“ರಾಷ್ಟ್ರೀಯ ನವಜಾತ ಶಿಶುವಾರ” ಆಚರಣೆಗೆ ಚಾಲನೆ,

0
425

ತಾಲೂಕಿನ ಕುರೇಕುಪ್ಪ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನವಂಬರ್ 15 ರಿಂದ 21 ರವರೆಗೆ ಆಚರಿಸಲಾಗುವ ” ರಾಷ್ಟ್ರೀಯ ನವಜಾತ ಶಿಶುವಾರ” ಸಪ್ತಾಹ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,

ಕಾರ್ಯಕ್ರಮ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಶಿಶು ಜನನದ ನಂತರದ 42 ದಿನಗಳು ಅತೀ ಮಹತ್ವದ ದಿನಗಳಾಗಿರುತ್ತವೆ, ನವಜಾತ ಶಿಶುವಿನ ಮರಣ ತಪ್ಪಿಸಲು ಬೇಗನೆ ಜನನ ಕಾಲದಲ್ಲಿ ಹುಟ್ಟಿನ ದೋಷಗಳನ್ನು ಪತ್ತೆ ಹಚ್ಚುವುದು, ಕಡಿಮೆ ತೂಕ ಪತ್ತೆ ಹಚ್ಚುವುದು, ಎದೆ ಹಾಲು ಕುಡಿಯುತ್ತಿರುವುದನ್ನು ಗಮನಿಸಿವುದು, ಮೂತ್ರ ವಿಸರ್ಜನೆ, ಉಸಿರಾಟದ ಮತ್ತು ಲವಲವಿಕೆಯ ಚಲನವಲನಗಳನ್ನು ಗಮನಿಸುವುದು, ಗಂಡಾಂತರ ಎಂದು ಕಂಡು ಬಂದರೆ ಆಶಾ ಕಾರ್ಯಕರ್ತೆಯರ ಸಹಕಾರದಿಂದ ಎಸ್.ಎನ್.ಸಿ.ಯು ಕೇಂದ್ರಗಳಿಗೆ ದಾಖಲಾಗ ಬೇಕು, ಎಲ್ಲಾ ಹೆರಿಗೆಗಳನ್ನು ಅಸ್ಪತ್ರೆಯಲ್ಲೆ ಮಾಡಿಸ ಬೇಕು ಮತ್ತು ನಲವತ್ತೆಂಟು ಗಂಟೆ ಆಸ್ಪತ್ರೆಯಲ್ಲೆ ಇದ್ದು ಜೀರೋ ಡೋಸ್ ಲಸಿಕೆ ಪಡೆದು ಕೊಂಡು ಮನೆಗೆ ಬರಬೇಕು, ಮನೆಗೆ ಬಂದ ಮೇಲೆ ಶಿಶುಗಳಿಗೆ ಬರೆ ಹಾಕುವ ನ್ಯಾಮಾಚಾರ ಮಾಡಬಾರದು, ಜೇನು,ಔಡಲ ಎಣ್ಣೆ ಇತ್ಯಾದಿ ಎನನ್ನೂ ಕೊಡಬಾರದು, ತಾಯಿಯ ಎದೆ ಹಾಲು ಮಾತ್ರ ಆರು ತಿಂಗಳ ವರೆಗೆ ತಪ್ಪದೇ ಕೊಡಬೇಕು, ನಂತರ ಎದೆಹಾಲಿನೊಂದಿಗೆ ಪೂರಕ ಆಹಾರ ಜೊತೆ ಗೂಡಿಸಬೇಕು, ಶಿಶುಗಳಿಗೆ ನ್ಯುಮೋನಿಯಾ ಮತ್ತು ಅತಿಸಾರ ಭೇದಿ ಕಾಣಿಸಿಕೊಂಡಾಗ ವ್ಯವಸ್ಥಿತವಾಗಿ ನಿಭಾಯಿಸಬೇಕು, ಅಪಾಯದ ಮುನ್ಸೂಚನೆ ಕಂಡಲ್ಲಿ ವೈದ್ಯರಲ್ಲಿ ತಪಾಸಣೆಗೆ ಹಾಜರಾಗಬೇಕು, ಬೆಳಗಿನ ಮತ್ತು ಸಂಜೆ ಸೂರ್ಯನ ಕಿರಣಗಳು ಬೀಳುವ ಹಾಗೆ ಹೊರಗಡೆ ಶಿಶುಗಳನ್ನು ಕರೆದುಕೊಂಡು ಬರಬೇಕು, ಆಶಾ ಕಾರ್ಯಕರ್ತೆಯರು ಮನೆ ಬೇಟಿ ಸಮಯದಲ್ಲಿ ಶಿಶುವಿನ ಅರೈಕೆ ಬಗ್ಗೆ ಮಾಹಿತಿ ನೀಡಿ ತೂಕ ಮಾಡಿ ಬೆಳವಣಿಗೆ ಪಟ್ಟಿ ಸರಿ ಇರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು,
ಈ ಎಲ್ಲಾ ಮಾಹಿತಿ ಒದಗಿಸಲು ಮತ್ತು ನವಜಾತ ಶಿಶು ಮರಣಗಳನ್ನು ತಪ್ಪಿಸಲು ಈ ಏಳು ದಿನಗಳು ತಾಯಂದಿರಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು,

ಹಾಗೇ ಆಶಾ ಪೆಸಿಲಿಟೇಟರ್ ಬಸಮ್ಮ ಮಾತನಾಡಿ ಮನೆ ಬೇಟಿಯಲ್ಲಿ ಶಿಶು ಮತ್ತು ತಾಯಿಯ ಆರೈಕೆ ಉತ್ತಮವಾಗಿರ ಬೇಕು, ಶಿಶು ಹಾಲು ಕುಡಿಯಲು ತೊಂದರೆಗಳಿದ್ದರೆ ನಮಗೆ ಮಾಹಿತಿ ನೀಡಿ, ತಕ್ಷಣ ನಿಮ್ಮ ಸೇವೆಗೆ ನಾವು ಬರಲಿದ್ದೇವೆ ಎಂದು ಮನವಿ ಮಾಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಪೆಸಿಲಿಟೇಟರ್ ಬಸಮ್ಮ, ಆಶಾ ಕಾರ್ಯಕರ್ತೆ ನೀಲಮ್ಮ, ಸುಶೀಲಮ್ಮ, ತಿಮ್ಮಕ್ಕ, ಅಂಗನವಾಡಿ ಕಾರ್ಯಕರ್ತೆ ದೊಡ್ಡ ಬಸಮ್ಮ, ಧರ್ಮಸ್ಥಳ ಸಂಘದ ಕೋಅರ್ಡಿನೇಟರ್ ಗೀತಾ, ಗರ್ಭಿಣಿ ತಾಯಂದಿರು ಲಕ್ಷ್ಮಿ, ಕಾವೇರಿ, ಹುಲಿಗೆಮ್ಮ, ಸುಜಾತ,ಇಂದ್ರಮ್ಮ, ಸಹಾಯಕಿ ವಿಜಯಲಕ್ಷ್ಮಿ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here