ್ದರು. ವೈಚಾರಿಕ ಪ್ರಜ್ಞೆ ಸದಾ ಅವರಲ್ಲಿ ಜಾಗೃತವಾಗಿರುತ್ತಿತ್ತೆಂದು ಕ.ಸಾ.ಪ ಜಿಲ್ಲಾಧಕ್ಷ ಬಿ. ವಾಮದೇವಪ್ಪ ನುಡಿದರು. ನಿಕಟ ಪೂರ್ವ ಕ.ಸಾ.ಪ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ, ಪತ್ರಕರ್ತ ಬಿ.ಎನ್ ಮಲ್ಲೇಶ್, ಬಾ.ಮ ಬಸವರಾಜಯ್ಯ, ಡಾ. ಮಲ್ಲಿಕಾರ್ಜುನ್ ಕಲಮರಹಳ್ಳಿ, ನುಡಿನಮನ ಸಲ್ಲಿಸಿದರು.

ಕಾರ್ಯಾಕ್ರಮದಲ್ಲಿ ಡಾ. ಎಂ ಮಂಜಣ್ಣ, ಬಿ. ದಿಳ್ಳೆಪ್ಪ, ಸುಮತಿ ಜಯಪ್ಪ, ರುದ್ರಾಕ್ಷಿಬಾಯಿ, ಮಲ್ಲಮ್ಮ, ದಾಗಿನಕಟ್ಟೆ ಪರಮೇಶ್ವರಪ್ಪ, ಕೆ. ಕೆಂಚನಗೌಡ, ಎಸ್.ಆರ್ ಅಜ್ಜಪ್ಪ, ಜಿ.ಎಂ ನಾಗರಾಜ್, ಬಿ.ಎಸ್ ಜಗದೀಶ್, ಶಿವಲಿಂಗಯ್ಯ ಎಂ ಷಡಾಕ್ಷರಪ್ಪ, ಬಿ.ಎಂ ಮುರಿಗೆಯ್ಯ, ನಾಗವೇಣಿ ಎ.ಎಲ್, ವೀಣಾ ಕೃಷ್ಣಮೂರ್ತಿ, ಶೈಲಜಾದೇವಿ, ಹೆಚ್.ಎಂ ಸದಾನಂದ, ಎ ಸಿದ್ದಲಿಂಗನಗೌಡ, ರೇವಣಸಿದ್ದಪ್ಪ ಅಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here