Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಗದಗ Archives - Hai Sandur kannada fortnightly news paper https://haisandur.com/category/ಗದಗ/ Hai Sandur News.Karnataka India Thu, 29 Jul 2021 06:39:02 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಗದಗ Archives - Hai Sandur kannada fortnightly news paper https://haisandur.com/category/ಗದಗ/ 32 32 ಗದಗ ವಿಭಾಗದ ಅಂಚೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ https://haisandur.com/2021/07/29/there-is-a-vacancy-in-the-postal-department-of-gadag-division/ https://haisandur.com/2021/07/29/there-is-a-vacancy-in-the-postal-department-of-gadag-division/#respond Thu, 29 Jul 2021 06:37:19 +0000 https://haisandur.com/?p=18318 ಅಂಚೆ ಇಲಾಖೆಯ ಗದಗ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಾಗುತ್ತದೆ. ಆಗಸ್ಟ್ 3ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ನೇರ ಸಂದರ್ಶನದಲ್ಲಿ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ 18 ರಿಂದ 50 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ನೇರ ಸಂದರ್ಶನಕ್ಕೆ ಬರುವಾಗ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ಪ್ರಮಾಣ ಪತ್ರದ […]

The post ಗದಗ ವಿಭಾಗದ ಅಂಚೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ appeared first on Hai Sandur kannada fortnightly news paper.

]]>
ಅಂಚೆ ಇಲಾಖೆಯ ಗದಗ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಾಗುತ್ತದೆ.

ಆಗಸ್ಟ್ 3ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ನೇರ ಸಂದರ್ಶನದಲ್ಲಿ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ 18 ರಿಂದ 50 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ನೇರ ಸಂದರ್ಶನಕ್ಕೆ ಬರುವಾಗ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ಪ್ರಮಾಣ ಪತ್ರದ ನಕಲು ಹಾಗೂ ಸ್ವ ವಿವರಗಳೊಂದಿಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ.

ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಮಾಜಿ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಪ್ರಧಾನ ಮತ್ತು ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆಂದು ಕಂಡುಬರುವ ಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳು 5000 ರೂ.ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರದ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕು. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ನಿಗದಿತ ವೇತನ ಇರುವುದಿಲ್ಲ, ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮೀಷನ್ ನೀಡಲಾಗುವುದು. ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಕಂಪನಿ, ಸಂಸ್ಥೆ, ಸಂಘಗಳ ಏಜೆಂಟ್ ಆಗಿರಬಾರದು. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ನೇರ ಸಂದರ್ಶನ ನಡೆಯುವ ಸ್ಥಳ; ಗದಗ ಎಪಿಎಂಸಿ ಯಾರ್ಡ್ ಛೇಂಬರ್ ಆಫ್ ಕಾಮರ್ಸ್ ಎದುರಿನ ಅಂಚೆ ಅಧೀಕ್ಷಕರ ಕಾರ್ಯಾಲಯ. ಆಗಸ್ಟ್ 3ರ ಬೆಳಗ್ಗೆ 10 ಗಂಟೆಗೆ.

The post ಗದಗ ವಿಭಾಗದ ಅಂಚೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ appeared first on Hai Sandur kannada fortnightly news paper.

]]>
https://haisandur.com/2021/07/29/there-is-a-vacancy-in-the-postal-department-of-gadag-division/feed/ 0
ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸುವುದು ಕಡ್ಡಾಯ: ಎಸ್ಪಿ ಯತೀಶ ಎನ್. https://haisandur.com/2021/05/09/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%a6-%e0%b2%ae%e0%b2%be%e0%b2%b0%e0%b3%8d%e0%b2%97%e0%b2%b8%e0%b3%82%e0%b2%9a%e0%b2%bf%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81/ https://haisandur.com/2021/05/09/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%a6-%e0%b2%ae%e0%b2%be%e0%b2%b0%e0%b3%8d%e0%b2%97%e0%b2%b8%e0%b3%82%e0%b2%9a%e0%b2%bf%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81/#respond Sun, 09 May 2021 04:19:10 +0000 https://haisandur.com/?p=15691 ಗದಗ. ಕೋವಿಡ್-19 2ನೇ ಅಲೆ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸುವುದು ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ. ಮೇ 10ರ ಬೆಳಗ್ಗೆ 6 ರಿಂದ ಮೇ 24ರ ಬೆಳಗಿನ 6ರ ವರೆಗೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯ ಸರಪಳಿ ತುಂಡರಿಸಲು ಸರ್ಕಾರದಿಂದ ಜಾರಿಗೊಳಿಸಿರುವ ಪರಿಷ್ಕöÈತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕುರಿತು ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲ ಠಾಣೆಯ […]

The post ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸುವುದು ಕಡ್ಡಾಯ: ಎಸ್ಪಿ ಯತೀಶ ಎನ್. appeared first on Hai Sandur kannada fortnightly news paper.

]]>
ಗದಗ. ಕೋವಿಡ್-19 2ನೇ ಅಲೆ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸುವುದು ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಮೇ 10ರ ಬೆಳಗ್ಗೆ 6 ರಿಂದ ಮೇ 24ರ ಬೆಳಗಿನ 6ರ ವರೆಗೆ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯ ಸರಪಳಿ ತುಂಡರಿಸಲು ಸರ್ಕಾರದಿಂದ ಜಾರಿಗೊಳಿಸಿರುವ ಪರಿಷ್ಕöÈತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕುರಿತು ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಎಲ್ಲ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಆಯಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ, ಪಿಕ್ಸ್ ಪಾಯಿಂಟ್ ಗಳಲ್ಲಿ ಸೂಕ್ತ ಬಂದೋಬಸ್ತ್ ನಿಯೋಜಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಉಪಯೋಗ ಮಾಡಿಕೊಂಡು ವೈರಸ್ ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕಿದೆ. ತುರ್ತು ಸಂದರ್ಭ ಹೊರತುಪಡಿಸಿ ಸಾರ್ವಜನಿಕರು ವಿನಾಕಾರಣ ವಾಹನಗಳನ್ನು ತೆಗೆದುಕೊಂಡು ರಸ್ತೆ ಸಂಚಾರ ಮಾಡಕೂಡದು. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡದೇ ಸರ್ಕಾರ ನಿಗದಿಪಡಿಸಿದ ಅವಧಿಯಲ್ಲಿ ಮಾತ್ರ ಪಾದಚಾರಿಯಾಗಿ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಹೋಟೆಲ್ ಸಿಬ್ಬಂದಿಯವರೇ ಸಾರ್ವಜನಿಕ ಮನೆಗಳಿಗೆ ಉಪಹಾರ ತಲುಪಿಸಬಹುದಾಗಿದೆ. ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆ ಹಾಗೂ ಅಂತರ ಜಿಲ್ಲೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿದ್ದು, ಇಲಾಖೆ ವತಿಯಿಂದ ಯಾವುದೇ ಪಾಸ್‌ಗಳನ್ನು ವಿತರಿಸುತ್ತಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅವರು ಪ್ರಕಟಣೆ ಮೂಲಕ ಕೋರಿದ್ದಾರೆ.

The post ಸರ್ಕಾರದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸುವುದು ಕಡ್ಡಾಯ: ಎಸ್ಪಿ ಯತೀಶ ಎನ್. appeared first on Hai Sandur kannada fortnightly news paper.

]]>
https://haisandur.com/2021/05/09/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%a6-%e0%b2%ae%e0%b2%be%e0%b2%b0%e0%b3%8d%e0%b2%97%e0%b2%b8%e0%b3%82%e0%b2%9a%e0%b2%bf%e0%b2%97%e0%b2%b3%e0%b2%a8%e0%b3%8d%e0%b2%a8%e0%b3%81/feed/ 0
ಗ್ರಾಮೀಣಾಭಿವೃದ್ಧಿ ವಿ.ವಿ. ಪ್ರಥಮ ಘಟಿಕೋತ್ಸವ ಎಚ್.ಕೆ.ಪಾಟೀಲ ಹಾಗೂ ಅಶೋಕ ದಳವಾಯಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ https://haisandur.com/2021/04/11/%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%b5%e0%b2%bf-%e0%b2%b5%e0%b2%bf-%e0%b2%aa/ https://haisandur.com/2021/04/11/%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%b5%e0%b2%bf-%e0%b2%b5%e0%b2%bf-%e0%b2%aa/#respond Sun, 11 Apr 2021 01:42:13 +0000 https://haisandur.com/?p=15139 ಗದಗ:ರಾಜ್ಯ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾನೂನು, ಸಾರ್ವಜನಿಕ ನೀತಿ ಮತ್ತು ಸಮಾಜ ಸೇವೆಗೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಡಾಕ್ಟರ್ ಆಫ್ ಲಾಸ್ (ಎಲ್.ಎಲ್.ಬಿ) ಗೌರವ ಡಾಕ್ಟರ್ ಪದವಿಯನ್ನು ಹಾಗೂ ದೇಶದ ಗ್ರಾಮೀಣ ಬುಡಕಟ್ಟು ಜನಾಂಗದ ಪುನರ್ ನಿರ್ಮಾಣದಲ್ಲಿ ಸಲ್ಲಿಸಿರುವ ಮಹತ್ತರ ಸೇವೆಗಾಗಿ ಐ.ಎ.ಎಸ್ ಹಿರಿಯ ಅಧಿಕಾರಿ ಡಾಕ್ಟರ್ […]

The post ಗ್ರಾಮೀಣಾಭಿವೃದ್ಧಿ ವಿ.ವಿ. ಪ್ರಥಮ ಘಟಿಕೋತ್ಸವ ಎಚ್.ಕೆ.ಪಾಟೀಲ ಹಾಗೂ ಅಶೋಕ ದಳವಾಯಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ appeared first on Hai Sandur kannada fortnightly news paper.

