ಗ್ರಾಮೀಣಾಭಿವೃದ್ಧಿ ವಿ.ವಿ.ಯ ಪ್ರಥಮ ಘಟಿಕೋತ್ಸವ

0
127

ಗದಗ : ರಾಷ್ಟçದ ನಿಜವಾದ ಅಭಿವೃದ್ಧಿ ಗ್ರಾಮಗಳ ಬೆಳವಣಿಗೆಯಲ್ಲಿ ಅಡಗಿದೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಹೊಸ ಆವಿಷ್ಕಾರದೊಂದಿಗೆ ಅಭಿವೃದ್ಧಿಗೆ ನಾಂದಿಯಾಗುವ0ತೆ ವಿವೇಕಾನಂದ ಯುಥ್ ಮೂವ್‌ಮೆಂಟ್ ಮತ್ತು ಮೈಸೂರಿನ ಗ್ರಾಸ್‌ರೂಟ್ಸ್ ರಿಸರ್ಚ ಮತ್ತು ಅಡ್ವೋಕೆಸಿ ಮೂವ್‌ಮೆಂಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.
ಗದಗಿನ ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದರು.
ರಾಷ್ಟçದ ಅಭಿವೃದ್ಧಿ ಬೀಜವನ್ನು ಪಂಚಾಯತ್‌ದಿ0ದ ಮೊಳಕೆಯೊಡೆದು ಅದು ರಾಜ್ಯ , ರಾಷ್ಟçದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನವಭಾರತದ ನಿರ್ಮಾಣಕ್ಕೆ ಗ್ರಾಮೀಣ ಭಾಗದ ಕೊಡುಗೆ ಅಪಾರವಿದೆ ಎಂದರು. ಗ್ರಾಮೀಣ ಭಾಗದ ಜನರಲ್ಲಿ ಹೊಸ ಆವಿಷ್ಕಾರಗಳ ಚಿಂತನೆಗೆ ಕೊರತೆಯಿಲ್ಲ. ಮೂಲಸೌಕರ್ಯಗಳ ಕೊರತೆಯಿದ್ದು ಅವುಗಳನ್ನು ಪೂರೈಸಿದಲ್ಲಿ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಸರ್ಕಾರ ಹಾಗೂ ಸರ್ಕಾರಕ್ಕೆ ಸಮಾಜ ಕೈಜೋಡಿಸಿ ಸಹಕರಿಸಿದರೆ ಗ್ರಾಮೀಣಾಭಿವೃದ್ಧಿ ಖಂಡಿತ ಸಾಧ್ಯ ಎಂದರು. ಇಂದು ಪದವಿ ಪಡೆದ ವಿದ್ಯಾರ್ಥಿಗಳು ಕೇವಲ ಪದವಿ ಮಾತ್ರ ಪಡೆದಿರುತ್ತೀರಿ ಅದರೊಂದಿಗೆ ಅಹಂಕಾರ ಪಡೆದಿರುವುದಿಲ್ಲವೆಂಬುದನ್ನು ಆರ್ಥ ಮಾಡಿಕೊಂಡು ಸಮಾಜದಲ್ಲಿ ಮುನ್ನಡೆಯಬೇಕು ಎಂದರು. ವಿಶ್ವವು ಭಾರತದೆಡೆಗೆ ಗಮನಹರಿಸುತ್ತಿರುವುದರಲ್ಲಿ ಗ್ರಾಮೀಣ ಶೈಲಿ ಹಾಗೂ ಆರ್ಥಿಕತೆ ಪ್ರಮುಖವಾಗಿದೆ. ದೇಶೀಯ ಶೈಲಿ ಹಾಗೂ ಆರ್ಥಿಕತೆಯು ಇತರರಿಗೆ ಮಾದರಿಯಾಗಲಿದೆ ಎಂದರು. ಪಂಚಾಯತ್ ರಾಜನ ಪರಿಣಾಮಕಾರಿ ಅನುಷ್ಟಾನ ಮುಖ್ಯ ಉತ್ಕಟ ಕಾಳಜಿಗಳನ್ನು ಹುಟ್ಟು ಹಾಕುತ್ತದೆ. ತಮ್ಮ ಪಂಚಾಯತ್‌ದಲ್ಲಿ ಇರುವ ನೇರ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ತಾನು ಪರಿಣಾಮಕಾರಿಯಾಗಿ ಪಾಲ್ಗೊಳ್ಳಬೇಕು. ತನ್ನ ಹಕ್ಕನ್ನು ಚಲಾಯಿಸಬೇಕು ಎನ್ನುವ ಮನೋಭಾವ ಎಲ್ಲಾ ಗ್ರಾಮೀಣ ಜನರಿಗೆ ಬರುವಂತಹ ವಾತಾವರಣ ಸೃಷ್ಟಿ, ಅವರ ಭಾಗವಹಿಸುವ ಮೂಲಕ ಪಕ್ಷ ರಾಜಕೀಯಗಳನ್ನು ಬದಿಗೊತ್ತಿ ಜನಸಮುದಾಯ ತಾವೆಲ್ಲ ಒಂದು ಎನ್ನುವ ಮನೋಭಾವದಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭಾಗವಹಿಸುವಂತೆ ಮಾಡುವುದು. ಪ್ರತಿಯೊಬ್ಬ ಪ್ರಜೆಯು ತನ್ನ ವಯಕ್ತಿಕ ಭಾಗವಹಿಸುವಿಕೆ ಹಕ್ಕನ್ನು ತನ್ನ ಸಮಸ್ತ ಸಮುದಾಯವು ನಿಜ ಅರ್ಥದ ಸಮಾನತೆಯ ಅಧಾರದ ಮೇಲೆ ಅಭಿವೃದ್ಧಿಯಾಗುವಂತೆ ಬಳಸಲು ಸನ್ನದ್ದರಾಗುವಂತೆ ಪ್ರಜೆಗಳನ್ನು ತಯಾರಾಗುವಂತೆ ಮಾಡುವುದು. ಬಹಳ ಸಶಕ್ತ ವಿಕೇಂದ್ರೀಕರಣ ಹಾಗೂ ನಿಜ ಅರ್ಥದ ಅಧಿಕಾರಿಗಳ ಮೂಲಕ ಮಾತ್ರ ಸಾಧ್ಯ ಎಂದರು.
