ಶೀ ಗುರು ಬಸವೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯ ಕರ್ತವ್ಯಲೋಪ

0
316

ಕೊಟ್ಟೂರು : ಪಟ್ಟಣದ ಆರಾಧ್ಯ ದೈವ ಶ್ರೀಗುರುಬಸವೇಶ್ವರ ಸ್ವಾಮಿ ದೇವಸ್ಥಾನ ಅತೀ ಹೆಚ್ಚು ಭಕ್ತರನ್ನು ಹೊಂದಿದೆ. ನಾನಾ ರಾಜ್ಯದಿಂದ ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅಮವಾಸ್ಯೆ, ಹಬ್ಬ ಹರಿದಿನಗಳಲ್ಲಿ, ಜಾತ್ರೆ , ಕಾತೀಕೋತ್ಸವದಲ್ಲಿ ಭಕ್ತರಿಂದ ದಂಡೋಪ ದಂಡವಾಗಿ ಆಗಮಿಸಿ ದರ್ಶನ ಮತ್ತು ಆರ್ಶೀವಾದ ಪಡೆಯುತ್ತಾರೆ.

ಇಂತಹ ದೇವಸ್ಥಾನದಲ್ಲಿ ಹಿಂದಿನಿಂದಲೂ ಭಕ್ತರು ದೇಣಿಗೆ ರೂಪದಲ್ಲಿ ನೀಡಿದ ವಸ್ತುಗಳನ್ನು ಹರಾಜು ಮಾಡುವುದು ವಾಡಿಕೆ. ಅದರಂತೆ ಶ್ರೀಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ಹಳೆಯ ಕಬ್ಬಿಣದ ಸಾಮಾನುಗಳು, ತಾಮ್ರ,ಹಿತ್ತಾಳೆ ದೀಪಗಳು, ಹಿತ್ತಾಳೆಯ ನಂದಿಕೋಲು ಸಾಮಾನುಗಳನ್ನು ಹರಾಜು ಹಾಕಿದ್ದು, ಈ ಹರಾಜು ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ.? ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪಿ ಶಾಂತ ಹರಾಜು ಸಾಮಾನುಗಳನ್ನು ಸ್ಟಾಕ್ ರಿಜಿಸ್ಟರ್ ಮೆಂಟೇನ್ ಮಾಡದೇ, ಸೂಕ್ತ ದ್ವಾರದ ಅನುಮತಿ ಇಲ್ಲದೆ ನಿಯಮಬಾಹಿರವಾಗಿ, ಸರ್ಕಾರದ ಹರಾಜು ಮಾರ್ಗಸೂಚಿಗಳನ್ನು ತಮಗೆ ಅನುಕೂಲವಾಗುವಂತೆ ಹರಾಜನ್ನು ನಡೆಸಿದ್ದಾರೆ. ಹರಾಜು ಪ್ರಕ್ರಿಯೆ ಮುಗಿದ ನಂತರ, ಆಗಿರುವ ಮೊತ್ತವನ್ನು ಸ್ಥಳದಲ್ಲಿಯೇ ದೇವಸ್ಥಾನಕ್ಕೆ ಕಟ್ಟಿ ತೆಗೆದುಕೊಳ್ಳುವ, ಮುಂಗಡವಾಗಿ 25000/- ಬ್ಯಾಂಕಿಗೆ ಜಮಾ ಮಾಡಿದ ನಂತರ ಹರಾಜು ಪ್ರಕ್ರಿಯೆ ಕೂಗಲು ಅರ್ಹರು ಎಂಬ ನಿಯಮಗಳನ್ನು ಆದೇಶದಲ್ಲಿ ನಮೂದಿಸಿದ್ದರೂ ಕೂಡ, ಹರಾಜು ಪ್ರಕ್ರಿಯೆ ಮುಗಿದ ನಂತರ ಹರಾಜಾದ ಮೊತ್ತವನ್ನು ಸ್ಥಳದಲ್ಲಿಯೇ ನೀಡಿ, ಸಾಮಾನುಗಳನ್ನು ವಿಲೇ ಮಾಡುವ ನಿಯಮವಿದೆ.

ಆದರೆ ಕಾರ್ಯನಿರ್ವಾಹಕ ಅಧಿಕಾರಿ ಪಿ ಶಾಂತ ಇದ್ಯಾವುದನ್ನು ಮಾಡದೇ, ಹರಾಜು ಮೊತ್ತವನ್ನು ಬ್ಯಾಂಕ್‍ಗೆ ಜಮಾ ಮಾಡದೇ ಕರ್ತವ್ಯಲೋಪ ಎಸಗಿದ್ದಾರೆ. ಸಾರ್ವಜನಿಕ ಬಹಿರಂಗ ಹರಾಜು ಪ್ರಕಟಣೆಯಲ್ಲಿ ಪತ್ರಿಕಾ ಮಾಧ್ಯಮದವರಿಗೆ ಸೂಕ್ತ ಮಾಹಿತಿಗಾಗಿ ಎಂದು ನಮೂದಿಸಿರುವ ಪ್ರತಿಯಲ್ಲಿ ಸರಿಯಾದ ಮಾಹಿತಿಗಳನ್ನು ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಪಿ ಶಾಂತ ಅವರನ್ನು ಈ ಬಗ್ಗೆ ಕೇಳಿದಾಗ, ಸಾರ್ವಜನಿಕರು ಪತ್ರಿಕಾ ಮಾಧ್ಯಮದವರು ಈ ಹರಾಜು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ ಎಂದರೆ ತಡವರಿಸುತ್ತಾರೆ.
ಹರಾಜು ದಿನಾಂಕ 10-07-2024 ರಂದು ಮುಗಿದಿದ್ದರೂ ಸಹ 10.08.2024 ಹಣ ಕಟ್ಟದೇ ಹರಾಜಿನ ಅಂದಾಜು ಮೊತ್ತವಾದ ಏಳು ಲಕ್ಷದ ಮೂವತ್ತೊಂಬತ್ತು ಸಾವಿರ ರೂ. ಹಣವನ್ನು ಇನ್ನೂ ಸಹ ತಮ್ಮ ಸುಪರ್ದಿಯಲ್ಲೇ ಇಟ್ಟುಕೊಂಡಿದ್ದಾರೆ.

ಕಾರ್ಯನಿರ್ವಾಹಕ ಅಧಿಕಾರಿಗಳ ಕರ್ತವ್ಯಲೋಪ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ ಅನುಮಾನ ವ್ಯಕ್ತಪಡಿಸಿ ಧರ್ಮಕರ್ತ ಶೇಖರಯ್ಯ ಕಾರ್ಯನಿರ್ವಾಹ ಅಧಿಕಾರಿಗಳಿಗೆ ಲಿಖಿತ ಪತ್ರದ ಮೂಲಕ ಮಾಹಿತಿ ಕೇಳಿದ್ದಾರೆ.
ಇವುಗಳನ್ನೆಲ್ಲಾ ಗಮನಿಸಿ ಸಾರ್ವಜನಿಕರಾದ ಕೊಟ್ರೇಶ್ ಬಿ. , ಶಿವರಾಜ್, ಪ್ರವೀಣ, ರಮೇಶ್ ಇವರುಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಪತ್ರಿಕೆ ಮೂಲಕ ಒತ್ತಾಯಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here