]]>
ಗದಗ:ರಾಜ್ಯ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾನೂನು, ಸಾರ್ವಜನಿಕ ನೀತಿ ಮತ್ತು ಸಮಾಜ ಸೇವೆಗೆ ನೀಡಿದ ಗಮನಾರ್ಹ ಕೊಡುಗೆಯನ್ನು ಗುರುತಿಸಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಪಾಟೀಲ ಅವರಿಗೆ ಡಾಕ್ಟರ್ ಆಫ್ ಲಾಸ್ (ಎಲ್.ಎಲ್.ಬಿ) ಗೌರವ ಡಾಕ್ಟರ್ ಪದವಿಯನ್ನು ಹಾಗೂ ದೇಶದ ಗ್ರಾಮೀಣ ಬುಡಕಟ್ಟು ಜನಾಂಗದ ಪುನರ್ ನಿರ್ಮಾಣದಲ್ಲಿ ಸಲ್ಲಿಸಿರುವ ಮಹತ್ತರ ಸೇವೆಗಾಗಿ ಐ.ಎ.ಎಸ್ ಹಿರಿಯ ಅಧಿಕಾರಿ ಡಾಕ್ಟರ್ ಅಶೋಕ ದಳವಾಯಿ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ ( ಡಿಲಿಟ್ ) ಗೌರವ ಡಾಕ್ಟರೇಟ್ ಪದವಿಯನ್ನು ವಿಶ್ವ ವಿದ್ಯಾಲಯದ ಸಹಕುಲಾಧಿಪತಿಗಳೂ ಆಗಿರುವ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಘಟಿಕೋತ್ಸವದ ಮುಖ್ಯ ಅತಿಥಿ ಮೈಸೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ಹಾಗೂ ಗ್ರಾಸ್ ರೂಟ್ಸ್ ರಿಸರ್ಚ್ & ಅಡೊಕಸಿ ಮೂವ್‌ಮೆಂಟ್ (ಗ್ರಾಮ್)ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಆರ್. ಬಾಲಸುಬ್ರಮಣ್ಯಂ, ಗ್ರಾಮೀಣಾಭಿವೃದ್ಧಿ ವಿವಿ ಕುಲಸಚಿವ ಪ್ರೊ.ವಿಷ್ಣುಕಾಂತ ಚಟಪಲ್ಲಿ ರಿಜಿಸ್ಟಾçರ್ ಬಸವರಾಜ ಲಕ್ಕಣ್ಣವರ,ವಿತ್ತೀಯ ಅಧಿಕಾರಿ ಪ್ರಶಾಂತ ಜೆ.ಸಿ.ವಿವಿಯ ವಿವಿಧ ಕೇಂದ್ರಗಳ ನಿರ್ದೇಶಕರು, ಶಾಲೆಗಳ ಮುಖ್ಯಸ್ಥರು, ಕಾರ್ಯನಿವಾಹಕ ಪರಿಷತ್ತಿನ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು ಸೇರಿದಂತೆ ಪದವಿ ಪಡೆಯುವ ಅಭ್ಯರ್ಥಿಗಳು, ಪಾಲಕರು ಇತರರು ಇದ್ದರು.

The post ಗ್ರಾಮೀಣಾಭಿವೃದ್ಧಿ ವಿ.ವಿ. ಪ್ರಥಮ ಘಟಿಕೋತ್ಸವ ಎಚ್.ಕೆ.ಪಾಟೀಲ ಹಾಗೂ ಅಶೋಕ ದಳವಾಯಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ appeared first on Hai Sandur kannada fortnightly news paper.

]]>
https://haisandur.com/2021/04/11/%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%b5%e0%b2%bf-%e0%b2%b5%e0%b2%bf-%e0%b2%aa/feed/ 0
ಗ್ರಾಮೀಣಾಭಿವೃದ್ಧಿ ವಿ.ವಿ.ಯ ಪ್ರಥಮ ಘಟಿಕೋತ್ಸವ https://haisandur.com/2021/04/11/%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%b5%e0%b2%bf-%e0%b2%b5%e0%b2%bf-%e0%b2%af/ https://haisandur.com/2021/04/11/%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%b5%e0%b2%bf-%e0%b2%b5%e0%b2%bf-%e0%b2%af/#respond Sun, 11 Apr 2021 01:34:02 +0000 https://haisandur.com/?p=15133 ಗದಗ : ರಾಷ್ಟçದ ನಿಜವಾದ ಅಭಿವೃದ್ಧಿ ಗ್ರಾಮಗಳ ಬೆಳವಣಿಗೆಯಲ್ಲಿ ಅಡಗಿದೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಹೊಸ ಆವಿಷ್ಕಾರದೊಂದಿಗೆ ಅಭಿವೃದ್ಧಿಗೆ ನಾಂದಿಯಾಗುವ0ತೆ ವಿವೇಕಾನಂದ ಯುಥ್ ಮೂವ್‌ಮೆಂಟ್ ಮತ್ತು ಮೈಸೂರಿನ ಗ್ರಾಸ್‌ರೂಟ್ಸ್ ರಿಸರ್ಚ ಮತ್ತು ಅಡ್ವೋಕೆಸಿ ಮೂವ್‌ಮೆಂಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.ಗದಗಿನ ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದರು.ರಾಷ್ಟçದ ಅಭಿವೃದ್ಧಿ ಬೀಜವನ್ನು ಪಂಚಾಯತ್‌ದಿ0ದ ಮೊಳಕೆಯೊಡೆದು ಅದು ರಾಜ್ಯ , ರಾಷ್ಟçದ ಅಭಿವೃದ್ಧಿಗೆ […]

The post ಗ್ರಾಮೀಣಾಭಿವೃದ್ಧಿ ವಿ.ವಿ.ಯ ಪ್ರಥಮ ಘಟಿಕೋತ್ಸವ appeared first on Hai Sandur kannada fortnightly news paper.

]]>
ಗದಗ : ರಾಷ್ಟçದ ನಿಜವಾದ ಅಭಿವೃದ್ಧಿ ಗ್ರಾಮಗಳ ಬೆಳವಣಿಗೆಯಲ್ಲಿ ಅಡಗಿದೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಹೊಸ ಆವಿಷ್ಕಾರದೊಂದಿಗೆ ಅಭಿವೃದ್ಧಿಗೆ ನಾಂದಿಯಾಗುವ0ತೆ ವಿವೇಕಾನಂದ ಯುಥ್ ಮೂವ್‌ಮೆಂಟ್ ಮತ್ತು ಮೈಸೂರಿನ ಗ್ರಾಸ್‌ರೂಟ್ಸ್ ರಿಸರ್ಚ ಮತ್ತು ಅಡ್ವೋಕೆಸಿ ಮೂವ್‌ಮೆಂಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.
ಗದಗಿನ ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದರು.
ರಾಷ್ಟçದ ಅಭಿವೃದ್ಧಿ ಬೀಜವನ್ನು ಪಂಚಾಯತ್‌ದಿ0ದ ಮೊಳಕೆಯೊಡೆದು ಅದು ರಾಜ್ಯ , ರಾಷ್ಟçದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನವಭಾರತದ ನಿರ್ಮಾಣಕ್ಕೆ ಗ್ರಾಮೀಣ ಭಾಗದ ಕೊಡುಗೆ ಅಪಾರವಿದೆ ಎಂದರು. ಗ್ರಾಮೀಣ ಭಾಗದ ಜನರಲ್ಲಿ ಹೊಸ ಆವಿಷ್ಕಾರಗಳ ಚಿಂತನೆಗೆ ಕೊರತೆಯಿಲ್ಲ. ಮೂಲಸೌಕರ್ಯಗಳ ಕೊರತೆಯಿದ್ದು ಅವುಗಳನ್ನು ಪೂರೈಸಿದಲ್ಲಿ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಸರ್ಕಾರ ಹಾಗೂ ಸರ್ಕಾರಕ್ಕೆ ಸಮಾಜ ಕೈಜೋಡಿಸಿ ಸಹಕರಿಸಿದರೆ ಗ್ರಾಮೀಣಾಭಿವೃದ್ಧಿ ಖಂಡಿತ ಸಾಧ್ಯ ಎಂದರು. ಇಂದು ಪದವಿ ಪಡೆದ ವಿದ್ಯಾರ್ಥಿಗಳು ಕೇವಲ ಪದವಿ ಮಾತ್ರ ಪಡೆದಿರುತ್ತೀರಿ ಅದರೊಂದಿಗೆ ಅಹಂಕಾರ ಪಡೆದಿರುವುದಿಲ್ಲವೆಂಬುದನ್ನು ಆರ್ಥ ಮಾಡಿಕೊಂಡು ಸಮಾಜದಲ್ಲಿ ಮುನ್ನಡೆಯಬೇಕು ಎಂದರು. ವಿಶ್ವವು ಭಾರತದೆಡೆಗೆ ಗಮನಹರಿಸುತ್ತಿರುವುದರಲ್ಲಿ ಗ್ರಾಮೀಣ ಶೈಲಿ ಹಾಗೂ ಆರ್ಥಿಕತೆ ಪ್ರಮುಖವಾಗಿದೆ. ದೇಶೀಯ ಶೈಲಿ ಹಾಗೂ ಆರ್ಥಿಕತೆಯು ಇತರರಿಗೆ ಮಾದರಿಯಾಗಲಿದೆ ಎಂದರು. ಪಂಚಾಯತ್ ರಾಜನ ಪರಿಣಾಮಕಾರಿ ಅನುಷ್ಟಾನ ಮುಖ್ಯ ಉತ್ಕಟ ಕಾಳಜಿಗಳನ್ನು ಹುಟ್ಟು ಹಾಕುತ್ತದೆ. ತಮ್ಮ ಪಂಚಾಯತ್‌ದಲ್ಲಿ ಇರುವ ನೇರ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತಾನು ಪರಿಣಾಮಕಾರಿಯಾಗಿ ಪಾಲ್ಗೊಳ್ಳಬೇಕು. ತನ್ನ ಹಕ್ಕನ್ನು ಚಲಾಯಿಸಬೇಕು ಎನ್ನುವ ಮನೋಭಾವ ಎಲ್ಲಾ ಗ್ರಾಮೀಣ ಜನರಿಗೆ ಬರುವಂತಹ ವಾತಾವರಣ ಸೃಷ್ಟಿ, ಅವರ ಭಾಗವಹಿಸುವ ಮೂಲಕ ಪಕ್ಷ ರಾಜಕೀಯಗಳನ್ನು ಬದಿಗೊತ್ತಿ ಜನಸಮುದಾಯ ತಾವೆಲ್ಲ ಒಂದು ಎನ್ನುವ ಮನೋಭಾವದಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭಾಗವಹಿಸುವಂತೆ ಮಾಡುವುದು. ಪ್ರತಿಯೊಬ್ಬ ಪ್ರಜೆಯು ತನ್ನ ವಯಕ್ತಿಕ ಭಾಗವಹಿಸುವಿಕೆ ಹಕ್ಕನ್ನು ತನ್ನ ಸಮಸ್ತ ಸಮುದಾಯವು ನಿಜ ಅರ್ಥದ ಸಮಾನತೆಯ ಅಧಾರದ ಮೇಲೆ ಅಭಿವೃದ್ಧಿಯಾಗುವಂತೆ ಬಳಸಲು ಸನ್ನದ್ದರಾಗುವಂತೆ ಪ್ರಜೆಗಳನ್ನು ತಯಾರಾಗುವಂತೆ ಮಾಡುವುದು. ಬಹಳ ಸಶಕ್ತ ವಿಕೇಂದ್ರೀಕರಣ ಹಾಗೂ ನಿಜ ಅರ್ಥದ ಅಧಿಕಾರಿಗಳ ಮೂಲಕ ಮಾತ್ರ ಸಾಧ್ಯ ಎಂದರು.
ವಿ.ವಿ.ಯ ಕುಲಸಚಿವ ಪ್ರೊ. ವಿಷ್ಣುಕಾಂತ ಚಟಪಲ್ಲಿ ಅವರು ಮಾತನಾಡಿ ವಿ.ವಿ.ಯಲ್ಲಿ ನಡೆಯುವ ಪ್ರಥಮ ಘಟಿಕೋತ್ಸವ ಇದಾಗಿದ್ದು ಗ್ರಾಮೀಣ ಪರಿವರ್ತನೆಯಡೆಗೆ ಒಂದು ಹೆಜ್ಜೆಯಾಗಿದೆ ಎಂದರು. ದೀಕ್ಷಾ ಪದವು ಎರಡು ಭಾಗಗಳನ್ನು ಹೊಂದಿದೆ. ದಿ ಮತ್ತು ಕ್ಷ. ದಿ ಅಕ್ಷರವು ದಿಕ್ ಅತವಾ ನಿರ್ದೇಶನ ಅತವಾ ದೈವಿಕ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯಾಗಿದೆ. ಕ್ಷ ಎಂದರೆ ಸಂಚಿತ ಪಾಪಗಳನ್ನು ನಿವಾರಿಸುವುದು ಅಥವಾ ನಾಶಪಡಿಸುವುದನ್ನು ಸೂಚಿಸುತ್ತದೆ. ಪರ್ಯಾಯವಾಗಿ ದೀಕ್ಷಾ ಪದದಲ್ಲಿ ಈಕ್ಷಾ ಎಂಬುವುದು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ನೋಡಲು ಅಥವಾ ಗ್ರಹಿಸಲು ಒಬ್ಬ ವ್ಯಕ್ತಿಯನ್ನು ಶಕ್ತನನ್ನಾಗಿಸುತ್ತದೆ ಎಂದರು.
ಸಹ ಕುಲಾಧಿಪತಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಎಂಬ ಅಧಿಕಾರದಿಂದ ಉಪಸ್ಥಿತರಾಗಿ ಪದವಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಆಯಾ ಪದವಿಗಳಿಗೆ ಪ್ರವೇಶ ನೀಡುತ್ತೇನೆ ಹಾಗೂ ನಿಮ್ಮ ಜೀವನದಲ್ಲಿ ಮಾತುಕತೆಯಲ್ಲಿ ಮತ್ತು ನಡುವಳಿಕೆಯಲ್ಲಿ ನೀವು ಎಂದೂ ಈ ಪದವಿಗೆ ಅರ್ಹರು ಎಂದು ಭಾವಿಸಿ ಅಪ್ಪಣೆ ನೀಡುತ್ತೇನೆ ಎಂದು ಸಚಿವ ಈಶ್ವರಪ್ಪ ಅವರು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಸಾಬರಮತಿ ಆಶ್ರಮದಲ್ಲಿ ಅತಿಥಿ ಮಹೋದಯರು ಗುಂಪು ಛಾಯಾಚಿತ್ರಕ್ಕೆ ಸಾಕ್ಷಿಯಾದರು. ನಂತರ ಸಬರಮತಿ ಆಶ್ರಮದಿಂದ ಘಟಿಕೋತ್ಸವ ಸಭಾಂಗಣದವರೆಗೆ ಮೆರವಣಿಗೆ ಸಾಗಿತು.
ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಶಾಸಕ ಎಚ್.ಕೆ.ಪಾಟೀಲ ಹಾಗೂ ಹಿರಿಯ ಐ.ಎ.ಎಸ್. ಅಧಿಕಾರಿ ಡಾ.ಅಶೋಕ ದಳವಾಯಿ, ವಿವಿಯ ರಿಜಿಸ್ಟಾçರ್ ಬಸವರಾಜ ಲಕ್ಕಣ್ಣವರ, ವಿತ್ತೀಯ ಅಧಿಕಾರಿ ಪ್ರಶಾಂತ ಜೆ.ಸಿ, ವಿವಿಯ ವಿವಿಧ ಕೇಂದ್ರಗಳ ನಿರ್ದೇಶಕರು, ಶಾಲೆಗಳ ಮುಖ್ಯಸ್ಥರು, ಕಾರ್ಯನಿವಾಹಕ ಪರಿಷತ್ತಿನ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

