ಭಾಗ್ಯ, ಕುಟೀರ ಜ್ಯೋತಿ ಯೋಜನೆ,ಉಚಿತ ವಿದ್ಯುತ್ ಹೆಚ್ಚಳ ಹಾಗೂ ಬಾಕಿ ಮನ್ನಾಕ್ಕೆ ಒತ್ತಾಯ.

0
53

ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕಿನಲ್ಲಿ ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಗೃಹಜೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತಿರುವುದು ಸ್ವಾಗತ ಗೃಹಜೋತಿ ಯೋಜನೆಯಡಿ ಬಡವರು ಬಳಸುವ ಭಾಗ್ಯಜ್ಯೋತಿ ಕುಟೀರ ಜ್ಯೋತಿ ಮುಂತಾದ ಯೋಜನೆಗಳ ಫಲಾನುಭವಿಗಳಿಗೂ 200 ಯೂನಿಟ ವಿದ್ಯುತ್ ಬಳಕೆಯ ಯೋಜನೆಯಾಡಿ ಪರಿಗಣಿಸಬೇಕು.
ಭಾಗ್ಯ ಮತ್ತು ಕುಟೀರ ಜ್ಯೋತಿ ಯೋಜನೆಗಳ ಫಲಾನುಭವಿಗಳ ಹಳೆ ಬಾಕಿಯನ್ನು ಮನ್ನಾ ಮಾಡುವಂತೆ ಸಿಪಿಐಎಂ ಪಕ್ಷ ರಾಜ್ಯ ಕಾರ್ಯದರ್ಶಿ ಯು ಬಸವರಾಜ್ ಒತ್ತಾಯಿಸಿದ್ದಾರೆ.

ಅವರು ನಗರದ ಸಿಪಿಐಎಂ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒತ್ತಾಯಿಸುತ್ತದೆ. ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಬಡವರಿಗೆ ಹಾಕಿರುವ ಕಾಲಾಮಿತಿಯ ಗೃಹ ಜ್ಯೋತಿ ಫಲಾನುಭವಿಗಳ ನಡುವೆ ಇವರಿಗೆ ಮಾಡಿರುವ ತಾರತಮ್ಯವಾಗಿದೆ. ಈ ಬಡವರು ಕನಿಷ್ಠ ಮೂರು ಬಲ್ಪು ಎರಡು ಫ್ಯಾನು ಹಾಗೂ ಒಂದು ತ್ರೀ ಪಿನ್ ಪ್ಲಗ್ ಉಪಯೋಗಿಸಲು ಅಗತ್ಯ ಇರುವಷ್ಟು ವಿದ್ಯುತ್ ಒದಗಿಸಲು ನ್ಯಾಯವಾಗಿದೆ. ಬಡವರು ಬಳಸುವ ವಿದ್ಯುತ್ತಿಗೆ ಇನ್ನಷ್ಟು ಮಿತಿ ಏರಿ ಇದರಿಂದ ಅವರಿಗೆ ವಿದ್ಯುತ್ ಕಂಪನಿಗಳು ಹಲವು ಸಾವಿರ ರೂಪಾಯಿಗಳ ವಿದ್ಯುತ್ ಬಾಕಿ ಬಿಲ್ ನೀಡಿವೆ.

ಆ ಬಾಕಿಯನ್ನು ನೀಡದೆ ಈ ಫಲಾನುಭವಿಗಳಿಗೆ ಗೃಹಜೋತಿ ಯೋಜನೆಯಂಬುದು ಮರೀಚಿಕೆಯಾಗಿದೆ. ಅದರಿಂದ ರಾಜ್ಯ ಸರ್ಕಾರ ಗೃಹಜೋತಿ ಈ ಬಡವರಿಗೆ ದೊರೆಯುವಂತಾಗಲು ಹಳೆಯ ಬಾಕಿಯನ್ನು ಮನ್ನ ಮಾಡುವುದು ಅಗತ್ಯವಿದೆ. ಗೃಹ ಜ್ಯೋತಿ ಮೂಲಕ ರಾಜ್ಯ ಸರ್ಕಾರ ಉಚಿತ ಯೋಜನೆಗೆ ಕ್ರಮ ವಹಿಸಿರುವುದು ಸ್ವಾಗತವಾಗಿದ್ದರು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ದರಗಳನ್ನು ನಿಯಂತ್ರಣವಾಗಿ ಏರಿಸಲು ಅನುಮತಿ ನೀಡುವ ಮೂಲಕ ಜನಸಾಮಾನ್ಯರಿಗೆ. ಬಡವರಿಗೆ ರೈತರ ಮೇಲೆ ದರ ಹೆಚ್ಚಳದ ಹೊರೆ ಹಾಕಲಾಗಿದೆ. ಈ ಬೆಲೆ ಏರಿಕೆಯೂ ಅಂತಿಮವಾಗಿ ವಾಣಿಜ್ಯ ಸಂಸ್ಥೆಗಳ ಮೂಲಕ ಜನಸಾಮಾನ್ಯರ ಮೇಲೆ ವರ್ಗಾಯಿಸಲ್ಪಡುತ್ತದೆ.