ವಿ.ವಿ.ಯ ಕುಲಸಚಿವ ಪ್ರೊ. ವಿಷ್ಣುಕಾಂತ ಚಟಪಲ್ಲಿ ಅವರು ಮಾತನಾಡಿ ವಿ.ವಿ.ಯಲ್ಲಿ ನಡೆಯುವ ಪ್ರಥಮ ಘಟಿಕೋತ್ಸವ ಇದಾಗಿದ್ದು ಗ್ರಾಮೀಣ ಪರಿವರ್ತನೆಯಡೆಗೆ ಒಂದು ಹೆಜ್ಜೆಯಾಗಿದೆ ಎಂದರು. ದೀಕ್ಷಾ ಪದವು ಎರಡು ಭಾಗಗಳನ್ನು ಹೊಂದಿದೆ. ದಿ ಮತ್ತು ಕ್ಷ. ದಿ ಅಕ್ಷರವು ದಿಕ್ ಅತವಾ ನಿರ್ದೇಶನ ಅತವಾ ದೈವಿಕ ಜ್ಞಾನವನ್ನು ಪಡೆಯುವ ಪ್ರಕ್ರಿಯೆಯಾಗಿದೆ. ಕ್ಷ ಎಂದರೆ ಸಂಚಿತ ಪಾಪಗಳನ್ನು ನಿವಾರಿಸುವುದು ಅಥವಾ ನಾಶಪಡಿಸುವುದನ್ನು ಸೂಚಿಸುತ್ತದೆ. ಪರ್ಯಾಯವಾಗಿ ದೀಕ್ಷಾ ಪದದಲ್ಲಿ ಈಕ್ಷಾ ಎಂಬುವುದು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ನೋಡಲು ಅಥವಾ ಗ್ರಹಿಸಲು ಒಬ್ಬ ವ್ಯಕ್ತಿಯನ್ನು ಶಕ್ತನನ್ನಾಗಿಸುತ್ತದೆ ಎಂದರು.
ಸಹ ಕುಲಾಧಿಪತಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಎಂಬ ಅಧಿಕಾರದಿಂದ ಉಪಸ್ಥಿತರಾಗಿ ಪದವಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಆಯಾ ಪದವಿಗಳಿಗೆ ಪ್ರವೇಶ ನೀಡುತ್ತೇನೆ ಹಾಗೂ ನಿಮ್ಮ ಜೀವನದಲ್ಲಿ ಮಾತುಕತೆಯಲ್ಲಿ ಮತ್ತು ನಡುವಳಿಕೆಯಲ್ಲಿ ನೀವು ಎಂದೂ ಈ ಪದವಿಗೆ ಅರ್ಹರು ಎಂದು ಭಾವಿಸಿ ಅಪ್ಪಣೆ ನೀಡುತ್ತೇನೆ ಎಂದು ಸಚಿವ ಈಶ್ವರಪ್ಪ ಅವರು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಸಾಬರಮತಿ ಆಶ್ರಮದಲ್ಲಿ ಅತಿಥಿ ಮಹೋದಯರು ಗುಂಪು ಛಾಯಾಚಿತ್ರಕ್ಕೆ ಸಾಕ್ಷಿಯಾದರು. ನಂತರ ಸಬರಮತಿ ಆಶ್ರಮದಿಂದ ಘಟಿಕೋತ್ಸವ ಸಭಾಂಗಣದವರೆಗೆ ಮೆರವಣಿಗೆ ಸಾಗಿತು.
ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಶಾಸಕ ಎಚ್.ಕೆ.ಪಾಟೀಲ ಹಾಗೂ ಹಿರಿಯ ಐ.ಎ.ಎಸ್. ಅಧಿಕಾರಿ ಡಾ.ಅಶೋಕ ದಳವಾಯಿ, ವಿವಿಯ ರಿಜಿಸ್ಟಾçರ್ ಬಸವರಾಜ ಲಕ್ಕಣ್ಣವರ, ವಿತ್ತೀಯ ಅಧಿಕಾರಿ ಪ್ರಶಾಂತ ಜೆ.ಸಿ, ವಿವಿಯ ವಿವಿಧ ಕೇಂದ್ರಗಳ ನಿರ್ದೇಶಕರು, ಶಾಲೆಗಳ ಮುಖ್ಯಸ್ಥರು, ಕಾರ್ಯನಿವಾಹಕ ಪರಿಷತ್ತಿನ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here