The post ಗ್ರಾಮೀಣಾಭಿವೃದ್ಧಿ ವಿ.ವಿ.ಯ ಪ್ರಥಮ ಘಟಿಕೋತ್ಸವ appeared first on Hai Sandur kannada fortnightly news paper.

]]>
https://haisandur.com/2021/04/11/%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3%e0%b2%be%e0%b2%ad%e0%b2%bf%e0%b2%b5%e0%b3%83%e0%b2%a6%e0%b3%8d%e0%b2%a7%e0%b2%bf-%e0%b2%b5%e0%b2%bf-%e0%b2%b5%e0%b2%bf-%e0%b2%af/feed/ 0
ಜಲ ಜೀವನ್ ಮಿಷನ್: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ಗಂಗೆ;ಸಚಿವ ಸಿ.ಸಿ.ಪಾಟೀಲ https://haisandur.com/2021/04/07/%e0%b2%9c%e0%b2%b2-%e0%b2%9c%e0%b3%80%e0%b2%b5%e0%b2%a8%e0%b3%8d-%e0%b2%ae%e0%b2%bf%e0%b2%b7%e0%b2%a8%e0%b3%8d-%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3-%e0%b2%aa%e0%b3%8d/ https://haisandur.com/2021/04/07/%e0%b2%9c%e0%b2%b2-%e0%b2%9c%e0%b3%80%e0%b2%b5%e0%b2%a8%e0%b3%8d-%e0%b2%ae%e0%b2%bf%e0%b2%b7%e0%b2%a8%e0%b3%8d-%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3-%e0%b2%aa%e0%b3%8d/#respond Wed, 07 Apr 2021 00:41:11 +0000 https://haisandur.com/?p=15089 ಗದಗ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶುದ್ಧ ಕುಡಿಯುವ ನೀರುವ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದು ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಸಲಾಗುವದು ಎಂದು ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು. ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಜಲಜೀವನ ಮಿಷನ ಯೋಜನೆಯಡಿ ಅಂದಾಜು 70 ಲಕ್ಷ ರೂ ಅನುದಾನದಲ್ಲಿ 334 ಮನೆಗಳಿಗೆ ನಳಗಳ […]

The post ಜಲ ಜೀವನ್ ಮಿಷನ್: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ಗಂಗೆ;ಸಚಿವ ಸಿ.ಸಿ.ಪಾಟೀಲ appeared first on Hai Sandur kannada fortnightly news paper.

]]>
ಗದಗ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶುದ್ಧ ಕುಡಿಯುವ ನೀರುವ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದು ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಸಲಾಗುವದು ಎಂದು ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.

ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಜಲಜೀವನ ಮಿಷನ ಯೋಜನೆಯಡಿ ಅಂದಾಜು 70 ಲಕ್ಷ ರೂ ಅನುದಾನದಲ್ಲಿ 334 ಮನೆಗಳಿಗೆ ನಳಗಳ ಜೋಡಣೆ ಹಾಗೂ 1ಲಕ್ಷ ಲೀ. ಸಾಮರ್ಥದ ಮೆಲ್ಮಟ್ಟದ ಜಲಾಸಂಗ್ರಹಣಾಗಾರ, ಹಿರೆಕೊಪ್ಪ ಗ್ರಾಮದಲ್ಲಿ ಅಂದಾಜು 74 ಲಕ್ಷ ರೂ ಅನುದಾನದಲ್ಲಿ 643 ಮನೆಗಳಿಗೆ ನಳಗಳ ಜೋಡಣೆ ಹಾಗೂ 50ಸಾವಿರ ಲೀ. ಸಾಮರ್ಥದ ಮೆಲ್ಮಟ್ಟದ ಜಲಾಸಂಗ್ರಹಣಾಗಾರ ಕಾಮಗಾರಿಗೆ ಹಾಗೂ ಅಂದಾಜು 148 ಲಕ್ಷ ರೂ ಅನುದಾನದಲ್ಲಿ 1220 ಮನೆಗಳಿಗೆ ನಳಗಳ ಜೋಡಣೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದರು. ಸಾರ್ವಜನಿಕರು ತೆರಿಗೆ ಹಣದಿಂದಾಗಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗುತ್ತಿದ್ದು ಈ ಕಾಮಗಾರಿಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಭಾಗಿತ್ವ ಅತೀ ಮುಖ್ಯವಾಗಿದೆ ಎಂದರು. ಗ್ರಾಮದಲ್ಲಿನ ಜನರು ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ತಮ್ಮ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಹಕಾರ ನೀಡುವಂತೆ ತಿಳಿಸಿದರು. ಕೊವಿಡ್‍ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ತಮ್ಮ ಗ್ರಾಮಗಳಿಗೆ ಅನುದಾನ ಬಿಡುಗಡೆಯಾಗಿರುವದು ಮಹತ್ವದ ಸಂಗತಿಯಾಗಿದೆ. ಬಿಡುಗಡೆಯಾದ ಈ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಗ್ರಾಮದ ಚುನಾಯಿತ ಸದಸ್ಯರಿಂದ ಹಿಡಿದು ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಚಿಕ್ಕೊಪ್ಪ-ಹೊಂಬಳ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಗ್ರಾಮದ ಬಸವೇಶ್ವರ ದೇವಾಲಯದ ದುರಸ್ತಿಗಾಗಿ ಅಗತ್ಯದ ಅನುದಾನ, ಹಿರೇಕೊಪ್ಪ ಗ್ರಾಮದ ಸೇದು ರಸ್ತೆ ನಿರ್ಮಾಣಕ್ಕೆ ಮೂವತ್ತು ಲಕ್ಷ ಅನುದಾನ ಹಾಗೂ ಹುಯಿಲಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ರಸ್ತೆಗೆ ಜಮೀನು ಮಾಲಿಕರು ಅಗತ್ಯದ ಜಾಗೆಯನ್ನು ನೀಡುವುದಾದರೆ ಕೂಡಲೇ ಮೂವತ್ತು ಲಕ್ಷ ರೂ.ಗಳ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವದು ಎಂದರು ಸಚಿವರು ತಿಳಿಸಿದರು.

