ಮೇ 26 ರಂದು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ- ಬಸವ ಜಯಂತಿ ಆಚರಣೆ;ಸತೀಶ್ ಚಿತ್ರಿಕಿ

0
23

ಸಂಡೂರು: ಮೇ: 14 : ಸಂಡೂರು ತಾಲೂಕು ವೀರಶೈವ ಲಿಂಗಾಯತ ಸಂಘ, ಸಂಡೂರು ವತಿಯಿಂದ 2023-24ನೇ ಸಾಲಿನಲ್ಲಿ ಉತ್ತೀರ್ಣರಾದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಸವಜಯಂತಿ ಕಾರ್ಯಕ್ರಮವನ್ನು ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ದಿನಾಂಕ: 26.05.2024 ಹಮ್ಮಿಕೊಳ್ಳಲಾಗಿದೆ ಪ್ರತಿಯೊಬ್ಬ ಸಮಾಜಬಾಂಧವರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಾಲೂಕು ಘಟಕದ ಅಧ್ಯಕ್ಷ ಚಿತ್ರಿಕಿ ಸತೀಶ್ ತಿಳಿಸಿದರು.

ಅವರು ಇಂದು ಪಟ್ಟಣದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಹಾಗೂ ಬಸವಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ತತಿ ವರ್ಷದಂತೆ ಈ ವರ್ಷವೂ ಸಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇಡೀ ಸಮಾಜ ಬಾಂಧವರು ಸಹಕರಿಸಬೇಕು, ಕಾರಣ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಕೇವಲ ವೇದಿಕೆ ಕಾರ್ಯಕ್ರಮವನ್ನು ಮಾತ್ರ ಹಮ್ಮಿಕೊಳ್ಳಲಾಗಿದೆ ಯಾವುದೇ ಮೆರವಣಿಗೆ ಇರುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪಿ.ರವಿಕುಮಾರ ಮಾತನಾಡಿ ಎಸ್.ಎಸ್.ಎಲ್.ಸಿ.ಯಲ್ಲಿ 85% ಹಾಗೂ ಪಿ.ಯು.ಸಿ.ಯಲ್ಲಿ 80% ಪಡೆದ ಮಕ್ಕಳನ್ನು ಸನ್ಮಾನಿಸಲಾಗುವುದು ಅಲ್ಲದೆ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ವ್ಯಕ್ತಿಗಳನ್ನು ಸಹ ಸನ್ಮಾನಿಸಲಾಗುವುದು, ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಪುರಸ್ಕಾರಕ್ಕೆ ಅರ್ಜಿಸಲ್ಲಿಸುವ ವಿದ್ಯಾರ್ಥಿಗಳು ದಿನಾಂಕ: 22.05.2024ರ ಒಳಗೆ ಎರಡು ಪಾಸ್ ಪೋರ್ಟ ಸೈಜ್ ಪೋಟೋಗಳು, ಆಧಾರ್ ಕಾಢ್, ಪಾಸಾದ ಅಂಕಪಟ್ಟಿ ಜಿರಾಕ್ಸ ಪ್ರತಿಗಳನ್ನು ಸಂಘದ ಕಛೇರಿಯಲ್ಲಿ ಸಲ್ಲಿಸಬೇಕು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ಒಳಗೆ, ಅಲ್ಲದೆ ದಿನಾಂಕ: 26.04.2024 ರಂದುಬೆಳಿಗ್ಗೆ 9 ಗಂಟೆ ತಮ್ಮ ಪಾಲಕರೊಂದಿಗೆ ಆಗಮಿಸುವ ಮೂಲಕ ಅನುಮತಿ ಪತ್ರವನ್ನು ಪಡೆದು ಸಭೆಯಲ್ಲಿ ಹಾಜರಾಗಬೇಕು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಹೆಚ್. ವೀರೇಶ್ ಬೆಳಿಗ್ಗೆ 9 ಗಂಟೆಯಿಂದ ಪಟ್ಟಣದ ಅದರ್ಶ ಸಮುದಾಯ ಕೇಂದ್ರದಲ್ಲಿ ಪ್ರಾರಂಭವಾಗುವುದು ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಿವಾನಂದ ಮಠದ ಶಿವಾನಂದ ಶ್ರೀಗಳು ಸಾನಿಧ್ಯ ವಹಿಸುವರು, ಸಂಡೂರಿನ ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಸಹ ಸಾನಿಧ್ಯ ವಹಿಸುವರು, ಅಧ್ಯಕ್ಷತೆಯನ್ನು ಸಮಾಜದ ಗಣ್ಯರಾದ ಕೆ.ಎಸ್.ನಾಗರಾಜ ವಹಿಸುವರು, ಅತಿಥಿಗಳಾಗಿ ಬಿಕೆಜಿ ಗಣಿ ಕಂಪನಿಯ ಮಾಲೀಕರಾದ ಬಿ.ನಾಗನಗೌಡ ಅಗಮಿಸುವರು, ಉದ್ಘಾಟನೆಯನ್ನು ಸ್ಮಯೋರ್ ಕಂಪನಿಯ ಮುಖ್ಯಸ್ಥರಾದ ಬೆಹರ್ಜಿ ಘೋರ್ಪಡೆ ನೆರವೇರಿಸುವರು, ಅಲ್ಲದೆ ಶ್ರೀಗಳಿಂದ ವಿಶೇಷ ಉಪನ್ಯಾಸ ನಡೆಸಲಾಗುವುದ, ಅಲ್ಲದೆ ಯು.ಪಿ.ಎಸ್.ಸಿ ಯಲ್ಲಿ ಸಾಧನೆ ಮಾಡಿದ ವಿಜಯಕುಮಾರ ಅವರಿಗೆ ವಿಶೇಷ ಸನ್ಮಾನವನ್ನು ನಡೆಸಲಾಗುವುದು.

