Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಕೊಪ್ಪಳ Archives - Hai Sandur kannada fortnightly news paper https://haisandur.com/category/ಕೊಪ್ಪಳ-2/ Hai Sandur News.Karnataka India Sat, 27 Apr 2024 09:00:23 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಕೊಪ್ಪಳ Archives - Hai Sandur kannada fortnightly news paper https://haisandur.com/category/ಕೊಪ್ಪಳ-2/ 32 32 ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ. https://haisandur.com/2024/04/27/%e0%b2%96%e0%b3%8a%e0%b2%9f%e0%b3%8d%e0%b2%9f%e0%b2%bf-%e0%b2%a6%e0%b2%be%e0%b2%96%e0%b2%b2%e0%b3%86-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%b8%e0%b2%bf-%e0%b2%ac%e0%b2%bf/ https://haisandur.com/2024/04/27/%e0%b2%96%e0%b3%8a%e0%b2%9f%e0%b3%8d%e0%b2%9f%e0%b2%bf-%e0%b2%a6%e0%b2%be%e0%b2%96%e0%b2%b2%e0%b3%86-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%b8%e0%b2%bf-%e0%b2%ac%e0%b2%bf/#respond Sat, 27 Apr 2024 09:00:21 +0000 https://haisandur.com/?p=34977 ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಹಾಗೂ ರೌಡಿಶೀಟರ್ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರ ವಿರುದ್ಧ ದೂರು ದಾಖಲಿಸಿಕೊಂಡ ಆಹಾರ ಇಲಾಖೆ ತನಿಖೆ ನಡೆಸಿ, ದಂಡವಸೂಲಿ ಮಾಡಿದ ಪ್ರಕರಣವು ಜರುಗಿದೆ. ಹತ್ತು ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆಗಿರುವ ಹಾಗೂ ರೌಡಿ ಶೀಟರ್ ಆಗಿರುವ ಬಿಜೆಪಿ ಮುಖಂಡ ಮಹಿಬೂಬ್ ಸಾಬ್ ಮುಲ್ಲಾ ಮತ್ತು ಈತನ ಹೆಂಡತಿ ಸಾಜೀದಾ ಬೇಗಂ […]

The post ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ. appeared first on Hai Sandur kannada fortnightly news paper.

]]>
ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಹಾಗೂ ರೌಡಿಶೀಟರ್ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರ ವಿರುದ್ಧ ದೂರು ದಾಖಲಿಸಿಕೊಂಡ ಆಹಾರ ಇಲಾಖೆ ತನಿಖೆ ನಡೆಸಿ, ದಂಡವಸೂಲಿ ಮಾಡಿದ ಪ್ರಕರಣವು ಜರುಗಿದೆ.

ಹತ್ತು ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆಗಿರುವ ಹಾಗೂ ರೌಡಿ ಶೀಟರ್ ಆಗಿರುವ ಬಿಜೆಪಿ ಮುಖಂಡ ಮಹಿಬೂಬ್ ಸಾಬ್ ಮುಲ್ಲಾ ಮತ್ತು ಈತನ ಹೆಂಡತಿ ಸಾಜೀದಾ ಬೇಗಂ ಈ ಇಬ್ಬರು ದಂಪತಿಗಳು ಮತ್ತು ಇವರ ಕುಟುಂಬವು ಆರ್ಥಿಕವಾಗಿ ಎಲ್ಲಾ ರೀತಿಯಿಂದಲೂ ಸಬಲರಾಗಿದ್ದು, ಸದರಿ ಕುಟುಂಬದವರು ಐಶಾರಾಮಿ ಜೀವನ‌ ನೆಡೆಸುತ್ತಿರುವುದರ ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಕಾಲೇಜ್ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅಲ್ಲದೇ ಎ.ಸಿ, ಟೆಲಿವಿಜನ್, ಕಂಪ್ಯೂಟರ್, ಲ್ಯಾಪ್ ಟಾಪ್, ವಾಷಿಂಗ್ ಮಷಿನ್ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಓಡವೆಗಳು ಮತ್ತು ಸಾವಿರಾರು ರೂಪಾಯಿ ಹಾಗೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೊಬೈಲ್ ಗಳನ್ನು ಹಾಗೂ ಟೊಯೊಟಾ ಇನ್ನೊವಾ ಕ್ರಿಸ್ಟಾ ಹಾಗೂ ಮಾರುತಿ ಸ್ವಿಷ್ಟ್ ಡಿಜೈರ್ ಕಾರುಗಳನ್ನು ಹಾಗೂ 2 ಲಾರಿ, 1 ಟಾಟಾ ಎ.ಸಿ.ಇ ಮಿನಿ ಟ್ರಕ್ ಸೇರಿದಂತೆ ಹಲವಾರು ವಾಣಿಜ್ಯ ವಾಹನಗಳನ್ನು ಹೊಂದಿದ್ದಾರೆ. ಇದರ ಜೊತೆಯಲ್ಲಿ ಎಂ.ಡಿ.ಎಸ್ ಡೆಕೋರೇಟರ್ಸ್ ,ಸಿದ್ಧಾಪುರ ಎಂಬ ಕೊಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ, ಕೊಟ್ಯಾಂತರ ರೂಪಾಯಿ ವಹಿವಾಟು ನೆಡೆಯುತ್ತಿರುವ ಜಿ.ಎಸ್.ಟಿ. ನಂಬರ್ ಗಳನ್ನು ಹೊಂದಿರುವ ವ್ಯವಾಹರಗಳನ್ನು ನಡೆಸುತ್ತಿರುವುದಲ್ಲದೇ ಹಲವಾರು ಎಕರೆ ಭೂಮಿಯನ್ನು ಸಹ ಹೊಂದಿದ್ದಾರೆ. ಹೀಗಾಗಿ ಇವರು ಯಾವುದೇ ರೀತಿಯಿಂದಲೂ ಬಿಪಿಎಲ್ (BPL) PHH ಪಡಿತರ ಚೀಟಿ ಪಡೆಯುವುದಕ್ಕೆ ಅರ್ಹತೆ ಹೊಂದಿರುವುದಿಲ್ಲಾ ಆದಾಗ್ಯೂ ಸಹ ಇವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತು ಸುಳ್ಳು ಮಾಹಿತಿಗಳನ್ನು ಸರಕಾರಕ್ಕೆ ಸಲ್ಲಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅನಧಿಕೃತವಾಗಿ “200100275238” ನಂಬರಿನ ಬಿಪಿಎಲ್ (BPL) PHH ಪಡಿತರ ಚೀಟಿ ಪಡೆದಿರುತ್ತಾರೆ. ಅಲ್ಲದೇ ಈ ಕುಟುಂಬದ ಮುಖ್ಯಸ್ಥನಾಗಿರುವ ಮಹಿಬೂಬ್ ಮುಲ್ಲಾ ಈತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಸಮಾಜದಲ್ಲಿ ಶಾಂತಿ ಕದಡಿ, ಅಶಾಂತಿ ಸೃಷ್ಟಿಸುವ ಹಾಗೂ ದೊಂಬಿ ಗಲಭೆ, ಗಲಾಟಿ ಎಬ್ಬಿಸುವ ವ್ಯಕ್ತಿತ್ವ ಹಾಗೂ ಜನಗಳ ಮೇಲೆ ದೌರ್ಜನ್ಯ ನೆಡೆಸುವು ವ್ಯಕ್ತಿತ್ವ ಹೊಂದಿದ್ದರಿಂದ ಮತ್ತು ಹಲವಾರು ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರಿಂದ ಈತನನ್ನು ರೌಡಿಶೀಟರ್ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕಾರಣ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕೂಡಲೇ ಇವರು ಹೊಂದಿರುವ ಅನಧಿಕೃತ ಬಿಪಿಎಲ್ (BPL) PHH ಪಡಿತರ ಚೀಟಿಯನ್ನು ರದ್ದುಪಡಿಸಿ, ಅವರು ಇಲ್ಲಿಯವರೆಗೂ ಪಡೆದಿರುವ ಪಡಿತರ ಮತ್ತು ಇನ್ನಿತರೆ ಸೌಲಭ್ಯ, ಸೌಕರ್ಯ,ಅನುದಾನಗಳನ್ನು ಬಡ್ಡಿ, ದಂಡಗಳ ಸಹೀತ ವಾಪಸ್ಸು ಪಡೆಯಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಆಹಾರ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದರಿಂದ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಮಹಿಬೂಬ್ ಸಾಬ್ ಈತನ ವಿರುದ್ಧ ದೂರು ದಾಖಲಿಸಿಕೊಂಡು, ತನಿಖೆ ನಡೆಸಿ, ತಾನು ಶ್ರೀಮಂತನಾಗಿದ್ದರೂ ಸಹಿತ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಸುಳ್ಳು ಮಾಹಿತಿ ನೀಡಿ, ಅನಧಿಕೃತ ವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದು, ಅನ್ನ ಭಾಗ್ಯ ಯೋಜನೆ ಅಕ್ಕಿಯನ್ನು ಪಡೆದಿರುವುದು ದೃಢಪಟ್ಟ ನಂತರ, ಮೂರು ಬಾರಿ ನೋಟಿಸ್ ನೀಡಿ, ಒಂದು ಲಕ್ಷದ ಹನ್ನೆರೆಡು ಸಾವಿರದ ಒಂದು ನೂರ ನಾಲ್ಕು ರೂಪಾಯಿಗಳನ್ನು ದಂಡ ವಸೂಲಿ ಮಾಡಿದ್ದಾರೆ.

The post ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ. appeared first on Hai Sandur kannada fortnightly news paper.

