ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

0
10

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಹಾಗೂ ರೌಡಿಶೀಟರ್ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರ ವಿರುದ್ಧ ದೂರು ದಾಖಲಿಸಿಕೊಂಡ ಆಹಾರ ಇಲಾಖೆ ತನಿಖೆ ನಡೆಸಿ, ದಂಡವಸೂಲಿ ಮಾಡಿದ ಪ್ರಕರಣವು ಜರುಗಿದೆ.

ಹತ್ತು ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿ ಆಗಿರುವ ಹಾಗೂ ರೌಡಿ ಶೀಟರ್ ಆಗಿರುವ ಬಿಜೆಪಿ ಮುಖಂಡ ಮಹಿಬೂಬ್ ಸಾಬ್ ಮುಲ್ಲಾ ಮತ್ತು ಈತನ ಹೆಂಡತಿ ಸಾಜೀದಾ ಬೇಗಂ ಈ ಇಬ್ಬರು ದಂಪತಿಗಳು ಮತ್ತು ಇವರ ಕುಟುಂಬವು ಆರ್ಥಿಕವಾಗಿ ಎಲ್ಲಾ ರೀತಿಯಿಂದಲೂ ಸಬಲರಾಗಿದ್ದು, ಸದರಿ ಕುಟುಂಬದವರು ಐಶಾರಾಮಿ ಜೀವನ‌ ನೆಡೆಸುತ್ತಿರುವುದರ ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಕಾಲೇಜ್ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅಲ್ಲದೇ ಎ.ಸಿ, ಟೆಲಿವಿಜನ್, ಕಂಪ್ಯೂಟರ್, ಲ್ಯಾಪ್ ಟಾಪ್, ವಾಷಿಂಗ್ ಮಷಿನ್ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರದ ಓಡವೆಗಳು ಮತ್ತು ಸಾವಿರಾರು ರೂಪಾಯಿ ಹಾಗೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೊಬೈಲ್ ಗಳನ್ನು ಹಾಗೂ ಟೊಯೊಟಾ ಇನ್ನೊವಾ ಕ್ರಿಸ್ಟಾ ಹಾಗೂ ಮಾರುತಿ ಸ್ವಿಷ್ಟ್ ಡಿಜೈರ್ ಕಾರುಗಳನ್ನು ಹಾಗೂ 2 ಲಾರಿ, 1 ಟಾಟಾ ಎ.ಸಿ.ಇ ಮಿನಿ ಟ್ರಕ್ ಸೇರಿದಂತೆ ಹಲವಾರು ವಾಣಿಜ್ಯ ವಾಹನಗಳನ್ನು ಹೊಂದಿದ್ದಾರೆ. ಇದರ ಜೊತೆಯಲ್ಲಿ ಎಂ.ಡಿ.ಎಸ್ ಡೆಕೋರೇಟರ್ಸ್ ,ಸಿದ್ಧಾಪುರ ಎಂಬ ಕೊಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿ, ಕೊಟ್ಯಾಂತರ ರೂಪಾಯಿ ವಹಿವಾಟು ನೆಡೆಯುತ್ತಿರುವ ಜಿ.ಎಸ್.ಟಿ. ನಂಬರ್ ಗಳನ್ನು ಹೊಂದಿರುವ ವ್ಯವಾಹರಗಳನ್ನು ನಡೆಸುತ್ತಿರುವುದಲ್ಲದೇ ಹಲವಾರು ಎಕರೆ ಭೂಮಿಯನ್ನು ಸಹ ಹೊಂದಿದ್ದಾರೆ. ಹೀಗಾಗಿ ಇವರು ಯಾವುದೇ ರೀತಿಯಿಂದಲೂ ಬಿಪಿಎಲ್ (BPL) PHH ಪಡಿತರ ಚೀಟಿ ಪಡೆಯುವುದಕ್ಕೆ ಅರ್ಹತೆ ಹೊಂದಿರುವುದಿಲ್ಲಾ ಆದಾಗ್ಯೂ ಸಹ ಇವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತು ಸುಳ್ಳು ಮಾಹಿತಿಗಳನ್ನು ಸರಕಾರಕ್ಕೆ ಸಲ್ಲಿಸಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅನಧಿಕೃತವಾಗಿ “200100275238” ನಂಬರಿನ ಬಿಪಿಎಲ್ (BPL) PHH ಪಡಿತರ ಚೀಟಿ ಪಡೆದಿರುತ್ತಾರೆ. ಅಲ್ಲದೇ ಈ ಕುಟುಂಬದ ಮುಖ್ಯಸ್ಥನಾಗಿರುವ ಮಹಿಬೂಬ್ ಮುಲ್ಲಾ ಈತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಸಮಾಜದಲ್ಲಿ ಶಾಂತಿ ಕದಡಿ, ಅಶಾಂತಿ ಸೃಷ್ಟಿಸುವ ಹಾಗೂ ದೊಂಬಿ ಗಲಭೆ, ಗಲಾಟಿ ಎಬ್ಬಿಸುವ ವ್ಯಕ್ತಿತ್ವ ಹಾಗೂ ಜನಗಳ ಮೇಲೆ ದೌರ್ಜನ್ಯ ನೆಡೆಸುವು ವ್ಯಕ್ತಿತ್ವ ಹೊಂದಿದ್ದರಿಂದ ಮತ್ತು ಹಲವಾರು ಕಾನೂನು ಬಾಹೀರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರಿಂದ ಈತನನ್ನು ರೌಡಿಶೀಟರ್ ಪಟ್ಟಿಯಲ್ಲಿ ಸೇರಿಸಲಾಗಿದೆ.

ಕಾರಣ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕೂಡಲೇ ಇವರು ಹೊಂದಿರುವ ಅನಧಿಕೃತ ಬಿಪಿಎಲ್ (BPL) PHH ಪಡಿತರ ಚೀಟಿಯನ್ನು ರದ್ದುಪಡಿಸಿ, ಅವರು ಇಲ್ಲಿಯವರೆಗೂ ಪಡೆದಿರುವ ಪಡಿತರ ಮತ್ತು ಇನ್ನಿತರೆ ಸೌಲಭ್ಯ, ಸೌಕರ್ಯ,ಅನುದಾನಗಳನ್ನು ಬಡ್ಡಿ, ದಂಡಗಳ ಸಹೀತ ವಾಪಸ್ಸು ಪಡೆಯಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಆಹಾರ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದರಿಂದ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಮಹಿಬೂಬ್ ಸಾಬ್ ಈತನ ವಿರುದ್ಧ ದೂರು ದಾಖಲಿಸಿಕೊಂಡು, ತನಿಖೆ ನಡೆಸಿ, ತಾನು ಶ್ರೀಮಂತನಾಗಿದ್ದರೂ ಸಹಿತ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ, ಸುಳ್ಳು ಮಾಹಿತಿ ನೀಡಿ, ಅನಧಿಕೃತ ವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದು, ಅನ್ನ ಭಾಗ್ಯ ಯೋಜನೆ ಅಕ್ಕಿಯನ್ನು ಪಡೆದಿರುವುದು ದೃಢಪಟ್ಟ ನಂತರ, ಮೂರು ಬಾರಿ ನೋಟಿಸ್ ನೀಡಿ, ಒಂದು ಲಕ್ಷದ ಹನ್ನೆರೆಡು ಸಾವಿರದ ಒಂದು ನೂರ ನಾಲ್ಕು ರೂಪಾಯಿಗಳನ್ನು ದಂಡ ವಸೂಲಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here