ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳಲ್ಲಿ ತಂಬಾಕು ಕಾಯ್ದೆ ಉಲ್ಲಂಘನೆಗೆ ದಂಡ.

0
86

ದಾವಣಗೆರೆ, ಸೆ.16 : ಹೊನ್ನಾಳಿ ಪಟ್ಟಣ ಹಾಗೂ ನ್ಯಾಮತಿ ತಾಲ್ಲೂಕಿನ ಸವಳಂಗದಲ್ಲಿ ಗುರುವಾರ ತಂಬಾಕು ನಿಯಂತ್ರಣ ಕೋಶ ವತಿಯಿಂದ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆಯ 36 ಪ್ರಕರಣಗಳನ್ನು ದಾಖಲಿಸಿ, 3500 ರೂ. ದಂಡ ವಿಧಿಸಲಾಗಿದೆ.
ಕಾಯ್ದೆ 4 ರನ್ವಯ 23 ಪ್ರಕರಣ ವರದಿಯಾಗಿದ್ದು, 2250 ರೂ ದಂಡ ವಸೂಲಿಯಾಗಿದೆ. ಕಾಯ್ದೆ 6ಎ ರನ್ವಯ 11 ಪ್ರಕರಣ ದಾಖಲಾಗಿದ್ದು, 1100 ರೂ., ಕಾಯ್ದೆ 6ಬಿ ರನ್ವಯ 2 ಕೇಸ್ ದಾಖಲಾಗಿದ್ದು 200 ರೂ. ದಂಡ ಸೇರಿದಂತೆ ತಂಬಾಕು ದಾಳಿಯಲ್ಲಿ ಒಟ್ಟು 3500 ರೂ. ದಂಡ ವಸೂಲಿಯಾಗಿದೆ.
ದಾಳಿಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ.ಆರ್.ಬಂಟಿ, ಜಿಲ್ಲಾ ಸಲಹೆಗಾರ ಸತೀಶ ಕಲಹಾಳ, ಸಮಾಜ ಕಾರ್ಯಕರ್ತ ದೇವರಾಜ.ಕೆ.ಪಿ., ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ.ಎಂ.ಹೆಚ್., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರೂಪಲಾ ನಾಯ್ಕ, ಶಿಕ್ಷಣ ಇಲಾಖೆ ಸಿಆರ್‍ಪಿ ಗಳಾದ ಮಹೇಶ್, ಶಿವರಾಜ ಪಾಟೀಲ್, ಸವಳಂಗ ಉಪ ಪೊಲೀಸ್ ಠಾಣೆ ಎಎಸ್‍ಎ ಸುರೇಶ್.ಹೆಚ್.ಟಿ., ಹೊನ್ನಾಳಿ ಪೊಲೀಸ್ ಠಾಣೆ ಹೆಚ್.ಸಿ ಗುರುಬಸಪ್ಪ.ಎಂ.ಆರ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here