ಕಳೆದ ಸಾಲಿನಲ್ಲಿ ಕೋವಿಡ್-19 ಸೊಂಕಿನಿಂದಾಗಿ ಇಡೀ ವಿಶ್ವದ ಜನ ಜೀವನ ಅಲ್ಲೋಲಕಲ್ಲೋವಾಗಿತ್ತು. ಸಧ್ಯ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು ಸೋಂಕು ತೀವ್ರಗತಿಯಲ್ಲಿ ಹರುಡಿತ್ತಿರುವದು ವಿಷಾದದ ಸಂಗತಿಯಾಗಿದೆ. ಸೊಂಕು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಂತ ಪ್ರಮುಖವಾಗಿದೆ. ಸರಕಾರದ ಮಾರ್ಗಸೂಚಿಗಳನ್ನು ಪ್ರತೊಯೊಬ್ಬರು ಕಡ್ಡಾಯವಾಗಿ ಪಾಲಿಸುವದರೊಂದಿಗೆ ಕೊರೊನಾ ಮುಕ್ತ ಭಾರತ ಮಾಡಲು ಸಾಧ್ಯ. ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿಯಿಂದ ಕಡ್ಡಾಯ ಮಾಸ್ಕ ಧಾರಣೆ, ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ದೇಶದಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು ನಲವತ್ತೈದು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಲಸಿಕೆ ಪಡೆಯಲು ಮುಂದಾಗುವಂತೆ ಮನವಿ ಮಾಡಿದ ಸಚಿವರು ಕೋವಿಡ್ ಲಸಿಕೆ ಸುರಕ್ಷಿತವಾಗಿದ್ದು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ, ಸಾರ್ವಜನಿಕರು ಲಸಿಕೆ ಕುರಿತು ಹಿಂಜರಿಕೆ ಮನೋಭಾವವನ್ನು ತೊರೆದು ಲಸಿಕೆ ಪಡೆಯಲು ಮುಂದಾಗಬೇಕು ಎಂದರು. ಸ್ವತಹ ದೇಶದ ಪ್ರಧಾನಿ ರಾಷ್ಟ್ರಪತಿಗಳು ಸೇರಿದಂತೆ ಅನೇಕ ಗಣ್ಯರು ಲಸಿಕೆಯನ್ನು ಪಡೆದಿದ್ದು ಜನರು ಧೈರ್ಯವಾಗಿ ಲಸಿಕೆ ಪಡೆಯಬೇಕು. ಗ್ರಾಮಗಳಲ್ಲಿ ಅಗತ್ಯಬಿದ್ದರೆ ಮೋಬೈಲ ವಾಹನದ ಮೂಲಕ ಮಾರ್ಗಸೂಚಿಗಳನ್ವಯ ಲಸಿಕೆ ಒದಗಿಸಲು ಕ್ರಮ ಜರುಗಿಸಲಾಗುವದು ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ, ತಾಲೂಕು ವೈದ್ಯಾಧಿಕಾರಿ ಡಾ.ನೀಲಗುಂದ, ಗಣ್ಯರುಗಳಾದ ವಸಂತ ಮೇಟಿ, ನಿಂಗಪ್ಪ ಮಣ್ಣೂರ, ಡಾ. ಸತೀಶ ಬಸರಿಗಿಡದ, ಕಲ್ಮೇಶ ವಡ್ಡಿನ,ಶಂಭುಲಿಂಗಯ್ಯ ವಡೆಯರ, ಬಸಪ್ಪ ಹರ್ತಿ, ಶ್ರೀಮತಿ ಹೆಮಾ ಹರಿಜನ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

The post ಜಲ ಜೀವನ್ ಮಿಷನ್: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ಗಂಗೆ;ಸಚಿವ ಸಿ.ಸಿ.ಪಾಟೀಲ appeared first on Hai Sandur kannada fortnightly news paper.

]]>
https://haisandur.com/2021/04/07/%e0%b2%9c%e0%b2%b2-%e0%b2%9c%e0%b3%80%e0%b2%b5%e0%b2%a8%e0%b3%8d-%e0%b2%ae%e0%b2%bf%e0%b2%b7%e0%b2%a8%e0%b3%8d-%e0%b2%97%e0%b3%8d%e0%b2%b0%e0%b2%be%e0%b2%ae%e0%b3%80%e0%b2%a3-%e0%b2%aa%e0%b3%8d/feed/ 0
ಇತಿಹಾಸವನ್ನರಿಯದೇ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಲಕ್ಷಾಂತರ ನಾಯಕರ ಹೋರಾಟದ ಫಲವಾಗಿ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರಕಿದೆ https://haisandur.com/2021/04/07/%e0%b2%87%e0%b2%a4%e0%b2%bf%e0%b2%b9%e0%b2%be%e0%b2%b8%e0%b2%b5%e0%b2%a8%e0%b3%8d%e0%b2%a8%e0%b2%b0%e0%b2%bf%e0%b2%af%e0%b2%a6%e0%b3%87-%e0%b2%ad%e0%b2%b5%e0%b2%bf%e0%b2%b7%e0%b3%8d%e0%b2%af%e0%b2%b5/ https://haisandur.com/2021/04/07/%e0%b2%87%e0%b2%a4%e0%b2%bf%e0%b2%b9%e0%b2%be%e0%b2%b8%e0%b2%b5%e0%b2%a8%e0%b3%8d%e0%b2%a8%e0%b2%b0%e0%b2%bf%e0%b2%af%e0%b2%a6%e0%b3%87-%e0%b2%ad%e0%b2%b5%e0%b2%bf%e0%b2%b7%e0%b3%8d%e0%b2%af%e0%b2%b5/#respond Wed, 07 Apr 2021 00:37:52 +0000 https://haisandur.com/?p=15086 ಗದಗ . ಲಕ್ಷಾಂತರ ನಾಯಕರ ಹೋರಾಟದ ಫಲವಾಗಿ ಹಾಗೂ ತ್ಯಾಗ ಬಲಿದಾನಗಳಿಂದ 1947ರ ಅಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರದೊರಕಿತು. ಸ್ವಾತಂತ್ರಯ ಗಳಿಸಿ 75 ವರ್ಷದ ಅಂಚಿನಲ್ಲಿರುವ ಇಂದು ನಾವು ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಸ್ಮರಣೀಯವಾಗಿದೆ. ಸ್ವಾತಂತ್ರ÷್ಯ ಬಂದಾಗ ಭಾರತ ಬಡರಾಷ್ಟçವಾಗಿತ್ತು. 75 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ಈಗ ಜಗತ್ತಿನ ಮುಂಚೂಣಿ ರಾಷ್ಟçವಾಗಿ ಭಾರತ ಹೊರಹೊಮ್ಮಿದೆ ಎಂದು ಸಣ್ಣ ಕೈಗಾರಿಕಾ ಮತ್ತು ವಾರ್ತಾ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.ನರಗುಂದ […]

The post ಇತಿಹಾಸವನ್ನರಿಯದೇ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಲಕ್ಷಾಂತರ ನಾಯಕರ ಹೋರಾಟದ ಫಲವಾಗಿ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರಕಿದೆ appeared first on Hai Sandur kannada fortnightly news paper.