]]>
https://haisandur.com/2024/04/27/%e0%b2%96%e0%b3%8a%e0%b2%9f%e0%b3%8d%e0%b2%9f%e0%b2%bf-%e0%b2%a6%e0%b2%be%e0%b2%96%e0%b2%b2%e0%b3%86-%e0%b2%b8%e0%b3%83%e0%b2%b7%e0%b3%8d%e0%b2%9f%e0%b2%bf%e0%b2%b8%e0%b2%bf-%e0%b2%ac%e0%b2%bf/feed/ 0
ಕೊಪ್ಪಳ: ಸಿ.ಸಿ ರಸ್ತೆಯನ್ನು ಹಾಳು ಮಾಡಿ,ರಸ್ತೆಯನ್ನು ಬಂದು ಮಾಡಿ, ಮೆರೆಯುತ್ತಿರುವ ಭೂಪ, ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು. https://haisandur.com/2024/04/01/%e0%b2%95%e0%b3%8a%e0%b2%aa%e0%b3%8d%e0%b2%aa%e0%b2%b3-%e0%b2%b8%e0%b2%bf-%e0%b2%b8%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b9/ https://haisandur.com/2024/04/01/%e0%b2%95%e0%b3%8a%e0%b2%aa%e0%b3%8d%e0%b2%aa%e0%b2%b3-%e0%b2%b8%e0%b2%bf-%e0%b2%b8%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b9/#respond Mon, 01 Apr 2024 15:28:51 +0000 https://haisandur.com/?p=34861 ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಲ್ಲನಗೌಡ ತಂದೆ ಮಲ್ಕಾಜಪ್ಪ ಹೊಸಮನಿ ಎಂಬ ವ್ಯಕ್ತಿಯು ಗ್ರಾಮದ ಎರಡು ಮತ್ತು ನಾಲ್ಕನೇ ವಾರ್ಡಿಗೆ ಸಂಪರ್ಕ ಬೆಳೆಸುವ ಮುಖ್ಯ ರಸ್ತೆಯನ್ನು (ಹನ್ನೆರೆಡು ಲಕ್ಷ ರೂಪಾಯಿ ಬೆಲೆ ಬಾಳುವ ಸಿ.ಸಿ.ರಸ್ತೆಯನ್ನು) ಹಾಳು ಮಾಡಿ, ಕಳೆದ ಒಂದು ವರ್ಷಗಳ ಹಿಂದೆಯೇ ರಸ್ತೆಯ ಮದ್ಯಲ್ಲಿ ಕಲ್ಲು ಬಂಡೆಗಳನ್ನು ನೆಟ್ಟು, ಸಾರ್ವಜನಿಕರಿಗೆ ಓಡಾಡಲು ಆಗದಂತೆ ರಸ್ತೆಯನ್ನು ಬಂದ್ ಮಾಡಿ, ಗೂಂಡಾವರ್ತನೆ ಮೆರೆಯುತ್ತಿದ್ದಾನೆ. ಇದಕ್ಕೆ ಸಂಬಂಧಪಟ್ಟಂತೆ ಕಳೆದ ಒಂದು ವರ್ಷದಿಂದಲೂ ಜಿಲ್ಲಾ ಪಂಚಾಯತಿ, […]

The post ಕೊಪ್ಪಳ: ಸಿ.ಸಿ ರಸ್ತೆಯನ್ನು ಹಾಳು ಮಾಡಿ,ರಸ್ತೆಯನ್ನು ಬಂದು ಮಾಡಿ, ಮೆರೆಯುತ್ತಿರುವ ಭೂಪ, ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು. appeared first on Hai Sandur kannada fortnightly news paper.

]]>
ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಲ್ಲನಗೌಡ ತಂದೆ ಮಲ್ಕಾಜಪ್ಪ ಹೊಸಮನಿ ಎಂಬ ವ್ಯಕ್ತಿಯು ಗ್ರಾಮದ ಎರಡು ಮತ್ತು ನಾಲ್ಕನೇ ವಾರ್ಡಿಗೆ ಸಂಪರ್ಕ ಬೆಳೆಸುವ ಮುಖ್ಯ ರಸ್ತೆಯನ್ನು (ಹನ್ನೆರೆಡು ಲಕ್ಷ ರೂಪಾಯಿ ಬೆಲೆ ಬಾಳುವ ಸಿ.ಸಿ.ರಸ್ತೆಯನ್ನು) ಹಾಳು ಮಾಡಿ, ಕಳೆದ ಒಂದು ವರ್ಷಗಳ ಹಿಂದೆಯೇ ರಸ್ತೆಯ ಮದ್ಯಲ್ಲಿ ಕಲ್ಲು ಬಂಡೆಗಳನ್ನು ನೆಟ್ಟು, ಸಾರ್ವಜನಿಕರಿಗೆ ಓಡಾಡಲು ಆಗದಂತೆ ರಸ್ತೆಯನ್ನು ಬಂದ್ ಮಾಡಿ, ಗೂಂಡಾವರ್ತನೆ ಮೆರೆಯುತ್ತಿದ್ದಾನೆ.

ಇದಕ್ಕೆ ಸಂಬಂಧಪಟ್ಟಂತೆ ಕಳೆದ ಒಂದು ವರ್ಷದಿಂದಲೂ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯವರಿಗೆ ಸಾರ್ವಜನಿಕರು ದೂರು ಸಲ್ಲಿಸುತ್ತಾ ಬಂದಿರುತ್ತಾರೆ.

ಹೀಗಿದ್ದರೂ ಕೊಪ್ಪಳ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಕಾರಟಗಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿದ್ಧಾಪುರ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸದರಿ ದುಶ್ ಕೃತ್ಯ ಎಸಗಿದ ವ್ಯಕ್ತಿಯು ಕೆಲ ಪುಡಾರಿ ರಾಜಕಾರಣಿಗಳ ರೆಕ್ಮೆಂಡ್ ಮಾಡಿಸಿದ್ದಕ್ಕಾಗಿ ಸದರಿ ಪ್ರಕರಣವನ್ನು ಬಹಳ ಹಗುರವಾಗಿ ಪರಿಗಣಿಸಿ, ನಿರ್ಲಕ್ಷ್ಯ ವಹಿಸುತ್ತಿರುವುದಲ್ಲದೇ, ಅವನ ವಿರುದ್ಧ ಯಾವುದೇ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ ಹಾಗೂ ರಸ್ತೆ ಬಂದು ಮಾಡಿರುವುದನ್ನು ತೆರವುಗೊಳಿಸದೇ ಗ್ರಾಮ‌ ಪಂಚಾಯತಿ, ತಾಲೂಕ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಏನೂ ಗೊತ್ತಿಲ್ಲಾ ಎಂಬಂತೆ ಕಣ್ಣುಮುಚ್ಚಿ ಸುಮ್ಮನೇ ಕುಳಿತಿದ್ದಾರೆ.

ಇದರಿಂದಾಗಿ ಸಾರ್ವಜನಿಕರಿಗೆ ಬಹಳ ಹಿಂಸೆ ಹಾಗೂ ತೊಂದರೆ ಆಗುತ್ತಿದೆ. ಅಲ್ಲದೇ ಸದರಿ ರಸ್ತೆಯ ಮಧ್ಯದಲ್ಲಿ ಕಲ್ಲು ಬಂಡೆಗಳನ್ನು ನೆಟ್ಟು ಒಂದು ವರ್ಷ ಗತಿಸಿದ್ದರಿಂದ ಬಂಡೆಗಳೆಲ್ಲವೂ ಬಿರುಕು ಬಿಟ್ಟು ಬೀಳುವ ಹಂತದಲ್ಲಿವೆ. ಹೀಗಾಗಿ ಯಾವ ಸಂದರ್ಭದಲ್ಲಾದರೂ ಈ ಬಂಡೆಗಳು ಸಾರ್ವಜನಿಕರು, ವಿಕಲಚೇತನರು ಹಾಗೂ ವಯೋವೃದ್ಧರ ಮೇಲೆ ಅಥವಾ ಶಾಲಾ ಮಕ್ಕಳ ಮೇಲೆ ಬೀಳುವ ಸಂಭವ ಇದೆ. ಕಾರಣ ಯಾವುದೇ ಸಂದರ್ಭದಲ್ಲಿ ಅವಘಡಗಳು ಸಂಭವಿಸುವ ಲಕ್ಷಣಗಳಿರುವುದರಿಂದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಕೂಡಲೇ ಎಚ್ಚರಗೊಂಡು
ಸಾರ್ವಜನಿಕ ಆಸ್ತಿಯನ್ನು (12ಲಕ್ಷ ರೂಪಾಯಿ ಬೆಲೆ ಬಾಳುವ ಸಿ.ಸಿ ರಸ್ತೆಯನ್ನು) ಹಾಳು ಮಾಡಿದ್ದಕ್ಕೆ ಹಾಗೂ ಕಳೆದ ಒಂದು ವರ್ಷದಿಂದ ಸದರಿ ಸಾರ್ವಜನಿಕ ರಸ್ತೆಯನ್ನು ಬಂದು ಮಾಡಿ, ಸಾರ್ವಜನಿಕರಿಗೆ ತೊಂದರೆ ನೀಡಿದ್ದಕ್ಕೆ ಹಾಗೂ ಸಾರ್ವಜನಿಕರ ಮೇಲೆ ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡಿದ್ದಕ್ಕಾಗಿ ಪೊಲೀಸರ ಮುಖಾಂತರ ಮೊಕ್ಕದ್ಧಮೆ ದಾಖಲಿಸಿ, ರಸ್ತೆ ಬಂದು ಮಾಡಿರುವುದನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟು, ನ್ಯಾಯವನ್ನು ಎತ್ತಿ ಹಿಡಿಯಬೇಕು, ಇಲ್ಲವಾದಲ್ಲಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಸಿದ್ದಾಪುರ ಗ್ರಾಮದ ನೊಂದ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

The post ಕೊಪ್ಪಳ: ಸಿ.ಸಿ ರಸ್ತೆಯನ್ನು ಹಾಳು ಮಾಡಿ,ರಸ್ತೆಯನ್ನು ಬಂದು ಮಾಡಿ, ಮೆರೆಯುತ್ತಿರುವ ಭೂಪ, ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು. appeared first on Hai Sandur kannada fortnightly news paper.

]]>
https://haisandur.com/2024/04/01/%e0%b2%95%e0%b3%8a%e0%b2%aa%e0%b3%8d%e0%b2%aa%e0%b2%b3-%e0%b2%b8%e0%b2%bf-%e0%b2%b8%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b9/feed/ 0
ಗಂಗಾವತಿ; ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಹೊಲದ ಪಕ್ಕದಲ್ಲಿ ದುರ್ವಾಸನೆ..!! ಸ್ವಚ್ಛತೆ ಯಾವಾಗ.? https://haisandur.com/2023/07/10/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf-%e0%b2%97%e0%b3%81%e0%b2%82%e0%b2%a1%e0%b2%ae%e0%b3%8d%e0%b2%ae-%e0%b2%95%e0%b3%8d%e0%b2%af%e0%b2%be%e0%b2%82%e0%b2%aa%e0%b3%8d/ https://haisandur.com/2023/07/10/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf-%e0%b2%97%e0%b3%81%e0%b2%82%e0%b2%a1%e0%b2%ae%e0%b3%8d%e0%b2%ae-%e0%b2%95%e0%b3%8d%e0%b2%af%e0%b2%be%e0%b2%82%e0%b2%aa%e0%b3%8d/#respond Mon, 10 Jul 2023 15:47:11 +0000 https://haisandur.com/?p=32867 ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಬೈಪಾಸ್ ರಸ್ತೆಯ ಪ್ರಗತಿಪರ ರೈತರ ಶಿವಣ್ಣ ಚಳ್ಳಿಕೇರಿ ಅವರ ಹೊಲದ ಪಕ್ಕದಲ್ಲಿ ಜಾನುವಾರು ಮಾಂಸ ಹಾಗೂ ಕೋಳಿ ಮಾಂಸದ ತ್ಯಾಜ್ಯವನ್ನು ಹಾಕುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ. ಜಾನುವಾರ ಮಾಂಸ ಹಾಗೂ ಕೋಳಿ ಮಾಂಸದ ತ್ಯಾಜ್ಯದ ಕೆಟ್ಟ ದುರ್ವಾಸನೆಯಿಂದ ನಾಗರಿಕರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಕೆಟ್ಟ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗಗಳ ಹಾರಾಡುವ ಸಾಧ್ಯತೆಯಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗಂಗಾವತಿಯ […]

The post ಗಂಗಾವತಿ; ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಹೊಲದ ಪಕ್ಕದಲ್ಲಿ ದುರ್ವಾಸನೆ..!! ಸ್ವಚ್ಛತೆ ಯಾವಾಗ.? appeared first on Hai Sandur kannada fortnightly news paper.

