ಗಂಗಾವತಿ ನಗರದಲ್ಲಿ ನಡೆಯುತ್ತಿರುವ ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ; ಕರ್ನಾಟಕ ರಕ್ಷಣಾ ವೇದಿಕೆ ಮನವಿ.

0
22

ಗಂಗಾವತಿ ನಗರದಲ್ಲಿ ನಡೆಯುತ್ತಿರುವ ಅಕ್ರಮ ಅನೈತಿಕ ಚಟುವಟಿಕೆಗಳ ಇಸ್ಪೀಟ್ ಹಾಗೂ ಮರಳು ದಂಧೆ ಮಟ್ಕಾ ಓಸಿ ಮತ್ತು ಪಡಿತರ ಆಹಾರ ಧಾನ್ಯಗಳ ಅಕ್ರಮ ಮಾರಾಟ ಈ ಎಲ್ಲಾ ಅಕ್ರಮ ದಂಧೆಗಳಿಗೆ ಕೂಡಲೆ ಕಡಿವಾಳ ಹಾಕಬೇಕು. ಅಕ್ರಮ ದಂಡೆ ಮಾಡುವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿಂದ ಸಂಕೇತವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಗಂಗಾವತಿ ನಗರದಲ್ಲಿ ಅಕ್ರಮ ನೈತಿಕ ಚಟುವಟಿಕೆ ಇತ್ತೀಚಿಗೆ ದಿನಗಳಲ್ಲಿ ಜಾಸ್ತಿಯಾಗಿದ್ದು ಅನೈತಿಕ ಚಟುವಟಿಗಳಾದ ಅಂದರ್ ಬಾರ್ ದಂದೆಯೂ ಗಂಗಾವತಿ ನಗರದಲ್ಲಿ ಹಾಗೂ ತಾಲೂಕಿನ ಉದ್ದಕ್ಕೂ ಹೆಚ್ಚು ಕಡಿಮೆ ವರವಲಯದ ಪ್ರದೇಶದಲ್ಲಿ ದಂದೆ ಮಾಡುತ್ತಿದ್ದಾರೆ.

ಇದಕ್ಕೆ ಯುವಕರು ರೈತರು ಕೂಲಿಕಾರ್ಮಿಕರು ಬಲಿಯಾಗುತ್ತಿದ್ದಾರೆ, ಹಾಗೇ ಇದೇ ರೀತಿಯಾಗಿ ಮಟ್ಕಾ ದಂದೆಯು ಕೂಡ ಗಂಗಾವತಿ ನಗರದ ವಾರ್ಡುಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಇದರಿಂದ ಬಡ ಕುಟುಂಬಗಳು ಹಾಳಾಗಿ ಬೀದಿ ಪಾಲಾಗುತ್ತಿವೆ. ಮರಳು ದಂದೆ ಗಂಗಾವತಿ ತಾಲೂಕಿನ ಸುತ್ತಮುತ್ತಲಿನ ತುಂಗಭದ್ರಾ ನದಿಯಿಂದ ಹಳ್ಳ ಕೊಳ್ಳಗಳಲ್ಲಿ ಅಕ್ರಮವಾಗಿ ಟ್ರ್ಯಾಕ್ಟರ್ ಹಾಗೂ ಲಾರಿ ಮೂಲಕ ತೆಗೆದುಕೊಂಡು ಬರುತ್ತಿದ್ದಾರೆ.