ಸಂಜೆಯೂ ಸಹ ವೇದಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಳ್ಳಾರಿಯ ಜಿಲಾನ್ ಭಾಷಾ ತಂಡದಿಂದ ವಿಶೇಷ ವಚನ ನೃತ್ಯ ರೂಪಕ, ಜನಪದ ನೃತ್ಯ ರೂಪಕಗಳನ್ನು ನಡೆಸಿಕೊಡುವರು, ಕಾರ್ಯಕ್ರಮದ ಸಾನಿಧ್ಯವನ್ನು ಯಶವಂತನಗರದ ಶ್ರೀ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಅಲ್ಲದೆ ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗುಡುಮುಣುಗು ತಿಪ್ಪೇಸ್ವಾಮಿ ಉದ್ಘಾಟನೆ ನಡೆಸಿಕೊಡುವರು, ಡಾ. ರಾಮಶೆಟ್ಟಿಯವರಿಗೆ ವಿಶೇಷ ಸನ್ಮಾನವನ್ನು ನೆರವೇರಿಸಲಾಗುವುದು, ಅಲ್ಲದೆ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಉತ್ತಮ ಪ್ರಶಸ್ತಿಗೆ ಭಾಜನರಾದವರಿಗೆ ಸನ್ಮಾನಿಸಲಾಗುವುದು, ಅದ್ದರಿಂದ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಅಗಮಿಸಬೇಕು, ಕಡ್ಡಾಯವಾಗಿ ಪಾಲಕರನ್ನು ಕರೆದುಕೊಂಡು ಬರುವ ಮೂಲಕ ಯಶಸ್ವಿಗೊಳಿಸಬೇಕು, ಹೆಚ್ಚಿನ ಮಾಹಿತಿಗಾಗಿ 8867788929, 9448060281, 9886934097, 9448025132 ಇವರಿಗೆ ಸಂಪರ್ಕಿಸುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು.

ಸಮಾರಂಭದಲ್ಲಿ ನಿರ್ದೇಶಕರಾದ ಕರಡಿಯರ್ರಿಸ್ವಾಮಿ, ಭುವನೇಶ್ ಮೇಟಿ, ಗೌರವಾಧ್ಯಕ್ಷ ಮೇಲುಸೀಮೆ ಶಂಕ್ರಪ್ಪ, ಸುರೇಶ್ ಗೌಡ, ಎಸ್.ಟಿ.ಡಿ. ರುದ್ರಗೌಡ ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here