ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿರುವ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗಿ ರದ್ದುಪಡಿಸಿ.

0
31

ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಯಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ ಎಲ್ಲೆಡೆ ಕನ್ನಡ ನಾಮಪಲಕವನ್ನು ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ನಗರಸಭೆ ಪೌರಾಯುಕ್ತ ಎಚ್ಎನ್ ಬಜಕ್ಕನವರು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕರವೇ ಜಿಲ್ಲೆ ಅಧ್ಯಕ್ಷ ಬಿ ಗಿರೀಶ್ ನಂದ ಜ್ಞಾನ ಸುಂದರ್ ಮಾತನಾಡಿ ನಗರ ವ್ಯಾಪ್ತಿಯಲ್ಲಿ ಹಲವಡೆ ಪ್ರಾರಂಭಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡದ ನಾಮಫಲಕವನ್ನು ಹಾಕದೆ ಅನ್ಯ ಭಾಷೆಯ ನಾಮಫಲಕವನ್ನು ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವುದನ್ನು ಕರವೇ ಬಲವಾಗಿ ಖಂಡಿಸುತ್ತದೆ ಎಂದರು. ಇನ್ನು ಕೆಳಗಡೆ ನಮ್ಮ ಮಾತೃಭಾಷೆ ಹಾಗೂ ಆಡಳಿತ ಭಾಷೆಯಾದ ಕನ್ನಡವನ್ನು ಸಣ್ಣ ಪ್ರಮಾಣದಲ್ಲಿ ಹಾಕಿಕೊಂಡು ಅನ್ಯ ಭಾಷೆಯ ನಾಮಪಲಕವನ್ನು ದೊಡ್ಡದಾಗಿ ವೈಭವಿಕರಿಸುತ್ತಿರುವುದನ್ನು ಕಂಡು ಕಾಣದಂತೆ ಕುಳಿತಿರುವ ನಗರಸಭೆ ಆಡಳಿತಕ್ಕೆ ಕೈಗನ್ನಡಿಯಂತಿದೆ ಎಂದರು.

ಕನ್ನಡ ಭಾಷೆಯನ್ನು ಬಳಸದೆ ಅನ್ಯ ಭಾಷೆಯ ಓಲೈಕೆಯು ನಮ್ಮ ನಾಡಿಗೆ ಮಾಡಿದ ಘೋರ ಅನ್ಯಾಯವಾಗಿದ್ದು ನಗರದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಅನುಷ್ಠಾನಗೊಳಿಸುವುದು ಸ್ಥಳೀಯಸಂಸ್ಥೆಗಳ ಜವಾಬ್ದಾರಿಯಾಗಿದ್ದು. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಮಸ್ಯೆಗಳ ನಿಯಮ 1963ರ ಪ್ರಕಾರ ಕನ್ನಡ ಭಾಷೆ ನಾಮಫಲಕ ಅಳವಡಿಸುವುದನ್ನು ಹಾಗೂ ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದರು.

ನಾಮಫಲಕದ ಶೇಕಡ 60ರಷ್ಟು ಜಾಗದಲ್ಲಿ ಕನ್ನಡ ಕಡ್ಡಾಯ ನಿಯಮ ಪ್ರಥಮ ಆದ್ಯತೆಯಲ್ಲಿ ದಪ್ಪ ಅಕ್ಷರಗಳಲ್ಲಿ ಕನ್ನಡದಲ್ಲಿ ಉಳಿದ ಶೇಕಡ 40ರಷ್ಟು ಜಾಗದಲ್ಲಿ ಅಂಗಡಿ ಮಾಲೀಕರು ಇತರೆ ಭಾಷೆಯಲ್ಲಿ ತಮ್ಮ ನಾಮಫಲಕ ಪ್ರದರ್ಶಿಕೊಳ್ಳಬಹುದಾಗಿದ್ದು ಈ ನಿಯಮವನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಪ್ರದರ್ಶಿಸುತ್ತಿದ್ದಾರೆ. ಕೂಡಲೆ ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಉದ್ದಿಮೆ ವಾಣಿಜ್ಯ ಸಂಕೀರ್ಣ ಹಾಗೂ ಮಾರಾಟ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಹಾಕದವರ ಪರವಾನಿಗೆ ರದ್ದುಪಡಿಸಿ ಎಲ್ಲೆಡೆ ಕನ್ನಡ ನಾಮಪಲಕವನ್ನು ಕಡ್ಡಾಯ ಗೊಳಿಸಬೇಕು ಎಂದು ಮನವಿ ಮಾಡಿಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತರು ಎಚ್ ಎನ್ ಬಜಕ್ ನವರು ಅವರು ನಿಯಮ ಪಾಲಿಸಿದ ಅಂಗಡಿ ಮುಗ್ಗಟ್ಟುಗಳ ಮಾಲೀಕರ ಮೇಲೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷ ಹನುಮಂತಪ್ಪ ಬೆಸ್ತರ್ ತಾಲೂಕು ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ ಕರವೇ ಮುಖಂಡರಾದ ನಾಗರಾಜ್ ಹಾಲಳ್ಳಿ ಶರಣಯ್ಯ ಹಿರೇಮಠ ಕುಮಾರಸ್ವಾಮಿ ನಾಗರಹಳ್ಳಿ ಮಂಜು, ಗೊಂದಿ ಬಸವರಾಜ್, ಚಿಕ್ಕೆನಕೊಪ್ಪ ನಾಗರಾಜ್ ವಾಲ್ಮೀಕಿ ಮಹೇಶ್ ಹರಿಜನ, ಮಾರುತಿ ಹೆಚ್ ಇತರು ಭಾಗವಹಿಸಿದರು.

ವರದಿ:- ಹೆಚ್.ಮಲ್ಲೇಶ್ವರ ಭಂಡಾರಿ ಗಂಗಾವತಿ ತಾಲೂಕು ವರದಿಗಾರರು

LEAVE A REPLY

Please enter your comment!
Please enter your name here