]]>
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಬೈಪಾಸ್ ರಸ್ತೆಯ ಪ್ರಗತಿಪರ ರೈತರ ಶಿವಣ್ಣ ಚಳ್ಳಿಕೇರಿ ಅವರ ಹೊಲದ ಪಕ್ಕದಲ್ಲಿ ಜಾನುವಾರು ಮಾಂಸ ಹಾಗೂ ಕೋಳಿ ಮಾಂಸದ ತ್ಯಾಜ್ಯವನ್ನು ಹಾಕುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ.

ಜಾನುವಾರ ಮಾಂಸ ಹಾಗೂ ಕೋಳಿ ಮಾಂಸದ ತ್ಯಾಜ್ಯದ ಕೆಟ್ಟ ದುರ್ವಾಸನೆಯಿಂದ ನಾಗರಿಕರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಕೆಟ್ಟ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗಗಳ ಹಾರಾಡುವ ಸಾಧ್ಯತೆಯಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗಂಗಾವತಿಯ ಜನಪ್ರಿಯ ಶಾಸಕರಾದ ಸನ್ಮಾನ ಶ್ರೀ ಗಾಲಿ ಜನಾರ್ದನ್ ರೆಡ್ಡಿ ಅವರಿಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಮಾನ್ಯ ಪೌರಯುಕ್ತರು ಗೆ ಪತ್ರ ಬರೆಯಲಾಗಿದ್ದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ

ಜನಪ್ರತಿನಿಧಿಗಳು ನಗರಸಭೆಯ ಅಧಿಕಾರಿಗಳು ಪ್ರತಿದಿನ ಇದೇ ರಸ್ತೆಯ ಮೂಲಕ ಸಂಚರಿಸಿ ಈ ತ್ಯಾಜ್ಯವನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ. ನಗರಸಭೆಯ ಪೌರಾಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೆ ತ್ಯಾಜ್ಯವನ್ನು ಹಾಕದಂತೆ ಸಂಬಂಧಪಟ್ಟವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಇಲ್ಲದಿದ್ದರೆ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಲಾಗುವುದೆಂದು ಪ್ರಗತಿಪರ ರೈತರ ಶಿವಣ್ಣ ಚಳ್ಳಿಕೇರಿ ಅವರು ತಿಳಿಸಿದ್ದಾರೆ.

ವರದಿ:- ಹೆಚ್. ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

The post ಗಂಗಾವತಿ; ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಹೊಲದ ಪಕ್ಕದಲ್ಲಿ ದುರ್ವಾಸನೆ..!! ಸ್ವಚ್ಛತೆ ಯಾವಾಗ.? appeared first on Hai Sandur kannada fortnightly news paper.

]]>
https://haisandur.com/2023/07/10/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf-%e0%b2%97%e0%b3%81%e0%b2%82%e0%b2%a1%e0%b2%ae%e0%b3%8d%e0%b2%ae-%e0%b2%95%e0%b3%8d%e0%b2%af%e0%b2%be%e0%b2%82%e0%b2%aa%e0%b3%8d/feed/ 0
ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿರುವ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗಿ ರದ್ದುಪಡಿಸಿ. https://haisandur.com/2023/07/10/%e0%b2%95%e0%b3%8a%e0%b2%aa%e0%b3%8d%e0%b2%aa%e0%b2%b3-%e0%b2%a8%e0%b2%97%e0%b2%b0-%e0%b2%b5%e0%b3%8d%e0%b2%af%e0%b2%be%e0%b2%aa%e0%b3%8d%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf/ https://haisandur.com/2023/07/10/%e0%b2%95%e0%b3%8a%e0%b2%aa%e0%b3%8d%e0%b2%aa%e0%b2%b3-%e0%b2%a8%e0%b2%97%e0%b2%b0-%e0%b2%b5%e0%b3%8d%e0%b2%af%e0%b2%be%e0%b2%aa%e0%b3%8d%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf/#respond Mon, 10 Jul 2023 15:42:54 +0000 https://haisandur.com/?p=32864 ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಯಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ ಎಲ್ಲೆಡೆ ಕನ್ನಡ ನಾಮಪಲಕವನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ನಗರಸಭೆ ಪೌರಾಯುಕ್ತ ಎಚ್ಎನ್ ಬಜಕ್ಕನವರು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕರವೇ ಜಿಲ್ಲೆ ಅಧ್ಯಕ್ಷ ಬಿ ಗಿರೀಶ್ ನಂದ ಜ್ಞಾನ ಸುಂದರ್ ಮಾತನಾಡಿ ನಗರ ವ್ಯಾಪ್ತಿಯಲ್ಲಿ ಹಲವಡೆ ಪ್ರಾರಂಭಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡದ […]

The post ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿರುವ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗಿ ರದ್ದುಪಡಿಸಿ. appeared first on Hai Sandur kannada fortnightly news paper.

]]>
ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಯಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ ಎಲ್ಲೆಡೆ ಕನ್ನಡ ನಾಮಪಲಕವನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ನಗರಸಭೆ ಪೌರಾಯುಕ್ತ ಎಚ್ಎನ್ ಬಜಕ್ಕನವರು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕರವೇ ಜಿಲ್ಲೆ ಅಧ್ಯಕ್ಷ ಬಿ ಗಿರೀಶ್ ನಂದ ಜ್ಞಾನ ಸುಂದರ್ ಮಾತನಾಡಿ ನಗರ ವ್ಯಾಪ್ತಿಯಲ್ಲಿ ಹಲವಡೆ ಪ್ರಾರಂಭಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡದ ನಾಮಫಲಕವನ್ನು ಹಾಕದೆ ಅನ್ಯ ಭಾಷೆಯ ನಾಮಫಲಕವನ್ನು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವುದನ್ನು ಕರವೇ ಬಲವಾಗಿ ಖಂಡಿಸುತ್ತದೆ ಎಂದರು. ಇನ್ನು ಕೆಳಗಡೆ ನಮ್ಮ ಮಾತೃಭಾಷೆ ಹಾಗೂ ಆಡಳಿತ ಭಾಷೆಯಾದ ಕನ್ನಡವನ್ನು ಸಣ್ಣ ಪ್ರಮಾಣದಲ್ಲಿ ಹಾಕಿಕೊಂಡು ಅನ್ಯ ಭಾಷೆಯ ನಾಮಪಲಕವನ್ನು ದೊಡ್ಡದಾಗಿ ವೈಭವಿಕರಿಸುತ್ತಿರುವುದನ್ನು ಕಂಡು ಕಾಣದಂತೆ ಕುಳಿತಿರುವ ನಗರಸಭೆ ಆಡಳಿತಕ್ಕೆ ಕೈಗನ್ನಡಿಯಂತಿದೆ ಎಂದರು.

ಕನ್ನಡ ಭಾಷೆಯನ್ನು ಬಳಸದೆ ಅನ್ಯ ಭಾಷೆಯ ಓಲೈಕೆಯು ನಮ್ಮ ನಾಡಿಗೆ ಮಾಡಿದ ಘೋರ ಅನ್ಯಾಯವಾಗಿದ್ದು ನಗರದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವುದು ಸ್ಥಳೀಯಸಂಸ್ಥೆಗಳ ಜವಾಬ್ದಾರಿಯಾಗಿದ್ದು. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಮಸ್ಯೆಗಳ ನಿಯಮ 1963ರ ಪ್ರಕಾರ ಕನ್ನಡ ಭಾಷೆ ನಾಮಫಲಕ ಅಳವಡಿಸುವುದನ್ನು ಹಾಗೂ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದರು.

ನಾಮಫಲಕದ ಶೇಕಡ 60ರಷ್ಟು ಜಾಗದಲ್ಲಿ ಕನ್ನಡ ಕಡ್ಡಾಯ ನಿಯಮ ಪ್ರಥಮ ಆದ್ಯತೆಯಲ್ಲಿ ದಪ್ಪ ಅಕ್ಷರಗಳಲ್ಲಿ ಕನ್ನಡದಲ್ಲಿ ಉಳಿದ ಶೇಕಡ 40ರಷ್ಟು ಜಾಗದಲ್ಲಿ ಅಂಗಡಿ ಮಾಲೀಕರು ಇತರೆ ಭಾಷೆಯಲ್ಲಿ ತಮ್ಮ ನಾಮಫಲಕ ಪ್ರದರ್ಶಿಕೊಳ್ಳಬಹುದಾಗಿದ್ದು ಈ ನಿಯಮವನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಪ್ರದರ್ಶಿಸುತ್ತಿದ್ದಾರೆ. ಕೂಡಲೆ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ ಎಲ್ಲೆಡೆ ಕನ್ನಡ ನಾಮಪಲಕವನ್ನು ಕಡ್ಡಾಯ ಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತರು ಎಚ್ ಎನ್ ಬಜಕ್ ನವರು ಅವರು ನಿಯಮ ಪಾಲಿಸಿದ ಅಂಗಡಿ ಮುಗ್ಗಟ್ಟುಗಳ ಮಾಲೀಕರ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಹನುಮಂತಪ್ಪ ಬೆಸ್ತರ್ ತಾಲೂಕು ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ ಕರವೇ ಮುಖಂಡರಾದ ನಾಗರಾಜ್ ಹಾಲಳ್ಳಿ ಶರಣಯ್ಯ ಹಿರೇಮಠ ಕುಮಾರಸ್ವಾಮಿ ನಾಗರಹಳ್ಳಿ ಮಂಜು, ಗೊಂದಿ ಬಸವರಾಜ್, ಚಿಕ್ಕೆನಕೊಪ್ಪ ನಾಗರಾಜ್ ವಾಲ್ಮೀಕಿ ಮಹೇಶ್ ಹರಿಜನ, ಮಾರುತಿ ಹೆಚ್ ಇತರು ಭಾಗವಹಿಸಿದರು.

ವರದಿ:- ಹೆಚ್.ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

The post ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿರುವ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗಿ ರದ್ದುಪಡಿಸಿ. appeared first on Hai Sandur kannada fortnightly news paper.