]]>

ಗದಗ . ಲಕ್ಷಾಂತರ ನಾಯಕರ ಹೋರಾಟದ ಫಲವಾಗಿ ಹಾಗೂ ತ್ಯಾಗ ಬಲಿದಾನಗಳಿಂದ 1947ರ ಅಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರದೊರಕಿತು. ಸ್ವಾತಂತ್ರಯ ಗಳಿಸಿ 75 ವರ್ಷದ ಅಂಚಿನಲ್ಲಿರುವ ಇಂದು ನಾವು ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಸ್ಮರಣೀಯವಾಗಿದೆ. ಸ್ವಾತಂತ್ರ÷್ಯ ಬಂದಾಗ ಭಾರತ ಬಡರಾಷ್ಟçವಾಗಿತ್ತು. 75 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ಈಗ ಜಗತ್ತಿನ ಮುಂಚೂಣಿ ರಾಷ್ಟçವಾಗಿ ಭಾರತ ಹೊರಹೊಮ್ಮಿದೆ ಎಂದು ಸಣ್ಣ ಕೈಗಾರಿಕಾ ಮತ್ತು ವಾರ್ತಾ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ನರಗುಂದ ಪುರಸಭೆ ಆವರಣದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಲಾದ ಸ್ವಾತಂತ್ರö್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಸ್ವಾತಂತ್ರö್ಯ ಹೋರಾಟದ ಆ ದಿನಗಳನ್ನು ನಾವು ನೋಡಿಲ್ಲ, ಆದರೆ ಹೋರಾಟದ ಆ ದಿನಗಳನ್ನು ನಾವಿಂದು ಅರಿಯೋಣ. ಅರಿಯುವ ಮೂಲಕ ಅವರ ಆದರ್ಶದಂತೆ ಬದುಕೋಣ ಎಂದರು. ನಾವು ಇತಿಹಾಸವನ್ನು ಅರಿಯಬೇಕಾದ ಮತ್ತು ಇತಿಹಾಸದ ಮೌಲ್ಯಗಳನ್ನು ನೆನೆಯಬೇಕಾದ ಅಗತ್ಯವಿದೆ. ಇತಿಹಾಸವನ್ನರಿಯದೇ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ಭವ್ಯ ಭಾರತದ, ಭವ್ಯ ಕರ್ನಾಟಕದ ಸ್ವಾತಂತ್ರ÷್ಯ ಹೋರಾಟದ ಇತಿಹಾಸವನ್ನು ಸ್ಮರಿಸುವ ಸುದಿನವಿಂದು ನಮಗೆ ಲಭಿಸಿದೆ. ಪ್ರಧಾನಿಗಳ ಆಶಯದಂತೆ ಅಮೃತ ಮಹೋತ್ಸವ ಕಾರ್ಯಕ್ರಮ ನವ ಭಾರತದ ಕ್ರಾಂತಿಗೆ ಮುನ್ನಡೆಯಾಗಲಿ ಎಂದರು.
ಮಾರ್ಚ್ 12ರಂದು ಗುಜರಾತನ ಸಬರಮತಿ ಆಶ್ರಮದಲ್ಲಿ ಅಮೃತಮಹೋತ್ಸವ ಕಾರ್ಯಕ್ರಮ ಆರಂಭವಾಗಿದ್ದು, ದೇಶದ 75 ಕಡೆಗಳಲ್ಲಿ 75 ವಾರಗಳ ಕಾಲ ನಡೆಯಲಿದೆ. ಭಾರತ ಸ್ವಾತಂತ್ರ÷್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ ಮಹೋತ್ಸವಕ್ಕೆ ರಾಷ್ಟಿçÃಯ ಸಮಿತಿಯೊಂದನ್ನು ರಚಿಸಿದ್ದು, ಇದರ ಮೊದಲ ಸಭೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆಯಿತು. 75 ವರ್ಷಗಳ ಸಂಭ್ರಮಾಚರಣೆಯನ್ನು 130 ಕೋಟಿ ಭಾರತೀಯರ ಭಾಗವಹಿಸುವಿಕೆಯ ಮೂಲಕ ಮಾಡಬೇಕಾಗಿದೆ ಮತ್ತು ಜನರ ಈ ಭಾಗವಹಿಸುವಿಕೆಯು ಆಚರಣೆಯ ಕೇಂದ್ರ ಬಿಂದುವಾಗಿರುತ್ತದೆ. ಈ ಭಾಗವಹಿಸುವಿಕೆಯು 130 ಕೋಟಿ ದೇಶವಾಸಿಗಳ ಭಾವನೆಗಳು, ಸಲಹೆಗಳು ಮತ್ತು ಕನಸುಗಳನ್ನು ಒಳಗೊಂಡಿರುತ್ತದೆ ಎಂದು ಪ್ರಧಾನಿಗಳು ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.
ಇಂದು ನಾವು ಸ್ವತಂತ್ರದಿAದ ಬದುಕುತ್ತಿದ್ದೇವೆಂದರೆ ಅದು ನಮ್ಮ ಹಿರಿಯರ ಹೋರಾಟ, ತ್ಯಾಗ ಬಲಿದಾನದ ಫಲವಾಗಿದೆ. ಲಕ್ಷಾಂತರ ಜನರು ಇಂಗ್ಲಿಷರ ವಿರುದ್ಧದ ಹೋರಾಟದಲ್ಲಿ ಜೀವ ಕಳೆದುಕೊಂಡಿದ್ದಾರೆ. ಮಂದಗಾಮಿಗಳು, ತೀವ್ರಗಾಮಿಗಳು ಹಾಗೂ ಕ್ರಾಂತಿಕಾರಿಗಳು ಎಂದು ಈ ಹೋರಾಟಗಾರರನ್ನು ವಿಂಗಡಿಸಲಾಗಿದೆ .ಹೋರಾಟಗಾರರು ಸುಖಜೀವನನವನ್ನು ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ದೇಶ ಭಕ್ತರು. ಇವರು ಇಂದಿನ ಯುವಕರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಕರ್ನಾಟಕದಲ್ಲಿ ಸ್ವಾತಂತ್ರö್ಯ ಹೋರಾಟ: ಕರ್ನಾಟಕದ ಅನೇಕ ರಾಜರು, ಸ್ವಾತಂತ್ರ÷್ಯ ಹೋರಾಟಗಾರರು ಸ್ವಾತಂತ್ರ÷್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ನೆಪದಿಂದ ಕಿತ್ತೂರನ್ನು ವಶಪಡಿಸಿಕೊಂಡಾಗ ಬ್ರಿಟಿಷರ ವಿರುದ್ಧ ಕಿತ್ತೂರು ರಾಣಿ ಚೆನ್ನಮ್ಮ ವೀರಾವೇಶದಿಂದ ಹೋರಾಟ ಮಾಡಿದ್ದಾಳೆ. ಚೆನ್ನಮ್ಮಳ ಬಂಟ ಸಂಗೊಳ್ಳಿ ರಾಯಣ್ಣ ಕೂಡಾ ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟಿ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ್ದಾನೆ.
ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ಶಸಸ್ತç ಹೋರಾಟ ಮಾಡಿದವರಲ್ಲಿ ಹೈದರಾಲಿ, ಅವನ ಮಗ ಟಿಪುö್ಪ ಸುಲ್ತಾನ್, ಸುರಪುರದ ವೆಂಕಟಪ್ಪ ನಾಯಕ, ಹಲಗಲಿ ಬೇಡರು ಮುಂತಾದವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು. ಸ್ವಾತಂತ್ರ÷್ಯ ಹೋರಾಟದಲ್ಲಿ ನಮ್ಮ ಗದಗ ಜಿಲ್ಲೆಯ ಕೊಡುಗೆಯೂ ಬಹಳಷ್ಟಿದೆ. ಮುಂಡರಗಿ ಭೀಮರಾಯ, ನರಗುಂದದ ಬಾಬಾಸಾಹೇಬ, ರೋಣ ತಾಲೂಕು ಜಕ್ಕಲಿ ಗ್ರಾಮದ ಅಂದಾನಪ್ಪ ಮೇಟಿ ಮುಂತಾದವರನ್ನು ನೆನಯದೇ ಹೋದರೆ ತಪ್ಪಾಗುವುದು ಎಂದು ಅಭಿಪ್ರಾಯ ಪಟ್ಟರು.
ರೋಣ ತಾಲೂಕಿನ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ. ಇವರು ಗಾಂಧೀಜಿಯವರ ಅನುಯಾಯಿಗಳಾಗಿದ್ದರು. ಗಾಂಧೀಜಿಯವರು ಜಕ್ಕಲಿ ಗ್ರಾಮದಲ್ಲಿ ಒಂದು ದಿನ ತಂಗಿದ್ದರು. ಬಾಬಾ ಸಾಹೇಬ ಎಂದೇ ಪ್ರಖ್ಯಾತರಾದ ನರಗುಂದದ ಭಾಸ್ಕರ್ ರಾವ್ ದತ್ತುಮಕ್ಕಳಿಗೆ ಹಕ್ಕಿಲ್ಲ ನೀತಿ ವಿರುದ್ಧ ಪ್ರತಿಭಟಿಸಿ ರಾತ್ರೋ ರಾತ್ರಿ ಆಂಗ್ಲರ ಮೇಲೆ ದಾಳಿ ಮಾಡಿ ಬ್ರಿಟಿಷ್ ಅಧಿಕಾರಿ ಮ್ಯಾನ್ ಸನ್ ರುಂಡವನ್ನು ಚೆಂಡಾಡಿ ಅಗಸಿ ಬಾಗಿಲಿಗೆ ತಂದು ಕಟ್ಟುತ್ತಾರೆ. ಅಂದಿನಿAದ ನರಗುಂದದ ಅಗಸಿ ಕೆಂಪಗಸಿ ಎಂದು ಪ್ರಖ್ಯಾತವಾಯಿತು ಎಂದು ಸಚಿವರು ಇತಿಹಾಸವನ್ನು ನೆನೆದರು.
ಉಪನ್ಯಾಸಕ ಎಂ.ಎಸ್. ಯಾವಗಲ್ ಮಾತನಾಡಿ ಹೋರಾಟಗಾರ ಭಾಸ್ಕರ್ ರಾವ್ ಅವರ ಹೋರಾಟ ಹಾಗೂ ನರಗುಂದ ರೈತ ಬಂಡಾಯ ಹಾಗೂ ಸ್ವಾತಂತ್ರö್ಯ ಹೋರಾಟದ ಬಂಡಾಯವನ್ನು ಕಟ್ಟು ಕಣ್ಣು ಕಟ್ಟುವಂತೆ ವಿವರಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ 7.30 ರಿಂದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು. ನಂತರ ಕೆಂಪಗಸಿ ದ್ವಾರದಿಂದ ಪುರಸಭೆ ಆವರಣದವರೆಗೆ ಸೈಕಲ್ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಲುಪಿತು.
ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಸ್ವಾತಂತ್ರö್ಯ ಹೋರಾಟಗಾರ ಭಾಸ್ಕರ್ ರಾವ ಅವರ ಕಿರುನಾಟಕ ಪ್ರದರ್ಶನವು ನೆರೆದ ಸಾರ್ವಜನಿಕರ , ಜನಪ್ರತಿನಿಧಿಗಳ, ಹಾಗೂ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಯಿತು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸಚಿವರು ಸಾಂಕೇತಿಕವಾಗಿ ಲ್ಯಾಪ್‌ಟಾಪ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಜಿಲ್ಲಾ ಪಂಚಾಯತ್ ಸದಸ್ಯೆ ರೇಣುಕಾ ಅವರಾದಿ , ಎಪಿಎಂಸಿ ಅಧ್ಯಕ್ಷ ಯಲ್ಲಪ್ಪ ಗೌಡರ, ಪ್ರಮುಖರಾದ ಅಜ್ಜಪ್ಪ ಹುಡೇದ , ತಿಮ್ಮನಗೌಡರ, ಜಿ.ಬಿ. ಕುಲಕರ್ಣಿ, ಗೂರಪ್ಪ ಆದಪ್ಪನವರ, ಪ್ರಕಾಶಗೌಡ ತಿರಕನಗೌಡ , ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಯತೀಶ್ ಎನ್, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

The post ಇತಿಹಾಸವನ್ನರಿಯದೇ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ ಲಕ್ಷಾಂತರ ನಾಯಕರ ಹೋರಾಟದ ಫಲವಾಗಿ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ದೊರಕಿದೆ appeared first on Hai Sandur kannada fortnightly news paper.

]]>
https://haisandur.com/2021/04/07/%e0%b2%87%e0%b2%a4%e0%b2%bf%e0%b2%b9%e0%b2%be%e0%b2%b8%e0%b2%b5%e0%b2%a8%e0%b3%8d%e0%b2%a8%e0%b2%b0%e0%b2%bf%e0%b2%af%e0%b2%a6%e0%b3%87-%e0%b2%ad%e0%b2%b5%e0%b2%bf%e0%b2%b7%e0%b3%8d%e0%b2%af%e0%b2%b5/feed/ 0
ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನ https://haisandur.com/2021/03/31/%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%b0%e0%b2%bf%e0%b2%97%e0%b2%a8%e0%b3%8d%e0%b2%a8%e0%b2%a1-%e0%b2%ac%e0%b2%b3/ https://haisandur.com/2021/03/31/%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%b0%e0%b2%bf%e0%b2%97%e0%b2%a8%e0%b3%8d%e0%b2%a8%e0%b2%a1-%e0%b2%ac%e0%b2%b3/#respond Wed, 31 Mar 2021 23:37:42 +0000 https://haisandur.com/?p=14968 ಗದಗ : ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನವನ್ನು ಗದಗ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ನಗರದ ಖಾಸಗಿ ಸುದ್ದಿ ವಾಹಿನಿಗಳ ಹಾಗೂ ದಿನಪತ್ರಿಕೆಗಳ ಕಚೇರಿಗಳಿಗೆ ತೆರಳಿ ಮಾಧ್ಯಮದಲ್ಲಿ ಸರಿಗನ್ನಡ ಬಳಕೆ ಮಾಡುವಂತೆ ಹಕ್ಕೊತ್ತಾಯ ಮಾಡಲಾಯಿತು. ಕರ್ನಾಟಕದ ಜನ ಕನ್ನಡದ ಪತ್ರಿಕೆ, ಟಿವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತುನಿಷ್ಟ ಮಾಹಿತಿಗಾಗಿ ಅವಲಂಬಿಸುತ್ತಾರೆ. ಅಷ್ಟೇ ಮುಖ್ಯವಾಗಿ ತಮ್ಮ ಕನ್ನಡ ಓದು ಬರಹ ಕೌಶಲವನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಕನ್ನಡ ಮಾಧ್ಯಮವನ್ನು ಅನುಸರಿಸುತ್ತಾರೆ. ಜನಮಾನ್ಯರು -ಭಾಷೆ- ಮಾಧ್ಯಮ ಪರಸ್ಪರ ಬೆಸುಗೆಯಾಗಿ ಬದುಕಿನ […]

The post ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನ appeared first on Hai Sandur kannada fortnightly news paper.

