ಜಲ ಜೀವನ್ ಮಿಷನ್: ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ಗಂಗೆ;ಸಚಿವ ಸಿ.ಸಿ.ಪಾಟೀಲ

0
113

ಗದಗ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಶುದ್ಧ ಕುಡಿಯುವ ನೀರುವ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಲ ಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದು ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳದ ಮೂಲಕ ನೀರು ಪೂರೈಸಲಾಗುವದು ಎಂದು ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.

ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದಲ್ಲಿ ಜಲಜೀವನ ಮಿಷನ ಯೋಜನೆಯಡಿ ಅಂದಾಜು 70 ಲಕ್ಷ ರೂ ಅನುದಾನದಲ್ಲಿ 334 ಮನೆಗಳಿಗೆ ನಳಗಳ ಜೋಡಣೆ ಹಾಗೂ 1ಲಕ್ಷ ಲೀ. ಸಾಮರ್ಥದ ಮೆಲ್ಮಟ್ಟದ ಜಲಾಸಂಗ್ರಹಣಾಗಾರ, ಹಿರೆಕೊಪ್ಪ ಗ್ರಾಮದಲ್ಲಿ ಅಂದಾಜು 74 ಲಕ್ಷ ರೂ ಅನುದಾನದಲ್ಲಿ 643 ಮನೆಗಳಿಗೆ ನಳಗಳ ಜೋಡಣೆ ಹಾಗೂ 50ಸಾವಿರ ಲೀ. ಸಾಮರ್ಥದ ಮೆಲ್ಮಟ್ಟದ ಜಲಾಸಂಗ್ರಹಣಾಗಾರ ಕಾಮಗಾರಿಗೆ ಹಾಗೂ ಅಂದಾಜು 148 ಲಕ್ಷ ರೂ ಅನುದಾನದಲ್ಲಿ 1220 ಮನೆಗಳಿಗೆ ನಳಗಳ ಜೋಡಣೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೆರಿಸಿ ಅವರು ಮಾತನಾಡಿದರು. ಸಾರ್ವಜನಿಕರು ತೆರಿಗೆ ಹಣದಿಂದಾಗಿ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗುತ್ತಿದ್ದು ಈ ಕಾಮಗಾರಿಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಭಾಗಿತ್ವ ಅತೀ ಮುಖ್ಯವಾಗಿದೆ ಎಂದರು. ಗ್ರಾಮದಲ್ಲಿನ ಜನರು ಅಭಿವೃದ್ಧಿ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ತಮ್ಮ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಹಕಾರ ನೀಡುವಂತೆ ತಿಳಿಸಿದರು. ಕೊವಿಡ್‍ನಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ತಮ್ಮ ಗ್ರಾಮಗಳಿಗೆ ಅನುದಾನ ಬಿಡುಗಡೆಯಾಗಿರುವದು ಮಹತ್ವದ ಸಂಗತಿಯಾಗಿದೆ. ಬಿಡುಗಡೆಯಾದ ಈ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ತ್ವರಿತ ಗತಿಯಲ್ಲಿ ಪೂರ್ಣಗೊಳ್ಳಲು ಗ್ರಾಮದ ಚುನಾಯಿತ ಸದಸ್ಯರಿಂದ ಹಿಡಿದು ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಚಿಕ್ಕೊಪ್ಪ-ಹೊಂಬಳ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಗ್ರಾಮದ ಬಸವೇಶ್ವರ ದೇವಾಲಯದ ದುರಸ್ತಿಗಾಗಿ ಅಗತ್ಯದ ಅನುದಾನ, ಹಿರೇಕೊಪ್ಪ ಗ್ರಾಮದ ಸೇದು ರಸ್ತೆ ನಿರ್ಮಾಣಕ್ಕೆ ಮೂವತ್ತು ಲಕ್ಷ ಅನುದಾನ ಹಾಗೂ ಹುಯಿಲಗೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ರಸ್ತೆಗೆ ಜಮೀನು ಮಾಲಿಕರು ಅಗತ್ಯದ ಜಾಗೆಯನ್ನು ನೀಡುವುದಾದರೆ ಕೂಡಲೇ ಮೂವತ್ತು ಲಕ್ಷ ರೂ.ಗಳ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವದು ಎಂದರು ಸಚಿವರು ತಿಳಿಸಿದರು.