]]>
https://haisandur.com/2023/07/10/%e0%b2%95%e0%b3%8a%e0%b2%aa%e0%b3%8d%e0%b2%aa%e0%b2%b3-%e0%b2%a8%e0%b2%97%e0%b2%b0-%e0%b2%b5%e0%b3%8d%e0%b2%af%e0%b2%be%e0%b2%aa%e0%b3%8d%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf/feed/ 0
ಭಾಗ್ಯ, ಕುಟೀರ ಜ್ಯೋತಿ ಯೋಜನೆ,ಉಚಿತ ವಿದ್ಯುತ್ ಹೆಚ್ಚಳ ಹಾಗೂ ಬಾಕಿ ಮನ್ನಾಕ್ಕೆ ಒತ್ತಾಯ. https://haisandur.com/2023/07/06/%e0%b2%ad%e0%b2%be%e0%b2%97%e0%b3%8d%e0%b2%af-%e0%b2%95%e0%b3%81%e0%b2%9f%e0%b3%80%e0%b2%b0-%e0%b2%9c%e0%b3%8d%e0%b2%af%e0%b3%8b%e0%b2%a4%e0%b2%bf-%e0%b2%af%e0%b3%8b%e0%b2%9c%e0%b2%a8%e0%b3%86/ https://haisandur.com/2023/07/06/%e0%b2%ad%e0%b2%be%e0%b2%97%e0%b3%8d%e0%b2%af-%e0%b2%95%e0%b3%81%e0%b2%9f%e0%b3%80%e0%b2%b0-%e0%b2%9c%e0%b3%8d%e0%b2%af%e0%b3%8b%e0%b2%a4%e0%b2%bf-%e0%b2%af%e0%b3%8b%e0%b2%9c%e0%b2%a8%e0%b3%86/#respond Thu, 06 Jul 2023 13:31:23 +0000 https://haisandur.com/?p=32806 ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನಲ್ಲಿ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಗೃಹಜೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತಿರುವುದು ಸ್ವಾಗತ ಗೃಹಜೋತಿ ಯೋಜನೆಯಡಿ ಬಡವರು ಬಳಸುವ ಭಾಗ್ಯಜ್ಯೋತಿ ಕುಟೀರ ಜ್ಯೋತಿ ಮುಂತಾದ ಯೋಜನೆಗಳ ಫಲಾನುಭವಿಗಳಿಗೂ 200 ಯೂನಿಟ ವಿದ್ಯುತ್ ಬಳಕೆಯ ಯೋಜನೆಯಾಡಿ ಪರಿಗಣಿಸಬೇಕು.ಭಾಗ್ಯ ಮತ್ತು ಕುಟೀರ ಜ್ಯೋತಿ ಯೋಜನೆಗಳ ಫಲಾನುಭವಿಗಳ ಹಳೆ ಬಾಕಿಯನ್ನು ಮನ್ನಾ ಮಾಡುವಂತೆ ಸಿಪಿಐಎಂ ಪಕ್ಷ ರಾಜ್ಯ ಕಾರ್ಯದರ್ಶಿ ಯು ಬಸವರಾಜ್ ಒತ್ತಾಯಿಸಿದ್ದಾರೆ. ಅವರು ನಗರದ ಸಿಪಿಐಎಂ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ […]

The post ಭಾಗ್ಯ, ಕುಟೀರ ಜ್ಯೋತಿ ಯೋಜನೆ,ಉಚಿತ ವಿದ್ಯುತ್ ಹೆಚ್ಚಳ ಹಾಗೂ ಬಾಕಿ ಮನ್ನಾಕ್ಕೆ ಒತ್ತಾಯ. appeared first on Hai Sandur kannada fortnightly news paper.

]]>
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನಲ್ಲಿ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಗೃಹಜೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತಿರುವುದು ಸ್ವಾಗತ ಗೃಹಜೋತಿ ಯೋಜನೆಯಡಿ ಬಡವರು ಬಳಸುವ ಭಾಗ್ಯಜ್ಯೋತಿ ಕುಟೀರ ಜ್ಯೋತಿ ಮುಂತಾದ ಯೋಜನೆಗಳ ಫಲಾನುಭವಿಗಳಿಗೂ 200 ಯೂನಿಟ ವಿದ್ಯುತ್ ಬಳಕೆಯ ಯೋಜನೆಯಾಡಿ ಪರಿಗಣಿಸಬೇಕು.
ಭಾಗ್ಯ ಮತ್ತು ಕುಟೀರ ಜ್ಯೋತಿ ಯೋಜನೆಗಳ ಫಲಾನುಭವಿಗಳ ಹಳೆ ಬಾಕಿಯನ್ನು ಮನ್ನಾ ಮಾಡುವಂತೆ ಸಿಪಿಐಎಂ ಪಕ್ಷ ರಾಜ್ಯ ಕಾರ್ಯದರ್ಶಿ ಯು ಬಸವರಾಜ್ ಒತ್ತಾಯಿಸಿದ್ದಾರೆ.

ಅವರು ನಗರದ ಸಿಪಿಐಎಂ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒತ್ತಾಯಿಸುತ್ತದೆ. ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಬಡವರಿಗೆ ಹಾಕಿರುವ ಕಾಲಾಮಿತಿಯ ಗೃಹ ಜ್ಯೋತಿ ಫಲಾನುಭವಿಗಳ ನಡುವೆ ಇವರಿಗೆ ಮಾಡಿರುವ ತಾರತಮ್ಯವಾಗಿದೆ. ಈ ಬಡವರು ಕನಿಷ್ಠ ಮೂರು ಬಲ್ಪು ಎರಡು ಫ್ಯಾನು ಹಾಗೂ ಒಂದು ತ್ರೀ ಪಿನ್ ಪ್ಲಗ್ ಉಪಯೋಗಿಸಲು ಅಗತ್ಯ ಇರುವಷ್ಟು ವಿದ್ಯುತ್ ಒದಗಿಸಲು ನ್ಯಾಯವಾಗಿದೆ. ಬಡವರು ಬಳಸುವ ವಿದ್ಯುತ್ತಿಗೆ ಇನ್ನಷ್ಟು ಮಿತಿ ಏರಿ ಇದರಿಂದ ಅವರಿಗೆ ವಿದ್ಯುತ್ ಕಂಪನಿಗಳು ಹಲವು ಸಾವಿರ ರೂಪಾಯಿಗಳ ವಿದ್ಯುತ್ ಬಾಕಿ ಬಿಲ್ ನೀಡಿವೆ.

ಆ ಬಾಕಿಯನ್ನು ನೀಡದೆ ಈ ಫಲಾನುಭವಿಗಳಿಗೆ ಗೃಹಜೋತಿ ಯೋಜನೆಯಂಬುದು ಮರೀಚಿಕೆಯಾಗಿದೆ. ಅದರಿಂದ ರಾಜ್ಯ ಸರ್ಕಾರ ಗೃಹಜೋತಿ ಈ ಬಡವರಿಗೆ ದೊರೆಯುವಂತಾಗಲು ಹಳೆಯ ಬಾಕಿಯನ್ನು ಮನ್ನ ಮಾಡುವುದು ಅಗತ್ಯವಿದೆ. ಗೃಹ ಜ್ಯೋತಿ ಮೂಲಕ ರಾಜ್ಯ ಸರ್ಕಾರ ಉಚಿತ ಯೋಜನೆಗೆ ಕ್ರಮ ವಹಿಸಿರುವುದು ಸ್ವಾಗತವಾಗಿದ್ದರು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ದರಗಳನ್ನು ನಿಯಂತ್ರಣವಾಗಿ ಏರಿಸಲು ಅನುಮತಿ ನೀಡುವ ಮೂಲಕ ಜನಸಾಮಾನ್ಯರಿಗೆ. ಬಡವರಿಗೆ ರೈತರ ಮೇಲೆ ದರ ಹೆಚ್ಚಳದ ಹೊರೆ ಹಾಕಲಾಗಿದೆ. ಈ ಬೆಲೆ ಏರಿಕೆಯೂ ಅಂತಿಮವಾಗಿ ವಾಣಿಜ್ಯ ಸಂಸ್ಥೆಗಳ ಮೂಲಕ ಜನಸಾಮಾನ್ಯರ ಮೇಲೆ ವರ್ಗಾಯಿಸಲ್ಪಡುತ್ತದೆ.

ಇದು ಜನಸಾಮಾನ್ಯರು ಬಳಸುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಸಣ್ಣ ಕೈಗಾರಿಕೆಗಳಿಗೆ ಹೊರೆಯಾಗಿ ಅವುಗಳ ಮುಚ್ಚು ಹೋಗಲು ಮತ್ತು ಅಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರ ಕುಟುಂಬಗಳು ನಿರುದ್ಯೋಗಗಳನ್ನಾಗಿಸಿ ಬೀದಿಗೆ ದೂಡಲಾಗಿದೆ. ಕೆಇಆರ್‌ಸಿಯು. ಈಗಾಗಲೇ ರೈತರ ನೀರಾವರಿ ಪಂಪ್ ಸೆಟ್ಟಿಗಳಿಗೆ ಆರ್ ಆರ್ ನಂಬರ್ಗಳಿಗೆ ಆಧಾರ್ ನಂಬರ್ ಜೋಡಿಸಿದ್ದಾರೆ. ಮಾತ್ರ ಪಂಪ್ ಸೆಟ್ಟುಗಳ ಉಚಿತ ವಿದ್ಯುತ್ ಎಂದು ಆದೇಶ ಹೊರಡಿಸಿರುವುದು ರಾಜ್ಯದ ಕೃಷಿ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ನೀತಿಯಾಗಿದೆ. ರಾಜ್ಯ ಸರ್ಕಾರ ಮಧ್ಯಪ್ರದೇಶಿಸಿ ಈ ಬೆಲೆ ಏರಿಕೆಯ ಹೊರೆಯನ್ನು ತಡೆಯುವಂತೆ ಮತ್ತು ಪ್ರತಿ ವರ್ಷವೂ ಬೆಲೆ ಏರಿಕೆಗೆ ಅನುಮತಿಸುವ ಕೆ ಆರ್ ಸಿ ಸಿ ವ್ಯವಸ್ಥೆಯನ್ನು ರದ್ದುಗೊಳಿಸಿ ಬೆಲೆ ನಿಯಂತ್ರಣ ಅಧಿಕಾರ ಪುನಃ ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಕೇಂದ್ರ ಸರ್ಕಾರ ಪಾರ್ಲಿಮೆಂಟ್ ಮುಂದುಗಡೆ ಸಾರ್ವಜನಿಕ ರಂಗದ ವಿದ್ಯುತ್ ಉತ್ಪಾದನೆ. ವಿತರಣೆ ಹಾಗೂ ಸರಬರಾಜು ಕ್ಷೇತ್ರಗಳನ್ನು ಕಾರ್ಪೊರೇಟ್ ಲೂಟಿಗೆ ತೆರೆಯುವ ದುರುದ್ದೇಶದಿಂದ ದೇಶದ ನೈಜ ಅಭಿವೃದ್ಧಿಯ ವಿರೋಧಿಯಾಗಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡುವ ಮಸುದಿಗೆ ವಾಪಸ್ ಪಡೆಯಬೇಕು. ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಈ ಖಾಸ್ಗೀಕರಣದ ಪ್ರಸ್ತಾಪವನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ನಿರುಪಾದಿ ಬೆಣಕಲ್ ಸುಂಕಪ್ಪ ಎಸ್ ವರಲಕ್ಷ್ಮಿ ಜಿ ನಾಗರಾಜ್ ಚಂದ್ರಪ್ಪ ಹೊಸಕೆರ ಇತರರು ಇದ್ದರು.