ಇದು ಜನಸಾಮಾನ್ಯರು ಬಳಸುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಸಣ್ಣ ಕೈಗಾರಿಕೆಗಳಿಗೆ ಹೊರೆಯಾಗಿ ಅವುಗಳ ಮುಚ್ಚು ಹೋಗಲು ಮತ್ತು ಅಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರ ಕುಟುಂಬಗಳು ನಿರುದ್ಯೋಗಗಳನ್ನಾಗಿಸಿ ಬೀದಿಗೆ ದೂಡಲಾಗಿದೆ. ಕೆಇಆರ್‌ಸಿಯು. ಈಗಾಗಲೇ ರೈತರ ನೀರಾವರಿ ಪಂಪ್ ಸೆಟ್ಟಿಗಳಿಗೆ ಆರ್ ಆರ್ ನಂಬರ್ಗಳಿಗೆ ಆಧಾರ್ ನಂಬರ್ ಜೋಡಿಸಿದ್ದಾರೆ. ಮಾತ್ರ ಪಂಪ್ ಸೆಟ್ಟುಗಳ ಉಚಿತ ವಿದ್ಯುತ್ ಎಂದು ಆದೇಶ ಹೊರಡಿಸಿರುವುದು ರಾಜ್ಯದ ಕೃಷಿ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ನೀತಿಯಾಗಿದೆ. ರಾಜ್ಯ ಸರ್ಕಾರ ಮಧ್ಯಪ್ರದೇಶಿಸಿ ಈ ಬೆಲೆ ಏರಿಕೆಯ ಹೊರೆಯನ್ನು ತಡೆಯುವಂತೆ ಮತ್ತು ಪ್ರತಿ ವರ್ಷವೂ ಬೆಲೆ ಏರಿಕೆಗೆ ಅನುಮತಿಸುವ ಕೆ ಆರ್ ಸಿ ಸಿ ವ್ಯವಸ್ಥೆಯನ್ನು ರದ್ದುಗೊಳಿಸಿ ಬೆಲೆ ನಿಯಂತ್ರಣ ಅಧಿಕಾರ ಪುನಃ ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಕೇಂದ್ರ ಸರ್ಕಾರ ಪಾರ್ಲಿಮೆಂಟ್ ಮುಂದುಗಡೆ ಸಾರ್ವಜನಿಕ ರಂಗದ ವಿದ್ಯುತ್ ಉತ್ಪಾದನೆ. ವಿತರಣೆ ಹಾಗೂ ಸರಬರಾಜು ಕ್ಷೇತ್ರಗಳನ್ನು ಕಾರ್ಪೊರೇಟ್ ಲೂಟಿಗೆ ತೆರೆಯುವ ದುರುದ್ದೇಶದಿಂದ ದೇಶದ ನೈಜ ಅಭಿವೃದ್ಧಿಯ ವಿರೋಧಿಯಾಗಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡುವ ಮಸುದಿಗೆ ವಾಪಸ್ ಪಡೆಯಬೇಕು. ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಈ ಖಾಸ್ಗೀಕರಣದ ಪ್ರಸ್ತಾಪವನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ನಿರುಪಾದಿ ಬೆಣಕಲ್ ಸುಂಕಪ್ಪ ಎಸ್ ವರಲಕ್ಷ್ಮಿ ಜಿ ನಾಗರಾಜ್ ಚಂದ್ರಪ್ಪ ಹೊಸಕೆರ ಇತರರು ಇದ್ದರು.

-ವರದಿ; ಹೆಚ್ ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

LEAVE A REPLY

Please enter your comment!
Please enter your name here