]]>
ಗದಗ : ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನವನ್ನು ಗದಗ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ನಗರದ ಖಾಸಗಿ ಸುದ್ದಿ ವಾಹಿನಿಗಳ ಹಾಗೂ ದಿನಪತ್ರಿಕೆಗಳ ಕಚೇರಿಗಳಿಗೆ ತೆರಳಿ ಮಾಧ್ಯಮದಲ್ಲಿ ಸರಿಗನ್ನಡ ಬಳಕೆ ಮಾಡುವಂತೆ ಹಕ್ಕೊತ್ತಾಯ ಮಾಡಲಾಯಿತು.

ಕರ್ನಾಟಕದ ಜನ ಕನ್ನಡದ ಪತ್ರಿಕೆ, ಟಿವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತುನಿಷ್ಟ ಮಾಹಿತಿಗಾಗಿ ಅವಲಂಬಿಸುತ್ತಾರೆ. ಅಷ್ಟೇ ಮುಖ್ಯವಾಗಿ ತಮ್ಮ ಕನ್ನಡ ಓದು ಬರಹ ಕೌಶಲವನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಕನ್ನಡ ಮಾಧ್ಯಮವನ್ನು ಅನುಸರಿಸುತ್ತಾರೆ. ಜನಮಾನ್ಯರು -ಭಾಷೆ- ಮಾಧ್ಯಮ ಪರಸ್ಪರ ಬೆಸುಗೆಯಾಗಿ ಬದುಕಿನ ಕೊಂಡಿಯಾಗಿ ನಾಡನ್ನು ಸಮೃದ್ಧಗೊಳಿಸಬೇಕಿದೆ. ಈ ದಿಸೆಯಲ್ಲಿ ಮಾಧ್ಯಮದ ಸಹಕಾರ ಪ್ರಮುಖವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮಹಾಂತೇಶ ವಾಲಿ ಹಾಗೂ ಅನಿಲಕುಮಾರ್ ಕುಟುಕನಕೇರಿ ಹಕ್ಕೊತ್ತಾಯ ಅಭಿಯಾನದಲ್ಲಿ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪ್ರತಿನಿಧಿಗಳಾಗಿ ಅಪ್ರೆಂಟಿಸ್‌ಗಳಾದ ಶ್ವೇತಾ ಚೆನ್ನಳ್ಳಿ , ಕಮಲಾ ದೊಡ್ಡಮನಿ , ಮಹಾಂತೇಶ ಅಗಸನಕೊಪ್ಪ ಇದ್ದರು.

The post ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಅಭಿಯಾನ appeared first on Hai Sandur kannada fortnightly news paper.

]]>
https://haisandur.com/2021/03/31/%e0%b2%ae%e0%b2%be%e0%b2%a7%e0%b3%8d%e0%b2%af%e0%b2%ae%e0%b2%97%e0%b2%b3%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%b0%e0%b2%bf%e0%b2%97%e0%b2%a8%e0%b3%8d%e0%b2%a8%e0%b2%a1-%e0%b2%ac%e0%b2%b3/feed/ 0
ಲೋಕೋಪಯೋಗಿ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ,ನಿಗಧಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ. https://haisandur.com/2021/01/11/%e0%b2%b2%e0%b3%8b%e0%b2%95%e0%b3%8b%e0%b2%aa%e0%b2%af%e0%b3%8b%e0%b2%97%e0%b2%bf-%e0%b2%87%e0%b2%b2%e0%b2%be%e0%b2%96%e0%b3%86%e0%b2%af-%e0%b2%aa%e0%b3%8d%e0%b2%b0%e0%b2%97%e0%b2%a4%e0%b2%bf/ https://haisandur.com/2021/01/11/%e0%b2%b2%e0%b3%8b%e0%b2%95%e0%b3%8b%e0%b2%aa%e0%b2%af%e0%b3%8b%e0%b2%97%e0%b2%bf-%e0%b2%87%e0%b2%b2%e0%b2%be%e0%b2%96%e0%b3%86%e0%b2%af-%e0%b2%aa%e0%b3%8d%e0%b2%b0%e0%b2%97%e0%b2%a4%e0%b2%bf/#respond Mon, 11 Jan 2021 14:57:49 +0000 https://haisandur.com/?p=12950 ಗದಗ ಜ.11 : ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಇಂಜನೀಯರಗಳ ಖಾಯಂ ನೇಮಕಾತಿ ಮಾಡಿಕೊಳ್ಳುವವರೆಗೆ ತರಬೇತಿ (ಟ್ರೇನಿ) ಇಂಜನಿಯರಗಳನ್ನು 10 ತಿಂಗಳವರೆಗೆ ತೆಗೆದು ಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದರು. ಗದಗ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಜರುಗಿದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇಲಾಖೆಯ ತಾಂತ್ರಿಕ ಸಿಬ್ಬಂದಿಗಳ ಕೊರತೆ ನೀಗಿಸಲು ತಾತ್ಕಾಲಿಕವಾಗಿ ಟ್ರೇನಿ ಇಂಜನಿಯರಗಳನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸಲು ತಿಳಿಸಲಾಗಿದೆ ಎಂದರು. ಲೋಕೊಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ನಿಗಧಿ […]

The post ಲೋಕೋಪಯೋಗಿ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ,ನಿಗಧಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ. appeared first on Hai Sandur kannada fortnightly news paper.

]]>
ಗದಗ ಜ.11 : ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಇಂಜನೀಯರಗಳ ಖಾಯಂ ನೇಮಕಾತಿ ಮಾಡಿಕೊಳ್ಳುವವರೆಗೆ ತರಬೇತಿ (ಟ್ರೇನಿ) ಇಂಜನಿಯರಗಳನ್ನು 10 ತಿಂಗಳವರೆಗೆ ತೆಗೆದು ಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹೇಳಿದರು.

ಗದಗ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಜರುಗಿದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇಲಾಖೆಯ ತಾಂತ್ರಿಕ ಸಿಬ್ಬಂದಿಗಳ ಕೊರತೆ ನೀಗಿಸಲು ತಾತ್ಕಾಲಿಕವಾಗಿ ಟ್ರೇನಿ ಇಂಜನಿಯರಗಳನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸಲು ತಿಳಿಸಲಾಗಿದೆ ಎಂದರು.

ಲೋಕೊಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ನಿಗಧಿ ಪಡಿಸಲಾದ ಅವಧಿಯೊಳಗೆ ಪೂರ್ಣಗೊಳಿಸಬೇಕು. ಹಾಗೂ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಮಾತನಾಡಿ, ಕಳೆದ 2 ವರ್ಷದಿಂದ ಪ್ರವಾಹದಿಂದ ಜಿಲ್ಲೆಯ ಹಲವಾರು ಕಟ್ಟಡ ಹಾಗೂ ರಸ್ತೆಗಳು ಹಾಳಾಗಿವೆ. ಇಲಾಖೆಯ ಅಧಿಕಾರಿಗಳು ಸೂಕ್ತವಾದ ಪ್ರಸ್ತಾವಣೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಅನುದಾನ ಪಡೆಯುವಲ್ಲಿ ನಿಧಾನಗತಿ ಮಾಡುತ್ತಿದ್ದಾರೆ ಎಂದು ಅಸಮದಾನ ವ್ಯಕ್ತಪಡಿಸಿದರು. ಇದಕ್ಕೆ ರೋಣ ಶಾಸಕ ಕಳಕಪ್ಪ ಬಂಡಿ ಅವರು ಧÀ್ವನಿಗೂಡಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಅಧಿಕಾರಿಗಳ ಕಾರ್ಯವೈಖರಿ ಜನಪ್ರತಿನಿಧಿಗಳಿಗೆ ತೃಪ್ತಿ ತರಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸಲು ತಿಳಸಿದರು. ಜಿಲ್ಲೆಯ ಸಚಿವರು ಹಾಗೂ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮಾರ್ಗದರ್ಶನದಲ್ಲಿ ಸೂಕ್ತ ಕಾಮಗಾರಿ ಕೈಗೆತ್ತಿಕೊಂಡು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಿದರು.

ಪ್ರಸಕ್ತ ವರ್ಷದ ಆರ್ಥಿಕ ಹಾಗೂ ಭೌತಿಕ ಪ್ರಗತಿ ವರ್ಷಾಂತ್ಯದಲ್ಲಿ ಸಾಧಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಶಿಸ್ತುಕ್ರಮಕ್ಕೆ ಸೂಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.

ಲೋಕೋಪಯೋಗಿ ಇಲಾಖೆಯ ಧಾರವಾಡ ವೃತ್ತದ ಅಧೀಕ್ಷಕ ಅಭಿಯಂತರ ಶಿವಾನಂದ ನಾಯಕ ಅವರು ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲಾ ಮಟ್ಟದ ರಸ್ತೆ ಸುಧಾರಣೆಗೆ ಸಂಭಂಧ ಪಟ್ಟಂತೆ ಗದಗ ಜಿಲ್ಲೆಯಲ್ಲಿ 144.65 ಕೋಟಿ ರೂಪಾಯಿ ವೆಚ್ಚದಲ್ಲಿ 73 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. 72 ಕಾಮಗಾರಿಗಳಿಗೆ ಈಗಾಗಲೇ ಏಜೆನ್ಸಿ ನಿಯೋಜಿಸಲಾಗಿದೆ. ಹಾಗೂ ವಿಶೇಷ ಅಭಿವೃದ್ಧಿ ಯೋಜನೆಯಡಿ 5.19 ಕೋಟಿಯಲ್ಲಿ 5 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.