-ವರದಿ; ಹೆಚ್ ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

The post ಭಾಗ್ಯ, ಕುಟೀರ ಜ್ಯೋತಿ ಯೋಜನೆ,ಉಚಿತ ವಿದ್ಯುತ್ ಹೆಚ್ಚಳ ಹಾಗೂ ಬಾಕಿ ಮನ್ನಾಕ್ಕೆ ಒತ್ತಾಯ. appeared first on Hai Sandur kannada fortnightly news paper.

]]>
https://haisandur.com/2023/07/06/%e0%b2%ad%e0%b2%be%e0%b2%97%e0%b3%8d%e0%b2%af-%e0%b2%95%e0%b3%81%e0%b2%9f%e0%b3%80%e0%b2%b0-%e0%b2%9c%e0%b3%8d%e0%b2%af%e0%b3%8b%e0%b2%a4%e0%b2%bf-%e0%b2%af%e0%b3%8b%e0%b2%9c%e0%b2%a8%e0%b3%86/feed/ 0
ಗಂಗಾವತಿ ನಗರದಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ; ಕರ್ನಾಟಕ ರಕ್ಷಣಾ ವೇದಿಕೆ ಮನವಿ. https://haisandur.com/2023/07/04/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf-%e0%b2%a8%e0%b2%97%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%af%e0%b3%81%e0%b2%a4%e0%b3%8d/ https://haisandur.com/2023/07/04/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf-%e0%b2%a8%e0%b2%97%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%af%e0%b3%81%e0%b2%a4%e0%b3%8d/#respond Tue, 04 Jul 2023 23:45:19 +0000 https://haisandur.com/?p=32771 ಗಂಗಾವತಿ ನಗರದಲ್ಲಿ ನಡೆಯುತ್ತಿರುವ ಅಕ್ರಮ ಅನೈತಿಕ ಚಟುವಟಿಕೆಗಳ ಇಸ್ಪೀಟ್ ಹಾಗೂ ಮರಳು ದಂಧೆ ಮಟ್ಕಾ ಓಸಿ ಮತ್ತು ಪಡಿತರ ಆಹಾರ ಧಾನ್ಯಗಳ ಅಕ್ರಮ ಮಾರಾಟ ಈ ಎಲ್ಲಾ ಅಕ್ರಮ ದಂಧೆಗಳಿಗೆ ಕೂಡಲೆ ಕಡಿವಾಳ ಹಾಕಬೇಕು. ಅಕ್ರಮ ದಂಡೆ ಮಾಡುವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿಂದ ಸಂಕೇತವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಗಂಗಾವತಿ ನಗರದಲ್ಲಿ ಅಕ್ರಮ ನೈತಿಕ ಚಟುವಟಿಕೆ ಇತ್ತೀಚಿಗೆ ದಿನಗಳಲ್ಲಿ ಜಾಸ್ತಿಯಾಗಿದ್ದು ಅನೈತಿಕ ಚಟುವಟಿಗಳಾದ ಅಂದರ್ ಬಾರ್ ದಂದೆಯೂ ಗಂಗಾವತಿ ನಗರದಲ್ಲಿ […]

The post ಗಂಗಾವತಿ ನಗರದಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ; ಕರ್ನಾಟಕ ರಕ್ಷಣಾ ವೇದಿಕೆ ಮನವಿ. appeared first on Hai Sandur kannada fortnightly news paper.

]]>
ಗಂಗಾವತಿ ನಗರದಲ್ಲಿ ನಡೆಯುತ್ತಿರುವ ಅಕ್ರಮ ಅನೈತಿಕ ಚಟುವಟಿಕೆಗಳ ಇಸ್ಪೀಟ್ ಹಾಗೂ ಮರಳು ದಂಧೆ ಮಟ್ಕಾ ಓಸಿ ಮತ್ತು ಪಡಿತರ ಆಹಾರ ಧಾನ್ಯಗಳ ಅಕ್ರಮ ಮಾರಾಟ ಈ ಎಲ್ಲಾ ಅಕ್ರಮ ದಂಧೆಗಳಿಗೆ ಕೂಡಲೆ ಕಡಿವಾಳ ಹಾಕಬೇಕು. ಅಕ್ರಮ ದಂಡೆ ಮಾಡುವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿಂದ ಸಂಕೇತವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಗಂಗಾವತಿ ನಗರದಲ್ಲಿ ಅಕ್ರಮ ನೈತಿಕ ಚಟುವಟಿಕೆ ಇತ್ತೀಚಿಗೆ ದಿನಗಳಲ್ಲಿ ಜಾಸ್ತಿಯಾಗಿದ್ದು ಅನೈತಿಕ ಚಟುವಟಿಗಳಾದ ಅಂದರ್ ಬಾರ್ ದಂದೆಯೂ ಗಂಗಾವತಿ ನಗರದಲ್ಲಿ ಹಾಗೂ ತಾಲೂಕಿನ ಉದ್ದಕ್ಕೂ ಹೆಚ್ಚು ಕಡಿಮೆ ವರವಲಯದ ಪ್ರದೇಶದಲ್ಲಿ ದಂದೆ ಮಾಡುತ್ತಿದ್ದಾರೆ.

ಇದಕ್ಕೆ ಯುವಕರು ರೈತರು ಕೂಲಿಕಾರ್ಮಿಕರು ಬಲಿಯಾಗುತ್ತಿದ್ದಾರೆ, ಹಾಗೇ ಇದೇ ರೀತಿಯಾಗಿ ಮಟ್ಕಾ ದಂದೆಯು ಕೂಡ ಗಂಗಾವತಿ ನಗರದ ವಾರ್ಡುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇದರಿಂದ ಬಡ ಕುಟುಂಬಗಳು ಹಾಳಾಗಿ ಬೀದಿ ಪಾಲಾಗುತ್ತಿವೆ. ಮರಳು ದಂದೆ ಗಂಗಾವತಿ ತಾಲೂಕಿನ ಸುತ್ತಮುತ್ತಲಿನ ತುಂಗಭದ್ರಾ ನದಿಯಿಂದ ಹಳ್ಳ ಕೊಳ್ಳಗಳಲ್ಲಿ ಅಕ್ರಮವಾಗಿ ಟ್ರ್ಯಾಕ್ಟರ್ ಹಾಗೂ ಲಾರಿ ಮೂಲಕ ತೆಗೆದುಕೊಂಡು ಬರುತ್ತಿದ್ದಾರೆ.

ಸದರಿ ಮರಳಿಗೆ ಯಾವುದೇ ರೀತಿಯಾದ ರಾಯಲ್ಟಿ ಕಟ್ಟದೆ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ವಂಚನೆ ಮಾಡಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಇದನ್ನು ಕೂಡಲೇ ತಡೆಹಿಡಿದು ಅಕ್ರಮ ಮರಳು ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಗಂಗಾವತಿ ನಗರದ ಘಟಕ ಅಧ್ಯಕ್ಷರಾದ ಯಮನೂರು ಭಟ್ ತಿಳಿಸಿದರು

ಗಂಗಾವತಿ ನಗರದಲ್ಲಿ ಅತಿ ಹೆಚ್ಚು ವಾಸ ಮಾಡುತ್ತಿರುವ ದಲಿತರ ಏರಿಯಾಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ದಲಿತ ಕುಟುಂಬಗಳು ಇದರಿಂದ ಬೀದಿಗೆ ಬರುತ್ತಿವೆ ಮತ್ತು ಇದರಿಂದ ಯುವಕರು ಕುಡಿತದ ಚಟಕ್ಕೆ ಬಲಿಯಾಗಿ ಹೋಗಿದ್ದಾರೆ. ಅಕ್ರಮ ಮಧ್ಯ ಮಾರುವರ ಮೇಲೆ ಹಾಗೂ ಪಡಿತರ ಆಹಾರ ಧಾನ್ಯಗಳು ಗಂಗಾವತಿಯಿಂದ ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಲ್ಲಿಂದ ಅಕ್ರಮವಾಗಿ ಪ್ರತಿದಿನ ಸಂಗ್ರಹಿಸಿಕೊಂಡು ಗಂಗಾವತಿ ನಗರಕ್ಕೆ ತಂದು ಅವರವರ ಮನೆಯಲ್ಲಿ ಮತ್ತು ಕೆಲವೊಂದು ಗೋದಾಮುಗಳಲ್ಲಿ, ರೂಮುಗಳಲ್ಲಿ ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಶೇಖರಣೆ ಮಾಡುತ್ತಿದ್ದಾರೆ.

ಅಕ್ರಮ ಪಡಿತರ ಧಾನ್ಯಗಳ ಲಾರಿಯಲ್ಲಿ ಬೆಂಗಳೂರು ಮತ್ತು ಮೈಸೂರಿನಂತ ನಗರಗಳಿಗೆ ಅಕ್ಕಿಯನ್ನು ಅಕ್ರಮವಾಗಿ ಸಾಗಣಿಕೆ ಮಾಡುತ್ತಿದ್ದಾರೆ. ಗಂಗಾವತಿ ನಗರದಲ್ಲಿ ಇಂತ ದಂದೇ ಎಗ್ಗಿಲ್ಲದೆ ಸಾಗಿದೆ. ಇದನ್ನು ತಕ್ಷಣ ತಡೆಹಿಡಿದು ಅವರ ಮೇಲೆ ಸೂಕ್ತ ಕ್ರಮವನ್ನು ಜರಗಿಸಿ ಅಕ್ರಮ ಪಡಿತರ ನಡೆಯದಂತೆ.

ಸದರಿ ನಮ್ಮ ಮನವಿ ಪತ್ರದಲ್ಲಿನ ಎಲ್ಲಾ ವಿಷಯಗಳನ್ನು ಪರಿಶೀಲಿಸಿ, ಒಂದು ವಾರದ ಒಳಗಾಗಿ ಕೂಡಲೇ ಎಲ್ಲಾ ಅಕ್ರಮ ಮತ್ತು ನೈತಿಕ ಹುಚಟುವಟಿಕೆ ಕಡಿವಾಣ ಹಾಕಬೇಕು. ನಿರ್ಲಕ್ಷ ಮಾಡಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಪ್ರತಿಭಟನೆ ಮೂಲಕ ತಮ್ಮ ಗಮನಕ್ಕೆ ತರ ಬಯಸುತ್ತೇವೆ ಎಂದು ತಿಳಿಸಿದರು

ವರದಿ:- ಹೆಚ್ ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

The post ಗಂಗಾವತಿ ನಗರದಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ; ಕರ್ನಾಟಕ ರಕ್ಷಣಾ ವೇದಿಕೆ ಮನವಿ. appeared first on Hai Sandur kannada fortnightly news paper.