ಕಳೆದ ಸಾಲಿನಲ್ಲಿ ಕೋವಿಡ್-19 ಸೊಂಕಿನಿಂದಾಗಿ ಇಡೀ ವಿಶ್ವದ ಜನ ಜೀವನ ಅಲ್ಲೋಲಕಲ್ಲೋವಾಗಿತ್ತು. ಸಧ್ಯ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು ಸೋಂಕು ತೀವ್ರಗತಿಯಲ್ಲಿ ಹರುಡಿತ್ತಿರುವದು ವಿಷಾದದ ಸಂಗತಿಯಾಗಿದೆ. ಸೊಂಕು ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಂತ ಪ್ರಮುಖವಾಗಿದೆ. ಸರಕಾರದ ಮಾರ್ಗಸೂಚಿಗಳನ್ನು ಪ್ರತೊಯೊಬ್ಬರು ಕಡ್ಡಾಯವಾಗಿ ಪಾಲಿಸುವದರೊಂದಿಗೆ ಕೊರೊನಾ ಮುಕ್ತ ಭಾರತ ಮಾಡಲು ಸಾಧ್ಯ. ಸಾರ್ವಜನಿಕರು ಸಾಮಾಜಿಕ ಜವಾಬ್ದಾರಿಯಿಂದ ಕಡ್ಡಾಯ ಮಾಸ್ಕ ಧಾರಣೆ, ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ದೇಶದಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು ನಲವತ್ತೈದು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಲಸಿಕೆ ಪಡೆಯಲು ಮುಂದಾಗುವಂತೆ ಮನವಿ ಮಾಡಿದ ಸಚಿವರು ಕೋವಿಡ್ ಲಸಿಕೆ ಸುರಕ್ಷಿತವಾಗಿದ್ದು ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ, ಸಾರ್ವಜನಿಕರು ಲಸಿಕೆ ಕುರಿತು ಹಿಂಜರಿಕೆ ಮನೋಭಾವವನ್ನು ತೊರೆದು ಲಸಿಕೆ ಪಡೆಯಲು ಮುಂದಾಗಬೇಕು ಎಂದರು. ಸ್ವತಹ ದೇಶದ ಪ್ರಧಾನಿ ರಾಷ್ಟ್ರಪತಿಗಳು ಸೇರಿದಂತೆ ಅನೇಕ ಗಣ್ಯರು ಲಸಿಕೆಯನ್ನು ಪಡೆದಿದ್ದು ಜನರು ಧೈರ್ಯವಾಗಿ ಲಸಿಕೆ ಪಡೆಯಬೇಕು. ಗ್ರಾಮಗಳಲ್ಲಿ ಅಗತ್ಯಬಿದ್ದರೆ ಮೋಬೈಲ ವಾಹನದ ಮೂಲಕ ಮಾರ್ಗಸೂಚಿಗಳನ್ವಯ ಲಸಿಕೆ ಒದಗಿಸಲು ಕ್ರಮ ಜರುಗಿಸಲಾಗುವದು ಎಂದು ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ, ತಾಲೂಕು ವೈದ್ಯಾಧಿಕಾರಿ ಡಾ.ನೀಲಗುಂದ, ಗಣ್ಯರುಗಳಾದ ವಸಂತ ಮೇಟಿ, ನಿಂಗಪ್ಪ ಮಣ್ಣೂರ, ಡಾ. ಸತೀಶ ಬಸರಿಗಿಡದ, ಕಲ್ಮೇಶ ವಡ್ಡಿನ,ಶಂಭುಲಿಂಗಯ್ಯ ವಡೆಯರ, ಬಸಪ್ಪ ಹರ್ತಿ, ಶ್ರೀಮತಿ ಹೆಮಾ ಹರಿಜನ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here