ಎಸ್.ಡಿ.ಪಿ.ಯಲ್ಲಿನ ಎಸ್.ಸಿ.ಪಿ ಯೋಜನೆಯಡಿ 27.4 ಕೋಟಿ ರೂಪಾಯಿ ಅನುದಾನದಲ್ಲಿ 8 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. 5054 ರಲ್ಲಿ 11.87 ಕೋಟಿ ರೂಪಾಯಿ ಅನುದಾನದಲ್ಲಿ 21 ಕಾಮಗಾರಿಗಳಲ್ಲಿ 16 ಕಾಮಗಾರಿಗಳಿಗೆ ಈಗಾಗಲೇ ಏಜೆನ್ಸಿಗಳನ್ನು ನಿಗಧಿ ಪಡಿಸಲಾಗಿದೆ ಎಂದರು.

ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ರಾಠೋಡ ಮಾತನಾಡಿ, ಟಿ.ಎಸ್.ಪಿ ಯಲ್ಲಿ 12.59 ಕೋಟಿ ವೆಚ್ಚದಲ್ಲಿ 13 ಕಾಮಗಾರಿಗಳನ್ನು ತೆಗೆದುಕೊಂಡು 10 ಕಾಮಗಾರಿಗಳಿಗೆ ಏಜೆನ್ಸಿ ನಿಗದಿ ಮಾಡಲಾಗಿದೆ. ಜಿಲ್ಲೆಯ 132 ಶಾಲಾ ಕಟ್ಟಡ ಕಾಮಗಾರಿಗಳನ್ನು 38.22 ಕೋಟಿ ವೆಚ್ಚದಲ್ಲಿ ತೆಗೆದುಕೊಳ್ಳಲಾಗಿದೆ. ನರಗುಂದ ತಾಲ್ಲೂಕಿನಲ್ಲಿ 85 ಲಕ್ಷ ರೂಪಾಯಿ ವೆಚ್ಚದಲ್ಲಿ 5 ಅಂಗನವಾಡಿ ನಿರ್ಮಾಣ ಮಾಡಲಾಗುತ್ತಿದೆ.

2019-20 ಸಾಲಿನ ಪ್ರವಾಹ ಹಾನಿಯಲ್ಲಿ ಕೈಗೊಂಡ ಕಾಮಗಾರಿಗಳು ಮುಕ್ತಾಯವಾಗಿವೆ. 2020-21 ನೇ ಸಾಲಿನಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ 12 ಕಾಮಗಾರಿ ತೆಗೆದುಕೊಂಡಿದ್ದು ನಿಗದಿತ ಅವಧಿಯಲ್ಲಿ ಮುಕ್ತಾಯ ಮಾಡಲಾಗುವುದು. ಜಿಲ್ಲೆಯಲ್ಲಿ ರಸ್ತೆಗಳ ಪಾಟ್ ಹೋಲ್ ಗಳನ್ನು ಸರಿಪಡಿಸಲು ಒಟ್ಟು 683 ಕಿಮೀ ರಸ್ತೆ ದುರಸ್ತಿಗೆ ತೆಗೆದುಕೊಳ್ಳಲಾಗಿದೆ. ಈವರೆಗೆ ಒಟ್ಟಾರೆ ಶೇ.85 ರಷ್ಟು ಸಾಧನೆಯಾಗಿದೆ. ರಾಷ್ಟ್ರಿಯ ಹೆದ್ದಾರಿ ದುರಸ್ತಿಯಲ್ಲಿ ಕೊಣ್ಣೂರಿನ ಬ್ರಿಡ್ಜ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಕಾಮಗಾರಿ ಆರಂಭ ಆಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಕಳಕಪ್ಪ ಬಂಡಿ, ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿ.ಪಂ ಸಿಇಓ ಡಾ.ಆನಂದ ಕೆ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

The post ಲೋಕೋಪಯೋಗಿ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ,ನಿಗಧಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ. appeared first on Hai Sandur kannada fortnightly news paper.

]]>
https://haisandur.com/2021/01/11/%e0%b2%b2%e0%b3%8b%e0%b2%95%e0%b3%8b%e0%b2%aa%e0%b2%af%e0%b3%8b%e0%b2%97%e0%b2%bf-%e0%b2%87%e0%b2%b2%e0%b2%be%e0%b2%96%e0%b3%86%e0%b2%af-%e0%b2%aa%e0%b3%8d%e0%b2%b0%e0%b2%97%e0%b2%a4%e0%b2%bf/feed/ 0
ವಿಶ್ವ ವಿಕಲಚೇತನರ ದಿನಾಚರಣೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತಾಗಲಿ : ಡಾ.ಆನಂದ ಕೆ https://haisandur.com/2020/12/03/%e0%b2%b5%e0%b2%bf%e0%b2%b6%e0%b3%8d%e0%b2%b5-%e0%b2%b5%e0%b2%bf%e0%b2%95%e0%b2%b2%e0%b2%9a%e0%b3%87%e0%b2%a4%e0%b2%a8%e0%b2%b0-%e0%b2%a6%e0%b2%bf%e0%b2%a8%e0%b2%be%e0%b2%9a%e0%b2%b0%e0%b2%a3-4/ https://haisandur.com/2020/12/03/%e0%b2%b5%e0%b2%bf%e0%b2%b6%e0%b3%8d%e0%b2%b5-%e0%b2%b5%e0%b2%bf%e0%b2%95%e0%b2%b2%e0%b2%9a%e0%b3%87%e0%b2%a4%e0%b2%a8%e0%b2%b0-%e0%b2%a6%e0%b2%bf%e0%b2%a8%e0%b2%be%e0%b2%9a%e0%b2%b0%e0%b2%a3-4/#respond Thu, 03 Dec 2020 11:27:27 +0000 https://haisandur.com/?p=11688 ಗದಗ . ಡಿ.೩: ವಿಕಲಚೇತನವಿರುವ ಎಲ್ಲ ಫಲಾನುಭವಿಗಳಿಗೂ ಸಹ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಯುನಿಕ್ ಗುರುತಿನ ಪತ್ರ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ ಅವರು ಹೇಳಿದರು. ಗುರುವಾರ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗದಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮತ್ತು ವಿಕಲ ಚೇತನರ ಕ್ಷೇತ್ರದಲ್ಲಿ ಸೇವಾನಿರತ ಸಂಘ ಸಂಸ್ಥೆಗಳು ಇವರ […]

The post ವಿಶ್ವ ವಿಕಲಚೇತನರ ದಿನಾಚರಣೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತಾಗಲಿ : ಡಾ.ಆನಂದ ಕೆ appeared first on Hai Sandur kannada fortnightly news paper.

]]>
ಗದಗ . ಡಿ.೩: ವಿಕಲಚೇತನವಿರುವ ಎಲ್ಲ ಫಲಾನುಭವಿಗಳಿಗೂ ಸಹ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಯುನಿಕ್ ಗುರುತಿನ ಪತ್ರ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ ಅವರು ಹೇಳಿದರು.

ಗುರುವಾರ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗದಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮತ್ತು ವಿಕಲ ಚೇತನರ ಕ್ಷೇತ್ರದಲ್ಲಿ ಸೇವಾನಿರತ ಸಂಘ ಸಂಸ್ಥೆಗಳು ಇವರ ಸಂಯುಕ್ತ ಅಶ್ರಯದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನು ಒಂದು ತಿಂಗಳಲ್ಲಿ ಜಿಲ್ಲೆಯ ಎಲ್ಲ ವಿಕಲಚೇತನರಿಗೂ ಸಹ ಸರ್ಕಾರ ನೀಡುತ್ತಿರುವ ಕಾರ್ಡ ವಿತರಿಸಲಾಗುವುದು. ಈ ಕಾರ್ಡನಿಂದ ಸುಲಭವಾಗಿ ಅವರನ್ನು ಗುರುತಿಸಿ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗಲಿದೆ ಎಂದರು. ಅಲ್ಲದೇ ೨೦೧೬ ರಲ್ಲಿ ವಿಕಲಚೇತನರ ಹಕ್ಕುಗಳ ಕುರಿತು ಸರ್ಕಾರ ಕಾಯ್ದೆ ರೂಪಿಸಿದೆ. ಇದರಲ್ಲಿ ಅವರಿಗೆ ಇರುವ ಹಕ್ಕುಗಳ ವಿವರ ನೀಡಲಾಗಿದ್ದು, ಇದರಿಂದ ಅರ್ಹರೆಲ್ಲರಿಗೂ ಸೌಲಭ್ಯಗಳು ದೊರಕುವಂತಾಗಲಿ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿರುವ ವಿಕಲಚೇತನರು ದುರ್ಬಲರಲ್ಲ ಸಬಲರು, ಅವರಿಗೆ ಕಾನೂನುಗಳಲ್ಲಿರುವ ಹಕ್ಕುಗಳ ಮತ್ತು ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸೌಲತ್ತುಗಳನ್ನು ತಲುಪಿಸಬೇಕು. ಸರ್ಕಾರದ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಇಲಾಖೆಗಳು ಶ್ರಮಿಸಿದಾಗ ಮಾತ್ರ ವಿಕಲಚೇತನರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ವಿಕಲಚೇತನರು ಆತ್ಮ ವಿಶ್ವಾಸದಿಂದ ಮುನ್ನಡೆದು ಸಮಾಜದ ಮುಖ್ಯವಾಹಿನಿಗೆ ತಲುಪುವಂತಾಗಲಿ ಎಂದು ಹೇಳಿದರು.