]]>
https://haisandur.com/2023/07/04/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf-%e0%b2%a8%e0%b2%97%e0%b2%b0%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%a1%e0%b3%86%e0%b2%af%e0%b3%81%e0%b2%a4%e0%b3%8d/feed/ 0
ಗಂಗಾವತಿವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಬದ್ಧ; ಗಾಲಿ ಜನಾರ್ದನ್ ರೆಡ್ಡಿ. https://haisandur.com/2023/07/01/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b2%be-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0/ https://haisandur.com/2023/07/01/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b2%be-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0/#respond Sat, 01 Jul 2023 09:10:52 +0000 https://haisandur.com/?p=32708 ವರದಿ:- ಹೆಚ್ ಮಲ್ಲೇಶ್ವರಭಂಡಾರಿ ಗಂಗಾವತಿ ತಾಲೂಕು ಕೊಪ್ಪಳ ಜಿಲ್ಲಾ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಬದ್ಧವಾಗಿರುವದಾಗಿ ಶಾಸಕ ಗಾಲಿಜನಾರ್ಧನ್ ರೆಡ್ಡಿ ಹೇಳಿದರು ಶುಕ್ರವಾರದಂದು ಕೆಸರಟ್ಟಿ ಗ್ರಾಮ ಹಾಗೂ ಪಂಚಾಯತಿ ವ್ಯಾಪ್ತಿಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಗ್ರಾಮ ಪಂಚಾಯತಿ ಕಾರ್ಯಾಲಯ ಕಟ್ಟಡ ಹಾಗೂ ಭಾರತ ನಿರ್ಮಾಣ ಸೇವ ಕೇಂದ್ರ ಮತ್ತು ಎನ್ ಆರ್ ಎಲ್ ಎಂ ವರ್ಕ್ ಶೆಡ್ ನೂತನ ಕಟ್ಟಡವನ್ನು ಶಾಸಕ ಗಾಲಿ […]

The post ಗಂಗಾವತಿವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಬದ್ಧ; ಗಾಲಿ ಜನಾರ್ದನ್ ರೆಡ್ಡಿ. appeared first on Hai Sandur kannada fortnightly news paper.

]]>
ವರದಿ:- ಹೆಚ್ ಮಲ್ಲೇಶ್ವರಭಂಡಾರಿ ಗಂಗಾವತಿ ತಾಲೂಕು

ಕೊಪ್ಪಳ ಜಿಲ್ಲಾ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಬದ್ಧವಾಗಿರುವದಾಗಿ ಶಾಸಕ ಗಾಲಿಜನಾರ್ಧನ್ ರೆಡ್ಡಿ ಹೇಳಿದರು ಶುಕ್ರವಾರದಂದು ಕೆಸರಟ್ಟಿ ಗ್ರಾಮ ಹಾಗೂ ಪಂಚಾಯತಿ ವ್ಯಾಪ್ತಿಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಗ್ರಾಮ ಪಂಚಾಯತಿ ಕಾರ್ಯಾಲಯ ಕಟ್ಟಡ ಹಾಗೂ ಭಾರತ ನಿರ್ಮಾಣ ಸೇವ ಕೇಂದ್ರ ಮತ್ತು ಎನ್ ಆರ್ ಎಲ್ ಎಂ ವರ್ಕ್ ಶೆಡ್ ನೂತನ ಕಟ್ಟಡವನ್ನು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಉದ್ಘಾಟಿಸಿ ಮಾತನಾಡಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳನ್ನು ಸಮಗ್ರ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ರಸ್ತೆ ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಎಂದು ಶಾಸಕರು ಹೇಳಿದರು

ರಾಷ್ಟ್ರೀಯ ಜಲಜೀವನ್ ಮಿಷನ್ ಎನ್ ಆರ್ ಎಲ್ ಎಂ ವರ್ಕ್ ಮತ್ತು ನರೇಗಾ ಕೆಲಸಗಳು ಸೇರಿದಂತೆ ಎಲ್ಲಾ ಕೆಲಸಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ನಡೆಸಿಕೊಡಲಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ವಿರುಪಮ್ಮ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ್ ಗೌಡ ಪಾಟೀಲ್, ಪಿಡಿಒ ಕೃಷ್ಣ ಎಚ್ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಮೊನೋಹರ್ ಗೌಡ, ಹೇರೂರು ಗ್ರಾಮೀಣ ಅಧ್ಯಕ್ಷ ಡಿಕೆ ದುರ್ಗಪ್ಪ, ಮಂಜುನಾಥ್ ಧಣಿ, ವಿರುಪಾಕ್ಷ ಪೊಲೀಸ್ ಪಾಟೀಲ್, ಜಿಲನ್ ಭಾಷಾ, ವಿಶ್ವನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

The post ಗಂಗಾವತಿವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಬದ್ಧ; ಗಾಲಿ ಜನಾರ್ದನ್ ರೆಡ್ಡಿ. appeared first on Hai Sandur kannada fortnightly news paper.

]]>
https://haisandur.com/2023/07/01/%e0%b2%97%e0%b2%82%e0%b2%97%e0%b2%be%e0%b2%b5%e0%b2%a4%e0%b2%bf%e0%b2%b5%e0%b2%bf%e0%b2%a7%e0%b2%be%e0%b2%a8%e0%b2%b8%e0%b2%ad%e0%b2%be-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0/feed/ 0
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಶಿವರಾಜ್ ಎಸ್ ತಂಗಡಗಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಲ್ಲಿಕಾರ್ಜುನಗೌಡ ಹೊಸಮನಿ ಒತ್ತಾಯ. https://haisandur.com/2023/05/16/%e0%b2%95%e0%b2%b2%e0%b3%8d%e0%b2%af%e0%b2%be%e0%b2%a3-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%ad%e0%b2%be%e0%b2%97%e0%b2%a6-%e0%b2%85%e0%b2%ad%e0%b2%bf%e0%b2%b5/ https://haisandur.com/2023/05/16/%e0%b2%95%e0%b2%b2%e0%b3%8d%e0%b2%af%e0%b2%be%e0%b2%a3-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%ad%e0%b2%be%e0%b2%97%e0%b2%a6-%e0%b2%85%e0%b2%ad%e0%b2%bf%e0%b2%b5/#respond Tue, 16 May 2023 10:56:48 +0000 https://haisandur.com/?p=32303 ಕಾರಟಗಿ: ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ಎಸ್ ತಂಗಡಗಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೇಸ್ ಯುವ ಮುಖಂಡ ಸಿದ್ದಾಪುರದ ಮಲ್ಲಿಕಾರ್ಜುನಗೌಡ ಹೊಸಮನಿ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದುವರೆಗೂ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಕಲ್ಯಾಣ (ಹೈದರಾಬಾದ್‌) ಕರ್ನಾಟಕ ಭಾಗದ ಶಾಸಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿಲ್ಲಾ, ಸರ್ವಜನಾಂಗದ ಹಿತಚಿಂತಕರು, ಪ್ರಾದೇಶಿಕ ಸಮತೋಲನದ ಯೋಚಕರು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಮೇಲೆ ಕಾಳಜಿ ಇರುವ ಸಿದ್ಧರಾಯ್ಯನವರ ನೇತೃತ್ವದ […]

The post ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಶಿವರಾಜ್ ಎಸ್ ತಂಗಡಗಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಲ್ಲಿಕಾರ್ಜುನಗೌಡ ಹೊಸಮನಿ ಒತ್ತಾಯ. appeared first on Hai Sandur kannada fortnightly news paper.

]]>
ಕಾರಟಗಿ: ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ಎಸ್ ತಂಗಡಗಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೇಸ್ ಯುವ ಮುಖಂಡ ಸಿದ್ದಾಪುರದ ಮಲ್ಲಿಕಾರ್ಜುನಗೌಡ ಹೊಸಮನಿ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದುವರೆಗೂ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಕಲ್ಯಾಣ (ಹೈದರಾಬಾದ್‌) ಕರ್ನಾಟಕ ಭಾಗದ ಶಾಸಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿಲ್ಲಾ, ಸರ್ವಜನಾಂಗದ ಹಿತಚಿಂತಕರು, ಪ್ರಾದೇಶಿಕ ಸಮತೋಲನದ ಯೋಚಕರು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಮೇಲೆ ಕಾಳಜಿ ಇರುವ ಸಿದ್ಧರಾಯ್ಯನವರ ನೇತೃತ್ವದ ಸರಕಾರದಲ್ಲಿ ಕಲ್ಯಾಣ (ಹೈದ್ರಾಬಾದ್) ಕರ್ನಾಟಕ ಭಾಗಕ್ಕೆ ಒಂದು ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು, ಅದರಲ್ಲಿ ವಿಶೇಷವಾಗಿ ಇಡೀ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಮತಗಳನ್ನು ಪಡೆದು, ಜನರ ಮನಸ್ಸುಗಳನ್ನು ಗೆದ್ದು ಬಂದಿರುವ, ಅಭಿವೃದ್ಧಿ ಹರಿಕಾರ, ಸೌಜನ್ಯಯುತ ರಾಜಕಾರಣಿ, ಸರ್ವಜನಾಂಗದ ಪ್ರೀತಿಗೆ ಪಾತ್ರರಾಗಿರುವ ಶಿವರಾಜ್ ತಂಗಡಗಿ ಅವರಿಗೆ ಬೃಹತ್ ನೀರಾವರಿ ಅಥವಾ ಲೋಕೋಪಯೋಗಿ ಇಲಾಖೆಯ ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮಲ್ಲಿಕಾರ್ಜುನಗೌಡ ಹೊಸಮನಿ ಅವರು ಆಗ್ರಹಿಸಿದ್ದಾರೆ.

ಈಗಾಗಲೇ ಹೈದರಾಬಾದ್‌ ಕರ್ನಾಟಕ ಭಾಗವು ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಔದ್ಯೋಗಿಕ ದೃಷ್ಟಿಯಿಂದ ಹಿಂದುಳಿದಿದೆ. ಹೀಗಾಗಿ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಸಂವಿಧಾನದ ವಿಧಿ 371 (ಜೆ) ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದಕ್ಕಾಗಿ ಹಾಗೂ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ, ಈ ಭಾಗದ ರೈತರು ನೀರಿನ ಕೊರತೆ ಅನುಭವಿತ್ತಿರುವುದನ್ನು ತಪ್ಪಿಸಲು, ತುಂಗಭದ್ರಾ ಜಲಾಶಯಕ್ಕೆ ಸಮನಾಂತರ ಜಲಾಶಯಗಳನ್ನು ನಿರ್ಮಿಸಲು ಶಿವರಾಜ್ ತಂಗಡಗಿ ಅವರನ್ನು ಉಪಮುಖ್ಯಮಂತ್ರಿಯಾಗಳನ್ನಾಗಿ ಮಾಡಬೇಕು.

