ವಿತರಕರು ಮತ್ತು ಪತ್ರಕರ್ತರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ- ವಿ.ಎಂ. ನಾಗಭೂಷಣ

0
19

ಸಂಡೂರು: ಹಲವಾರು ಮಹಾನೀಯರ ದಿನಾಚರಣೆಗಳನ್ನು ಆಚರಿಸುತ್ತೇವೆ, ಅದರೆ ಜೀವನ ಪೂರ್ತಿ ವಿಶ್ವಾಂತಿ ಇಲ್ಲದೆ ಅವಿಶ್ರಾಂತವಾಗಿ ದುಡಿಯುವ, ಜನರಿಗೆ ನಿತ್ಯ ಸುದ್ದಿಯನ್ನು ಮುಟ್ಟಿಸುವ ಪತ್ರಿಕಾ ವಿತರಕರನ್ನು ನಾವು ಮರೆಯುತ್ತಿದ್ದೇವೆ ಅವರ ದಿನಾಚರಣೆಯನ್ನು ಆಚರಿಸುವ ಮೂಲಕ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ಪತ್ರಕರ್ತರಾದ ವಿ.ಎಂ. ನಾಗಭೂಷಣ ತಿಳಿಸಿದರು.

ಅವರು ಬೆಳಗಿನ ಜಾವ ಪತ್ರಿಕಾ ವಿತರಕರು ಹಮ್ಮಿಕೊಂಡಿದ್ದ ವಿತರಕರ ದಿನಾಚರಣೆಯನ್ನು ಕುರಿತು ಮಾತನಾಡಿ ಪತ್ರಿಕೆಗೆ ವರದಿಗಾರರೊಂದಿದ್ದರೆ ಸಾಲದು, ಪತ್ರಿಕಾ ವಿತರಕರು ಇದ್ದರೆ ಮಾತ್ರ ಜಗತ್ತಿನಲ್ಲಿಯ ಸುದ್ದಿಗಳು ಸಾರ್ವಜನಿಕರಿಗೆ ಮುಟ್ಟಲು ಸಾಧ್ಯ, ವತರಕ, ವರದಿಗಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ , ಒಬ್ಬರಿಗೆ ಒಬ್ಬರು ಅನೋನ್ಯವಾಗಿದ್ದರೆ ಸಾರ್ವಜನಿಕರಿಗೆ ಸುದ್ದಿಗಳು ಮುಟ್ಟಲು ಸಾಧ್ಯ, ಇಲ್ಲವಾದಲ್ಲಿ ಪತ್ರಿಕೆಗಳನ್ನು ಖರೀದಿಸುವವರೇ ಇಲ್ಲದಂತಾಗುವುದು ಖಚಿತ ಎಂದರು.

ಈ ಸಂದರ್ಭದಲ್ಲಿ ಕಳೆದ 30 ವರ್ಷಗಳಿಂದ ಪಟ್ಟಣಕ್ಕೆ ಬರುವ ಎಲ್ಲಾ ದಿನಪತ್ರಿಕೆಗಳ ವಿತರಕರು, ಪುಸ್ತಕಾಲಯದ ಮಾಲೀಕರು ಅದ ವೀರಣ್ಣ ಅವರು ವಿತರಕರ ದಿನಾಚರಣೆಯ ಅಂಗವಾಗಿ ಕೇಕ್ ಕತ್ತರಿಸುವ ಮೂಲಕ ಎಲ್ಲಾ ವಿತರಕರಿಗೆ ಪತ್ರಕರ್ತರಿಗೆ ಸಿಹಿ ಹಂಚಿದರು.

ಹಿರಿಯ ವರದಿಗಾರರಾದ ಅರಳಿ ಕುಮಾರಸ್ವಾಮಿಯವರು ಮಾತನಾಡಿ ಪತ್ರಿಕೆ ಎಂದರೆ ಜೋಡೆತ್ತುಗಳ ಸಂಗಮವೇ ಅಗಿದೆ, ಕಾರಣ ವರದಿಗಾರ ಮತ್ತು ವಿತರಕ ಎರಡು ಗಾಲಿಗಳಾಗಿ ಕಾರ್ಯನಿರ್ವಹಿಸಿದಾಗ ಚಕ್ಕಡಿ ಮುಂದೆ ಹೋಗುತ್ತದೆ, ಅದರಂತೆ ಪತ್ರಕರ್ತ ಮತ್ತು ಸಂಪಾದಕರು ಅಷ್ಟೇ ಪ್ರಮುಖ ಕಾರಣ ಸಮಾಜದ ಅಂಕುಡೊಂಕುಗಳನ್ನು ತಿದ್ದುವವರು ಅಗಿದ್ದಾರೆ, ಅದ್ದರಿಂದ ವಿತರಕರನ್ನು ಎಂದೂ ಸಹ ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ ವಿಜಯಕುಮಾರ್, ಕೊಟ್ರೇಶ್, ಮಣಿಕಂಠ, ಕೊಟ್ರೇಶ್, ರಾಜು ಹಿರಿಯ ನಿವೃತ್ತ ಮುಖ್ಯಗುರುಗಳಾದ ಎ.ದಿವಾಕರ್ ಆಚಾರ್,ಅರ್. ಶಿವರಾಮ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here