ಸದರಿ ಮರಳಿಗೆ ಯಾವುದೇ ರೀತಿಯಾದ ರಾಯಲ್ಟಿ ಕಟ್ಟದೆ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ವಂಚನೆ ಮಾಡಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ. ಇದನ್ನು ಕೂಡಲೇ ತಡೆಹಿಡಿದು ಅಕ್ರಮ ಮರಳು ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಗಂಗಾವತಿ ನಗರದ ಘಟಕ ಅಧ್ಯಕ್ಷರಾದ ಯಮನೂರು ಭಟ್ ತಿಳಿಸಿದರು

ಗಂಗಾವತಿ ನಗರದಲ್ಲಿ ಅತಿ ಹೆಚ್ಚು ವಾಸ ಮಾಡುತ್ತಿರುವ ದಲಿತರ ಏರಿಯಾಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದು ದಲಿತ ಕುಟುಂಬಗಳು ಇದರಿಂದ ಬೀದಿಗೆ ಬರುತ್ತಿವೆ ಮತ್ತು ಇದರಿಂದ ಯುವಕರು ಕುಡಿತದ ಚಟಕ್ಕೆ ಬಲಿಯಾಗಿ ಹೋಗಿದ್ದಾರೆ. ಅಕ್ರಮ ಮಧ್ಯ ಮಾರುವರ ಮೇಲೆ ಹಾಗೂ ಪಡಿತರ ಆಹಾರ ಧಾನ್ಯಗಳು ಗಂಗಾವತಿಯಿಂದ ಗ್ರಾಮೀಣ ಪ್ರದೇಶಕ್ಕೆ ಹೋಗಿ ಅಲ್ಲಿಂದ ಅಕ್ರಮವಾಗಿ ಪ್ರತಿದಿನ ಸಂಗ್ರಹಿಸಿಕೊಂಡು ಗಂಗಾವತಿ ನಗರಕ್ಕೆ ತಂದು ಅವರವರ ಮನೆಯಲ್ಲಿ ಮತ್ತು ಕೆಲವೊಂದು ಗೋದಾಮುಗಳಲ್ಲಿ, ರೂಮುಗಳಲ್ಲಿ ಅಕ್ರಮವಾಗಿ ಪಡಿತರ ಧಾನ್ಯಗಳನ್ನು ಶೇಖರಣೆ ಮಾಡುತ್ತಿದ್ದಾರೆ.

ಅಕ್ರಮ ಪಡಿತರ ಧಾನ್ಯಗಳ ಲಾರಿಯಲ್ಲಿ ಬೆಂಗಳೂರು ಮತ್ತು ಮೈಸೂರಿನಂತ ನಗರಗಳಿಗೆ ಅಕ್ಕಿಯನ್ನು ಅಕ್ರಮವಾಗಿ ಸಾಗಣಿಕೆ ಮಾಡುತ್ತಿದ್ದಾರೆ. ಗಂಗಾವತಿ ನಗರದಲ್ಲಿ ಇಂತ ದಂದೇ ಎಗ್ಗಿಲ್ಲದೆ ಸಾಗಿದೆ. ಇದನ್ನು ತಕ್ಷಣ ತಡೆಹಿಡಿದು ಅವರ ಮೇಲೆ ಸೂಕ್ತ ಕ್ರಮವನ್ನು ಜರಗಿಸಿ ಅಕ್ರಮ ಪಡಿತರ ನಡೆಯದಂತೆ.

ಸದರಿ ನಮ್ಮ ಮನವಿ ಪತ್ರದಲ್ಲಿನ ಎಲ್ಲಾ ವಿಷಯಗಳನ್ನು ಪರಿಶೀಲಿಸಿ, ಒಂದು ವಾರದ ಒಳಗಾಗಿ ಕೂಡಲೇ ಎಲ್ಲಾ ಅಕ್ರಮ ಮತ್ತು ನೈತಿಕ ಹುಚಟುವಟಿಕೆ ಕಡಿವಾಣ ಹಾಕಬೇಕು. ನಿರ್ಲಕ್ಷ ಮಾಡಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಪ್ರತಿಭಟನೆ ಮೂಲಕ ತಮ್ಮ ಗಮನಕ್ಕೆ ತರ ಬಯಸುತ್ತೇವೆ ಎಂದು ತಿಳಿಸಿದರು

ವರದಿ:- ಹೆಚ್ ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

LEAVE A REPLY

Please enter your comment!
Please enter your name here