ಕೊಪ್ಪಳ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಆಗಬೇಕಿವೆ. ಹೀಗಾಗಿ ಮೂರು ಬಾರಿ ಶಾಸಕರಾಗಿ, ವಿವಿಧ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿರುವ, ಅನುಭವಿ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿ ಅವರಿಗೆ ಈ ಬಾರಿ ಬೃಹತ್ ನೀರಾವರಿ ಅಥವಾ ಲೋಕೋಪಯೋಗಿ ಇಲಾಖೆಯ ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಆಮೂಲಕ ಶಿವರಾಜ್ ತಂಗಡಗಿ ಅವರ ಅನುಭವ ಸರ್ಕಾರದ ಮಟ್ಟದಲ್ಲಿ ಮತ್ತು ವಿಶೇಷವಾಗಿ ಹಿಂದುಳಿದ ಪ್ರದೇಶ ಎಂಬ ಹಣೆ ಪಟ್ಟಿ ಹೊಂದಿರುವ
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಉಪಯೋಗವಾಗುತ್ತದೆ. ಹೀಗಾಗಿ ಶಿವರಾಜ್ ತಂಗಡಗಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

The post ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಶಿವರಾಜ್ ಎಸ್ ತಂಗಡಗಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಲ್ಲಿಕಾರ್ಜುನಗೌಡ ಹೊಸಮನಿ ಒತ್ತಾಯ. appeared first on Hai Sandur kannada fortnightly news paper.

]]>
https://haisandur.com/2023/05/16/%e0%b2%95%e0%b2%b2%e0%b3%8d%e0%b2%af%e0%b2%be%e0%b2%a3-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%ad%e0%b2%be%e0%b2%97%e0%b2%a6-%e0%b2%85%e0%b2%ad%e0%b2%bf%e0%b2%b5/feed/ 0
ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ತಂಗಡಗಿ ಗೆಲುವು ನಿಶ್ಚಿತ; ಮಲ್ಲಿಕಾರ್ಜುನಗೌಡ ಹೊಸಮನಿ. https://haisandur.com/2023/05/11/%e0%b2%95%e0%b2%a8%e0%b2%bf%e0%b2%b7%e0%b3%8d%e0%b2%a0-20-%e0%b2%b0%e0%b2%bf%e0%b2%82%e0%b2%a6-30-%e0%b2%b8%e0%b2%be%e0%b2%b5%e0%b2%bf%e0%b2%b0-%e0%b2%ae%e0%b2%a4%e0%b2%97%e0%b2%b3-%e0%b2%85%e0%b2%82/ https://haisandur.com/2023/05/11/%e0%b2%95%e0%b2%a8%e0%b2%bf%e0%b2%b7%e0%b3%8d%e0%b2%a0-20-%e0%b2%b0%e0%b2%bf%e0%b2%82%e0%b2%a6-30-%e0%b2%b8%e0%b2%be%e0%b2%b5%e0%b2%bf%e0%b2%b0-%e0%b2%ae%e0%b2%a4%e0%b2%97%e0%b2%b3-%e0%b2%85%e0%b2%82/#respond Thu, 11 May 2023 12:40:24 +0000 https://haisandur.com/?p=32265 ಕಾರಟಗಿ: ಸುಶಿಕ್ಷಿತ, ಸೌಜನ್ಯದ ರಾಜಕಾರಣಿ, ಅಭಿವೃದ್ಧಿ ಹರಿಕಾರ ಎಂದು ಕರೆಯಲ್ಪಡುವ ಶಿವರಾಜ್ ತಂಗಡಗಿಯವರು ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕಾಂಗ್ರೇಸ್ ಯುವ ಮುಖಂಡ ಸಿದ್ದಾಪುರ ಮಲ್ಲಿಕಾರ್ಜುನಗೌಡ ಹೊಸಮನಿ ಅವರು ಹೇಳಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿಃ ಎಂಬಂತೆ ಬಿಜೆಪಿ ಪಕ್ಷ ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯನ್ನು ಹಾಗೂ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದೆ. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಕವಡೆ ಕಾಸಿನ ಬೆಲೆ ಇಲ್ಲಾ, ಬಿಜೆಪಿಯ ಶಾಸಕರಿಗೆ ಹಾಗೂ ವರಿಷ್ಠರಿಗೆ ಅಭಿವೃದ್ಧಿ ಮತ್ತು […]

The post ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ತಂಗಡಗಿ ಗೆಲುವು ನಿಶ್ಚಿತ; ಮಲ್ಲಿಕಾರ್ಜುನಗೌಡ ಹೊಸಮನಿ. appeared first on Hai Sandur kannada fortnightly news paper.

]]>
ಕಾರಟಗಿ: ಸುಶಿಕ್ಷಿತ, ಸೌಜನ್ಯದ ರಾಜಕಾರಣಿ, ಅಭಿವೃದ್ಧಿ ಹರಿಕಾರ ಎಂದು ಕರೆಯಲ್ಪಡುವ ಶಿವರಾಜ್ ತಂಗಡಗಿಯವರು ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕಾಂಗ್ರೇಸ್ ಯುವ ಮುಖಂಡ ಸಿದ್ದಾಪುರ ಮಲ್ಲಿಕಾರ್ಜುನಗೌಡ ಹೊಸಮನಿ ಅವರು ಹೇಳಿದ್ದಾರೆ.

ವಿನಾಶಕಾಲೇ ವಿಪರೀತ ಬುದ್ಧಿಃ ಎಂಬಂತೆ ಬಿಜೆಪಿ ಪಕ್ಷ ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯನ್ನು ಹಾಗೂ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಿದೆ. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಕವಡೆ ಕಾಸಿನ ಬೆಲೆ ಇಲ್ಲಾ, ಬಿಜೆಪಿಯ ಶಾಸಕರಿಗೆ ಹಾಗೂ ವರಿಷ್ಠರಿಗೆ ಅಭಿವೃದ್ಧಿ ಮತ್ತು ಜನಸೇವೆ ಬೇಕಾಗಿಲ್ಲಾ. ಏನಿದ್ದರು ಬರೀ ಅಧಿಕಾರದ ದಾಹ, ಹಣ ವ್ಯಾಮೋಹ ಮಾತ್ರ ಅವರಲ್ಲಿ ಇವೆ. ಕಳೆದ ಐದು ವರ್ಷಗಳ ಕಾಲ ಅಧಿಕಾರ ಪಡೆದು, ಹಣ ಮಾಡುವುದನ್ನು ಬಿಟ್ಟರೆ ಬಿಜೆಪಿಯವರು ಬೇರೆ ಏನು ಮಾಡಿಲ್ಲಾ. ಕನಕಗಿರಿ ಕ್ಷೇತ್ರದಾದ್ಯಂತ ಬಿಜೆಪಿಯವರು ಕಳೆದ ಐದು ವರ್ಷದಿಂದ ಬರೀ ದೌರ್ಜನ್ಯ ಅಕ್ರಮ ಮರಳು ದಂಧೆ, ಓಸಿ, ಇಸ್ಪೀಟ್ ಕ್ಲಬ್ ಸೇರಿದಂತೆ ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗಿ, ಕೆಟ್ಟ ದಂಧೆಗಳಿಗೆ ಬೆಂಬಲಿಸುತ್ತಾ ಬಂದಿದ್ದಾರೆ. ಬಿಜೆಪಿಯವರ ಕಾಲಾವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ.

ಇವೆಲ್ಲವನ್ನು ಮನಗಂಡಿರುವ ಅತ್ಯಂತ ಬುದ್ಧಿವತರು ಹಾಗೂ ಹೃದಯವಂತರಾದ ಕನಕಗಿರಿ ಕ್ಷೇತ್ರದ ಜನತೆಯು ಈ 2023ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಶಿವರಾಜ್ ತಂಗಡಗಿಯವರನ್ನು ಅತ್ಯಂತ ದೊಡ್ಡ ಬಹುಮತದೊಂದಿಗೆ ಗೆಲ್ಲಿಸಲು ನಿರ್ಧಾರಿಸಿ, ಮತ ಚಲಾಯಿಸಿದ್ದಾರೆ.

ಹೀಗಾಗಿ ಕನಕಗಿರಿ ಕ್ಷೇತ್ರದಾದ್ಯಂತ ಹತ್ತು ವರ್ಷಗಳಲ್ಲಿ ಕೆರೆ ತುಂಬುವ ಯೋಜನೆ, ರೈಸ್ ಟೆಕ್ನಾಲಜಿ ಪಾಕ್೯, ಡಿಪ್ಲೋಮಾ ಕಾಲೇಜ್, ಕನಕಗಿರಿ ಮತ್ತು ಕಾರಟಗಿ ತಾಲೂಕು ರಚನೆ, ಬಡ ರೈತರ ಹೊಲಗಳಿಗೆ ಏತ ನೀರಾವರಿ ಯೋಜನೆಗಳು, ಸಿದ್ದಾಪುರದಲ್ಲಿ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ, ಕಲ್ಯಾಣ ಮಂಟಪ ಸೇರಿದಂತೆ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಇಡೀ ರಾಜ್ಯಾದ್ಯಂತ ಹೆಸರುವಾಸಿಯಾಗಿರುವ, ಸುಶಿಕ್ಷತ, ಸೌಜನ್ಯದ ರಾಜಕಾರಣಿ, ಅಭಿವೃದ್ಧಿ ಹರಿಕಾರ ಎಂದೇ ಕರೆಯಲ್ಪಡುವ ಶಿವರಾಜ್ ತಂಗಡಿಗಿಯವರು ಸುಮಾರು 20ರಿಂದ 30 ಸಾವಿರ ಮತಗಳ ಅಂತರದಿಂದ ಗೆದ್ದು, ಇತಿಹಾಸ ನಿರ್ಮಿಸಲಿದ್ದಾರೆ.

ಇತಿಹಾಸ ನಿರ್ಮಿಸುವುದರೊಂದಿಗೆ ಗೆಲ್ಲುವ ಶಿವರಾಜ್ ತಂಗಡಗಿಯವರು, ಅವರ ಕನಸಿನಂತೆ ಮುಂದಿನ ದಿನಗಳಲ್ಲಿ ನವಲಿ ಬಳಿ 34 ಟಿ.ಎಮ್.ಸಿ ಸಾಮರ್ಥ್ಯ ದ ಸಮನಾಂತರ ಜಲಾಶಯ ಸೇರಿದಂತೆ ಇನ್ನಿತರ ಕಡೆ ಸಣ್ಣ-ಸಣ್ಣ ಸಮನಾಂತರ ಜಲಾಶಯಗಳು ನಿರ್ಮಿಸಿ, ಉದ್ಘಾಟನೆಗೊಳಿಸಲಿದ್ದಾರೆ.

