ಗಂಗಾವತಿ; ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಹೊಲದ ಪಕ್ಕದಲ್ಲಿ ದುರ್ವಾಸನೆ..!! ಸ್ವಚ್ಛತೆ ಯಾವಾಗ.?

0
41

ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನ ಗುಂಡಮ್ಮ ಕ್ಯಾಂಪ್ ಹತ್ತಿರದ ದುರ್ಗಮ್ಮನ ಹಳ್ಳದ ಬೈಪಾಸ್ ರಸ್ತೆಯ ಪ್ರಗತಿಪರ ರೈತರ ಶಿವಣ್ಣ ಚಳ್ಳಿಕೇರಿ ಅವರ ಹೊಲದ ಪಕ್ಕದಲ್ಲಿ ಜಾನುವಾರು ಮಾಂಸ ಹಾಗೂ ಕೋಳಿ ಮಾಂಸದ ತ್ಯಾಜ್ಯವನ್ನು ಹಾಕುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ನಾಗರಿಕರಿಗೆ ತುಂಬಾ ತೊಂದರೆಯಾಗಿದೆ.

ಜಾನುವಾರ ಮಾಂಸ ಹಾಗೂ ಕೋಳಿ ಮಾಂಸದ ತ್ಯಾಜ್ಯದ ಕೆಟ್ಟ ದುರ್ವಾಸನೆಯಿಂದ ನಾಗರಿಕರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಕೆಟ್ಟ ದುರ್ವಾಸನೆಯಿಂದ ಸಾಂಕ್ರಾಮಿಕ ರೋಗಗಳ ಹಾರಾಡುವ ಸಾಧ್ಯತೆಯಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗಂಗಾವತಿಯ ಜನಪ್ರಿಯ ಶಾಸಕರಾದ ಸನ್ಮಾನ ಶ್ರೀ ಗಾಲಿ ಜನಾರ್ದನ್ ರೆಡ್ಡಿ ಅವರಿಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಮಾನ್ಯ ಪೌರಯುಕ್ತರು ಗೆ ಪತ್ರ ಬರೆಯಲಾಗಿದ್ದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ

ಜನಪ್ರತಿನಿಧಿಗಳು ನಗರಸಭೆಯ ಅಧಿಕಾರಿಗಳು ಪ್ರತಿದಿನ ಇದೇ ರಸ್ತೆಯ ಮೂಲಕ ಸಂಚರಿಸಿ ಈ ತ್ಯಾಜ್ಯವನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ. ನಗರಸಭೆಯ ಪೌರಾಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೆ ತ್ಯಾಜ್ಯವನ್ನು ಹಾಕದಂತೆ ಸಂಬಂಧಪಟ್ಟವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಇಲ್ಲದಿದ್ದರೆ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಲಾಗುವುದೆಂದು ಪ್ರಗತಿಪರ ರೈತರ ಶಿವಣ್ಣ ಚಳ್ಳಿಕೇರಿ ಅವರು ತಿಳಿಸಿದ್ದಾರೆ.

ವರದಿ:- ಹೆಚ್. ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

LEAVE A REPLY

Please enter your comment!
Please enter your name here