ಜಿಲ್ಲೆಯ ವಿಕಲಚೇತನರಿಗೆ ವಿಷೇಶ ಯೋಜನೆಗಳನ್ನು ರೂಪಿಸಿ, ಎಲ್ಲರಿಗೂ ಸೌಲಭ್ಯಗಳು ಸಿಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಇಲಾಖೆಯು ಕಾರ್ಯನಿರ್ವಹಿಸಬೇಕು. ಜಗತ್ತಿನಲ್ಲಿ ಅನೇಕ ವಿಕಲಚೇತನರು ಅಸಾಮಾನ್ಯ ಸಾಧನೆಗಳನ್ನು ಮಾಡಿರುವ ಉದಾಹರಣೆಗಳಿವೆ. ವಿಕಲಚೇತನರು ಸಹ ಯಾರಿಗೂ ಕಡಿಮೇ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಎಲ್ಲರಂತೆ ಅವರು ಸಮಾಜದಲ್ಲಿ ಸಮಾನವಾಗಿ ಸಹಬಾಳ್ವೆ ನಡೆಸುವಂತಾಗಲಿ. ಇದಕ್ಕೆ ಸರ್ಕಾರದ ಯೋಜನೆಗಳ ಸದ್ಬಳಕೆ ಅಗತ್ಯವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ವಿಕಲಚೇತನರು ನಿರ್ಲಕ್ಷಕ್ಕೆ ಒಳಗಾದವರು ಅವರನ್ನು ಸಮಾನವಾಗಿ ಕಂಡಾಗ ಮಾತ್ರ ಸಮಾನತೆ ಸಾಧ್ಯ. ವಿಕಲಚೇತನರಿಗೆ ಕಾನೂನು-ಕಾಯ್ದೆಗಳ ಕುರಿತು ಮಾಹಿತಿ ಇರುವುದು ಅನಿವಾರ್ಯ ಮತ್ತು ಅವಶ್ಯವಾಗಿದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕಾನೂನುಗಳ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಮಾಡುತ್ತಿದೆ ಅವುಗಳ ಸದುಪಯೋಗ ಪಡೆದು ಎಲ್ಲರೂ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣ ಅಧಿಕಾರಿ ಕೆ ಮಹಾಂತೇಶ್ ಮಾತನಾಡಿ, ೨೦೧೧ ರ ಜನಗಣತಿಯಂತೆ ಗದಗ ಜಿಲ್ಲೆಯಲ್ಲಿ ೨೮೩೫೦ ವಿಕಲಚೇತನರಿದ್ದಾರೆ. ವಿಕಲಚೇತನರು ಖಿನ್ನತೆಯಿಂದ ಹೊರಬಂದು ಶೈಕ್ಷಣಿಕವಾಗಿ ಜ್ಞಾನ ಹೊಂದಿ, ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರವು ವಿಕಲಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ ೫೦,೦೦೦ ರೂ ಗಳ ಸಹಾಯಧನ ನೀಡುತ್ತಿದೆ, ಅದರಂತೆ ವಿಕಲಚೇತನರನ್ನು ವಿವಾಹವಾದ ವ್ಯಕ್ತಿಗಳಿಗೆ ೫೦,೦೦೦ ರೂ ಪ್ರೋತ್ಸಾಹಧನ ನೀಡುವ ಮೂಲಕ ಅವರು ಸ್ವಾವಲಂಬಿ ಜೀವನಕ್ಕೆ ನೆಲೆ ಕಲ್ಪಿಸುತ್ತಿದೆ. ಹಾಗೂ ಇನ್ನು ಹತ್ತು ಹಲವು ಯೋಜನೆಗಳನ್ನು ವಿಕಲಚೇತನರ ಕಲ್ಯಾಣಕ್ಕಾಗಿ ರೂಪಿಸಿದೆ ಅವುಗಳನ್ನು ಬಳಸಿಕೊಂಡು ಸಮಾಜದಲ್ಲಿ ಸ್ವಾವಲಂಭಿಗಳಾಗಿ ಜೀವಿಸಿ ಎಂದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸರ್ಕಾರ ನೀಡುತ್ತಿರುವ ಗುರುತಿನ ಪತ್ರ (ಕಾರ್ಡ) ಗಳನ್ನು ಅತಿಥಿಗಳು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ ಸೇರಿದಂತೆ ಜಿಲ್ಲೆಯ ಸೇವಾ ನಿರತ ಸಂಘ-ಸಂಸ್ಥೆಗಳ ಸದಸ್ಯರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಿಬ್ಬಂದಿ ಇತರರು ಇದ್ದರು.

The post ವಿಶ್ವ ವಿಕಲಚೇತನರ ದಿನಾಚರಣೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತಾಗಲಿ : ಡಾ.ಆನಂದ ಕೆ appeared first on Hai Sandur kannada fortnightly news paper.

]]>
https://haisandur.com/2020/12/03/%e0%b2%b5%e0%b2%bf%e0%b2%b6%e0%b3%8d%e0%b2%b5-%e0%b2%b5%e0%b2%bf%e0%b2%95%e0%b2%b2%e0%b2%9a%e0%b3%87%e0%b2%a4%e0%b2%a8%e0%b2%b0-%e0%b2%a6%e0%b2%bf%e0%b2%a8%e0%b2%be%e0%b2%9a%e0%b2%b0%e0%b2%a3-4/feed/ 0
ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಸಾಹಿತಿ, ಎ.ಎಸ್. ಮಕಾನದಾರ ನೇಮಕ https://haisandur.com/2020/11/23/%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf-%e0%b2%b8%e0%b2%ae%e0%b2%bf%e0%b2%a4/ https://haisandur.com/2020/11/23/%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf-%e0%b2%b8%e0%b2%ae%e0%b2%bf%e0%b2%a4/#respond Mon, 23 Nov 2020 02:11:31 +0000 https://haisandur.com/?p=11263 ಗಜೇಂದ್ರಗಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದಲ್ಲಿ ಕನ್ನಡ ಭಾಷಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಐವರನ್ನೊಳಗೊಂಡ  ಜಿಲ್ಲಾ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.ಎ ಎಸ್. ಮಕಾನದಾರ. ಹಿರಿಯ ಸಾಹಿತಿ ಪ್ರೊ. ಚಂದ್ರ ಶೇಖರ್ ವಸ್ತ್ರದ.ಮುಂಡರಗಿಯ ಪ್ರೊ. ಬಿ ಆರ್. ಪೊಲೀಸ್ ಪಾಟೀಲ್.ನರಗುಂದದ  ಅನಿಲ ಕುಮಾರ್ ಎಸ್. ಕೊಟ್ಟನ ಕೇರಿ. ಕೊಣ್ಣೂರಿನ ಮಹಾಂತೇಶ್ ಪಿ ವಾಲಿ ಆಯ್ಕೆ ಆಗಿದ್ದಾರೆ. ಗದಗ […]

The post ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಸಾಹಿತಿ, ಎ.ಎಸ್. ಮಕಾನದಾರ ನೇಮಕ appeared first on Hai Sandur kannada fortnightly news paper.

]]>
ಗಜೇಂದ್ರಗಡ: ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದಲ್ಲಿ ಕನ್ನಡ ಭಾಷಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ
ಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗೆ ಐವರನ್ನೊಳಗೊಂಡ  ಜಿಲ್ಲಾ ಕನ್ನಡ ಜಾಗೃತಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.ಎ ಎಸ್. ಮಕಾನದಾರ. ಹಿರಿಯ ಸಾಹಿತಿ ಪ್ರೊ. ಚಂದ್ರ ಶೇಖರ್ ವಸ್ತ್ರದ.ಮುಂಡರಗಿಯ ಪ್ರೊ. ಬಿ ಆರ್. ಪೊಲೀಸ್ ಪಾಟೀಲ್.ನರಗುಂದದ  ಅನಿಲ ಕುಮಾರ್ ಎಸ್. ಕೊಟ್ಟನ ಕೇರಿ. ಕೊಣ್ಣೂರಿನ ಮಹಾಂತೇಶ್ ಪಿ ವಾಲಿ ಆಯ್ಕೆ ಆಗಿದ್ದಾರೆ. 
ಗದಗ ಜಿಲ್ಲೆ ಗಜೇಂದ್ರಗಡದ 
ಅಕ್ಕಡಿಸಾಲಿನ ಕವಿ, ಎ.ಎಸ್.ಮಕಾನದಾರವರು  ಸಾಹಿತ್ಯ ವಲಯದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದು ಅನೇಕ ಮೌಲ್ಯಯುತ ಸಾಹಿತ್ಯ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ನಿರಂತರ ಪ್ರಕಾಶನದ ಮೂಲಕ ಯುವ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯ ಕೂಡ ಅವಿರತವಾಗಿ ನಡೆಸಿದ್ದಾರೆ ಹೊಸ ಬರಹಗಾರರ ಕೃತಿ ಗಳ ಪ್ರಕಟಣೆ ನಾಡಿನ ಪ್ರತಿಭಾವಂತ ಸಾಧಕರಿಗೆ ಮಕಾನದಾರ ಸಾಹಿತ್ಯ ಪ್ರತಿಷ್ಠಾನದ ಮೂಲಕ ಗುರುತಿಸಿ ಗೌರವಿಸುವ ಕಾರ್ಯ ಸದ್ದಿಲ್ಲದೇ ಸಾಗಿಸಿದ್ದಾರೆ. ಮಕಾನದಾರ ಅವರ ಮೂರು ದಶಕದ ಕಾವ್ಯ ಅಕ್ಕಡಿಸಾಲು ಕವನ ಸಂಕಲನ ಕೃತಿ ಐದು ಭಾಷೆಗಳಿಗೆ ಅನುವಾದಗೊಂಡಿದೆ. ಅಮ್ಮನ ಬಿಕ್ಕಳಿಕ ನಿಲ್ಲಿಸುವಿರಾ ಎನ್ನುವ ಪದ್ಯ ಕುವೆಂಪು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿರುವುದು ವಿಶೇಷವಾಗಿದೆ.
ನ್ಯಾಯಾಂಗಇಲಾಖೆಯಲ್ಲಿದ್ದುಕೊಂಡೆ ತಮ್ಮ ವೃತ್ತಿಯೊಂದಿಗೆ ಸಾಹಿತ್ಯ ವಲಯದಲ್ಲಿ ಅಗಾಧ ಸಾಧನೆಗೈದಿರುವ ಮಕಾನದಾರರು ಈ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಕ್ಕೆಹಿರಿಯ ಸಾಹಿತಿ  ಆರ್.ಕೆ ಭಾಗವಾನ್, ತಾಲೂಕಾ ಕಸಾಪ ಅಧ್ಯಕ್ಷ ಐ.ಎ.ರೇವಡಿ, ಪತ್ರ ಕರ್ತ ದಾವಲಸಾಬ ತಾಳಿಕೋಟಿ, ಜಿ.ಎಸ್.ವಡ್ಡರ, ಎ.ಡಿ.ಕೋಲಕಾರ, ಎಮ್.ಎಚ್.ಕೋಲಕಾರ, ಫಯಾಜ್ ತೋಟದ, ಪುರಸಭೆ ಸದಸ್ಯ ಶಿವರಾಜ್ ಘೋರ್ಪಡೆ,ಹೋರಾಟಗಾರ  ಎಮ್.ಎಸ್.ಹಡಪದ, ಯು ಆರ್ ಚೆನ್ನಮ್ಮನವರ,  ಅಭಿನಂದನೆ ಸಲ್ಲಿಸಿದ್ದಾರೆ

ವರದಿ:-ವಿದ್ಯಾಶ್ರೀ. ಬಿ.ಬಳ್ಳಾರಿ

The post ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಸಾಹಿತಿ, ಎ.ಎಸ್. ಮಕಾನದಾರ ನೇಮಕ appeared first on Hai Sandur kannada fortnightly news paper.

]]>
https://haisandur.com/2020/11/23/%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%9c%e0%b2%be%e0%b2%97%e0%b3%83%e0%b2%a4%e0%b2%bf-%e0%b2%b8%e0%b2%ae%e0%b2%bf%e0%b2%a4/feed/ 0