ಸಿದ್ದಾಪುರ ಪಂಚಾಯಿತಿಯನ್ನು ಮೇಲ್ದರ್ಜಿಗೆ ಏರಿಸುವ ಮೂಲಕ ಪಟ್ಟಣ ಪಂಚಾಯತಿಯನ್ನಾಗಿ ಮಾಡುವುದು, ಕಾರಟಗಿ ನಗರದಲ್ಲಿ ಬೈ ಪಾಸ್ ರಸ್ತೆ ನಿರ್ಮಾಣ ಮಾಡುವುದು ಸೇರಿದಂತೆ ಕನಕಗಿರಿ ಕ್ಷೇತ್ರದಾದ್ಯಂತ ಮತ್ತೆ ಅಭಿವೃದ್ಧಿ ಪರ್ವ ಪ್ರಾರಂಭವಾಗುವುದರ ಜೊತೆಗೆ ಜನರು ಶಾಂತಿ, ನೆಮ್ಮದಿಯಿಂದ ಜೀವನ ನೆಡೆಸುವಂತೆ ಮುಂಬರುವ ಶಿವರಾಜ್ ತಂಗಡಗಿಯವರ ಅಧಿಕಾರದ ಕಾಲಾವಧಿಯಲ್ಲಿ ನಿರ್ಮಾಣವಾಗಲಿದೆ ಎಂದು ಮಲ್ಲಿಕಾರ್ಜುನಗೌಡ ಹೊಸಮನಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

The post ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ತಂಗಡಗಿ ಗೆಲುವು ನಿಶ್ಚಿತ; ಮಲ್ಲಿಕಾರ್ಜುನಗೌಡ ಹೊಸಮನಿ. appeared first on Hai Sandur kannada fortnightly news paper.

]]>
https://haisandur.com/2023/05/11/%e0%b2%95%e0%b2%a8%e0%b2%bf%e0%b2%b7%e0%b3%8d%e0%b2%a0-20-%e0%b2%b0%e0%b2%bf%e0%b2%82%e0%b2%a6-30-%e0%b2%b8%e0%b2%be%e0%b2%b5%e0%b2%bf%e0%b2%b0-%e0%b2%ae%e0%b2%a4%e0%b2%97%e0%b2%b3-%e0%b2%85%e0%b2%82/feed/ 0
ಒಂದು ಅವಕಾಶ ನಮಗೆ ಕೊಡಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ. https://haisandur.com/2023/05/03/%e0%b2%92%e0%b2%82%e0%b2%a6%e0%b3%81-%e0%b2%85%e0%b2%b5%e0%b2%95%e0%b2%be%e0%b2%b6-%e0%b2%a8%e0%b2%ae%e0%b2%97%e0%b3%86-%e0%b2%95%e0%b3%8a%e0%b2%a1%e0%b2%bf-%e0%b2%86%e0%b2%ae%e0%b3%8d-%e0%b2%86/ https://haisandur.com/2023/05/03/%e0%b2%92%e0%b2%82%e0%b2%a6%e0%b3%81-%e0%b2%85%e0%b2%b5%e0%b2%95%e0%b2%be%e0%b2%b6-%e0%b2%a8%e0%b2%ae%e0%b2%97%e0%b3%86-%e0%b2%95%e0%b3%8a%e0%b2%a1%e0%b2%bf-%e0%b2%86%e0%b2%ae%e0%b3%8d-%e0%b2%86/#respond Wed, 03 May 2023 04:33:19 +0000 https://haisandur.com/?p=32213 ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಸೂರ್ಯ ನಾಯಕನ ತಾಂಡಕ್ಕೆ ಭೇಟಿ ನೀಡಿ ಮತದಾರರಲ್ಲಿ ಮತಯಾಚನೆ ಮಾಡಿದರು, ಮತದಾರರ ಉದ್ದೇಶಿಸಿ ಮಾತನಾಡಿದ ಶರಣಪ್ಪ ಸಜ್ಜೀವಲ ಅವರು ಈ ಚುನಾವಣೆ ನಮ್ಮ ಮಕ್ಕಳ ಮುಂದಿನ ಭವಿಷ್ಯದ ಚುನಾವಣೆಯಾಗಿದೆ, ಎಲ್ಲಾ ಪಕ್ಷಗಳು ನಮ್ಮ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಿವೆ, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಅವು ವಿಫಲವಾಗಿವೆ, ನಮಗೆ ಉತ್ತಮ ಆರಂಭ, ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಫಲವಾಗಿದೆ, ನಮ್ಮ ಮಕ್ಕಳ […]

The post ಒಂದು ಅವಕಾಶ ನಮಗೆ ಕೊಡಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ. appeared first on Hai Sandur kannada fortnightly news paper.

]]>
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಸೂರ್ಯ ನಾಯಕನ ತಾಂಡಕ್ಕೆ ಭೇಟಿ ನೀಡಿ ಮತದಾರರಲ್ಲಿ ಮತಯಾಚನೆ ಮಾಡಿದರು, ಮತದಾರರ ಉದ್ದೇಶಿಸಿ ಮಾತನಾಡಿದ ಶರಣಪ್ಪ ಸಜ್ಜೀವಲ ಅವರು ಈ ಚುನಾವಣೆ ನಮ್ಮ ಮಕ್ಕಳ ಮುಂದಿನ ಭವಿಷ್ಯದ ಚುನಾವಣೆಯಾಗಿದೆ, ಎಲ್ಲಾ ಪಕ್ಷಗಳು ನಮ್ಮ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಿವೆ, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಅವು ವಿಫಲವಾಗಿವೆ, ನಮಗೆ ಉತ್ತಮ ಆರಂಭ, ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಫಲವಾಗಿದೆ, ನಮ್ಮ ಮಕ್ಕಳ ಭವಿಷ್ಯವನ್ನು ನೆನಪಿನಲ್ಲಿಟ್ಟುಕೊಂಡು ಈ ಬಾರಿ ತಾವೆಲ್ಲರೂ ಆಮ್ ಆದ್ಮಿ ಪಕ್ಷಕ್ಕೆ ಮತ ಚಲಾಯಿಸಬೇಕೆಂದು ವಿನಂತಿ ಮಾಡಿದರು.

ಬಿಜೆಪಿ ಸರ್ಕಾರವು 40% ಸರ್ಕಾರ ಎಂದು ಕುಖ್ಯಾತಿಯನ್ನು ಪಡೆದು, ಮತದಾನ ಮಾಡಿ ಗೆಲ್ಲಿಸಿದ ಎಲ್ಲಾ ಮತದಾರರಿಗೆ ಅವಮಾನ ಮಾಡಿದೆ ಮತ್ತು ಅವರನ್ನು ವಂಚಿಸಿದೆ, ಪ್ರತಿಭಾವಂತ ನಮ್ಮ ಮಕ್ಕಳು ಸರ್ಕಾರಿ ನೌಕರಿ ಗಾಗಿ 50 ಲಕ್ಷದಿಂದ 80 ಲಕ್ಷ ಲಂಚ ಕೊಡಬೇಕಾದ ಭ್ರಷ್ಟಾಚಾರದ ಕೋಪವನ್ನು ಅವರು ತಯಾರು ಮಾಡಿದ್ದಾರೆ, ಇಂತಹ ಸರ್ಕಾರಗಳು ಬಂದರೆ ಬಡವರ ಮಕ್ಕಳು ಎಂದಾದರೂ ಸರ್ಕಾರಿ ನೌಕರಿಯನ್ನು ಹಿಡಿಯಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಈ ಭ್ರಷ್ಟಾಚಾರದ ಸರ್ಕಾರವನ್ನು ಕಿತ್ತೊಯ್ಯುಗೆಯುವ ಸಮಯ ಈಗ ನಿಮಗೆ ಬಂದಿದೆ, ಅದನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು. ಕಾಂಗ್ರೆಸ್ನವರು ಸುಳ್ಳು ಭರವಸೆಗಳ ಆಧಾರದ ಮೇಲೆ ಚುನಾವಣೆಯನ್ನು ಎದುರಿಸುತ್ತಿದ್ದು, ತಾವು ಈಗ ಅಧಿಕಾರದಲ್ಲಿರುವ ಯಾವುದೇ ರಾಜ್ಯದಲ್ಲಿ ತರದೆ ಇದ್ದಂತ ಯೋಜನೆಗಳನ್ನು ಈಗ ಘೋಷಣೆ ಮಾಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಮೋಸದ ಮಾತುಗಳಿಗೆ ನೀವು ಬಲಿಯಾಗಬೇಡಿ, ಕಾಂಗ್ರೆಸ್ ನವರಗೆ ಅಧಿಕಾರದಲ್ಲಿ ಇರುವಂತಹ ರಾಜ್ಯದಲ್ಲಿ ಯೋಜನೆಗಳನ್ನ ಜಾರಿ ಮಾಡುವ ಮನಸ್ಸಿಲ್ಲ, ಆದರೆ ಅಧಿಕಾರಕ್ಕಾಗಿ ಸುಳ್ಳು ಭರವಸೆ ನೀಡಿ ನಮ್ಮನ್ನು ವಂಚಿಸುತ್ತಿದ್ದಾರೆ.ಕಾಂಗ್ರೆಸ್ ನವರೇ ನಿಮಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿ ಇದ್ದಲ್ಲಿ ನೀವು ಈಗ ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ಯಾಕೆ ಘೋಷಣೆ ಮಾಡಿರುವ ಯೋಜನೆಗಳನ್ನು ಜಾರಿ ಮಾಡಿಲ್ಲ, ಇದಕ್ಕೆ ನೀವು ಉತ್ತರ ಹೇಳಲೇಬೇಕೆಂದು ಪ್ರಶ್ನಿಸಿದರು. ಆದ್ದರಿಂದ ತಾವೆಲ್ಲರೂ ಪ್ರಾಮಾಣಿಕವಾಗಿ ಜನರಿಗೆ ನೀಡಿದ ಮಾತನ್ನು ನೆರವೇರಿಸಿದ ಆಮ್ ಆದ್ಮಿ ಪಕ್ಷದ ಪೊರಕೆ ಗುರುತಿಗೆ ಮತ ಚಲಾಯಿಸಬೇಕೆಂದು ವಿನಂತಿ ಮಾಡಿದರು.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ರಾಘವೇಂದ್ರ ಸಿದ್ದಿಕೇರಿ, ರೇಣುಕಾ, ಬಸವರಾಜ್, ಪರಶುರಾಮ್ ಒಡೆಯರ್, ಹನುಮೇಶ್ ಬೋವಿ, ಜ್ಯೋತಿ ಲಕ್ಷ್ಮಿ, ವಿರುಪಣ್ಣ, ದಾಕ್ಷಾಯಿಣಿ, ಚಂದ್ರಶೇಖರ್ ವಗ್ಗ ಹಾಗೂ ಕಾರ್ಯಕರ್ತರು ಹಾಜರಿದ್ದರು.

The post ಒಂದು ಅವಕಾಶ ನಮಗೆ ಕೊಡಿ: ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ. appeared first on Hai Sandur kannada fortnightly news paper.

]]>
https://haisandur.com/2023/05/03/%e0%b2%92%e0%b2%82%e0%b2%a6%e0%b3%81-%e0%b2%85%e0%b2%b5%e0%b2%95%e0%b2%be%e0%b2%b6-%e0%b2%a8%e0%b2%ae%e0%b2%97%e0%b3%86-%e0%b2%95%e0%b3%8a%e0%b2%a1%e0%b2%bf-%e0%b2%86%e0%b2%ae%e0%b3%8d-%e0%b2%86/feed/ 0